ಕಲ್ಯಾಣಿಯು ಕರುಣವಾಯಿತು ನಮಗ

-ಶಿಶುನಾಳ ಶರೀಫ್

ಕಲ್ಯಾಣಿಯು ಕರುಣವಾಯಿತು ನಮಗ         ||ಪ||

ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು
ಸೊಲ್ಲು ಸಾರಿತು ಗುಲ್ಲುಎನಿಸುತಲಿ           ||ಅ.ಪ.||

ಕಲ್ಯಾಣದಿಂ ಹೊರುತು ದಾರಿ ಹಿಡಿದಿರುತಲಿ
ಶಿಗ್ಗಲಿಯೊಳು
ಬಾಯಲಿ ನುಡಿದ ಪರಿಪರಿಯ
ಮೋಹಕ್ಕೆ ಬೆರೆತು ಕಾಲಿಡುತಲಿರೆ
ಸರಸದಿ ಭೀಮಗ ಅರಕಿರಲಿವು ಕಲ್ಯಾಣಿ   ||೧||

ಶಿಶುನಾಳಂಧೀಶ ಬಂದು ಬ್ಯಾಗದಿಂದ-
ಲೊಸೆದಪ್ಪಿ ಕೊಂಡೆನೆಂದು ಆ
ಮಹಾಸದ್ಗುರು ಗೋವಿಂದ ಕರುಣದಿ
ಹಸನಾಗಿ ಉಸುರುವೆ
ರಸಿಕರಲಿ ಅಪ್ಪುದು ಕಲ್ಯಾಣಿಯು           ||೨||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಪ್ರೀತಿಯ ತಾಜಮಹಲ್

- ಅಬ್ಬಾಸ್ ಮೇಲಿನಮನಿ
                                                               - ೧ -

ಲಖನೌದಿಂದ ಪುಷ್ಪಕ ಎಕ್ಸಪ್ರೆಸ್ ರೈಲಿನಲ್ಲಿ ರಾತ್ರಿಯೆಲ್ಲ ಪ್ರಯಾಣಿಸಿ ನಾವು ಆಗ್ರಾ ತಲುಪಿದಾಗ ಬೆಳಗಿನ ಹೂ ಬಿಸಿಲು. ಜಗದ್ವಿಖ್ಯಾತ ತಾಜಮಹಲು ಇರುವ ಭೂಸ್ಪರ್ಶ,  ಹಿತಕರ ಗಾಳಿಯೊಂದಿಗೆ ಮಿಳಿತಗೊಂಡು ಅದಮ್ಯ ಪುಳಕ ಆನುಭವಿಸುತ್ತಿರುವಂತೆ ಮಹೇಶ ನಮ್ಮನ್ನು ಟ್ರ್ಯಾಕ್ಸಿನಲ್ಲಿ ತುಂಬಿಕೊಂಡು ಹೊರಟರು. ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಖನೌಗೆ ಬಂದಿದ್ದ ನಮಗೆ ಆಗ್ರಾ, ದೆಹಲಿ, ಮಧುರಾ, ಜಯಪುರ ನೋಡಿಕೊಂಡು ಹೋಗಲು ಆಹ್ವಾನ ನೀಡಿದ್ದು ಆವರೆ.

ತಾಜಮಹಲ್ ನೋಡಬೇಕೆನ್ನುವುದು ನನ್ನ ಬಹುದಿನದ ಕನಸು. ಸಂಗಮವರಿ ಕಲ್ಲಿನಲ್ಲಿ ಕೆತ್ತಿದ ತಾಜಮಹಲು ಒಂದು ಆಮರ ಪ್ರೇಮದ ಕಾವ್ಯ. ಪರಿಶುದ್ಧ ಸೌಂದರ್ಯದ ಪ್ರತೀಕ. ಮಾನವೀಯ ಕ್ಕೆಗಳಿಂದ ಸೃಜಿಸಲ್ಪಟ್ಟ ಆದ್ಭುತ ಇಮಾರತು.  ಜಗತ್ತಿನ ಪ್ರೇಮಿಗಳಿಗೆ ಸ್ಪೂರ್ತಿಯ ಸೆಲೆ ಎನ್ನುವುದರ ಬಗ್ಗೆ ಕೇಳಿದ್ದೆ. ಓದಿಯೂ ಇದ್ದೆ.

ಈಗದನ್ನು ಕಣ್ಣಾರೆ ನೋಡುವ ಆವಕಾಶ ಪ್ರಾಪ್ತವಾಗಿರುವ ಕ್ಷಣದಿಂದ ಆತ್ಯಂತ ಖುಷಿ ಆನಿಸಿತ್ತು. ತಾಜಾ ಬೆಳಕಿನಲಿ ತಾಜ್ ಹೇಗೆ ಕಾಣಿಸಬಹುದೆಂದು ವಾಹನದ ಕಿಟಕಿಯಾಚೆಗೆ ಕಣ್ಣುಹರಡಿ ಕುಳಿತೆ.  ರಸ್ತೆಯುದ್ದಕ್ಕೂ ಬರಿ ಕಟ್ಟಡಗಳು. `ತಾಜ್ ಕಾಣಿಸುತ್ತಿಲ್ಲ' ನಾನು ನಿರಾಶೆಯಿಂದ ಹೇಳಿದೆ. "ಆದು ಐದು ಕಿಲೋಮೀಟರ ದೂರದಲ್ಲಿದೆ" ಎಂದರು ಮಹೇಶ.

"ಆಗ್ರಾಕ್ಕೆ ಬಂದೀವಿ ತಾಜಮಹಲ್ ನೋಡದ ಹೋಗ್ತೀವೇನು ? ಸ್ವಲ್ಪ ತಡಕೋರಿ" ಆರ್ಜುನ ತಮಾಷೆ ಮಾಡಿದರು ಹೊರಗಿನ ದೃಷ್ಟಿಯನ್ನು ಕದಲಿಸದೆ ನಾನು ನಕ್ಕೆ.

ನಿತ್ಯದ ಬದುಕಿಗೆ ಸಜ್ಜುಗೊಳ್ಳುತ್ತಿರುವ ಜನರ ಧಾವಂತ. ಓಡಾಡುವ ಜಟಕಾ, ರಿಕ್ಷಾ, ಸ್ಯೆಕಲ್ ರಿಕ್ಷಾ, ಕಾರು, ಸಿಟಿ ಬಸ್ಸು, ಸೆಟರ್ ತೆರೆದುಕೊಳ್ಳುತ್ತಿರುವ ಅಂಗಡಿಗಳು ಕಣ್ಣು ತುಂಬುತ್ತಿರುವ ಹಾಗೆ ನನ್ನ ಮನಸ್ಸು ಮೊಗಲ್ ದೊರೆಗಳ ಗತವೈಭವವನ್ನು ಧ್ಯಾನಿಸತೊಡಗಿತ್ತು.

"ಆರೆ, ಇಸಿ ಮಾಽಽಕಿ, ಮರ್ ಜಾತಿ ಸೂವ್ವರ್!" ಸಡನ್ನಾಗಿ ಬ್ರೇಕ್ ಹಾಕಿ ಜೋರು ಧ್ವನಿಯಲ್ಲಿ ಬೈದಾಡಿಕೊಂಡ ಡ್ರೈವರ್. ಆತ್ತ ಗಾಬರಿಯಿಂದ ನೋಡಿದರೆ,  ಟ್ಯಾಕ್ಸಿಗೆ ಆಡ್ಡವಾಗಿ ಆನೆಮರಿಯಂಥ ಹಂದಿಯೊಂದು ತನ್ನ ಹತ್ತೆಂಟು ಮರಿಗಳೊಂದಿಗೆ ಜಬರದಸ್ತಾಗಿ ಗುರುಗುಟ್ಟುತ್ತ ನಿಂತುಕೊಂಡಿತ್ತು. ಆದರ ಮೈಮೇಲೆ ತೊಪ್ಪೆ ತೊಪ್ಪೆ  ಕೊಳಕು. ಬಾಲ ಆಲ್ಲಾಡಿಸಿ, ಕೊಳಕನ್ನು ವಾಹನಕ್ಕೂ ಸಿಡಿಸಿ ಹಂದಿ ಲೇವಡಿ ಧಿಮಾಕಿನಿಂದ ಬದಿಗೆ ಸರಿದು ಹೋಯಿತು. ಆನೆ, ಕುದುರೆ, ಒಂಟೆಗಳು ಓಡಾಡಿದ ಈ ಬೀದಿಗಳಲ್ಲಿ ಈಗ ಬಿಡಾಡಿ ದನಗಳು, ಹಂದಿ-ನಾಯಿಗಳು ಯಥೇಚ್ಛವಾಗಿ ತಿರುಗಾಡಿ ಕೊಂಡಿರುವುದಕ್ಕೆ ಬೇಸರವೆನಿಸಿತು.

ತೆಗ್ಗು ತವರಿನ ರಸ್ತೆಗಳು ನಮ್ಮನ್ನು ಕುಕ್ಕರಿಸತೊಡಗಿದ್ದವು.  ಆಜುಬಾಜು ಗಟಾರು ತುಂಬಿದ ಕೊಳಚೆ ರಸ್ತೆ ಆವರಿಸಿಕೊಂಡಿದ್ದ ಕಸ. ಬ್ರಹ್ಮಾಂಡದ ಗಲೀಜು! "ಇದು ಆಗ್ರಾನೋ; ಹೊಲಸಿನ ಉಗ್ರಾಣೋ?" ಕೋರಟಕರ ಮೂಗು ಮುಚ್ಚಿಕೊಂಡೇ ಹೇಳಿದರು. "ಸರ್, ನಾವೀಗ ಆಗ್ರಾದ ಸೆಂಟರ್ ಪ್ಲೇಸಿನಲ್ಲಿದ್ದೀವಿ" ಎಂದರು ಮಹೇಶ. "ಊರು ಒಂದೀಟೂ ಸ್ವಚ್ಛ ಇಲ್ಲ" ಹಂಚಾಟೆ  ಮುಖ ಸಿಂಡರಿಸಿದರು  "ನಮ್ಮ ದೇಶದಾಗ ಎಲ್ಲ‌ಊರುಗಳ ಸ್ಥಿತಿ ಹೀಂಗಽಽ ಇರುದು" ಎಂದರು ಬಾಗವಾನ ಸರ್.  "ಇದು ಪ್ರಸಿದ್ಧ ಪ್ರವಾಸಿ ಸ್ಥಳ. ಇಲ್ಲಿನ ಆಡಳಿತ ಸ್ವಚ್ಛತೆಗೆ ಗಮನ ಕೊಡಬೇಕಾಗಿತ್ತು" ಶಿರಹಟ್ಟಿಮಠ ಅವರ ದನಿಯಲ್ಲಿ ಬೇಸರದ ಛಾಯೆಯಿತ್ತು.

"ಆವರು ಏನು ಹೇಳುತ್ತಿದ್ದಾರೆ ?" ಡ್ರೈವರ್ ಸ್ಟೇರಿಂಗ್ ತಿರುಗಿಸುತ್ತಲೇ ಒಮ್ಮೆ ಹಿಂತಿರುಗಿ ನೋಡಿ ಕೇಳಿದ.  ಮಹೇಶ ನಮ್ಮ ಆಭಿಪಪ್ರಾಯಗಳನ್ನು ಸಂಕ್ಷಿಪ್ತವಾಗಿ  ಡ್ರೈವರ್‌ನಿಗೆ ತಿಳಿಸಿದರು.  ತಟ್ಟನೆ ಕಣ್ಣು ಕೆಂಪಗೆ ಮಾಡಿಕೊಂಡ ಡ್ರೈವರ್ "ಸರ್, ಇಲ್ಲಿನ ಆಡಳಿತಕ್ಕೆ ಬಕಾಸುರನ ಹೊಟ್ಟೆ ಇರುವುದು" ಎಂದ.  ವ್ಯವಸ್ಥೆಯ ಭ್ರಷ್ಟತೆಯನ್ನು ಪ್ರತಿಭಟಿಸುವವನ ಮಾತಲ್ಲಿ ವ್ಯಗ್ರತೆಯಿತ್ತು.

ಮಹೇಶ ಇದ್ದದ್ದು ಕ್ವಾಟರ್‍ಸ್‍ನಲ್ಲಿ ಮೂವತ್ತರ ಹರೆಯದ ಮಹೇಶ, ಬಾಗವಾನ ಸರ್ ಮೆಚ್ಚಿನ ಶಿಷ್ಯ.  ಬಿಜಾಪುರದ ಒಂದು ಹಳ್ಳಿಯವರು.  ಡಿಪ್ಲೋಮಾ ಮೆಕ್ಯಾನಿಕಲ್ ಪದವೀಧರ.  ಆಗ್ರಾದ ಏರ್ ಫೋರ್‌ಸ್‌ನ ತಾಂತ್ರಿಕ ವಿಭಾಗದಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದರು.  ಹೆಂಡತಿ ಚೊಚ್ಚಲು ಹೆರಿಗೆಗೆಂದು ತವರಿಗೆ  ಹೋಗಿದ್ದಳು.  ನಮ್ಮನ್ನು ಕ್ವಾಟರ್ಸ್ನಲ್ಲಿ ಇರಿಸಿಕೊಳ್ಳುವ ಆಸೆ ಮಹೇಶಗಿತ್ತು ಆದರೆ ಆಫೀಸ್ ಇನ್‍ಸ್ಪೆಕ್ಷನ್ ಇದ್ದುದ್ದರಿಂದ ಕ್ಯಾಂಪಸ್ನಲ್ಲಿ ಓಡಾಡುವುದು ದುಸ್ತರವೆಂದು ವಿಷಾದಿಸಿದ ಮಹೇಶ ನಮ್ಮನ್ನು ಅರ್ಜುನ ನಗರದ ಕೆ.ಕೆ. ಟೂರ್ ಮತ್ತು ಟ್ರಾವೆಲ್ಸ್‍ನ ರೂಮೊಂದರಲ್ಲಿ ಇರಿಸಿದರು.

ನಾವು ಸ್ನಾನ, ಟೀಫಿನ್ ಮುಗಿಸುವುದರೊಳಗೆ ಮನೆಗೆ ಹೋಗಿ ಬಂದರು ಮಹೇಶ.  ಅವರ ಜೊತೆಗೆ ಈಗ ಮುರುಗನ್ ಇದ್ದರು.  ಮಹೇಶರ ಆತ್ಮೀಯ ಗೆಳೆಯ ಮುರುಗನ್ ಚೆನ್ನೈದವರು ಅವರಿಗೂ ಏರ್ ಫೋರ್ಸ್‍ನ ತಾಂತ್ರಿಕ ವಿಭಾಗದಲ್ಲಿ ಮೇಲುಸ್ತುವಾರಿ ಕೆಲಸ.  ಕನ್ನಡದಲ್ಲಿ ಸೊಗಸಾಗಿ ಮಾತಾಡುತ್ತಿದ್ದರು.  ಬೆಂಗಳೂರನಲ್ಲಿ ಇದ್ದು ಓದಿದವರಂತೆ. ಟ್ರಾಕ್ಸ ಹತ್ತುವ ಮುಂಚೆ "ನಾವು ಮೊದಲು ಸಿಕಂದರ್ ಇಮಾರತು ನೋಡೋಣ" ಎಂದರು ಮುರುಗನ್.

"ತಾಜ್‍ಮಹಲ್ ಬೇಡವೆ?" ನಾನು ಕೇಳಿದೆ.
"ಸಿಕಂದರ ಇಮಾರತು ನೋಡಿ, ಊಟ ಮಾಡಿಕೊಂಡು ತಾಜಮಹಲ್ ನೋಡಲು ಹೋಗೋಣ ಅಲ್ಲಿತನಕ ಬಿಸಿಲು ಕಮ್ಮಿ‌ಆಗಿರುವುದು"  ಮಹೇಶ ಹೇಳಿದರು.

ಆಗ್ರಾದ ಬಿಸಿಲು ತುಸು ಹೆಚ್ಚೆನಿಸಿತು.  ಆದರೆ ಓಡುತ್ತಿರುವ ವಾಹನದೂಳಗೆ ತೂರಿ ಬರುವ ಗಾಳಿ ಬಿಸಿಯ ತಾಪವನ್ನು ತುಸು ತಗ್ಗಿಸಿತು.  ಅಕಬರನ ಸಮಾಧಿ ಇರುವ ಸಿಕಂದರ್ ಮಹಲಿನ ಬೆರಗಿನಲ್ಲಿ ತಾಪ ಇನ್ನೂ ಗೌಣವೆನಿಸಿತ್ತು.

ತಾಜಮಹಲಿನ ದ್ವಾರದಲ್ಲಿ ಇರುವಾಗ ಸೂರ್ಯ ಹಿತವೆನಿಸತೊಡಗಿದ್ದ.  ಮಹೇಶ ಮತ್ತು ಮುರುಗನ್ ಪ್ರವೇಶ ಟಿಕೀಟು ಖರೀದಿಸಿ ತಂದರು.  ಸೆಕ್ಯುರಿಟಿ ಅಧಿಕಾರಿಗಳು ನಮ್ಮನ್ನು ತೀವ್ರವಾಗಿ ತಪಾಸಿಸಿ ಒಳಬಿಟ್ಟರು.  ಪರಿಶುದ್ಧ ಪ್ರೇಮದ ಸಂದೇಶ ಸಾರುವ ಈ ತಾಣಕ್ಕೆ ಆತಂಕವಾದಿಗಳ ಮತ್ತು ಧರ್ಮಾಂಧರ ಕೆಟ್ಟ ನೆದರು ಬಿದ್ದಿರುವುದು ಎಂಥ ವಿಪರ್ಯಾಸ!

ಒಳಗೆ ಕಾಲಿಡುತ್ತಿದ್ದಂತೆ ದೂರದಿಂದಲೇ ಕಂಡಿತು ಹಾಲುಗಲ್ಲಿನ ತಾಜಮಹಲ್!  ಅದರ ಆಪೂರ್ವ ಸೌಂದರ್ಯವನ್ನು ಆಸ್ವಾದಿಸುವಲ್ಲಿ ತನ್ಮಯಗೊಂಡ ಕಿಕ್ಕಿರಿದ ಜನ.  ಫೋಟೋಗ್ರಾಫರ್ಗಳಿಗೆ ಸುಗ್ಗಿಯೆಂದರೆ ಸುಗ್ಗಿ ಎಲ್ಲೆಲ್ಲಿಂದ ಬಂದವರಿಗೆ ತಾಜಯೆದುರು ನಿಂತು ನೆನಪಿನ ಬುತ್ತಿ ಕಟ್ಟಿಕೊಳ್ಳುವ ತವಕ.  ಸುತ್ತ ಹಸಿರು ಹುಲ್ಲಿನ ಮಕಮಲ್ಲಿನಲ್ಲಿ, ಬಳಕುವ ಗಿಡಗಳ ಲಾವಣ್ಯದೊಂದಿಗೆ ಸ್ಪರ್ಧೆಗಿಳಿದಂತೆ ಯುವ ಪ್ರೇಮಿಗಳು ಆಲ್ಲಲ್ಲಿ ಕುಳಿತು, ಕಣ್ಣಭಾಷೆಯಲ್ಲಿ ಒಲವಿನ ಮಾತು ಉಲಿಯುತ್ತಿದ್ದರೆ.  ಗಂಡ-ಹೆಂಡತಿಯರು ಶಾಹಜಹಾನ್-ಮುಮತಾಜ್‌ರನ್ನು ಮೈಯೊಳಗೆ ಆಹ್ವಾನಿಸಿಕೊಂಡವರಂತೆ, ಕ್ಯಾಮರಾ ನೋಟಕ್ಕೆ ಪೋಜು ನೀಡುವಲ್ಲಿ ಆಸಕ್ತರಾಗಿದ್ದರು.

ಸಂಜೆಯ ಸೂರ್ಯನ ಕಿತ್ತಳೆಯ ರಂಗು ತಾಜ್‌ನ ಕಳೆ ಹೆಚ್ಚಿಸಿತ್ತು.  ಸಂಗಮವರಿ ಕಲ್ಲಿನ ಸ್ವರ್ಶ ಹಿತಾನುಭವ ನೀಡುತ್ತಿರುವಂತೆ ನಾನು ತಲೆಯೆತ್ತಿ ನೋಡಿದೆ. ಅಬ್ಬಾ !  ತಾಜಮಹಲೇ, ಏನು ನಿನ್ನ ವೈಭವ ! ಸ್ವಗತವಾಗಿ ಉದ್ದರಿಸಿದ್ದೆ. ಮನಸ್ಸು ಉಲ್ಲಸಿತವೆನಿಸಿತ್ತು.

ಮುಮತಾಜಳ ಕಬರ್ ನೋಡಲು ಗೆಳೆಯರು ಸರದಿಯಲ್ಲಿ ನಿಂತುಕೊಂಡರು.  ಒಳಗೆ ಹೋಗುವಾಗ ನನ್ನನ್ನು ಕರೆಯಿರಿ ಎಂದು ನಾನು ಜನಸಂದಣಿ ಇಲ್ಲದ ಕಡೆಗೆ ನಿಂತುಕೂಂಡು ತಾಜ್‌ನ ಗುಮ್ಮಟದತ್ತ ದೃಷ್ಟಿ ಹರಡಿದೆ.

"ಪ್ರಿಯ ಪ್ರವಾಸಿಗ, ನನ್ನ ಮಹಲಿಗೆ ಬಂದಿರುವ ನಿನಗೆ ಸ್ವಾಗತ ಕೋರುವೆ" ಹೆಣ್ಣು ಧ್ವನಿಯೊಂದು ಕೇಳಿಸಿತು.  ಮಮತಾಜಳದೆ ಆದು?  ಆನುಮಾನ ಕಾಡಿತು. ನನಗೆ.  "ನಾನೇ, ವಿಶ್ವವಿಖ್ಯಾತ ಸಾಮ್ರಾಟ ಶಾಹಜಹಾನನ ಪ್ರಿಯತಮೆ ಅಂಜುಮಂದ್ ಬಾನು ಉರ್ಫ್ ಮುಮತಾಜ.  ಈ ಮಹಲಿನಲ್ಲಿ ಮಲಗಿರುವವಳು" ಮತ್ತೇ ಆದೇ ಉಲಿತ.  ಸತ್ತವರು ಮಾತಾಡುವುದು ಅದ್ಹೇಗೆ ಸಾಧ್ಯ?  ಕಲ್ಪನಾಲೋಕದಿಂದೀಚೆಗೆ ಬಂದು ಇಮಾರತಿನ ಮೇಲೆ ಸೂಕ್ಷ್ಮ ನೋಟ ಬೀರಿದೆ.  ಎಷ್ಟು ನಾಜೂಕಾಗಿದೆ ಇಲ್ಲಿನ ಕುಸುರಿ ಕೆಲಸ. ಇದು ಮನುಷ್ಯ ನಿರ್ಮಿತವೆ ?

"ಪ್ರಿಯ ವೀಕ್ಷಕನೆ, ಯಮುನಾ ತೀರದ ಈ ಮಹಲು ನನ್ನ ಮನದಿಚ್ಛೆಯನ್ನು ಮೂರ್ತಗೊಳಿಸಿದೆ. ಇಂಥದೊಂದು ಮಹಲು ಸ್ವರ್ಗದಲ್ಲೂ ಇಲ್ಲ.  ನನ್ನ ಹೃದಯದೊಡೆಯ ಶಾಹಜಹಾನನಿಗೆ ನಾನು ಕೃತಜ್ಞಳಾಗಿದ್ದೇನೆ.  ನನ್ನ ನೆನಪನ್ನು ಆವನು ಈ ಭೂಮಿಯ ಮೇಲೆ ಆಮರಗೊಳಿಸಿದ್ದಕ್ಕೆ" ಮುಮತಾಜಳ ಅಂತರಂಗದ ಮಾತು ನನ್ನ ಹೃದಯ ತುಂಬಿಕೊಂಡವು.

"ಆತ್ಮೀಯ" ಗಂಡು ಧ್ವನಿ ಕೇಳಿಸಿತು. ಅದು ಶಾಹಜಹಾನನದೇ ಇರಬೇಕನಿಸಿತು.  ಅವನು ಹೇಳಿದ ನನ್ನ ಮುಮತಾಜಳ ಪ್ರೀತಿಯೆದುರು ಈ ಮಹಲು ಏನೂ ಅಲ್ಲ, ಅವಳು ನನ್ನ ಹೃದಯದಲ್ಲಿ ಶಾಶ್ವತಳಾಗಿದ್ದಾಳೆ. ಆದರೆ ಅವಳ ಇಚ್ಛೆಯಂತೆ ನಾನು ಈ ಇಮಾರತು ನಿರ್ಮಿಸಿದ್ದೇನೆ.  ಅವಳು ನನ್ನ ಪ್ರೇಮ ಸಾಮ್ರಾಜ್ಞಿ.  ಆಕೆಯನ್ನು ನಾನು ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದ್ದೇನೆ.  ಮುಮತಾಜ ನಮ್ಮ ಅರಮನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ಹುಡುಗಿ.  ಅವಳ ತಂದೆ ಯಾಮಿನುದ್ದೌಲಾ ಸಾಮ್ರಾಜ್ಞಿ.  ನೂರಜಹಾನಳ ಸಹೋದರ.  ನನ್ನ ತಂದೆ ಜಹಾಂಗೀರನ ದರಬಾರಿನಲ್ಲಿ ಅತ್ಯುಚ್ಛ ಪದವಿಯಲ್ಲಿದ್ದ.  ಅತಿ ಸುಂದರಿ.  ಮುಗ್ದೆಯಾದ ಮಮತಾಜಳನ್ನು ನಾನು ಚಿಕ್ಕಂದಿನಿಂದ ನೋಡುತ್ತ ಬಂದವನು.  ಅವಳ ಯೌವನಕ್ಕೆ ಸೋತವನು.  ನಮ್ಮ ಪ್ರೇಮದ ವಿಷಯ ತಿಳಿದ ನನ್ನ ತಂದೆ ಸಂತೋಷದಿಂದ ನಮ್ಮ ಮದುವೆ ನೆರವೇರಿಸಿದರು. ಮಮತಾಜಳಿಗೆ ರಾಜಮಹಲಿನ ಉತ್ಕೃಷ್ಟತೆ ಪ್ರಾಪ್ತವಾಯಿತು."

ಶಾಹಜಹಾನನ ಧ್ವನಿಯಲ್ಲಿ ಹೆಪ್ಪುಗಟ್ಟಿತ್ತು ಹೆಮ್ಮೆ.

"ನಾನು ಅವರ ಹೃದಯದಲ್ಲಿ ಸ್ಥಾನ ಪಡೆದುಕೂಂಡದ್ದು ನನ್ನ ಅದೃಷ್ಟ.  ನಾವಿಬ್ಬರೂ ಪರಸ್ಪರ ಅಧಿಕವಾಗಿ ಪ್ರೀತಿಸುತ್ತಿದ್ದೆವು.  ಎಂಥ ಸಮಯದಲ್ಲೂ ವಿಚ್ಛಿನ್ನಗೊಳಿಸಲಾರದ ಪ್ರೀತಿಯದು.  ನಾನಂತೂ ಅವರನ್ನು ನೆರಳಿನಂತೆ ಹಿಂಬಾಲಿಸಿಕೊಂಡಿರುತ್ತಿದ್ದೆ.  ಮಹಲಿನಲ್ಲೂ ಆಷ್ಟೆ ದರಬಾರಿನಲ್ಲೂ ಅಷ್ಟೆ.  ರಾಜನೀತಿ ವಿಷಯದಲ್ಲಿ ಅವರ ಮೇಲೆ ನನ್ನ ಒತ್ತಡಗಳಿರಲಿಲ್ಲ. ಅವರು ಸಲಹೆ ಇಚ್ಛಿಸಿದಾಗ ನಾನು ಸಹಕರಿಸುತ್ತಿದ್ದೆ.  ನನ್ನ ದೊರೆಯ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಅವರು ತಮ್ಮ ತಂದೆಯಂತೆ ಹೆಂಡತಿಯ ಕೈಗೊಂಬೆಯಾಗಲಿಲ್ಲ.  ನನ್ನನ್ನು ಎಂದಿಗೂ ಅಗೌರವದಿಂದ ಕಾಣಲಿಲ್ಲ" ಶಾಹಜಹಾನನನ್ನು ಎದೆಯಾಳದಿಂದ ಪ್ರಶಂಸಿದಳು ಮುಮತಾಜ.

"ಮುಮತಾಜಳಿಲ್ಲದ ಕ್ಷಣಗಳು ನನ್ನ ಪಾಲಿಗೆ ನರಕವೆನಿಸಿದ್ದವು.  ಆಕೆ ನನ್ನ ಕಣ್ಣಿದುರಿಗೆ ಸದಾ ಇರಬೇಕೆಂದು ಹಂಬಲಿಸುತ್ತಿದ್ದೆ.  ಅವಳ ನಗುಮೊಗದ ಬೆಳಕು ನನ್ನನ್ನು ಅಪೋಷಿಸಿಬೇಕೆಂದುಕೊಳ್ಳುತ್ತಿದ್ದೆ.  ಹೀಗಿದ್ದಾಗಲೇ ನನ್ನ ಜೀವನದಲ್ಲಿ ಮುಸಿಬತ್ ಎದುರಾಯಿತು.  ನನಗೆ ರಾಜ್ಯಾಭಿಷೇಕವಾದ ಎರಡನೆಯ ವರ್ಷದ ಸಮಯ.  ದಖನ್‍ಲ್ಲಿ ಖಾನ್ ಜಂಹಾ ಲೋದಿಯ ವಿದ್ರೋಹವನ್ನು ಹತ್ತಿಕ್ಕಲು ನಾನು ಹೊರಡಬೇಕಾಯಿತು.  ಮುಮತಾಜ್‍ಳೂ ನನ್ನ ಜೊತೆಗಿದ್ದಳು.  ಆಗ ಆಕೆ ಗರ್ಭವತಿ.  ಹೆಣ್ಣು ಕೂಸಿಗೆ ಜನ್ಮಕೊಡುವ ಸಂದರ್ಭ ಅವಳ ಪ್ರಕೃತಿಯಲ್ಲಿ ಗಡಬಡ ಆಯಿತು.  ಅವಳ ಸ್ಥಿತಿ ನೋಡಿ ನಾನು ಆಘಾತಗೊಂಡೆ.  ಅವಳ ಮುಖವು ಹಳದಿ ವರ್ಣಕ್ಕೆ ತಿರುಗಿತ್ತು" ಶಾಹಜಹಾನನ ಗಂಟಲು ಬಿಗಿದಿತ್ತು.

ಕ್ಷೀಣ ಸ್ವರದಲ್ಲಿ ಉಲಿದಳು ಮಮತಾಜ "ನನ್ನ ದೊರೆಯ ಬಾಡಿದ ಮುಖ ಕಂಡು ಸಂಕಟ ಅನುಭವಿಸಿದೆ.  ಕಣ್ಣಲ್ಲಿ ನೀರು ಒಂದೇ ಸವನೇ ಧುಮ್ಮಿಕ್ಕಿತು. ಅವನನ್ನು ನಾನು ಅಗಲುವ ಹೊತ್ತು ಸಮೀಪಿಸಿತು.  ನನ್ನನ್ನು ಕಳೆದುಕೊಳ್ಳಲು ಅವನಿಗೆ ಬಿಲ್‍ಕುಲ್ ಮನಸ್ಸಿರಲಿಲ್ಲ. ನನಗೂ ಅಷ್ಟೆ ಅದರೆ ಪರವರ್ದಿಗಾರನ ಇಚ್ಛೆ ಬೇರೆ ಇತ್ತೇನೋ !  ನಾನು ಯಾತನೆ ನಡುವೆಯೂ ದೊರೆಯ ಹಸ್ತವನ್ನು ನನ್ನ ಹಸ್ತದ ಮೇಲೆ ಇರಿಸಿಕೊಂಡೆ  ...... ನನ್ನ ಸಾವಿನ ಬಗ್ಗೆ ಅವನಿಗೂ ಮನವರಿಕೆಯಾಯಿತೇನೋ.  ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ಹೇಳಲು ಪದಗಳೇ ಇಲ್ಲ ಎಂದು ಗೋಳಾಡಿದ.  ಸಾವಿನ ಕೊನೆಯಲ್ಲಿ ನಾನು ಪ್ರಾರ್ಥಿಸಿಕೊಂಡೆ ದೊರೆ, ನೀವು ನನ್ನನ್ನು ಪ್ರೀತಿಸುವುದೇ ನಿಜವಾದರೆ ನನ್ನ ಸಾವಿನ ನಂತರ, ನನ್ನ ಮಕ್ಕಳ ಕ್ಷೇಮದ ಸಲುವಾಗಿ ನೀವು ಬೇರೆ ಮದುವೆ ಆಗಬಾರದು.  ನನ್ನ ಹೆಸರು ಈ ಭೂಮಿಯ ಮೇಲೆ ಶಾತ್ವತವಾಗಿ ಉಳಿಯಲು ಭವ್ಯವಾದ ಸ್ಮಾರಕವೊಂದನ್ನು ನಿರ್ಮಿಸಬೇಕು ಎಂದು, ದೊರೆ ನನ್ನ ವಚನವನ್ನು ಹಾರ್ದಿಕವಾಗಿ ಸ್ಟೀಕರಿಸಿದ. ನಾನು ಸಮಾಧಾನದಿಂದ ಕಣ್ಮುಚ್ಚಿಕೊಂಡೆ."

ತೃಪ್ತಿಯಿತ್ತು ಅವಳ ಧ್ವನಿಯಲ್ಲಿ.

"ನನ್ನ ಮುಮತಾಜಳ ಅಮರ ಪ್ರೇಮದ ಕುರುಹು ಇದು. ಅವಳನ್ನು ನಾನು ಇಲ್ಲಿಯೇ ಕಬರ್‍ನಲ್ಲಿ ಮಲಗಿಸಿದ್ದೇನೆ.  ನಾನೂ ಅವಳೊಂದಿಗೆ ಬೆರೆತಿದ್ದೇನೆ.  ಆಗಲೇ ಸೂರ್ಯ ಮುಳುಗಿದ.  ಒಳಗೆ ಮೋಂಬತ್ತಿ ಉರಿಯುತ್ತಿದೆ.  ಅದರ ಬೆಳಕಿನಲ್ಲಿ ಅವಳ ಗೋರಿಯನ್ನು ಒಮ್ಮೆ ನೋಡು ಮುಸಾಫೀರ್" ಶಾಹಜಹಾನನ ಮಾತು ಬಾನುಲಿಯಂತೆ ಕೇಳಿಸಿತ್ತು.

"ಸರ್ ಬನ್ನಿ, ಒಳಗೆ ಹೋಗಲು ನಮ್ಮ ಸರದಿ ಬಂದಿದೆ" ಕೂಗಿ ಕರೆದರು ಮಹೇಶ.  ಜನರಿಗೋ ಕಬರ್ ನೋಡುವ ಜರೂರತೆ.  ನಾನೂ ಅವಸರದ ಹೆಜ್ಜೆ‌ ಇರಿಸಿದೆ. ಒಳಗೆ ಮೊಂಬತ್ತಿ ಢಾಳವಾಗಿ ಬೆಳಗತೊಡಗಿತ್ತು.  ಕಬರ್‍ನ ಮೇಲಿನ ಕಪ್ಪು ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಿದ್ದವು.  ಈ ಗೋರಿ ಅಂಜುಮಂದ ಬಾನು ಬೇಗಂ ಉರ್ಫ್ ಮುಮತಾಜಳದು.  ೧೬೩೧ರಲ್ಲಿ ಅವಳು ಮೃತಳಾದಳು.  ಸ್ವರ್ಗದ ದೇವತೆಗಳು ಅವಳನ್ನು ಭೇಟಿಯಾಗಲು ಬಂದರು ಮತ್ತು ಅವರು ಉಲಿದರು. "ಮುಮತಾಜಳ ವಾಸಸ್ಥಾನ ಸ್ವರ್ಗದಲ್ಲಿ ಶಾಶ್ವತವಿದೆ ! " 

ತಾಜಮಹಲು ಬಿಟ್ಟು ಬರಲು ನನಗೆ ಮನಸ್ಸಾಗಲಿಲ್ಲ.  ಆದರೆ ವೀಕ್ಷಣೆಯ ಸಮಯ ಮುಗಿದಿತ್ತು ಜನರೊಂದಿಗೆ ನಾನು ಭಾರವಾದ ಹೆಜ್ಜೆ ಇರಿಸಿದೆ.

"ಇನ್ನಷ್ಟು ಹೊತ್ತು‌ಇಲ್ಲೆ‌ಇರಬೇಕನಿಸಿತ್ತು ನನ್ಗ ?" ದ್ವಾರ ಬಾಗಿಲು ದಾಟುತ್ತ ಹೇಳಿದೆ ನಾನು. "ನಿಮ್ಗ ತೃಪ್ತಿ ಆಗದಿದ್ರ ಮತ್ತಽಽ ಬರೂಣು ಬರ್‍ರಿ" ಎಂದರು ಶಿರಹಟ್ಟಿಮಠ.

"ನಾಳೆ ಜಯಪುರಕ್ಕೆ ಹೋಗಬೇಕಲ್ಲ" ಬಾಗವಾನ ನೆನಪಿಸಿದರು. 

"ನಾಡದು ಹುಣ್ಣಿಮೆ. ಬೆಳದಿಂಗಳಲ್ಲಿ ತಾಜಮಹಲ್ ನೋಡಲು ಅವಕಾಶ ಇರುವುದು"  ಎಂದರು ಮುರುಗನ್. "ನಾವು ಈ ಅವಕಾಶ ತಪ್ಪಸ್ಗೋಬಾರ್ದು" ಕೂಡಲೇ ಹೇಳಿದೆ ನಾನು. "ನಾವು ತೀಕೀಟಿಗೆ ಪ್ರಯತ್ನಿಸುತ್ತೇವೆ" ಎಂದರು ಮಹೇಶ.

ವ್ಯಾನ್ ಪಾರ್ಕ್ ಮಾಡಿದ ಕಡಗೆ ನಾವು ನಡೆಯುತ್ತಲೇ ಬಂದೆವು.  ಮುರುಗನ್ ನನ್ನ ಪಕ್ಕದಲ್ಲಿಯೇ ಇದ್ದರು.  ತಾಜಮಹಲ್ ಬಗ್ಗೆ ಆವರಿಗೆ ಉತ್ಕಟ ಪ್ರೀತಿಯಿತ್ತು. ಅದರ ನಿರ್ಮಾಣದ ಸಂಗತಿಗಳನ್ನು ಅವರು ರೋಚಕವಾಗಿ ಹೇಳುತ್ತಲೇ ಇದ್ದರು.

ನಮ್ಮನ್ನು ನೋಡಿದ ಡ್ರೈವರ್ ರಸೀದ್ ವ್ಯಾನ್ ತಂದು ರಸ್ತೆಗೆ ನಿಲ್ಲಿಸಿದ.  ಅಲ್ಲಿದ್ದ ಹೋಟೇಲಿನಲ್ಲಿ ಚಹ ಕುಡಿದು ವ್ಯಾನ್ ಹತ್ತಿದೆವು.  ರಸೀದನ ಹತ್ತಿರ ಬಂದ ವ್ಯಕ್ತಿಯೊಬ್ಬ ಸಲಾಂ ಸಾಬ್ ಎಂದ.

"ಕ್ಕಾ ಬೋಲ್ತಾ ಹೈ ಬಾದಶಹಾ? ತುಮ್ಹಾರೆ ಬೇಗಂ ಸಾಹೇಬಾ ಮಿಲ್ ಗಯಿ ನಾ?" ರಸೀದ್ ಕೇಳಿದ.  ಆ ವ್ಯಕ್ತಿ ಮಾತಾಡದೆ ಗಂಭೀರವಾಗಿ ನಿಂತ.  ರಸೀದ್ ಐದು ರೂಪಾಯಿಯ ನಾಣ್ಯವೊಂದನ್ನು ಅವನ ಕ್ಕೆಗೆ ಕೂಟ್ಟು "ಚಲೋ ಭೈ, ಚಾಯ್ ಪೀವೋ" ಎಂದ.  ಖುಷಿಯಾಗಿ ಆ ವ್ಯಕ್ತಿ ಸೆಲ್ಯುಟ್ ಹೊಡೆದು ಪಕ್ಕಕ್ಕೆ ಸರಿದ.  ಅವನ ಮುಖ ನನಗೆ ಅಸ್ಪಷ್ಟ ಕಂಡಿತು.

                    - ೨ -

ಕುದುರೆ ಗಾಡಿಯಲ್ಲಿ ಕುಳಿತು ಆಗ್ರಾದ ಬೀದಿಗಳನ್ನು ಸುತ್ತುವ ಆಸೆಯಿತ್ತು ನನಗೆ.  ಭಾರಿ ಎತ್ತರದ ಕುದುರೆಯ ಜಟಕಾಗಳು ಮೊಗಲ ಬಾದಶಹದ ಕಾಲವನ್ನು  ನೆನಪಿಸಿಕೊಡುವಂತೆ ಓಡಾಡತೊಡಗಿದ್ದವು. "ಲಾಲ್ ಕಿಲ್ಲಾ ನೋಡಲು ಜಟಕಾದಾಗ ಹೋಗುಣು" ಎಂದೆ ನಾನು.  "ನೋಡುವ ಸ್ಥಳಗಳು ದೂರದಲ್ಲಿವೆ.  ಜಟಕಾದಲ್ಲಿ ಹೋದರೆ ಸಮಯ ಸಾಲುದಿಲ್ಲ" ಎಂದರು ಮಹೇಶ.  ನಾನು ಮತ್ತೆ ಟ್ರ್ಯಾಕ್ಸ್ ಹತ್ತಬೇಕಾಯಿತು.  ಆಗ್ರಾದ ಕೋಟೆಯ ಹೆಬ್ಬಾಗಿಲಿನಲ್ಲಿ ಒಳ್ಳೆಯ ಗೈಡ್ ಸಿಕ್ಕ.  ಅವನ ಇತಿಹಾಸ ಪ್ರಜ್ಞೆ ಚುರುಕು ಮತ್ತು ಲವಲವಿಕೆಯದ್ದಾಗಿತ್ತು.  ಬಹಾದ್ಹೂರವ ಮೊಗಲ್ ಬಾದಶಹ ಆಕಬರ್ ನಿರ್ಮಿಸಿದ ಕೆಂಪುಕಲ್ಲಿನ ಕೋಟೆ ಅತ್ಯಂತ ಅದ್ಭುತ, ಅಲ್ಲಿನ ಜಹಾಂಗೀರ್ ಮಹಲ್, ಅಂಗೂರಿಬಾಗ್, ಖಾಸಮಹಲ್, ದಿವಾನ್-ಏ-ಖಾಸ್, ಶೀಶ್ ಮಹಲ್‍ಗಳ ವೈಭವಗಳನ್ನು ಆಸ್ವಾದಿಸುತ್ತ ಸುಮ್ರಾನ್ ಬುರ್ಜ್ ತಲುಪಿದೆವು.  ಪತ್ನಿ ನೂರಜಹಾನ್‍ಳಿಗೆಂದೇ ಜಹಾಂಗೀರ್ ನಿರ್ಮಿಸಿದ ಈ ಇಮಾರತು ಅಮೂಲ್ಯ ಮತ್ತು ಬಣ್ಣ ಬಣ್ಣದ ಕಲ್ಲುಗಳಿಂದ ಆಕರ್ಷಕವೆನಿಸಿತ್ತು.  ಇಲ್ಲಿಯೇ ಶಾಹಜಹಾನ್‍ನ ಅವಸಾನನವಾಗಿದ್ದೆಂದು ಗೈಡ್ ಹೇಳಿದ.  ದೊರೆ ತನ್ನ ಆಕ್ಕರೆಯ ಪುತ್ರಿ ಜಹಾನ್ ಆರಾಳ ತೊಡೆಯ ಮೇಲೆ ಮಲಗಿಕೂಂಡೆ ಕೊನೆಯ ಉಸಿರು ಇರುವವರೆಗೆ ತಾಜಮಹಲ್ ನೋಡುತ್ತಿದ್ದನಂತೆ.  ಇಲ್ಲಿಂದ ಮುಮತಾಜಳ ಸಮಾಧಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೊಳೆವ ಚಂದ್ರ ತುಕಡಿಯೋ, ಸ್ವರ್ಗದಿಂದ ಭೂಮಿಗೆ ಬಿದ್ದ ಒಂದು ಸುಂದರ ಮಹಲೋ ಎಂಬಂತ್ತಿದ್ದ ತಾಜ್‍ಮಹಲ್‍ನ್ನು ನಾನು ಹೃದಯ ತುಂಬಿಕೊಂಡೆ.

ಆ ಜಾಗೆಯಿಂದ ಕದಲುವಷ್ಟರಲ್ಲಿ `ಸಲಾಂ ಸಾಹೇಬ್' ಎಂಬ ಧ್ವನಿ ಕೇಳಿಸಿತು.
"ಸಲಾಂ ಅಮರಬಾಬು, ಠೀಕ್ ಹೈನಾ ?' ಗೈಡ್ ಕೇಳಿದ.  ನಾನತ್ತ ಹೊರಳಿದೆ.  ನಿನ್ನೆ ತಾಜ್‍ನ ಬಳಿ ಕಂಡ ವ್ಯಕ್ತಿ ಕುತೂಹಲ ಹುಟ್ಟಿಸಿದ.  ಮುಂದೆ ಬರುತ್ತಿದ್ದಂತೆ ಗೈಡನನ್ನು ಕೇಳಿದೆ ನಾನು "ಆ ಅಮರಬಾಬು ಯಾರು ?"

"ಇದೇ ಊರಿನವನು. ಬಹಳ ದಿನಗಳಿಂದ ಈ ಕಿಲ್ಲಾ ತಾಜಮಹಲ್ ಎಂದು ಸುತ್ತಮುತ್ತ ಓಡಾಡಿಕೊಡಿರುತ್ತಾನೆ.  ಎಷ್ಟೋಜನ ಆವನನ್ನು ಪಾಗಲ್ ಎನ್ನುತ್ತಾರೆ.  ಆದರೆ ಆವನು ಹಾಗೆ ವರ್ತಿಸುವುದಿಲ್ಲ ನನ್ನ ನೋಡಿದಾಗಲೆಲ್ಲ ಸಲಾಂ ಹೇಳುತ್ತಾನೆ.  ಪಾಪ, ಆವನು ಪ್ರೇಮಿಸಿದ ಹುಡುಗಿ ಪ್ರೀತಿ, ನೀಚರಿಗೆ ಬಲಿಯಾದಳು.  ಇವನು ಆಕೆಯನ್ನು ಹುಡುಕುತ್ತ ಈಗಲೂ ಆಲೆದಾಡುತ್ತಿದ್ದಾನೆ." ಗೈಡ್ ಇಷ್ಟು ಹೇಳಿ ಮುಖ್ಯ ದ್ವಾರದಲ್ಲಿ ನಮ್ಮನ್ನು ಬೀಳ್ಕೊಟ್ಟು ಬೇರೆ ಪ್ರವಾಸಿಗರತ್ತ ಸರಿದು ಹೋದ.

"ನಾವೀಗ ಊಟಕ್ಕೆ ಹೋಗೋಣ" ಎಂದರು ಮಹೇಶ.
"ಸಾಸಿವೆ ಎಣ್ಣಿ ಊಟ ಬ್ಯಾಡ. ಗಂಟಲು ಕೆರಿತೈತಿ" ಹಂಚಾಟೆ ಹೇಳಿದರು.
"ತುಸು ದೂರದಲ್ಲಿ ಉಡುಪಿ ಹೋಟೆಲು ಇದೆ. ನಮ್ಮ ಕಡೆಗಿನ ಊಟ ಸಿಗುವುದು" ಎಂದರು ಮುರುಗನ್.  ಅರ್ಜುನ ಕೂಡಲೇ ಸಮ್ಮತಿಸಿದರು.  ವ್ಯಾನು ಏರಿ ಕುಳಿತೆವು.

ಕೆಂಪು ಕಿಲ್ಲಾದ ಗುಂಗಿನಲ್ಲಿದ್ದ ಕೋರಟಕರ "ಮೊಗಲ್ ಬಾದಶಹರು ಸೌಂದರ್ಯ ಆರಾಧಕರು!" ಎಂದು ಸಂತಸ ವ್ಯಕ್ತಪಡಿಸಿದರು.

"ಅದಕ್ಕೆಽಽ ಆವರಿಗೆ ತಾಜಮಹಲ್‍ನಂಥ ಸುಂದರ ಇಮಾರತಿ ಕಟ್ಟಾಕ ಸಾಧ್ಯ ಆತು"  ಶಿರಹಟ್ಟಿಮಠ ಸಾಕ್ಷಿಯೊದಗಿಸಿದರು.

ತಾಜ್ ಮತ್ತೆ ನನ್ನ ಕಣ್ಣಿದುರಿಗೆ ಬಂದು ನಿಂತಿತು. ಜೂತೆಗೆ ಅಮರ ಬಾಬು ಕೂಡ.  ಏನವನ ಕಥೆ ? ಕುತೂಹಲ ನನ್ನೊಳಗ ಹೆಪ್ಪುಗಟ್ಟಿತ್ತು.

"ನಾನು ತಾಜಮಹಲ್ ಖರೀದಿಸಬೇಕು" ಊಟದ ನಡುವೆ ಹೇಳಿದೆ ನಾನು.

"ಆಗ್ರಾನ ಖರೀದಿ ಮಾಡ್ಕೊಂಡು ಹೋಗ್ರಲ್ಲಾ" ಕೋರಟಕರ ತಟ್ಟನೆ ಜೋಕ್ ಮಾಡಿದರು.

"ಹತ್ತಾರು ಗೆಳೆಯರು ಹಣಾ ಕೊಟ್ಟಾರ ಅವರಿಗೆ ಸಂಗಮವರಿ ಕಲ್ಲಿನ ತಾಜ್, ಮಾದರಿಗಳನ್ನ ಒಯ್ಯಬೇಕು" ಎಲ್ಲರ ನಗುವಿನ ಮಧ್ಯೆ ಹೇಳಿದೆ ನಾನು.

"ನಾಳೆ ನಿಮ್ಮನ್ನು ಹ್ಯಾಂಡಿಕ್ರಾಫ್ಟ್ ಅಂಗಡಿಗೆ ಕರೆದುಕೂಂಡು ಹೋಗ್ತೇನೆ. ಅಲ್ಲಿ ನಿಮಗೆ ಬೇಕಾದ ಮಾದರಿಗಳು ಸಿಗ್ತಾವೆ" ಮುರುಗನ್ ಹೇಳಿದರು.

                - ೩ -

ಹುಣ್ಣಿಮೆಯ ಬೆಳದಿಂಗಳಲ್ಲಿ ತಾಜ್ ನೋಡುವ ಅತ್ಯಾಸಕ್ತಿಯಿಂದ ಜನಸಂದಣಿ ವಿಪರೀತವಾಗಿತ್ತು.  ಸೌಂದರ್ಯಾನುಭೂತಿಗಾಗಿ ತವಕಿಸುವ ಮನುಷ್ಯನ ನಿತಾಂತ ಆಸ್ಥೆ ಕಂಡು ಸಂತಸವೆನಿಸತು ನನಗೆ.  ಪ್ರಪಂಚ ಕ್ರೂರವಾಗುತ್ತ ನಡೆದಿದೆ.  ಜೀವ ಪ್ರೀತಿಯ ಅಮಾಯಕರನ್ನು ಚಾಕೂ, ಮಚ್ಚು, ಖಡ್ಗ ತ್ರಿಶೂಲಗಳಿಂದ ಇರಿದಿರಿದು ಕೊಲ್ಲಲಾಗುತ್ತಿದೆ.  ಬಾಂಬು ಸ್ಪೋಟಿಸಿ ಛಿದ್ರಿಸಲಾಗುತ್ತಿದೆ.  ಬದುಕಿಸುವ ಪ್ರಕೃತಿಯನ್ನು ಅದರ ಚೆಲುವನ್ನು ನಿರ್ದಾಕ್ಷಿಣ್ಯವಾಗಿ ವಿಕಾರಗೊಳಿಸುವ, ಅಧಮವಾಗಿ ಉಡಾಯಿಸುವ ರಾಕ್ಷಸಿ ಪ್ರವೃತ್ತಿಯವರಿಗೆ ಎಲ್ಲವನ್ನೂ ಸುಡಗಾಡು ಮಾಡುವ ತವಕ. ಚಿಂತಿತನಾಗಿದ್ದ ನಾನು.  ಕೋರಟಕರ ಬಾಳೆಹಣ್ಣು ಹುಡುಕಿಕೂಂಡು ಹೋಗಿದ್ದರು.  ಅವರ ಜೊತೆಯಲ್ಲಿ ಶಿರಹಟ್ಟಿಮಠ ಇದ್ದರು ಬಾಗವಾನ, ಮಹೇಶ, ಮುರುಗನ್ ತಿಕೀಟು ಕೌಂಟರ್‍ನ ಸರದಿಯಲ್ಲಿದ್ದರು.

ಅಮರಬಾಬು ದೂರದಿಂದ ಬರುವುದು ಕಾಣಿಸಿತು. "ಸರ್, ಆ ವ್ಯಕ್ತಿ ಈ ಕಡೆಗೆ ಬರಾಕ ಹತ್ಯಾನ" ನಾನು ಹಂಚಾಟೆಯವರಿಗೆ ಹೇಳಿದೆ. "ಅವನ ಬಗ್ಗೆ ನಿಮಗೊಳ್ಳೆ ಆಸಕ್ತಿ ಹುಟ್ಟಿಕೊಂಡೈತಿ" ಎಂದರವರು.  ಅವನು ನಮ್ಮ ವ್ಯಾನ್ ಸಮೀಪ ಬಂದ.  ತುಸು ದೂರದಲ್ಲಿ ನಿಂತು ಸಿಗರೇಟು ಸೇದುತ್ತಿದ್ದ ರಸೀದನಿಗೆ ಮಾಮೂಲಿಯಾಗಿ `ಸಲಾಂ' ಹೇಳಿದ. ಹೊಗೆ ಉಗುಳುತ್ತ ರಸೀದ್ "ಕಲ್ ಪಾಂಚ್ ರುಪೆ ದೇದಿಯಾ ನಾ ?" ಎಂದ.

"ಜೀ..ಸಾಬ್" ಸೆಲ್ಯೂಟ್ ಮಾಡಿದ ಕೈಯನ್ನು ಹಣೆಯ ಮೇಲಿಂದ ತೆಗೆಯದೆ ಹೇಳಿದ ಆಮರಬಾಬು.  "ಫಿರ್..ಕ್ಯಾ ಚಾಯಿಯೆ?" ಧ್ವನಿಯೆತ್ತರಿಸಿದ ರಸೀದ್.  ಈಗ ಅಮರಬಾಬು ಮಾತಾಡಲಿಲ್ಲ. ಮೈಮೇಲಿನ ಹರಕು ಶರ್ಟು ಬಿಚ್ಚಿ ಮೌನವಾಗಿ ವ್ಯಾನ್ ಮೇಲಿನ ಧೂಳು ಒರೆಸತೊಡಗಿದ.  ಅವನದು ಮೂವತ್ತು ಮೂವತ್ತೈದರ ಪ್ರಾಯ ಇರಬಹುದು. ಎತ್ತರದ ಸಪೂರ ದೇಹ.  ಮುಖದ ಕಾಂತಿಯನ್ನು ಮರೆಮಾಚಿದ ಕುರುಚಲು ಗಡ್ಡ-ಮೀಸೆ.  ತಲೆತುಂಬ ದಟ್ಟ ಜಿದ್ದುಗಟ್ಟಿದ ಗುಂಗುರು ಕೂದಲು.  ದಿಟ್ಟಿಸುವ ಕಣ್ಣುಗಳಲ್ಲಿ ಮಡುಗಟ್ಟಿದ ನೈರಾಶ್ಯ.  ವ್ಯಾನ್ ಮೇಲಿನ ಧೂಳು ಕೂಡವಿ, ಶರ್ಟನ್ನು ಮುದ್ದೆಮಾಡಿ ಬಗಲನಲ್ಲಿಟ್ಟುಕೊಂಡು ನಿಂತ ಆಮರಬಾಬು. ಅವನ ವಿಶಾಲ ಎದೆಯಲ್ಲಿದ್ದ ಹಚ್ಚೆಯಲ್ಲಿ ತಾಜಮಹಲ ಚಿತ್ತಾರ ಕಂಡಿತು.  ಅದರ ಮಧ್ಯೆ ಪ್ರೀತಿ ಎಂಬ ಹಿಂದಿ ಲಿಪಿ.  ಅದಮ್ಯ ವಿಸ್ಮಯ ನನಗೆ.  ಅದನ್ನು ಗಮನಿಸಿದವನಂತೆ ರಸೀದ್ ಹೇಳಿದ.  "ಶಾಹಜಹಾನ್ ಬೇಗಮ್‍ಳಿಗೆ ನೆಲದ ಮೇಲೆ ತಾಜಮಹಲ್ ಕಟ್ಟಿಸಿದ.  ಅಮರಬಾಬು ತನ್ನ ಹುಡುಗಿಗಾಗಿ ಎದೆಯ ಮೇಲೆ ತಾಜ್‍ನ ಹಚ್ಚೆ ಹಾಕಿಸಿಕೂಂಡಿದ್ದಾನೆ."

ಅಪಹಾಸ್ಯದ ಧಾಟಿಯಿರಲಿಲ್ಲ ಅವನ ಮಾತಿನಲ್ಲಿ.

"ಅಮರಬಾಬು ನೀನು ಪ್ರೇಮಿಸಿದ ಹುಡುಗಿ ಯಾರು?" ಹಿಂದಿಯಲ್ಲಿ ಕೇಳಿದ ನಾನು.
"ಪ್ರೀತಿ" ಉತ್ಸಾಹದಿಂದ ಹೇಳಿದ ಅವನು.
"ತುಮ್ ಪ್ರೀತಿಕೊ ಬಹುತ್ ಪ್ಯಾರ್ ಕರತೆ ಥೆ ನಾ?" ರಸೀದ್ ಕೇಳಿದ.
"ಆಜ್‍ಬಿ ಕರತಾ ಹೂಂ. ಆಖರಿ ದಮ್‍ತಕ್ ಕರತಾ ರಹುಂಗಾ" ಅಮರಬಾಬುವಿನ ಅಂತರಾಳ ಉಸುರಿತ್ತು.  ಅದರ ಜಾಡಿನಲ್ಲಿಯೇ ಕೇಳಿದೆ ನಾನು "ಫಿರ್ ಓ ಕಹಾನಿ ಕ್ಯಾ ಹೈ?"

ಆಮರಬಾಬು ನನ್ನತ್ತ ಮುಖ ತಿರುಗಿಸಿದ.  ಅವನ ಕಣ್ಣು ಒದ್ದೆಯಾಗಿದ್ದವು.

ಕಸಿವಿಸಿಯೆನಿಸಿತು ನನಗೆ "ಚಾಯ್ ಪೀವೋಗೆ?" ಕೇಳಿದೆ ನಾನು.  ಅವನು ಶರ್ಟಿನಿಂದ ಕಣ್ಣೀರು ಒರೆಸಿಕೊಳ್ಳುತ್ತ `ಹೂಂ' ಎನ್ನುವಂತೆ ಕತ್ತು ಅಲ್ಲಾಡಿಸಿದ.  "ಠೀಕ್ ಹೈ ಚಲೋ" ರಸೀದ್ ಅವನನ್ನು ಮುಂದೆ ಹಾಕಿಕೊಂಡು ನಡೆದ.  ನಾನು ಹಿಂಬಾಲಿಸಿದೆ.

ಚಹದ ಗಾಡಿಯೆದುರು ನಿಂತಾಗ "ಕುಚ್ ತೊ ಖಾಲೇನಾ ?" ಎಂದೆ. ಆಮರಬಾಬು ಎರಡು ಕಚೋರಾಗಳನ್ನು ಗಬಗಬನೆ ತಿಂದು, ಚಹ ಕುಡಿದ.  ಹಸಿವು ಹಿಂಗಿತೇನೋ, ಕಣ್ಣಿನಿಂದಲೇ ಕೃತಜ್ಞತೆ ಸೂಚಿಸಿದ ಆವನು.  ನಾವೂ ಚಹಾ ಕುಡಿದೆವು.  ಹಣ ಇಸಿದುಕೂಳ್ಳುವಾಗ ಹೊಟೇಲಿನವನು ಕೇಳಿದ "ಆಮರಬಾಬುನ ಕಥೆ ಕೇಳಿದಿರಾ?"

"ನಿಮಗೂ ಗೊತ್ತು ಅವನ ಕಥೆ ?" ಪ್ರತಿಯಾಗಿ ಕೇಳಿದೆ ನಾನು.

"ಅವನದು ಮುಗಿಯದ ಕಥೆ" ಎಂದು ನಕ್ಕ ಆವನು.

ಈಚೆಗೆ ಬಂದಾಗ ರಸೀದ್ ಹೇಳಿದ "ಅಮರಬಾಬು, ತಾಜಮಹಲ್‍ನತ್ತ ದೃಷ್ಟಿ ಹೊರಳಿಸಿ `ಏಕ್ ಶಾಹಜಹಾನ್ ಬನವಾ ಕೆ ಹಸಿ ತಾಜಮಹಲ್ | ಹಮ್ ಗರಿಬೋಂಕಿ ಮೊಹಬತ್ ಕಾ ಉಡಾಯಾ ಹೈ ಮಜಾಕ್ ||" ಸಾಹಿಲ್‍ನ ಕವಿತೆಯ ಸಾಲೊಂದನ್ನು ಉಲಿಯುತ್ತ ತಲೆಯ ಮೇಲೆ ಶರ್ಟನ್ನು ಬೀಸುತ್ತ ಹೊರಟೇ ಹೋದ.

ರಸೀದ್ ನಕ್ಕ. ನನಗೆ ನಿರಾಶೆಯೆನಿಸಿತು. ವ್ಯಾನ್ ಹತ್ತಿರಕ್ಕೆ ಬಂದಾಗ ರಸೀದನೆ ಆಮರಬಾಬುವಿನ ಕಥೆ ಹೇಳಿದ.

            - ೪ -

ಆಗ್ರಾ ಶಹರದ ಕೊಳಗೇರಿ ಪ್ರದೇಶದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಆಮರಬಾಬು.  ಸೈಕಲ್ ರಿಕ್ಷಾ ತುಳಿಯುತ್ತಿದ್ದ, ಅವನ ತಂದೆ ಎದೆನೋವಿನಿಂದ ಆಸುನೀಗಿದಾಗ ಅವನಿಗಿನ್ನು ಚಿಕ್ಕ ವಯಸ್ಸು.  ತಾಯಿ ತಾಜ್‍ಮಹಲ್ ಬಗೀಚನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಅರಮಬಾಬು ಪ್ರೇಮಿಸಿದ ಹುಡುಗಿ ಪ್ರೀತಿ.  ಅವಳ ತಂದೆ ಆಲ್ಲಿ ಕೂಲಿಯಾಗಿದ್ದ.  ತಾಯಿಗೂ ಕೂಲಿಯ ಕೆಲಸವಿತ್ತು ಅವರ ಝೊಪಡಿಗಳು ಕೂಡ ಎದುರು-ಬದುರಾಗಿದ್ದವು.  ಪರಸ್ಪರರಲ್ಲಿ ಸಂಬಂಧವೂ ಅನ್ಯೋನ್ಯವಾಗಿತ್ತು.  ತಾಜಮಹಲಿನ ಪರಿಸರದಲ್ಲಿಯೇ ಅಮರಬಾಬು-ಪ್ರೀತಿ ಆಡಿಕೊಂಡು ಬೆಳೆದಿದ್ದರು.

ಅವನು ಮೆಟ್ರಿಕ್ಯುಲೇಶನ್ ಓದುತ್ತಿರುವಾಗ ಪ್ರೀತಿ ಏಳನೆಯ ತರಗತಿಯಲ್ಲಿ ಆಭ್ಯಸಿಸುತ್ತಿದ್ದಳು.  ಓದಿನ ಹಂಬಲದ ನಡುವೆಯೂ ಆವನು ಸ್ಯೆಕಲ್ ರಿಕ್ಷಾ ನಡೆಸುತ್ತಿದ್ದ.  ಪ್ರೀತಿಯನ್ನು ಶಾಲೆಗೆ ಬಿಟ್ಟು ಮತ್ತೆ ಕರದು ತರುವ ಜವಾದ್ದಾರಿಯೂ ಅವನದೇ ಆಗಿತ್ತು.  ಆಕೆ ಹೈಸ್ಕೂಲಿಗೆ ಸೇರಿಕೊಂಡ ಮೇಲೆ ಅಮರಬಾಬು ಪಗಾರದ ಮೇಲೆ ರಿಕ್ಷಾ ಓಡಿಸಲಾರಂಭಿಸಿದ್ದ.  ಆದೇ ಹೊತ್ತಿಗೆ ಪ್ರೀತಿ ಮೈನೆರೆದಿದಳು.  ಅವಳ ದೇಹದಲ್ಲಿ ಬದಲಾವಣೆ ಕಂಡಿತ್ತು.  ಪರಿಮಳ ಸೂಸುವ ಹೂವಿನಂತಿದ್ದ ಆಕೆಯ ಮಾತಿನಲ್ಲಿ ನೋಟದಲ್ಲಿ ಲಜ್ಜೆ ಅಪೂರ್ವವೆನಿಸಿತ್ತು.  ಅಮರಬಾಬು ಅವಳಿಗೆ ತೀವ್ರ ಆಕರ್ಷಿತನಾಗಿದ್ದ.

ತಾಜಮಹಲ್ ಅವರಿಬ್ಬರಲ್ಲಿ ಮೊಹಬತ್ ಸೃಜಸಿತ್ತು.  ಯಮುನೆಯ ತೀರ, ಕೆಂಪುಕಿಲ್ಲಾ ಅವರ ಕನಸುಗಳಿಗೆ ರಂಗು ತುಂಬಿದ್ದವು. ಅವರ ಪ್ರೇಮದ ಒಡನಾಟದಿಂದ ಹಿರಿಯರಿಗೆ ಸಂತೋಷ ಅನಿಸಿತ್ತು.  ಪ್ರೀತಿ ಮೆಟ್ರಿಕ್ ಮುಗಿಸುತ್ತಿರುವಂತೆ ಅಮರಬಾಬು ರಿಜರ್ವ್ ಪೋಲೀಸ್ ಹುದ್ದೆಗೆ ಆಯ್ಕೆಯಾಗಿದ್ದ.  ತರಬೇತಿಗೆ ಹೋಗುವ ಮೊದಲು ಮದುವೆಯಾಗಲು ಪ್ರೀತಿ ಅವನನ್ನು ಒತ್ತಾಯಿಸಿದ್ದಳು.  ತನ್ನ ಮೇಲೆ ವಿಶ್ವಾಸವಿಡು ಎಂದಿದ್ದ ಅಮರಬಾಬು. "ನೌಕರಿ ಮಾಡುವವರಿಗೆ ವರದಕ್ಷಿಣೆ ಆಸೆ ಹೆಚ್ಚು" ಎಂದಾಕೆ ಕೆಣಕಿದ್ದಳು.  "ನಾನು ನೌಕರಿ ಮಾಡುವುದು ನಿನ್ನ ಸಲುವಾಗಿ. ನಿನ್ನನ್ನು ರಾಣಿಯಂತೆ ಇಡುವ ಆಸೆ ನನಗೆ" ಅಮರಬಾಬು ಒಡಲ ಮಾತು ಹೇಳಿದ್ದ.

"ನಾನು ಬಡವರ ಹುಡುಗಿ" ವಾಸ್ತವ ನೆನೆಪಿಸಿ ಕೊಟ್ಟಿದ್ದಳಾಕೆ.

"ನಾನೇನು ಅಮೀರನೆ ?" ಅವನು ಕೇಳಿದ್ದ.

"ನೌಕರಿ ಬಂದ ಮೇಲೆ ನೀನು ಆಮೀರನಾಗುತ್ತಿ" ಆಕೆ ಗಂಭೀರವಾಗಿ ಹೇಳಿದ್ದಳು. "ನೀನೂ ಆಮೀರಳಾಗುತ್ತಿ" ಎಂದು ಅವಳನ್ನು ತನ್ನ ಎದೆಯಲ್ಲಿ ಹುದುಗಿಸಿಕೂಂಡಿದ್ದ ಅಮರಬಾಬು.

"ನನ್ನ ಮೇಲೆ ಅಷ್ಟು ಪ್ರೀತಿಯೆ ನಿನಗೆ ?" ಪರೀಕ್ಷಿಸುವಂತೆ ಕೇಳಿದ್ದಳು ಪ್ರೀತಿ.

"ನೀನಿಲ್ಲದಿದ್ದರೆ ಈ ಎದೆಗೆ ಉಸಿರಾಟವೇ ಇಲ್ಲ" ತಟ್ಟನೆ ಹೇಳಿದ್ದ ಆಮರಬಾಬು.

"ಬಾದಶಾಹ ಶಾಹಜಹಾನ ಮುಮತಾಜ್‍ಳನ್ನು ಹೀಗೆ ಪ್ರೀತಿಸುತ್ತಿದ್ದ"

"ಹೂಂ"

"ಅವಳ ಪ್ರೀತಿಗಾಗಿ ಈ ತಾಜ್‍ಮಹಲ್ ಕಟ್ಟಿಸಿದ"

"ಹೂಂ"

"ನನ್ನ ಸಲುವಾಗಿ ನೀನೇನು ಮಾಡುತ್ತಿ?" ಹುಡುಗಾಟ ಮಾಡಿದ್ದಳಾಕೆ
.
"ನಾನಂತೂ ಶಾಹಜಹಾನ ಅಲ್ಲ ಆದರೆ ನನ್ನದೆಯ ಮಹಲಿನೊಳಗೆ ನಿನ್ನನ್ನು ತುಂಬಿಕೂಂಡಿರುತ್ತೇನೆ" ಗಾಢವಾಗಿ ಉಲಿದಿದ್ದ ಆವನು.

ಮರುದಿನ ನೋಡಿದರೆ ಅವನು ಎಂಥ ಸಂಕಟ ಆನುಭವಿಸತೊಡಗಿದ್ದ.  ತನ್ನ ಎದೆಯ ತುಂಬ ತಾಜಮಹಲ್‍ನ ಹಚ್ಚೆ ಹಾಕಿಸಿಕೊಂಡು ಆವಳೆದುರು ನಿಂತಿದ್ದ.
ಹೆಪ್ಪುಗಟ್ಟಿದ ರಕ್ತಕಣಗಳಲ್ಲಿ ಅಸಾಧ್ಯ ಯಾತನೆ.  ಅದು ಪ್ರೀತಿಗಾಗಿಯೇ ಅಂದಿದ್ದ.  ಅವನ ತಾಯಿ, ಆತ್ತೆ-ಮಾವ ಗಾಬರಿಯಾಗಿದ್ದರು.  ಅವನ ಹುಚ್ಚಾಟ ಕಂಡು ನಕ್ಕಿದ್ದರು ಕೂಡಾ. ಪ್ರೀತಿ ತನ್ನೊಡಲ ಉಸಿರಿನಿಂದ ಅವನೆದೆಯ ಗಾಯ ಮಾಯಿಸಿದ್ದಳು.  ಪೋಲೀಸ್ ತರಬೇತಿಗೆ ಸಂತೋಷದಿಂದ ಬೀಳ್ಕೊಟ್ಟಳು.

ಯಮುನೆ ಹರಿಯುತ್ತಿದ್ದಳು. ಸೂರ್ಯ-ಚಂದ್ರ ಬೆಳಗುತ್ತಿದ್ದರು.  ತಾಜಮಹಲ್ ನೋಡುವ ಜನರ ಧಾವಂತದಲ್ಲಿ ಸಡಗರವಿತ್ತು ಒಮ್ಮೆಯಾದರೂ ಪ್ರೀತಿ ಆ ಕಡೆಗೆ ಸುಳಿದಾಡಲಿಲ್ಲ.  ಅಮರಬಾಬು ಅವಳಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದ.

ಆ ದಿನ ಬೆಳಗಿನ ಹೊತ್ತು ಒಲೆಯ ಮುಂದೆ ಕುಳಿತ ಪ್ರೀತಿ ಪರೋಟ ಬೇಯಿಸುತ್ತಿದ್ದಳು.  ಅವಳ ತಾಯಿ-ತಂದೆ ಮನೆಯಲ್ಲಿಯೇ ಇದ್ದರು.  ಇದ್ದಕ್ಕಿದ್ದಂತೆ ಆ ಏರಿಯಾದ ಕಾರ್ಪೋರೇಟರ್ ಸಂಜಯಗುಪ್ತಾ ತನ್ನ ಹೆಂಡತಿ, ಮಗನನೊಂದಿಗೆ ಕಾರಿಳಿದು ಝೊಪಡಿ ಹೊಕ್ಕಿದ್ದ.  ಸುತ್ತುಬಳಸಿ ಮಾತಾಡದೆ ಪರಸ್ಪರ ಬೀಗರಾಗೋಣ ಅಂದಿದ್ದ.  ಅವನ ಮಗ ರಾಜೇಂದ್ರನ ಕಣ್ಣು ಪ್ರೀತಿ ಮೇಲೆ ನೆಟ್ಟಿತ್ತು ಅವಳ ರೂಪಕ್ಕೆ ತಲೆಕೆಡಿಸಿಕೊಂಡಿದ್ದ ಅವನು.  ಅವಳನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ತನ್ನ ವರ್ಚಸ್ಸಿನ ಪ್ರಭಾವದಲ್ಲಿ ಉಡಾಳರ ಗ್ಯಾಂಗ್ ಲೀಡರಾಗಿ ಅಧ್ವಾನಗಳನ್ನು ಎಸಗುತ್ತಿದ್ದ ಮಗನನ್ನು ನಿಯಂತ್ರಿಸಲು ಗುಪ್ತಾನಿಗೆ ಈ ಸಂಬಂಧ ಆನಿವಾರ್ಯವೆನಿಸಿತ್ತು.  ಪ್ರೀತಿಯನ್ನು ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಲು ಅವನು ತೀರ್ಮಾನಿಸಿದ್ದ.  ಪ್ರೀತಿ ಅವನ ನಿರ್ಧಾರವನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಳು.  ಅಮರಬಾಬುನೊಂದಿಗೆ ಆಕೆಯ ನಿಶ್ಚಿತಾರ್ಥ ಆಗಿದೆಯೆಂದು ತಂದೆ-ತಾಯಿ ಸ್ಪಷ್ಟಪಡಿಸಿದ್ದರು. "ಪ್ರೀತಿ ನನ್ನ ಹೆಂಡತಿಯಾಗದಿದ್ದರೆ ನಾನು ವಿಷ ಕುಡಿಯುತ್ತೇನೆ.  ಯಮುನೆಗೆ ಹಾರಿಕೂಳ್ಳುತ್ತೇನೆ" ಎಂದು ರಾಜೇಂದ್ರ ಹೆದರಿಸಿದ್ದ.

"ನೀನು ಸತ್ತರೆ ನನಗೇನು? ನಾನು ಅಮರಬಾಬುನ ಹೆಂಡತಿ" ಪ್ರೀತಿ ದೃಢಪಡಿಸಿದ್ದಳು.  ಅವಮಾನದ ಮುಖ ಹೊತ್ತು ಹೋಗಿದ್ದ ರಾಜೇಂದ್ರ.  ಈ ಸಂಗತಿಯನ್ನು ಯಾರು ಆಮರಬಾಬುವಿನ ಕಿವಿಗೆ ತಾಕಿಸಲಿಲ್ಲ.  ಪ್ರೀತಿ ಅವನಿಗೆ ಬರೆದ ಕಾಗದದಲ್ಲಿ "ನೀನು ಬಂದ ಕೂಡಲೇ ಮದುವೆ" ಎಂದು ತಿಳಿಸಿದ್ದಳು.

ಅದರ ನಂತರದ ನಾಲ್ಕಾರು ದಿನಗಳಲ್ಲಿ ಆಘಾತಕರ ಸುದ್ದಿ ಆಮರಬಾಬುವಿನ ಎದೆಯೊಡೆಸಿತ್ತು.  ಪ್ರೀತಿ ಯಮುನಾ ನದಿಯಲ್ಲಿ ಮುಳುಗಿ ಸತ್ತಳು.  ಧಾವಿಸಿ ಬಂದ ಅಮರಬಾಬು ಆವಳ ಮುಖ ನೋಡಲಿಲ್ಲ.  ಅವಳ ಬೆತ್ತಲೆಯ ಶರೀರ ನೀರಲ್ಲಿ ನೆನೆದು ಮುಟ್ಟಲು ಆಸಾಧ್ಯವೆನಿಸಿತ್ತು.  ಪೋಲೀಸರು ಗಡಿಬಿಡಿಯಲ್ಲಿ ಮಹಜರು ನಡೆಸಿ ನದಿಯ ದಡದಲ್ಲಿಯೇ ಹೂಳುವ ವ್ಯವಸ್ಥೆ ಮಾಡಿದ್ದರು.

ಅಮರಬಾಬು ಅಲ್ಲಿ ಕುಳಿತು ಇಡೀ ದಿನ ರೋಧಿಸಿದ್ದ.

ರಾಜೇಂದ್ರನ ರಾಕ್ಷಸಿಯೊಡಲಲ್ಲಿ ಅವಮಾನದ ಕೆಂಡ ಪ್ರಜ್ವಲಿಸಿತ್ತು.  ಅವನು ಆ ನಡುಹಗಲಲ್ಲಿ ಗುಡಿಸಲು ಹೊಕ್ಕು ಪ್ರೀತಿಯನ್ನು ಕಾರಿನೊಳಕ್ಕೆ ಹಾಕಿಕೊಂಡು  ಹೋಗಿದ್ದ ಅವನೊಂದಿಗೆ ಇನ್ನೂ ನಾಲ್ಕು ಹುಡುಗರಿದ್ದರು.  ಅವಳ ತಲೆಯ ಮತ್ತು ದೇಹದ ಮೇಲೆ ಪರಚಿದ ಗಾಯಗಳಿದ್ದವು.  ಸಾಮೂಹಿಕ ಅತ್ಯಾಚಾರಕ್ಕೆ ಪ್ರೀತಿ ಒಳಗಾಗಿದ್ದಳು.  ಆದರೆ ಪೋಲೀಸರು ತಮ್ಮ ಮಹಜರಿನ ವರದಿಯಲ್ಲಿ ಗಾಯದ ಗುರುತುಗಳನ್ನು ದಾಖಲಿಸಲಿಲ್ಲ.  ವೈದ್ಯರ ಸರ್ಟಿಫಿಕೇಟ್ ಅವಳ ಮೇಲೆ ಆತ್ಯಾಚಾರ ಸಂಭವಿಸಿಲ್ಲವೆಂದು ಖಚಿತಗೊಳಿಸಿತ್ತು. ಪತ್ರಿಕೆಗಳು ಅವಳದ್ದು ಆತ್ಯಹತ್ಯ ಪ್ರಕರಣ ಎಂದು ಹೂತು ಹಾಕಿದ್ದವು.  ರಾಜೇಂದ್ರ ಮತ್ತು‌ ಅವನ ಗೆಳೆಯರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದರು.  ಪ್ರೀತಿಯ ತಾಯಿ-ತಂದೆಗಳ ಸಂಕಟ, ಹೋರಾಟಗಳು ಗುಪ್ತಾನ ಹಣ ಮತ್ತು ಅಧಿಕಾರಗಳೆದುರು ನಪುಂಸಕವೆನಿಸಿದ್ದವು.  "ನನ್ನ ಪ್ರೀತಿಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು" ಎಂದು ಆಮರಬಾಬು ರಸ್ತೆಗಿಳಿದು ಕೂಗಿಕೂಂಡ.  ಅವನನ್ನು ಪಾಪ ಎನ್ನುವಂತೆ ನೋಡಿದರು ಜನ.  ಬೂರ್ಜ್ವಾ ವ್ಯವಸ್ಥೆಯಿಂದ ಬೇಸತ್ತ ಅಮರಬಾಬು ಕೆರಳಿದ.  ತಲೆ ಕೆದರಿಕೊಂಡ.  ಅಂಗಿ ಹರಿದುಕೊಂಡ.  ಆಮೇಲೆ ಗಹಗಹಿಸಿ ನಕ್ಕ. ಕೆಲವರು ಆವನನ್ನು ಹುಚ್ಚ ಎಂದರು. ಆ ಅವಸ್ಥೆಯಲ್ಲಿ ಅವನು ಆಗ್ರಾದ ಕಿಲ್ಲಾ, ತಾಜಮಹಲು, ಯಮುನಾ ತೀರಗಳಲ್ಲಿ ಪಿರಿಪಿರಿ ತಿರಿಗಿದ, ಪ್ರೀತಿ
ಸತ್ತಿಲ್ಲ ಎನ್ನುವಂತೆ.

ಹೀಗೆ ತಿರುಗಾಡಿಕೂಂಡು ಬಂದು ಪ್ರೀತಿಯನ್ನು ಹೂಳಿದ ಜಾಗೆಯಲ್ಲಿ ಕುಳಿತುಕೊಳ್ಳುತ್ತಿದ್ದ.  ಅವನ ಅವಸ್ಥೆ ತಾಯಿಯ ಸಂಕಟ ಹೆಚ್ಚಿಸಿತ್ತು.  ಅದು ಕೊರಗಾಗಿ ಅವಳನ್ನು ಬಲಿ ತೆಗೆದುಕೊಂಡಿತ್ತು.  ಅತ್ತೆ ಮಾವ ಅವನನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡರೂ ಪ್ರೀತಿ.... ಪ್ರೀತಿಯೆಂದು ಕನವರಿಸುತ್ತಿದ್ದ ಅಮರಬಾಬು ಮತ್ತೆಮತ್ತೆ ತಾಜಮಹಲ್ ಪರಿಸರಕ್ಕೆ ಬಂದು ಬಿಡುವನು.  ಪ್ರೀತಿಗೊಂದು ಸಮಾಧಿ ಕಟ್ಟುವ ವಾಂಛೆಯಿಂದ ಏನೋ ಅವನು ಅಲ್ಲಿ ಇಲ್ಲಿಂದ ಕಲ್ಲು ಹೊತ್ತು ತರುವನು. ಆಸ್ಥೆಯಿಂದ ಎಂಬಂತೆ ಸಮಾಧಿ ಕಟ್ಟುವನು.  ಮುಮ್ತಾಜಳ ಭಾಗ್ಯ ಪ್ರೀತಿಗಿರಲಿಲ್ಲ.  ಶಹಜಹಾನನ ದೌಲತ್ತು ಅಧಿಕಾರ ಅಮರಬಾಬುಗಿರಲಿಲ್ಲ.  ತಾಜಮಹಲಿನ ಪಕ್ಕ ತನ್ನ ಪ್ರೀತಿಯ ಹುಡುಗಿಯ ಸಮಾಧಿಯನ್ನು ಸ್ಥಿರಗೊಳಿಸಬೇಕೆನ್ನುವ ಅವನ ಉತ್ಕಟ ಹಂಬಲ ಕ್ಕೆಗೂಡಲಿಲ್ಲ.  ದುರಾದೃಷ್ಟವೆನ್ನುವಂತೆ ವರ್ಷಕ್ಕೊಮ್ಮೆ ಉಕ್ಕಿ ಬರುವ ಯಮುನೆ ಈ ಸಮಾಧಿಯನ್ನು ಕೊಚ್ಚಿಕೊಂಡುಹೋಗಿಬಿಡುತ್ತಾಳೆ.  ಬಡವರ ಪ್ರೀತಿಗೆ ಯಾವ ಕುರುಹುಗಳು ಇರಬಾರದೆನ್ನುವಂತೆ.

ಕಥೆಯನ್ನು ಹೇಳಿ ಮುಗಿಸಿದ ರಸೀದನ ಧ್ವನಿಯಲ್ಲಿ ವಿಷಾದವಿತ್ತು.

ಆಮರಬಾಬುವಿನ ಎದೆಯ ಮೇಲಿನ ತಾಜಮಹಲ್ ಚಿತ್ತಾರ ನನ್ನ ಕಣ್ಣುಕಟ್ಟಿತ್ತು. ಒಳಗೆ ತಳಮಳ, ಮಿಡಿತ.  ಮಹೇಶ ಮತ್ತು ಮುರುಗನ್ ನಮ್ಮೆದುರು ಬಂದು ನಿಂತರು.  ಹುಣ್ಣಿಮೆ ಬೆಳಕಲ್ಲಿ ತಾಜಮಹಲ್ ನೋಡುವ ಜನಸಂದಣಿಯಲ್ಲಿ ತಾವು ಪ್ರವೇಶ ತಿಕೀಟು ದೊರಕಿಸಿಕೊಳ್ಳಲು ಹೋರಾಟ ಮಾಡಿದ ಸಾಹಸಗಾಥೆಯನ್ನು ಉತ್ಸಾಹದಿಂದ ವಿವರಿಸಿದರು.  ನನಗದು ಅಗಾಧವೆನಿಸಲಿಲ್ಲ.  ಆಕಾಶದಲ್ಲಿ ಪೂರ್ಣ ಚಂದಿರ ಆಪೂರ್ವವೆನಿಸತೊಡಗಿದ್ದ.  ತನಗೆ ತಾಜ್ ನೋಡಬೇಕೆನಿಸಲಿಲ್ಲ.

            *****

ಕೀಲಿಕರಣ: ಎಂ.ಎನ್.ಎಸ್. ರಾವ್

ಮಾದಾಯಿ

-ರವಿ ಕೋಟಾರಗಸ್ತಿ

ಹಸಿರು ಸೀರೆಯುಟ್ಟು....
ಭೂಮಡಿಲ... ಮುತ್ತಿಟ್ಟು
ಜಲ-ತಾರೆಗಳ ಅಪ್ಪಿ
ಹರಿದ್ವರ್ಣದ ಆಲಿಂಗನ
ನಿತ್ಯ ಕಾನನಗೋಡೆ ಮಾದಾಯಿ ಮಡಿಲು

ಏರು ತಗ್ಗುಗಳ...
ಬೆಟ್ಟಗಳ ನಡುವಲಿ
ಜುಳು... ಜುಳು... ಸುಮಧುರ
ನಿಸರ್ಗ ನಿನಾದ ಸಂಗೀತ ಚೆಲ್ಲುತ
ಬಳಲಿದ ದಾಹಕೆ ತಂಪೆರೆಯುತಿಹದು

ಗಿರಿ-ಕಾನನಗಳ...
ಜೀವನಾಡಿಯಾಗಿ
ಗಿಲ್ಲ... ಗಿಲ್ಲ ಗೆಜ್ಜೆ ನಾದದಲಿ
ಹೆಜ್ಜೆಯಲಿ ಆಡುತ
ಹಾಡುತ ಹರಿಸುತಿಹಳು
ಮಹಾತಾಯಿ... ಮಾದಾಯಿ

ಗಡಿ-ನಾಡು... ಭೇದವೆಣಿಸದೆ
ದುಡಿವ ಕೈಗಳಿಗೆ ಜೀವಧಾರೆಯಾಗಿ
ಬಹುಜನರ ಒಡಲು ತುಂಬಿಹಳು

ಮಲಪ್ರಭೆಯ ವಾತ್ಸಲ್ಯದಡಿ...
ನೆರಳಾಗಿ... ಎಲ್ಲೆ ಮೀರಿ...
ಅಪ್ಪುಗೆಯಲಿ ಐಕ್ಯವಾಗಿಹಳು

ವೈವಿಧ್ಯದ ಭಾಷೆ-ವೇಷಗಳ
ಬದುಕು-ಕನಸು ಬೇರಾದರೂ
ಒಡ ಹುಟ್ಟಿದವರೆನ್ನುತ ಸಾರುತಲಿ

ಜಗಕ್ಕೆ ಸಾಕ್ಷಿಯಾಗಿಹಳು ಮಾದಾಯಿ
         *****

ಕೀಲಿಕರಣ: ಕಿಶೋರ್‍ ಚಂದ್ರ

ಭಾಷ್ಯ ಬರೆಯುವುದೆಂತು

- ಗಿರಿಜಾಪತಿ ಎಂ. ಎನ್

ಭೂರಮೆಯ ಭೌಮದನಿಕೇತನಕೆ
ಭಾಷ್ಯ ಬರೆಯುವುದೆಂತು ಬರಿ ಮಾತು ||
ಮೌನ ತವಸಿಯ ತಪದಾ ನೆಲೆಯಲಿ
ಮಾತಿಗೆಲ್ಲಿಯ ಕಾಲ ಸಂದಲಹುದು ||

ಎತ್ತರೆತ್ತರ ಶೃಂಗಾರನಂಗವು ಮೌನ
ಹಿಮದ ಪಾದಾದಿಯಲು ಮತ್ತೆ ಮೌನ ||
ಕಂದರಂದ್ಹರದಾಳದಳದಲೂ ನಿಃಶಬ್ದ
ನೀರವ ಉಷೆಗೆ ಸಂಧ್ಯಾ ಧ್ಯಾನ ಯಾನ ||

ಅಮರ ಸಮೀರದಿ ಗಾನ ದೌಘನ
ಮೇಘ ಮಂಡಲದ ತಾಳವಾದನ ||
ಸೃಷ್ಟಿ ಸಮಾಧಿಸ್ಥ ಸ್ಥಿತಿ ಯತಿ ಧ್ಯಾನ
ಋಕ್ಕುಗಳಾ ನಾದದಾ ಬ್ರಹ್ಮ ಬಿಂದು ||

ಕರ್ಮದಾಚೆಯ ವೇದಾಂತ ಸಾರದಲಿ
ಜೀವ ರೂಹಿರೂಪಿನೊಳಗಾತ್ಮ ಸಿಂಧು ||
ಅಂಗಾನಂಗವು ರಂಗ ಬಿನ್ನಪಮಾಟವು
ಅನಂಗ ಸಂಗ-ಸಾಂಗತ್ಯದ ನೋಟವು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಶೂನ್ಯ

- ಮಸನೊಬ ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಹುಟ್ಟಿನ ಕಾರಣ ತಿಳಿಯದೇ
ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ
ಅನಂತದಲ್ಲಿ ವಿಲೀನವಾಗುವುದಷ್ಟೇ
ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ
ನೆನಪು - ಮೂಲಭೂತವಾಗಿ ಇರುವುದು
ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು
ಅನಂತ ದಿಕ್ಕುಗಳು.  ಹೌದು, ಮೂಡಣ,
ಪಡುವಣ ಎಲ್ಲಾ ಭ್ರಮೆಗಳು.

ಮೂಡಣ, ಪಡುವಣ
ಅರಿಯದಿರುವುದು ಸತ್ಯಕ್ಕೆ ಹೆಚ್ಚು
ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ
ಎಲ್ಲಿಂದ ಬರುತ್ತಾನೆಂದು ಯಾರಿಗೂ
ಗೊತ್ತಿಲ್ಲ.  ಸಾಕಾರವೇ ನಿರಾಕಾರ,
ನಿರಾಕಾರವೇ ಸಾಕಾರ-ಬುದ್ಧನ
ಬೋಧನೆ ಎಲ್ಲಾ ಅಂಶಗಳನ್ನೂ
ಒಳಗೊಂಡಿದೆ.  ಸ್ಥಾವರ, ಜಂಗಮ
ಎಲ್ಲವೂ ಒಂದೇ.  ಆದರೆ ಎಲ್ಲವೂ
ಶೂನ್ಯ.

ಮನುಷ್ಯನು ಜೀವಿಯೂ
ಅಲ್ಲ.  ನಿರ್ಜೀವಿಯೂ ಅಲ್ಲ.  ಆತ
ಜನಿಸಿಯೂ ಇಲ್ಲ.  ಗತಿಸಿಯೂ ಇಲ್ಲ.  ಆ
ದಿನ ಭತ್ತದ ಕುಯಿಲು ಮಾಡುತ್ತಿದ್ದಾಗ
ಯುವಜನರಿಗೆ ಹೇಳಿದೆ - ವಸಂತದಲ್ಲಿ
ನಾಟಿ ಮಾಡಿದಾಗ ಭತ್ತ
ಮೊಳಕೆಯೊಡೆದು ಜನ್ಮ ಪಡೆಯಿತು.
ಈಗ ಹಣ್ಣಾಗಿದೆ.  ಸತ್ತಂತೆ ಕಾಣುತ್ತಿದೆ.  ಈ
ಹುಟ್ಟುಸಾವಿನ ಆಟ ನಿರಂತರ....

     *****

ಕೀಲಿಕರಣ: ಕಿಶೋರ್‍ ಚಂದ್ರ

ಕರುಣೆಯೇ ಇಲ್ಲ

- ಡಾ || ರಾಜಪ್ಪ ದಳವಾಯಿ

ಕರುಣೆಯೇ ಇಲ್ಲವೆಂದುಕೊಂಡಿದ್ದೆ ಜಗದಲ್ಲಿ
ನೀನು ಸಾಂತ್ವನಗೊಳಿಸಿದ ಮೇಲೆ ಅದು ನಿಜವಲ್ಲ

ನಶ್ವರ, ಜೀವ ಸಾಕಿನ್ನು, ಬದುಕಬಾರದೆಂದಿದ್ದೆ
ಆ ಭಾವ ತಪ್ಪೆನಿಸಿ ನೀನು ನನ್ನ ಬದುಕಿಸಿದೆ

ಸಂಗಾತಕೆ ಜೀವವೇ ಇಲ್ಲವೆಂಬೆನ್ನ ಹಂಬಲ
ನೀನು ಜೊಗೆಯಾದ ಪರಿಯ ನಾನೇಗೆ ನಂಬಲ

ಜೀವನವ ಸಾವು ಗೆದ್ದಿತೆಂದು ಸದಾ ಚಿಂತಿಸಿದೆ
ಅಲ್ಲ ಅಲ್ಲ ಸಾಧ್ಯವಿಲ್ಲೆಂದು ನೀನದ ಹುಸಿ ಮಾಡಿದೆ

ಅಯ್ಯೋ, ಅನಾಥನೆಂದುಕೊಂಡೆ ಜೀವನದಲ್ಲಿ
ನೀ ನನ್ನ ಎದೆಗಪ್ಪಿದ ಮೇಲೆ ಅದೂ ನಿಜವಲ್ಲ

        *****

ಕೀಲಿಕರಣ: ಕಿಶೋರ್‍ ಚಂದ್ರ

ಮಹಾನಗರ ರಸ್ತೆ - ಮರುಚೇತನ

-ರವಿ ಕೋಟಾರಗಸ್ತಿ
ಚಿತ್ರ: ರಾಂಗೋಪಾಲ್ ರಾಜಾರಾಮ್












ಮಹಾನಗರದ ಮುಖ್ಯ ರಸ್ತೆಯಾಗಿದ್ದು
ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ
ತಲೆ ಎತ್ತುವ ಧನ್ಯತೆ ಕಳೆದಿತ್ತು.

ಬಾಯಾರಿದ ಭೂ ಒಡಲು ಹಸಿರಾಗಿಸಲು
ಧಾರಾಕಾರ ವರುಣನ ವಿಜಯೋತ್ಸವ
ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ

ಮಾನ ಬಿಟ್ಟವರು ನನ್ನ ಮಾನ ಮುಚ್ಚಲು
ಬರಿ ಉಸುಕು-ಮಣ್ಣು ಚೆಲ್ಲುತ ಗುಳಂವಾಗಿಸುವರು
ಆಡಳಿತ-ಅಧಿಕಾರಿಗಳು ನೂರು ಸಾವಿರ ಲಕ್ಷ ಲಕ್ಷ

ಸ್ವಾಭಿಮಾನ ಮರೆತ ನಗರವಾಸಿಗಳು
ನನ್ನ ಮೈಮೇಲೆ ನಡೆದಾಡುವಾಗೊಮ್ಮೆ
ಏಳುತ್ತ-ಬೀಳುತ ಹಾಕುವರು ಶಾಪ-ತಾಪ

ತಮಗಾದ ಅನ್ಯಾಯ ಪ್ರತಿಭಟಿಸದಿರುವ
ನಗರವಾಸಿ ನಾಗರಿಕ ವರ್ಗದ
ಭವಿಷ್ಯ ಮೆಲುಕಾಡಿಸುತ್ತಾ ಮೈಚಾಚಿ ಮಲಗಿರುವೆ

ಸ್ವಾತಂತ್ರ್‍ಯ ಸಿಕ್ಕು ಅರ್ಧಶತಕವಾದರೂ
ನಡೆದಿರುವವು ನನ್ನಿಹ ಮೈಮೇಲೆ
ಅತ್ಯಾಚಾರ ಭಾಷೆ-ಕೋಮು ದ್ವೇಷದ ಇರಿತಗಳು

ಕಾರ್ಮಿಕರ ಮೌನ ಹೋರಾಟ - ಮುಷ್ಕರ
ಅಬಲೆಯರ ಆರ್ತನಾದ ಅಪಘಾತ ಗಲಭೆಗಳ
ರಕ್ತದ ಮಡುವಿನಲ್ಲಿ ನರಳಾಟ ಕೇಳುತ ಮೌನವಾಗಿರುವೆ.

ಹುಸಿ ಭರವಸೆ ನೊಂದವರ ನಿಟ್ಟುಸಿರು
ಕೇಳುತ ನೋಡುತ ಬೇಸತ್ತು ಮಲಗಿದ್ದೆ
ಪುಳಕಿತಗೊಂಡೆ ಈ ದಿನ ವೀರಯೋಧರ ಶವಯಾತ್ರೆ ತಿಳಿದು

ದಶ ದಶಕಗಳಿಂದ ಬರಿ ಡಂಬಾಚಾರದ
ನಯ - ವಂಚಕರಿಂದ ತುಳಿಸಿಕೊಂಡು ಸಾಕಾಗಿದ್ದ
ಮೈಮನ ಕಾತರಿಸುತ್ತಿದೆ ವೀರಯೋಧನ ಸ್ಪರ್ಶಕ್ಕಾಗಿ

ಮಾತೃ-ಭೂಮಿಯ ಗಡಿ-ಶಿಖರಗಳಲಿ
ಮಡಿದ-ಮಕ್ಕಳು ಮನೆ ಎನ್ನದೆ
ರಾಷ್ಟ್ರಪ್ರೇಮದ ದೃಢತೆಯಲಿ ಶತ್ರುಗಳ ಸದ್ದಡಗಿಸಿ
ಜೀವ ನೀಡಿದ ವೀರ ಆ ಧೀರ ಸೈನಿಕರು

ನಗರ-ನಾಗರಿಕ ಸನ್ಮಾನ-ಹೆಮ್ಮೆಯ ದುಃಖದಿ ಕಣ್ಣೀರು
ಶವಪೆಟ್ಟಿಗೆಯಡಿ ವೀರ ಜವಾನರು
ಕೊನೆ ಮೆರವಣಿಗೆ ಮೈಮೇಲೆ ಸಾಗುವ ಕ್ಷಣ
ರೋಮಾಂಚನದಿ ದೇಹದ ಕಣ ಕಣವೂ ಧನ್ಯ ಧನ್ಯ

ಹೊತ್ತವರು-ಹೆತ್ತವರೆಲ್ಲಾ ಅತ್ತರು ಹೆಮ್ಮೆಯಲಿ
ಸಾಗಿತ್ತು ರಸ್ತೆಯುದ್ದಕ್ಕೂ ಅಂತಿಮ ಶವ ಯಾತ್ರೆ-ಜಾತ್ರೆ
`ಜವಾನ-ಅಮರ ರಹೇ' ಮುಗಿಲು ಮುಟ್ಟಿದ ಘೋಷಣೆ

ತಾಯಿನಾಡಿಗಾಗಿ ಮಡಿದ ವೀರ ಜವಾನರ ಸ್ಪರ್ಶ
ನನ್ನ ಅಸ್ತಿತ್ವದ ಸಾರ್ಥಕತೆಗೆ ಜೀವ ತುಂಬಿತು
ಮರು ಚೇತನದಿ ಈ ತನುವು ಧನ್ಯತೆ ಪಡೆದಿತ್ತು.

         *****

ಕೀಲಿಕರಣ: ಕಿಶೋರ್‍ ಚಂದ್ರ

ಕೋಟೆ

- ಮಸನೊಬ ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಮನುಷ್ಯರು ಆಕ್ರಮಣ ಮಾಡುವ
ಮತ್ತು ರಕ್ಷಣೆ ಮಾಡುವ ವಿಧಾನವನ್ನು
ಕಲಿತರು.  ಇದರಿಂದಾಗಿ ಆಗುವ
ಪರಿಣಾಮಗಳಿಗೆ ಒಬ್ಬರನ್ನೊಬ್ಬರು
ಅಪಾದಿಸತೊಡಿದರು.  ಆದರೆ ಎರಡೂ
ಕೈಸೇರದೇ ಚಪ್ಪಾಳೆಯಾಗದು
ಕೋಟೆಯನ್ನು ಕಟ್ಟುವುದೇ ಮೊದಲನೇ
ತಪ್ಪು.  ಕೋಟೆ ಕಟ್ಟುವವರು ತಮ್ಮ
ರಕ್ಷಣೆಗಾಗಿ ಎಂಬ ಕಾರಣ ಕೊಟ್ಟರೂ ಅದು
ಆಳುತ್ತಿರುವ ರಾಜನ ಇಚ್ಫೆಯಾಗಿರುತ್ತದೆ.
ಸುತ್ತಲಿನ ಪ್ರದೇಶಗಳ ಮೇಲೆ
ಬಲತ್ಕಾರವಾಗಿ ತನ್ನ ಪ್ರಾಬಲ್ಯ
ಬೀರುತ್ತಿರುತ್ತದೆ.  ಆಕ್ರಮಣಗಳ
ಬೆದರಿಕೆಯಿಂದ ಕೋಟೆ ಕಟ್ಟುತ್ತಿದ್ದೇನೆ
ಎನ್ನುವ ಬಾಯಿ ಬುಡುಕ ಒಳಗೆ ಯುದ್ಧ
ಸಾಮಾಗ್ರಿಗಳನ್ನು ಜಮಾವಣೆ
ಮಾಡುತ್ತಿರುತ್ತಾನೆ.

     *****

ಕೀಲಿಕರಣ: ಕಿಶೋರ್‍ ಚಂದ್ರ

ಸಂಜೆಯ ಸ್ವಗತ

- ಡಾ || ಬಿ. ಪ್ರಭಾಕರ ಶಿಶಿಲ

ಬರಿದೆ ಕಳೆದುದು ಕಾಲ
ಬರೆಯಲಾರದೆ ಮನವ
ತಿರುಗಿ ಬಾರದ ದಿನಗಳ
ಭಿತ್ತಿ ಚಿತ್ತಾರದಲಿ
ಕನಸುಗಣ್ಣಿನ ಕಾವ್ಯ
ಕಳೆದುಕೊಂಡಿದೆ ದನಿಗಳ

    ಯಾರದೋ ಹೋಮ
    ವೈವಾಹಿಕದ ಧೂಮದಲಿ
    ಸೂರೆ ಹೋದುದು ರಾಗವು
    ವರ್ಣರಂಜಿತ ಕದಪು
    ಯಾರಿಗೋ ನೈವೇದ್ಯ
    ಇಂಗಿ ಹೋದುವೆ ಕಂಬನಿ

ಎಲ್ಲೋ ಮರೆಯಲಿ ಚೈತ್ರ
ವೈಶಾಖ ಧೀಂಗಿಣವು
ಬೇಡವೈ ಮಾನಿಷಾದ
ಬೇಟೆಗುಳಿದಿಹುದೇನು
ಮನದ ಬೆಂಗಾಡಿನಲಿ
ಸ್ಥಾಯಿಯಾದುದು ವಿಷಾದ

    ಮೋಡ ನಿಲ್ಲುವುದಿಲ್ಲ
    ಹನಿಯ ಚೆಲ್ಲುವುದಿಲ್ಲ
    ಟಿಸಿಲೊಡೆಯದೆಂದೆಂದು ಕವನ
    ಹೂವೆ ಅರಳದು ಇಲ್ಲಿ
    ಮಕರಂದವೆಲ್ಲಿಂದ
    ಹಾರೀತು ಎಲ್ಲಿ ಭ್ರಮರ?

೨೦೦೩
    *****

ಕೀಲಿಕರಣ: ಕಿಶೋರ್‍ ಚಂದ್ರ

ಸಾವ ಕೊಂದ ಮಗು

- ಕಂನಾಡಿಗಾ ನಾರಾಯಣ

ಮಗುವೊಂದರ ಎಲ್ಲಾ ಸುಖಗಳನ್ನು ಅನುಭವಿಸಿದ ನಾಲ್ಕೈದು ವರ್ಷಗಳ ನಂತರ ಒಬ್ಬ ಮಗನೂ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಹೆಂಡತಿಗೆ ಅನ್ನಿಸಲಾರಂಭಿಸಿ, ದಿನವೂ ಪೀಡಿಸಲಾರಂಭಿಸಿದ್ದಳು.  ಕಂಡಕಂಡ ದೇವರುಗಳಿಗೆಲ್ಲಾ ಹರಕೆಹೊತ್ತು, ತಿಂಗಳಾಗುವ ಮೊದಲೇ ಇನ್ನೇನು ತನಗೆ ಗಂಡು ಮಗು ಹುಟ್ಟೇಬಿಟ್ಟಿತೆನ್ನುವಂತೆ ಸಂಭ್ರಮಿಸುತ್ತಿದ್ದಳು.  `ಪಕ್ಕದ ಮನೆಯ ಲತಾಗೆ ಎರಡೂ ಹೆಣ್ಣು ಮಕ್ಕಳು.. ಅವರಪ್ಪಗೆ ಬಹಳ ದುರಾಸೆ, ಅದಕ್ಕೇ ಎರಡೂ ಹೆಣ್ಣು ಆಗಿದ್ದಾವೆ ಅಂತ ಜನ ಆಡಿಕೊಳ್ಳುತ್ತಿದ್ದಾರೆ ರೀ..' ಎಂದು ಸುತ್ತಮುತ್ತಲಿನವರ ಪ್ರವರಗಳನ್ನು ವರ್ಣಿಸುತ್ತಾ, ಈಗಾಗಲೇ ಒಬ್ಬ ಹೆಣ್ಣು ಮಗಳ ಅಪ್ಪನಾಗಿರುವ ನನಗೆ ಇನ್ನೊಂದು ಹೆಣ್ಣುಮಗು ಆಗದಂತಿರಲಿ ಎಂದು ನನಗೇ ಅಸಿಬಿಡಬೇಕೆನ್ನುವಂತೆ ಮಾಡುತ್ತಿದ್ದಳು.

ಅವಳ ಯಾವ ಪೂಜೆಗೆ ಅದ್ಯಾವ ಭಗವಂತ ಒಲಿದನೋ ಕಾಣೆ.  ಐದು ತಿಂಗಳಾಗುತ್ತಿದ್ದಂತೆಯೇ ಯಾವ ಡಾಕ್ಟರರಿಗೋ ಓಲೈಸಿ ತನಗೂ ಗಂಡು ಮಗು ಹುಟ್ಟುತ್ತಿದೆಯೆಂಬ ಸತ್ಯವನ್ನು ತಿಳಿದುಕೊಂಡು ಸಂಭ್ರಮಿಸಲಾರಂಭಿಸಿದ್ದಳು.  ಅವಳ ಖುಷಿ, ಉದ್ವೇಗ ಎಷ್ಟಿತ್ತೆಂದರೆ, ಈ ಪ್ರಪಂಚದಲ್ಲಿ ಈ ವಿಷಯ ಬಿಟ್ಟು ಬೇರೆ ಏನೂ ಇಲ್ಲವೇನೋ ಅಸಿಬಿಟ್ಟಿತ್ತು.  ಒಂದು ವೇಳೆ ಡಾಕ್ಟರರ ಭವಿಷ್ಯ ಸುಳ್ಳಾಗಿ -ತನ್ನ ಕಾಟ ತಪ್ಪಿಸಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಾರೇನೋ ಅನ್ನಿಸಿ- ಎಲ್ಲಿ ತನಗೆ ಹೆಣ್ಣು ಮಗು ಆಗಿಬಿಡುತ್ತದೋ ಎಂದು ತನ್ನಷ್ಟಕ್ಕೆ ತಾನೇ ಆತಂಕಪಟ್ಟುಕೊಳ್ಳುತ್ತ ಚಡಪಡಿಸಲಾರಂಭಿಸಿದ್ದಳು.  ಅವಳ ತಳಮಳವನ್ನು ಅವಳೇ ತಾಳಲಾರದೇ ಒಂದು ದಿನ ರಾತ್ರೆ ಮೂರೂವರೆ ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು!

ಆ ಅಪರಾತ್ರಿಯಲ್ಲಿ ಫೋನು ಮಾಡಿ ಡಾಕ್ಟರರನ್ನು ಎಬ್ಬಿಸಿ ಆಸ್ಪತ್ರೆಗೆ ಕರೆಸಿಕೊಂಡದ್ದಾಯಿತು.  ಏಳು ತಿಂಗಳಲ್ಲಿ ಮಗು ಹುಟ್ಟಿದರೆ ಅದರ ಅಂಗಾಂಗಗಳು ಪೂರ್ಣವಾಗಿ ಬೆಳವಣಿಗೆಯಾಗಿರದೇ ತಾಯಿ ಮಕ್ಕಳಿಬ್ಬರ ಜೀವಕ್ಕೂ ಅಪಾಯವಾಗಲೂಬಹುದು ಎಂದು ಡಾಕ್ಟರರು ಮಗುವಿನ ಹುಟ್ಟನ್ನೇ ಮುಂದಕ್ಕೆ ಹಾಕಲು ಏನೆಲ್ಲಾ ಪ್ರಯತ್ನ ಬೇಕೋ ಅದನ್ನೆಲ್ಲಾ ಮಾಡಲಾರಂಭಿಸಿದ್ದರು.  ಎಷ್ಟು ಹೇಳಿದರೂ ಕೇಳದೇ, ತನ್ನಿಂದ ಇನ್ನು ತಡೆದುಕೊಳ್ಳಲಾಗುತ್ತಿಲ್ಲ, ದಯವಿಟ್ಟು ಸಿಜೇರಿಯನ್ ಮಾಡಿ ತೆಗೆದುಬಿಡಿ ಡಾಕ್ಟರರೇ ಎಂದು ಬಡಬಡಾಯಿಸಲಾರಂಭಿಸಿದ್ದಳು.  ಅವರಾದರೂ ಇನ್ನೇನು ಮಾಡಿಯಾರು?  ಇದುವರೆಗೂ ಲೇಬರ್ ಪೇನ್ ಬರದಂತೆ ಕೊಟ್ಟಿದ್ದ ಇಂಜೆಕ್ಷನ ಬದಲಾಗಿ ಹೆರಿಗೆನೋವು ಬರುವಂತಹ ಇಂಜೆಕ್ಷನ್ ಕೊಟ್ಟರು!

`ಸುಮ್ಮನೆ ಕೂರಬಾರದು.. ಒಂದಷ್ಟು ಚೆನ್ನಾಗಿ ಓಡಾಡಬೇಕು..' ಅಂತ ಹೇಳಿ ಹೋದ ಡಾಕ್ಟರರು ಗಂಟೆಯಾದರೂ ತಿರುಗಿ ನೋಡಲೇ ಇಲ್ಲ. ಅದು ಕೆಲಸ ಮಾಡಲು ಇನ್ನೆಷ್ಟು ಹೊತ್ತು ಬೇಕೆಂದು ಅವರಿಗೆ ಗೊತ್ತಿರಬೇಕು.  ಆದರೆ ಈಕೆ ಸುಮ್ಮರಬೇಕಲ್ಲ.. ನನ್ನ ಜೀವ ತಿನ್ನಲಾರಂಭಿಸಿದಳು.  `ಎಂಥ ಆಸ್ಪತ್ರೆ ಅಂತ ತಂದು ಸೇರ್‍ಸಿದ್ರೋ.. ನಾನು ಇಂಗಾದ್ರೂ ಸಾಯ್ಲಿ, ಬೇರೆಯವಳನ್ನ ಕಟ್ಟಿಕೊಳ್ಳಬಹುದು ಅಂತ ಕಾದಿದೀರೇನೋ.. ಹಾಳಾಗೋಗ್ಲಿ, ನನ್ನನ್ನ ಸಾಯ್ಸಾದ್ರೂ ಸಾಯಿಸ್ಬಿಡ್ರೀ.. ನಂಗೆ ತಡೆಯಕ್ಕಾಗ್ತಾಯಿಲ್ಲ..' ಅನ್ನುವುದರ ಜೊತೆಗೆ ಕೈಯ್ಯಿಂದ ಹೊಟ್ಟೆಯೊಳಗಿರುವ ಮಗುವಿನ ಜುಟ್ಟು ಹಿಡಿದು ಹೊರಕ್ಕೆಸೆದುಬಿಡುವವಳಂತೆ ಆರ್ಭಟಿಸಲಾರಂಭಿಸಿದಳು..

ನಾನಾದರೋ ಅವಳ ಸಂಕಟ ನೋಡಲಾರದೇ, ಡಾಕ್ಟರರನ್ನ ಹುಡುಕಿಕೊಂಡು ಹೋಗಿ, ಅವಳ ನೋವನ್ನ ನನ್ನದೇ ನೋವು ಎನ್ನುವಂತೆ ವಿವರಿಸಿ ಏನಾದರೂ ಪರಿಹಾರ ನೀಡಿ ಅಂತ ಕೋರಿಕೊಂಡೆ.  ಕ್ಯೂ ನಿಂತಿದ್ದ ಹತ್ತಾರು ಜನ ಗರ್ಭಿಣಿಯರ ನೋವನ್ನೆಲ್ಲಾ ತನ್ನದೇ ಎನ್ನುವಂತೆ ಹಾಗೂ ಇದೆಲ್ಲಾ ಸಹಜ ಎನ್ನುವಂತೆ ಅವರನ್ನೆಲ್ಲಾ ಸಮಾಧಾಸುತ್ತಿದ್ದ ಡಾಕ್ಟರರು, ನನ್ನ ಕಡೆ ನೋಡಿ ಒಂದು ತಿಳಿನಗೆ ಬೀರಿ ಸುಮ್ಮನಾದರು.

ನನಗೋ ಮತೆ ಮತ್ತೆ ಪೀಡಿಸಲು ಸಂಕೋಚವಾಗಿ ಸುಮ್ಮನೇ ನಿಂತೆ.  ಹೆಂಗಸರ ಈ ಲಿಂಗಸಂಬಂಧೀ ಸಮಸ್ಯೆಗಳನ್ನು ಗಂಡಸಾದ ಆ ಡಾಕ್ಟರರು ಹೇಗೆ ನಿಭಾಯಿಸುತ್ತಾರೋ ಎಂದು ನೋಡುತ್ತಾ ನಿಂತಿದ್ದೆ.  ಒಬ್ಬೊಬ್ಬರದೂ ಒಂದೊಂದು ತರಹದ ನೋವು.. ಕೆಲವರನ್ನ ಒಳ ರೂಮಿಗೆ ಕರಕೊಂಡು ಹೋಗಿ ಪರಿಶೀಲಿಸಿ, ಹೊರಬಂದು ಅರ್ಥವಾಗದ ಭಾಷೆಯ ಪದಗಳನ್ನು ಹೇಳಿ ಏನೇನೋ ಬರೆದುಕೊಡುತ್ತಿದ್ದರು.

ನಾನು ಮತ್ತೂ ಸುಮ್ಮನೆ ನಿಂತಿರುವುದನ್ನು ನೋಡಿ -ಮೌನ ಪ್ರತಿಭಟನೆಯ ರೀತಿ ನಿಂತಿರಬಹುದೆಂದು ಭಾವಿಸಿ- `ಬಾ ನೋಡೋಣ' ಎಂದು ಹೊರಟವರನ್ನು ಹಿಂಬಾಲಿಸಿದೆ. ಹೊಟ್ಟೆಯನ್ನೆಲ್ಲಾ ಹಿಚುಕಿ ನೋಡಿದ ಅವರಿಗೆ ಅದೇನು ಅರ್ಥವಾಯಿತೋ, `ಇನ್ನೂ ಎರಡು-ಎರಡೂವರೆ ಗಂಟೆ ಬೇಕು.. ಕೀಲುಗಳೆಲ್ಲಾ ಸಡಿಲಾಗಬೇಕು.. ಚೆನ್ನಾಗಿ ವಾಕ್ ಮಾಡಿಸಿ ಅಂದರೆ ಸುಮ್ಮನೇ ಇದ್ದೀರಲ್ಲಾ..' ಎಂದು -ಮತ್ತೆ ಅಲ್ಲಿಗೆ ಬರಬೇಡ ಎನ್ನುವಂತೆ- ನನ್ನನ್ನ ಬೈದು ಹೋದರು. 

ನಾನು ಅವಳಿಗೆ ಬೈದು -ಕಾಲು ಮುರಿದುಕೊಂಡವರನ್ನು ನಡೆಸುವಂತೆ- ಕೈಹಿಡಿದು ಓಡಾಡಿಸಲಾರಂಭಿಸಿದೆ, ಆಕೆಯ ಹಿಡಿ ಶಾಪದ ಜೊತೆಗೇ.  ಅಷ್ಟರಲ್ಲಿ ಊರಿಂದ ಅವರಮ್ಮ ನೇರವಾಗಿ ಆಸ್ಪತ್ರೆಗೆ ಬಂದವರೇ -ಆಸ್ಪತ್ರೆ ಅಂತ ಇರುವುದೇ ಮಲಗಿ ವಿಶ್ರಮಿಸಲಿಕ್ಕೆ ಎನ್ನುವಂತೆ- ಯಾಕೆ ಹೀಗೆ ಹಿಂಸೆ ಕೊಡುತ್ತಿದ್ದೀರಾ ಎಂದು ಮುಖ ಕಿವುಚಿಕೊಂಡು ಅಸಹನೆ ತೋರುತ್ತಾ, `ಇಂಥ ಎಷ್ಟು ಹೆರಿಗೆ ಮಾಡಿಸಿಲ್ಲ, ಮೊದ್ಲು ಕರ್‍ಕಂಬಂದು ಮಲುಗುಸ್ರೀ.. ಅದೇನೋ ಹೇಳ್ತಾರಲ್ಲ, ಆರು ಹೆತ್ತೋಳ್ಮುಂದೆ ಮೂರು ಹೆತ್ತೋಳು ಏನೋ ಹೇಳುದ್ಲಂತೆ ಹಂಗೆ.. ಹೆಂಗಸರ ನೋವು ಆ ಗಂಡಸು ಡಾಕ್ಟ್ರಿಗೇನು ಗೊತ್ತಾಗುತ್ತೆ?' ಅಂದವರೇ, `ಬೇರೆ ಯಾರೂ ಹೆಂಗ್ಸ್ರು ಡಾಕ್ಟ್ರು ಇರ್ಲಿಲ್ವ ಈ ಊರಲ್ಲಿ..' ಅಂತ ನನ್ನ ಮುಖ ನೋಡದೇ, ಮುಖದ ಮೇಲೆ ಚಚ್ಚಿದಂತೆ ಮಾತಾಡುತ್ತಾ, ಮಾತೃಪ್ರೀತಿಯಿಂದ ಆಕೆಯನ್ನು ಕರಕೊಂಡು ಹೋಗಿ ಮಲಗಿಸಿ ಯಾವಯಾವುದೋ ಅಂಗಗಳನ್ನ ನೀವಲಾರಂಭಿಸಿದರು.

ಅಂತೂ ಇಂತೂ ಗಂಟೆಯಾದ ಮೇಲೆ ಹುಟ್ಟಿದ ರೆಟ್ಟೆಗಾತ್ರದ ಮಗು ಗಂಡು ಎಂದು ಖಾತ್ರಿಯಾಗುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಎಲ್ಲವನ್ನೂ ಮರೆತು ನಿರಾಳಳಾದಳು. ಆದರೆ ನನ್ನ ಕೊರಳಿಗೆ ಬಿದ್ದ ಆ ಮಗುವಿನ ಜೀವದ ಕುರಿತು ನನಗೆ ಆತಂಕ ಶುರುವಾಯಿತು.  ನರ್ಸ್‌ಗಳು ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ನೀಲಿ ಬಣ್ಣದ ಲೈಟ್ ಹಾಕಿ ಸುಮ್ಮನೇ ಕುಂತುಬಿಟ್ಟಿದ್ದರು.  ಅದಕ್ಕೆ ಏನಾಗಿದೆ ಎಂದೂ ಹೇಳದೇ, ತಮಗೆ ಗೊತ್ತಿರುವ ವಿದ್ಯೆ ಇಷ್ಟೆ, ಮುಂದಿನದನ್ನು ನೋಡಿಕೊಳ್ಳಲು ಮಕ್ಕಳ ಡಾಕ್ಟರರೇ ಬರಬೇಕು ಎಂದುಬಿಟ್ಟರು.

            ***

ತನ್ನೆಲ್ಲಾ ತೀಟೆಗಳನ್ನು ತೀರಿಸಿಕೊಂಡಂತೆ ಹೊತ್ತು ಮುಳುಗುವ ಹೊತ್ತಿಗೆ ಬಂದ ಮಕ್ಕಳ ಡಾಕ್ಟರರು, ಮಗುವಿನ ಶ್ವಾಸಕೋಶಗಳು ಇನ್ನೂ ಸರಿಯಾಗಿ ಬೆಳೆಯದೇ ಇರುವ ಕಾರಣ ಉಸಿರಾಟಕ್ಕೆ ತುಂಬಾ ತೊಂದರೆಯಾಗಿದೆ, ಈಗಿಂದೀಗಲೇ ರಾಜಧಾನಿಗೆ ಕರಕೊಂಡು ಹೋಗಬೇಕೆಂದು ಬರೆದುಕೊಟ್ಟರು. ಅದಕ್ಕೆಲ್ಲಾ ಎಷ್ಟು ಖರ್ಚಾಗುತ್ತೋ ಗೊತ್ತಿಲ್ಲ, ಜೇಬಲ್ಲಿ ನೋಡಿದರೆ ಅಷ್ಟೊಂದು ದುಡ್ಡಿಲ್ಲ.. ಆದಾಗ್ಯೂ, `ಯಾಕೆ ಇಷ್ಟೊಂದು ತಡ ಮಾಡುತ್ತಿದ್ದೀರಿ, ನಿಧಾನ ಆದರೆ ಮಗುವಿನ ಜೀವಕ್ಕೇ ಅಪಾಯವಿದೆ.. ಇದರ ಮೇಲೆ ನಿಮ್ಮಿಷ್ಟ..' ಎಂದು ನಮ್ಮ ಮೇಲೆಯೇ ತಪ್ಪನ್ನು ಹೊರಿಸಿ ಹೊರಟುಬಿಟ್ಟರು.

ಆ ಆಸ್ಪತ್ರೆಯ ಆಂಬುಲೆನ್ಸ್ ಒಂದೇಸಮನೇ ಸೈರನ್ ಕೂಗಿಸುತ್ತಾ, ಮುಂದಿದ್ದ ಲಾರಿ ಬಸ್ಸುಗಳಿಂದೆಲ್ಲ ದಾರಿ ಬಿಡಿಸಿಕೊಂಡು ಗಂಟೆಯೊಳಗೆ ಮುಂದಿನ ಆಸ್ಪತ್ರೆ ಸೇರಲು ತವಕಿಸುತ್ತಿತ್ತು.  ಇನ್ನೇನು ಐದು ಮಿಷದ ದಾರಿ ಬಾಕಿ ಇದೆ ಅನ್ನುವ ಹೊತ್ತಿಗೆ, ಹೆದ್ದಾರಿಯಿಂದ ಹೊರಳಿ ಊರಕಡೆಗೆ ತಿರುಗುತ್ತಿದ್ದಂತೆಯೇ, ರಸ್ತೆಯ ಪಕ್ಕದ ಯಾವುದೋ ಗುಂಡಿಗೆ ದಬಕ್ಕೆಂದು ಬಿದ್ದ ರಭಸಕ್ಕೆ ಆಕ್ಸಿಜನ ಸಿಲಿಂಡರ್ ವಾಲಾಡಿ ಏನೋ ಏರುಪೇರಾಗಿ ಮಗುವಿನ ಮೂಗಿಂದ ಬರುತ್ತಿದ್ದ ಗೂರಲು ಸದ್ದೂ ಇಲ್ಲವಾಗಿ ಮತ್ತಷ್ಟು ಆತಂಕಕ್ಕೊಳಗಾದೆ.  ನನಗರಿವಿಲ್ಲದೇ ಗಂಟಲ ನರದ ತುಂಬಾ ದುಃಖ ಎಂಬುದು ಉಕ್ಕಿಬಂದು ಉಸಿರಾಡಲೂ ಕಷ್ಟವೆನಿಸಿ, ಕಣ್ಣಂಚಿನಲ್ಲೂ ನೀರು ಇಣುಕಿತು.

ಯಾರದಾದರೂ ಮಕ್ಕಳು ಸತ್ತಾಗ, `ಅದಕ್ಯಾಕೆ ಇಷ್ಟೊಂದು ಅಳಬೇಕು, ಒಂದೆರಡು ವರ್ಷದಲ್ಲೇ ಅಂತಹುದೇ ಇನ್ನೊಂದು ಮಗುವನ್ನು ಪಡೆಯುವುದಕ್ಕಾಗುವುದಿಲ್ಲವೇ?...' ಅನ್ನುತ್ತಿದ್ದ ನನಗೆ, ಮಗುವೊಂದಕ್ಕೆ ಜೀವ ಕೊಡುವುದೂ ಎಷ್ಟೊಂದು ಕಷ್ಟದ ಕೆಲಸ ಎಂಬ ಸತ್ಯದ ಅರಿವಾದದ್ದು ಆಗಲೇ.  ಈ ಜಗದ ಒಂದೊಂದು ಜೀವಿಯೂ ಒಂದೊಂದು ಆಂಟಿಕ್ ಪೀಸ್‌ಗಳಿದ್ದಂತೆ.  ಆ ಒಂದು ಕ್ಷಣದಲ್ಲಿ, ೧೦೦% ಅಂತಹದೇ ಇನ್ನೊಂದು ಜೀವಿ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ! ಕ್ಲೋನಿಂಗ್ ಮೂಲಕವೂ ಅಸಾಧ್ಯ! ಸೃಷ್ಟಿ ಎಂಬುದು ಎಂತಹ ವಿಚಿತ್ರ ಅಲ್ಲವಾ! 

ರಾತ್ರಿ ಹತ್ತು ಗಂಟೆಯ ವೇಳೆಗೆ ಮಕ್ಕಳ ಆ ಆಸ್ಪತ್ರೆಗೆ ಸೇರಿಸುತ್ತಿದ್ದಂತೆಯೇ ಮಗುವನ್ನು ಒಳಗೆ ಎಳೆದುಕೊಂಡು, ಅದಕ್ಕೆ `ಬೇಬಿ ಆಫ್...' ಎಂದು ತಾಯಿಯ ಹೆಸರನ್ನು ಬರೆದ ಒಂದು ಚೀಟಿಯನ್ನು ಅಂಟಿಸಿ ನಮ್ಮಿಂದ ಬೇರ್ಪಡಿಸಿದರು.  ಕಂಡೀಷನ್ ಹೇಗಿದೆ ಡಾಕ್ಟರ್‌ರೇ ಎಂದರೆ, ಮತ್ತೇನೂ ಕೇಳದಂತೆ, `ಡೋಂಟ್ ವರಿ, ಇಲ್ಲಿಗೆ ಬರುವವರೆಗೆ ಜೀವ ಇದ್ದರೆ ಸಾಕು, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ' ಎಂದುಬಿಟ್ಟರು.

ದಿನ ಬೆಳಗ್ಗೆ ಒಂದು ಸಲ, ಸಂಜೆ ಒಂದು ಸಲ ಗಾಜಿನ ಕಿಟಕಿಯ ಪರದೆಯನ್ನು ಸರಿಸುವ ಮೂಲಕ -ಪ್ರಯೋಗ ಶಾಲೆಯಲ್ಲಿ ಸಲ್ಯೂಷನ್ ಟ್ಯೂಬ್‌ನಲ್ಲಿ ಇಟ್ಟಿರುವ ಪಿಂಡಗಳನ್ನು ತೋರಿಸುವಂತೆ- ತೋರಿಸುತ್ತಿದ್ದರು. ಅಗೋ ಆ ನಂಬರಿನ ಮಗು ನಮ್ಮದೇ ಎಂದು ಯಾರಾದರೂ ನೆಂಟರು ಬಂದಿದ್ದವರಿಗೆ ತೋರಿಸಬಹುದಾಗಿತ್ತು. ಆ ಒಂದೂವರೆ ಅಡಿ ಉದ್ದದ ದೇಹಕ್ಕೆ ಎಲ್ಲೆಲ್ಲಿಂದಲೋ ಹರಿದು ಬಂದಿರುವ ಕೆಂಪು ಹಳದಿ ನೀಲಿ ಬಣ್ಣದ ನರಗಳಂತಹ ವಿದ್ಯುತ್ ವೈರುಗಳು ಜೀವ ನೀಡುವ ಮಾಂತ್ರಿಕನ ಪ್ರಯೋಗದಂತೆ ಕಂಡುಬರುತ್ತಿದ್ದವು.

            ***

ಮಾರನೆಯ ದಿನ ಮಗುವಿನ ತಾಯಿಯನ್ನು ಕರೆಸಬಹುದೆಂದಾಗ, ಒಂದು ಆಶಾಕಿರಣ ಚಿಗುರಿತು -ಮಗುವಿಗೆ ಹಾಲು ಕುಡಿಸಲೆಂದೇ ಇರಬೇಕೆಂದು.  ಹಾಗೆಂದು ಹೆಂಡತಿಗೆ ಹೇಳಿದಾಕ್ಷಣ ಆಕೆ ಖುಷಿಯಾಗಿ ಹೋದಳು.  ತನ್ನ ಮಗುವಿಗೆ ಏನೂ ಆಗಿಲ್ಲವೆಂಬ ಭರವಸೆ ಆಕೆಗೆ ಬಂದು ಹೋಯಿತು.  ಕೂಡಲೇ ಹೆರಿಗೆ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಮಾಡಿಸಿಕೊಂಡು ಬಂದುಬಿಟ್ಟಳು.  ಆವರೆಗೂ ಮಗುವನ್ನೇ ನೋಡಿರದಿದ್ದ ಆಕೆ ಕೂಡಲೇ ಮಗುವನ್ನು ನೋಡಬೇಕೆಂದು ಹಠ ಹಿಡಿದು ಕುಂತಳು.  ಆದರೆ ಈಕೆ ಬಂದಿರುವಳೆಂದ ತಕ್ಷಣ ಒಳಗೆ ಕರೆದುಕೊಂಡು ಹೋಗಿ ತೋರಿಸಲು ಆಕೆಯೇನೂ ವಿ.ವಿ.ಐ.ಪಿ. ಅಲ್ಲವಲ್ಲ.  ಆದರೆ ಆಕೆಯ ಕಾಟ ತಡೆಯಲಾರದೇ ದೊಡ್ಡ ಡಾಕ್ಟರರ ಬಳಿ ಹೋಗಿ ಹೀಗೆ ತಾಯಿಯನ್ನು ಕರೆಸಿರುವುದಾಗಿ ಹೇಳಿ ಬಂದೆ.  ಅವರದೇ ಆದ ಲೋಕದಲ್ಲಿದ್ದ ಅವರು ಕೇಳಿಸಿಕೊಂಡರೋ ಇಲ್ಲವೋ.  ಆದರೂ, `ಸರಿ..' ಎಂದರಷ್ಟೇ. ಹಾಗೆಂದು ಬಂದು ಹೆಂಡತಿಗೆ ಹೇಳಿ ಸಮಾಧಾನ ಮಾಡಿದೆ.  ಅವರಿಗೆ ಬೇಕೆಂದಾಗ ಕರೆಸುವರೆಂದೆ.  ಆದರೆ ಎಷ್ಟು ಹೊತ್ತಾದರೂ ಯಾರೂ ಬಂದು ಕರೆಯದಿದ್ದಾಗ ಮತ್ತೆ ನನ್ನನ್ನು ಕಾಡಲು ಶುರುಮಾಡಿದಳು.  ಮತ್ತೊಮ್ಮೆ ಹೋಗಿ ಹೇಳಿ ಬರುವಂತೆ ಪೀಡಿಸಲಾರಂಭಿಸಿದಳು.  ಇಲ್ಲದಿದ್ದರೆ ತಾನೇ ಇನ್‌ಕ್ಯುಬೇಟರ್ ರೂಮಿಗೆ ನುಗ್ಗಿಹೋಗಿ ಮಗುವಿಗೆ ಹಾಲು ಕುಡಿಸುವುದಾಗಿ ಬೆದರಿಸಿದಳು.

ಆದಾಗ್ಯೂ ನರ್ಸ್ ಒಬ್ಬರನ್ನು ಕಂಡು, ಎರಡು-ಮೂರು ದಿನದಿಂದ ಎದೆಹಾಲು ತುಂಬಿಕೊಂಡು ಆಕೆ ತುಂಬಾ ನೋವು ಅನುಭವಿಸುತ್ತಿದ್ದಾಳೆಂದು ವಿವರಿಸಿ, ಮಗುವಿಗೆ ಹಾಲು ಕುಡಿಸಲು ಅವಕಾಶ ಕೊಡಬೇಕೆಂದು ಕೋರಿಕೊಂಡೆ -ಹೆಣ್ಣಿನ ಕಷ್ಟ ಇನ್ನೊಂದು ಹೆಣ್ಣಿಗೆ ತಾನೇ ಅರ್ಥವಾಗುವುದೆಂದು.  ಆದರೆ ಆಕೆ `ಒಂದು ಲೋಟದಲ್ಲಿ ಕರೆದುಕೊಡಿ, ಕುಡಿಸುತ್ತೇವೆ. ಒಂದು ವಾರದವರೆಗೂ ಮಗುವನ್ನು ಮುಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ, ಇನ್‌ಫೆಕ್ಷನ್ ಆಗುತ್ತದೆ' ಎಂದುಬಿಟ್ಟಳು.
ಹಾಗೆಂದು ಹೆಂಡತಿಗೆ ಹೇಳುವುದು ಹೇಗೆ?  ಅವಳ ಅಮ್ಮನ ಮೂಲಕ ಹೇಳಿಸಿದೆ.  `ದೊಡ್ಡ ಡಾಕ್ಟರರ ಅಪ್ಪ, ಇವರ ಆಫೀಸಿನಲ್ಲೇ ಕೆಲಸ ಮಾಡುವುದಂತೆ.  ಅವರ ಮೂಲಕ ಹೇಳಿಸು'ವಂತೆ ಆಜ್ಞಾಪಿಸಿದಳು. ಅದುವರೆಗೂ ಕಛೇರಿಯ ಕೆಲಸಕ್ಕೆ ಸಂಬಂಧಿಸಿದಂತೆ ಯಾವುಯಾವುದಕ್ಕೋ ಇನ್‌ಫ್ಲುಯೆನ್ಸ್ ಮಾಡಿಸಬಹುದೆಂದು ತಿಳಿದಿದ್ದ ನನಗೆ ಇದು ಹೊಳೆದೇ ಇರಲಿಲ್ಲ.  ಅದೊಂದನ್ನೂ ಪರೀಕ್ಷಿಸಿಬಿಡೋಣವೆಂದು, ನನ್ನ ಮೇಲಾಧಿಕಾರಿಯಾಗಿದ್ದ ಅವರ ಮನೆಯನ್ನು ಹುಡುಕಿಕೊಂಡು ಹೋಗಿ ಹೀಗೆಹೀಗೆಂದು ವಿವರಿಸಿದೆ.  ತಾಯಿ ಕರುಳಿನ ಆಕೆಗೆ ಆಸ್ಪತ್ರೆಯ ಈ ಫಾರ್ಮಾಲಿಟೀಸ್‌ಗಳೆಲ್ಲಾ ಅರ್ಥವಾಗುವುದಿಲ್ಲವೆಂದು ಆರೋಪಿಸಿದೆ -ನನ್ನದೇನೂ ತಪ್ಪಿಲ್ಲ- ಎನ್ನುವಂತೆ.  ನನ್ನ ಅಹವಾಲನ್ನು ಕೇಳಿದ ಅವರು ನಕ್ಕುಬಿಡುವರೆಂದೇ ಭಾವಿಸಿ ಅಳುಕಿನಲ್ಲೇ ವೇದಿಸುತ್ತಿದ್ದೆ.  ಆದರೆ ಅವರು ನಗಲಿಲ್ಲ.  ತನ್ನ ಮಗನಿಗೆ ಫೋನ್ ತೆಗೆದುಕೊಂಡು, ಬೇಬಿ ಆಫ್ ಸೋ ಅಂಡ್ ಸೋ ಎಂಬ ಮಗು ನನಗೆ ತುಂಬಾ ಬೇಕಾದವರದು, ಸ್ವಲ್ಪ ಹೆಚ್ಚು ಕೇರ್ ತೊಗೋ ಎಂದಷ್ಟೇ ಹೇಳಿ ಸುಮ್ಮನಾದರು.


ನಾನು ಹೇಳಿದ್ದೇನು, ಅವರು ಮಾಡಿದ್ದೇನು.. ಎಂದು ನಾನು ಮುಖ ಮುಖ ನೋಡುತ್ತಿದ್ದಂತೆಯೇ, `ನನ್ನ ಮಗ ಇವತ್ತು ನೂರಾರು ಮಕ್ಕಳನ್ನು ಉಳಿಸುವ ಶಕ್ತಿ ಹೊಂದಿರುವ ಕರ್ನಾಟಕದ ಕೆಲವೇ ಕೆಲವು ಡಾಕ್ಟರರಲ್ಲಿ ಒಬ್ಬನಾಗಿರುವುದಕ್ಕೆ ಕಾರಣ, ಅವನೂ ಹುಟ್ಟಿದಾಗ ನಿಮ್ಮ ಮಗುವಿನಂತೆಯೇ ಇದ್ದದ್ದು..' ಎಂದಂದು ಒಂದು ಕ್ಷಣ ಅಂತರ್ಮುಖಿಯಾದರು.  `ನನ್ನ ಹೆಂಡತಿಯೂ ಹದಿನೈದು ದಿನಗಳ ಕಾಲ ಹೀಗೆಯೇ ಪರಿತಪಿಸಿದ್ದಳು..' ಎಂದು ತಮ್ಮಷ್ಟಕ್ಕೆ ತಾನೆ ಎನ್ನುವಂತೆ ಹೇಳಿಕೊಂಡರು.
ಮತ್ತೊಂದು ಕ್ಷಣದಲ್ಲಿ ಧ್ಯಾನದಿಂದ ಹೊರಬಂದವರಂತೆ, `ಅದಕ್ಕೇ ಅವನನ್ನು ಮಕ್ಕಳ ಡಾಕ್ಟರರನ್ನೇ ಮಾಡಬೇಕೆಂದು ಹಠ ಹಿಡಿದೆ.. ಓದಿಸಿದೆ.. ಇವತ್ತು ಅವನಂತೆಯೇ ಪ್ರಿಮೆಚೂರ್ ಆಗಿ ಹುಟ್ಟಿರುವ ಸಾವಿರಾರು ಮಕ್ಕಳನ್ನು ಉಳಿಸಿದ ಸಾರ್ಥಕ್ಯತೆ ನನ್ನದು..' ಎಂದು ಒಂದು ನಿರಾಳ ಉಸಿರುಬಿಟ್ಟರು.  `ನೀವೇನೂ ಯೋಚನೆ ಮಾಡಬೇಡಿ.  ನನ್ನ ಮಗನ ಕೈಗೆ ಜೀವ ಇರುವ ಒಂದು ಭ್ರೂಣ ಕೊಟ್ಟರೂ ಬದುಕಿಸಿಬಿಡುವಷ್ಟು ಶಕ್ತಿಯನ್ನು ಆ ಭಗವಂತ ಕೊಟ್ಟಿದ್ದಾನೆ...' ಎಂದು ಧೈರ್ಯ ತುಂಬಿದರು.

ಡಾಕ್ಟರರಿಗೆ ಅವರ ತಂದೆ ಫೋನು ಮಾಡಿದ್ದರು ಎಂಬ ಕಾರಣಕ್ಕೋ ಏನೋ ವಿಚಾರಿಸಿಕೊಳ್ಳಲು ಬಂದರು.  ಕೇವಲ ಐದು-ಐದೂಕಾಲು ಅಡಿ ಎತ್ತರದ ಪೀಚಲು ದೇಹ. ಒಂದು ಕ್ಷಣ ನನ್ನ ಮಗನೇ ದೊಡ್ಡವನಾಗಿ ಎದುರು ಬಂದು ನಿಂತಿರುವನೇನೋ ಎನ್ನುವಂತಿದ್ದರು.  ನನ್ನ ಮಗ ಹುಟ್ಟತ್ತಲೇ ಸಾವಿನ ಜತೆಗೆ ಮಾಡುತ್ತಿರುವ ಈ ಹೋರಾಟದಲ್ಲಿ ಗೆದ್ದುಬಿಟ್ಟರೆ ಅವನನ್ನೂ ಹೀಗೆ ಜೀವ ಉಳಿಸಬಲ್ಲಂತಹ ಡಾಕ್ಟರರನ್ನಾಗಿಯೇ ಮಾಡಬೇಕೆಂಬ ಆಲೋಚನೆಯೊಂದು ಮನಃಪಟಲದ ಮುಂದಿನಿಂದ ಹಾದುಹೋಯಿತು.  ಆದರೆ ಯಾರಿಗೆ ಗೊತ್ತು, ದಿನತ್ಯವೂ ಕೊಲ್ಲುವ ಕಾಯಕವೇ ಮಹಾಪ್ರಧಾನವೆಂದುಕೊಂಡಿರುವ ಈ ದರಿದ್ರ ಪ್ರಪಂಚದಲ್ಲಿ ಅವನು ಏನಾಗಬಯಸುತ್ತಾನೋ? 
ಖುಷಿಯಿಂದ ನನ್ನ ಸಹೋದ್ಯೋಗಿಯ ಹೆಸರು ಹೇಳಿ ಪರಿಚಯ ಮಾಡಿಕೊಂಡೆ.  ಹೆಂಡತಿಯನ್ನೂ ಪರಿಚಯ ಮಾಡಿಕೊಟ್ಟೆ.  ಆಕೆ, `ನನ್ನ ಮಗನನ್ನ ಉಳಿಸಿಕೊಡಿ ಡಾಕ್ಟರರೇ.. ಅವನಿಗೆ ನಿಮ್ಮ ಹೆಸರನ್ನೇ ಇಡುತ್ತೇನೆ..' ಎಂದು ಆಮಿಷ ತೋರಿದಳು.  ಆದರೆ ಅವರು ಬುದ್ಧನಂತೆ, ಸ್ಥಿತಪ್ರಜ್ಞನಂತೆ ಒಂದು ಸಲ ಮುಗುಳ್ನಕ್ಕರು.  ಪುಣ್ಯ, ಸಾವಿರದ ಮನೆಯಿಂದ ಸಾಸಿವೆ ಕಾಳು ತರಲು ಹೇಳಲಿಲ್ಲ; ಅಥವಾ ದಿನತ್ಯ ಯಾವುಯಾವುದೋ ಕಾರಣಕ್ಕೆ ದುಡಿಯುತ್ತಿರುವವರೆ ಮಡಿಯುತ್ತಿರುವ ದುರಂತದ ಬಗ್ಗೆ ಹೇಳಲಿಲ್ಲ.  `ನನ್ನ ಮೇಲೆ ಆ ವಿಶ್ವಾಸವೊಂದಿದ್ದರೆ ಸಾಕು, ನನ್ನ ಪ್ರಯತ್ನ ನಾನು ಮಾಡುತ್ತೇನೆ..' ಎಂಬ ಒಂದು ಆಶ್ವಾಸನೆಯನ್ನು ಮಾತ್ರ ಕೊಟ್ಟು ಹೊರಟುಹೋದರು.

ಎಷ್ಟು ಹೊತ್ತೆಂದು ಹೀಗೆ ಚಾತಕ ಪಕ್ಷಿಯಂತೆ ಕಾಯುತ್ತಾ ಕೂರುವುದು.  ಆಕೆಯ ಮನಸ್ಸನ್ನ ಬೇರೆಡೆಗೆ ಸೆಳೆಯಬೇಕೆಂದು, ಸ್ನೇಹಿತ ರಂಜನನನ್ನು ಮಾತಾಡಿಸಿಕೊಂಡು ಬರೋಣ ಎಂಬ ನೆಪ ಹಾಕಿ ಕರೆದುಕೊಂಡು ಹೋದೆ.  ಹತ್ತಿರವಿದ್ದೂ ದೂರವಿರುವ ಆ ಮಗುವಿನ ಬಳಿ ಇರದಿದ್ದರೆ ಅವಳಿಗೂ ನೆಮ್ಮದಿ ಸಿಗುತ್ತಿತ್ತು.
ಗೆಳೆಯನ ಹೆಂಡತಿ ಹಾಗೂ ಅವರ ಆರು ತಿಂಗಳ ಮಗುವಿನೊಂದಿಗೆ ಅವಳು ಬೆರೆಯಲಾರಂಭಿಸಿದಳು.  ನಾನು, ನನ್ನ ಗೆಳೆಯ ಬೇರೆ ಬದುಕು ಇಲ್ಲದೆ ಸಂಜೆಯ ಒಂದು ಸುತ್ತನ್ನು ಹಾಕಿಬರೋಣವೆಂದು ಹೊರಗೆ ಹೋದೆವು.  ಈವತ್ತಿನ ನಮ್ಮ ಮಗುವಿನ ಸ್ಥಿತಿಯ ಬಗೆಗೆ ಮಾತನಾಡುವಾಗ, ಹುಟ್ಟಿದ ವಾರದೊಳಗೆ ಜಾಂಡೀಸು ಬಂದಿದ್ದ ತಮ್ಮ ಮಗುವನ್ನೂ ಆ ಡಾಕ್ಟರರೇ ಉಳಿಸಿಕೊಟ್ಟಿದ್ದು ಎಂದ.  ಅವರ ಕೈಗುಣದ ಬಗ್ಗೆ ಗುಣಗಾನ ಮಾಡಿದ.  ಅವರು ಮುಟ್ಟಿದ್ದಾರೆಂದ ಮೇಲೆ ನಿಮ್ಮ ಮಗು ಬದುಕೇ ಬದುಕುತ್ತದೆ, ಡೋಂಟ್ ವರಿ ಎಂದು ಸಮಾಧಾನ ಮಾಡಿದ.  ಆದರೆ ನಾನಂತೂ, ಆ ಮಗುವನ್ನು ಬದುಕಿಸಲು ನನ್ನ ಕೈಲಾದ ಪ್ರಯತ್ನ ಮಾಡುವುದನ್ನು ಬಿಟ್ಟರೆ ಉಳಿದಂತೆ ನಿರ್ಲಿಪ್ತನಾಗಿಹೋಗಿದ್ದೆ.  ನಾಳೆ ಹೆಚ್ಚುಕಡಿಮೆಯಾದರೆ, ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಬದುಕುತ್ತಿತ್ತೇನೋ ಎಂಬ ಒಂದು ಕಳಂಕ ಮನಸ್ಸಿನಲ್ಲಿ ಇರಬಾರದಲ್ಲ..  ಆದರೆ ಗೆಳೆಯರು ಪಾಪ, ಬಾಯಿಮಾತಿಗಾದರೂ ಸಮಾಧಾನ ಹೇಳಬೇಕಲ್ಲ, ಹೇಳುತ್ತಾರೆ.  ನಾನಾಗಿದ್ದರೂ ಬೇರೆಯವರಿಗೆ ಹಾಗೆಯೇ ಧೈರ್ಯ ಹೇಳುತ್ತಿದ್ದೆ ತಾನೆ ಎಂದುಕೊಂಡು ಅದರಿಂದ ಸಂತೋಷವೂ ಇಲ್ಲ; ದುಃಖವೂ ಇಲ್ಲ ಎಂಬಂತೆ ಸುಮ್ಮನಿರುತ್ತಿದ್ದೆ.

ಮನೆಗೆ ಹಿಂದಿರುತ್ತಿದ್ದಂತೆ ನಡುಮನೆಯಲ್ಲಿ ರಂಜನನ ಮಗುವನ್ನು ತೊಡೆಯ ಮಲಗಿಸಿಕೊಂಡು ನನ್ನ ಹೆಂಡತಿ ಹಾಲು ಕುಡಿಸುತ್ತಿದ್ದಳು! ನಮ್ಮನ್ನು ಕಂಡೊಡನೆ ಆಕೆಗೆ ಅದೇನು ಕಸಿವಿಸಿ ಅನಿಸಿತೋ, ತಟ್ಟನೆ ಎದೆಬಿಡಿಸಿ ಮಗುವನ್ನು ಎತ್ತಿಕೊಂಡು ಅಡುಗೆ ಮನೆಯಲ್ಲಿದ್ದ ಅದರ ತಾಯಿಯ ಬಳಿಗೆ ಓಡಿದಳು.  ಆದರೆ ಮಗು ಮಾತ್ರ ಇನ್ನೂ ಹಾಲು ಬೇಕೆನ್ನುವಂತೆ ರಚ್ಚೆ ಹಿಡಿದು ಚೀರಾಡಲಾರಂಭಿಸಿತು.  ರಂಜನನ ಮುಖ ನೋಡಿದೆ.  ಸದ್ಯ, ಪೂತಿನಿಯಂತೆ ವಿಷದ ಹಾಲು ಕುಡಿಸಲು ಬಂದಿರುವ ತಾಯಿಯೆನ್ನುವಂತೆ ಅನುಮಾನಿಸದೇ ಸುಮ್ಮನಿದ್ದದ್ದು ಸಮಾಧಾನವೆಸಿತು.  ಆದರೆ ನನ್ನ ಹೆಂಡತಿ, ಅದರ ತಾಯಿ ಅಡುಗೆ ಮಾಡಲು ತೊಂದರೆ ಮಾಡುತ್ತಿದ್ದುದರಿಂದ ತಾನು ಎತ್ತುಕೊಂಡಿದ್ದಾಗಿ ಏನೋ ಸಮಜಾಯಿಷಿ ನೀಡಲು ಬಂದಳು.  ನಾನು ಏನೋ ಸಮರ್ಥನೆ ಹೇಳಲು ಉಪಕ್ರಮಿಸಿದಾಗ ತನಗೆಲ್ಲ ಅರ್ಥವಾಗುತ್ತದೆಯೆನ್ನುವಂತೆ ಗೆಳೆಯ ಭುಜವನ್ನು ಅದುಮಿ ಸುಮ್ಮರಿಸಿದ.

ರಾತ್ರಿಯ ಊಟ ಮುಗಿಸಿಕೊಂಡು ಆಸ್ಪತ್ರೆಗೆ ಬರುತ್ತಿದ್ದಂತೆಯೇ ನರ್ಸ್ ಒಬ್ಬಳು `ಇಲ್ಲಿವರೆಗೆ ಎಲ್ಲಿ ಹೋಗಿದ್ದಿರಿ?' ಎಂದು ಆಕ್ಷೇಪಿಸಿದಳು.  ನಾನು ಮಗುವಿಗೆ ಏನಾಯಿತೋ ಎಂದು ಗಾಬರಿಗೊಂಡೆ.  `ಮಗುವಿಗೆ ಹಾಲುಣಿಸಬೇಕು, ತಾಯಿಯನ್ನು ಕರೆಸಿರಿ..' ಎಂದಾಗ ನೆಮ್ಮದಿಯ ನಿಟ್ಟುಸಿರುಬಿಟ್ಟೆ.  ತಾಯಿಯರ ಕೋಣೆಗೆ ಹೋಗಿ ಆಕೆಯನ್ನು ಕರೆದು ಹಾಗೆಂದು ಹೇಳಿದಾಗ ಬಾಣಂತಿಯೆಂಬುದನ್ನೂ ಮರೆತು ಕುಣಿದು ಕುಪ್ಪಳಿಸುವವಳಂತೆ ಓಡೋಡಿಬಂದಳು.

ಮುಖದ ಸುತ್ತ ಮಾಂಸವೇ ಇಲ್ಲದ ಬರಿಯ ಚರ್ಮ ಅಂಟಿಸಿದಂತಿರುವ ತಲೆ.. ಮೂಳೆಬಿಟ್ಟುಕೊಂಡ ನೀಳ ಮೈ.. ಬಿಳಿಯ ಬಟ್ಟೆಯಲ್ಲಿ ಸುತ್ತಿದ ಸಣ್ಣಗೊಂಬೆಯಂತಿದ್ದ ಆ ಮಗುವನ್ನು ನೀಡಿದಾಗ, ಅದರ ಆಕಾರ ನೋಡಿ, ಇದು ತನ್ನ ಮಗುವೇ ಅಲ್ಲವೇನೋ ಎನ್ನುವಂತೆ ಎಲ್ಲಿ ಹಠಹಿಡಿಯುವಳೋ ಎಂದು ಭಯವಾಯಿತು.  ಹುಟ್ಟುತ್ತಲೇ ಸಾವಿನ ಮನೆ ಹೊಕ್ಕು ಹೋರಾಡಿ ಜಯಿಸಿ ಬಂದ ಮಗುವಿಗೆ ಆಗ ಜೀವ ಮುಖ್ಯವಾಗಿತ್ತೇ ವಿನಃ ಲಕ್ಷಣವಲ್ಲ..

ಆದರೆ ಆಕೆ ಅದೇನನ್ನೂ ಯೋಚಿಸಲೇ ಇಲ್ಲ.  ನೆಲದಲ್ಲಿ ಕುಳಿತು ಎದೆ ತೆರೆದು ಹಾಲು ಕುಡಿಸಲಾರಂಭಿಸಿದಳು.  ರಾಜಾ ರವಿವರ್ಮನ ಚಿತ್ರದಲ್ಲಿ ಹಾಲು ಕುಡಿಸುತ್ತಿರುವ ತಾಯಿಯಂತೆ, ಅದು ಹಾಲು ಕುಡಿಯುವುದರಿಂದ ಪಡುತ್ತಿರುವ ಸಂತೋಷವನ್ನು ಅನುಭವಿಸುತ್ತಿದ್ದಳು..
                              *****

ಹೊಂಬೆಳಕು

- ಗಿರಿಜಾಪತಿ ಎಂ. ಎನ್

ಬಾಽ....... ಬಾಽ....... ಬೆಳಕೆ....... ಬಾಽ
ಮನೆಯ ಬೆಳಗು ಬಾ, ಮನವ ತೊಳೆಯು ಬಾ
ಜ್ಞಾನದ ಹೊಂಬೆಳಕೆ,
ಧ್ಯಾನದ ಸಿರಿಬೆಳಕೆ ಬಾಽ..... ಬಾಽ ||

ಮೂಡಲ ಸಂಸ್ಕೃತಿ ಹಿಮಗಿರಿ ಸಾಲಲಿ,
ಸಾಮಗಾನವನು ನುಡಿಸುತ ಬಾ
ಪಡುವಲದುತ್ಕೃತಿ ನೀಲಧಿ ಮಿಂಚಲಿ
ರಜನಿ ತಾರಾ ತೋಟವ ಸುತ್ತುತ ಬಾ ||

ನನ್ನೊಳು ನೀನಾಗಿ, ನಿನ್ನೊಳು ನಾನಾಗಿ
ಒಳಗಿನೊಳಗುಳ ಪಲ್ಲವಿಸಲು ಬಾ
ವಿಭೇದ ಭೇದದ ಮನ ಸರಿಸುತ ದೂರಕೆ
ವಸುದೈವ ಕುಟುಂಬವೆನ್ನಲು ಬಾ ||

ರಸಿಕ ರಸಾಂಬುಧಿ ರಸ ಸರಸಿಜೆ ಶಾರದೆ
ಅನುರಾಗ ವೀಣೆಯ ರಾಗಿಸು ಬಾ
ಹಗೆಯ ತಿಮಿರತನ ದೂಡುತ ದೂರಕೆ
ದಿನಕರ ಗಿರಿಯನು ತೋರಿಸು ಬಾ ||

ಮನಸಿಜನಾಭನ ಮಾನಸದಾಲಯ
ಮತಿ ಸನ್ಮತಿಯನು ಕರುಣಿಸು ಬಾ
ಮಾರಣ ಹೋಮದ ಬಲಿ ಪೀಠವ ಕೀಳಿಸಿ
ಸ್ಮುರ ಸುಂದರ ಸತ್ಯವ ಸ್ಥಾಪಿಸು ಬಾ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ದತ್ತೂರಿ ಕೊಟ್ಟಿವನು ಸತ್ತುಹೋಗಲಿ ಸಾಂಬಾ

-ಶಿಶುನಾಳ ಶರೀಫ್

ದತ್ತೂರಿ ಕೊಟ್ಟಿವನು ಸತ್ತುಹೋಗಲಿ ಸಾಂಬಾ
ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ
ಚಿತ್ತದೊಳು ಮಹೇಶಮಂತ್ರ ಜಪದೊಳಿರಲು
ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ   ||೧||

ಮೂರು ದೇಹದೋಳಿದ್ದು ತೋರುತಿಹ ಭವಗೆದ್ದು
ಮೀರಿ ದೇಹದೊಳಗಿದು ಬರಲರಿಯದು
ತಾರಕದ ಕೃತಿಯೊಳು ಸೇರಿಕೊಂಡವಗೆ
ಆರೇನು ಮಾಡುವರು ಆದನಳಿದ ಬಳಿಕ              ||೨||

ವಸುಧಿಯೊಳು ಶಿಶುನಾಳಶೀಶ ಹುಬ್ಬಳ್ಳಿಯೊಳು
ಹಸನಾಗಿ ಮಹಾಂತೇಶನ್ವಾಲಯದೊಳು
ಕಳಿತಿರಲು ಇಂತಿಷ್ಟು ಐತಿದು
ಆರಕಿ ಇರಲಿ ಸಾಂಬಾ                                    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಧ್ಯಾನಿಸಬಹುದಾದ ದೇವರು

- ಮಂಜುನಾಥ ವಿ ಎಂ

ಆ ದೇವರು ನಮ್ಮನ್ನು ಧ್ಯಾನಿಸುವುದಿಲ್ಲ;
ನಮ್ಮ ಆತ್ಮ ನಿವೇದನೆಗಳು ಪುಟಿದೇಳುವಾಗ ಸ್ವತಃ ನಾವೇ
ಒತ್ತಡಕ್ಕೀಡಾಗುತ್ತೇವೆ.

ಸದಾಕಾಲ ಮೋಜಿನೊಂದಿಗೆ ಬದುಕುವ ಜನ
ಸಾಂತ್ವನ ಹೇಳಲು ಬರುತ್ತಾರೆ;
ನೂರನೆಯ ಸಲ ನಾವು ಸಾಯಲು ಸಿದ್ಧರಾಗಬೇಕಾಗುತ್ತದೆ.

ತುಟಿಗಳಿಂದ ರಕ್ತ ಹನಿಸುತ್ತೇವೆ;
ಅವರು ಬ್ರಾಂಡಿಯ ಜಿಗುಟುತನದಿಂದ ನಮ್ಮನ್ನು ಧೃತಿಗೆಡಿಸುತ್ತಾರೆ.

ನಾವು ನದಿಯಂತೆ ಹರಿದೋಗುವ ಮಂದಿ
ಆದರೆ, ಪಾರ್ಥೇನಿಯಮ್ ಜಾತಿಯ ಇತರೆ ಸಸ್ಯಗಳಂತೆ
ಮರುಹುಟ್ಟು ಪಡೆಯುತ್ತಿರುತ್ತೇವೆ- ಹಳೆ ವಾಸನೆಯೊಂದಿಗೆ.

          *****

ತಾದಿಕತೆ

- ಮುದ್ದು ಮೂಡುಬೆಳ್ಳೆ

"ಬಲೆ ಬಲೆ ಬಲೆಽಽ.... ಕಡೆಸಂಡು!..... ನನಲಾ ಸಾದಿ ಕಡಪರೆ ಉಂಡು ಒಂತೆತ್!  ಪಿದಾಡ್ನಗ ಬರ್‍ಪಂದ್ ಧಿಮಿಕುಟ್‌ದರ್‍....."

- ಸೀತಕ್ಕೆ ಜೋಕುಲೆನ್ ರುಮುರುಮ್ಮ ನಡಪರೆ ಪಂಡಲ್, ಅಕುಲು ಒಟ್ಟುಗು ಮೂವೆರುಲ್ಲೆರ್‍;  ಸೀತಕ್ಕೆ, ಅಲೆನ ಕಂಞ ಮಗೆ ಸದನೆ, ಸದನನ ಜೋಸ್ತಿ-ಅಕ್ಲೆನ ನಿರೆಮನೆತ್ತ-ರಾಜು.  ರಾಜು ಪೇಂಟೆದ ಎಲ್ಮೆಂಟ್ರಿ ಸಾಲೆಗ್ ಪೋಪೆ.  ಏಳನೆ ಕ್ಲಾಸ್ ನನದಾನಿ ಮುಗ್ಯರೆ ಆಂಡ್.  ಸದನೆ-ಆಯನ ಪುದಾರ್‍ ಬುಡ್ಪದ್ ಪನ್ಪುಂಡ-ಸದಾ ನಂದೆ-ಮುವ್ಪೊಡು ಸಾಲೆ ಬುಡ್ದು, ಅಪ್ರಾಯ ಕಮ್ತರ್‍ `ಸಿರ್‍ದೇಯಿ ಭವನ' - ಒಟೇಲ್ದ್ ಬೇಲೆ ಮಲ್ಪುವೆ.

ಮೂವೆರೆಪ್ಪ ಇತ್ತೆ ಒಟ್ಟಾದ ಪಿದಾಡ್‌ದಿನಿ ಊರುಡ್ದು ಸುಮಾರ್‍ ಏಲ್ ಮೈಲ್ ದೂರೊದ ಬಂದಾ ಡಿಡ್ ಪೊಸತ್ ಕಟ್ಟಾದಿನ ದೇವಸ್ಥಾನ ಒಕ್ಕೆಲ್‌ಗ್, ಮೂಜಿ ದಿನತ್ತ ಉಚ್ಚಯಗೆ;  ಬಾರಿ ಗಡ್ದ್ ಉಂಡುಗೆ.  ಒಲ್ತೊಲ್ಪ ಜನ ಮಾತ ಬರ್‍ಪೆರ್‌ಗೆ.  ಎಲ್ಲೆಕಡೆ ಉಚ್ಚಯ;  ಪಗೆಲ್ಡ ಐನ್ ಸಾವುರ ಜನ್ತ ಒಣಸ್‌ಗೆ.

`ಒಂಜಿ ಗಲ್ಗೆ ಪೋದ್ ಬರೊಡುಂದ್ ಸೀತಕ್ಕೆಗ್ ಅಪಾಸ್ಗೆ ಏಪನೆ ಸುರಾತ್‌ಂಡ್.  ಅಂಚಂದ್ ಅಲ್ ಬೇಲೆ ಏತೇ ಉಪ್ಪಡ್, ಎಂಚಾಂಡಲ ಪುರ್ಸತ್ ಮಲ್ತೊಂದು ಊರುಡ್ ನಡಪುನ ಕೋಲ.  ಕಂಬುಲ, ತೇರ್‍, ಆಯನ, ಸಾತ್ ಮಾರಿ-ಇಂಚಿನೆಕ್ ಮಾತ್ ಪೋಪಿನ ದುಂಬುಡ್ದಿಂಚಿಲ ಉಂಡು.  ಪಾಸಾಡಿಗ್ ಫೋಂ ಜೊವು ತಿಕ್ಯೆರ್‌ಡ ಪಡ್ಡೆದ್ರದ ಅಲಡೆ, ಢಕ್ಕೆಬಲಿ, ಉದ್ಯಾರದ ಕಲ್ಲಡ, ಪೆರ್ಣಂಕಿಲ ತೇರ್‍, ಪೆರ್ಯೊಟ್ಟು ಆಯನ, ಬೆರ್ಮೆರ್‍ ಬೈದೆರ್‍ಲೆ ಗರಡಿದ ನೋಮೊಗು-ತೆನ್ಕಾಯ ಬಡಗ್ ತಿಟ್ಟ್‌ಲೆನ ಆಟೊಲೆಗ್, ಇಂಚ ಮಾತ ಯಾಪೋಗೊರ ಪೋಪಿನಲ ಉಂಡು.  ದೆಯಿವ ದೇವೆರೆಡೆ ದಿಂಜ ಬಯಬಗ್‌ತಿ.  `ಪೂ ಪಾಡುನಡೆಗ್ ಪೂತ ಎಸಲ್ ಪಾಡ್ದ್' ಆಂಡಲ ದೇವೆರೆಗೊಂಜ ಕೈ ಮುಗಿಂಡ ಸಲ್ಮಂತ.

ಊರ್‍ದ ಮಲ್ಲ ಕುಳವಾರ್‍ ರಾಮೆಗ್ಗಡ್ರೆನ ಇಲ್ಲಲೇ ಸೀತಕ್ಕೆಗ್ ಎಚ್ಚಾದ್ ಬೇಲೆ.  ಅರಿತ ಮಿಲ್ಲ್, ರೇಷಿಮೆದ ಕೃಷಿ, ಕೋರ್‍ಲೆನ ಫಾರ್ಮ್-ಮಾತಲಾ ಗೌಡೆರೆಗ್ ಉಂಡು.  ಸೀತಕ್ಕೆಲೆಕಂತಿನ ನಲ್ವೆರ್‍ ಪೊಂಜೊವೆಗ್, ಇರ್ವೆರ್‍ ಆಂಜೊವೆಗ್-ಬೆನಲಾತ್ ಬೇಲೆ, ಉನಲಾತ್ ನುಪ್ಪು ಗೌಡೆರೆ ಇಲ್ಲಡ್ ಅರೆಗಾಲ-ಮರ್ಯಲ ತಪ್ಪಂದ್.  ಸಂಬಲ ಮಾತ್ರ `ಉಂಡ್-ತಿಂದ್ ತುಂಡು ಕಂಬೊಲಿ'ದಾತೆಗ್.  ಸೀತಕ್ಕೆನ ಇರ್ವೆರ್‍ ಮಗಲಾರ್‍ಲೆಗ್ ಮದ್ಮೆ ಆತ್‌ಂಡ್.  ಕಡೇತಾಯೆ ಸದನೆ ಮಾತ್ರ ಕೈತಾಲ್ ಉಪ್ಪುನಾಯೆ.  ಅಪ್ಪೆ ಬಾಲೆಲು ಗೌಡರ್‍ನ ಒಕ್ಕೆಲ್‌ಡೇ ಉಪ್ಪುನು.

ರಾಮೆಗ್ಗಡ್ರು, ರಾಜುನ ಅಪ್ಪೆಮ್ಮೆ-ಮೊಕುಲು ಮಾತ ಕೋಡೆನೇ ದೇವಸ್ಥಾನ ಒಕ್ಕೆಲ್‌ಗ್ ಬಂದಾಡಿಗ್ ಪೋದಾತ್ಂಡ್.  ಅಲ್ಪ ಎಗಡ್ರೆನವೇ ಗುಕಾರ್ಮೆಗೆ.  ಅಕುಲು ಮಾತ ದಿಂಜ ದಿಂಜ ಕಾಸ್ ಕೊರ್ತಿನೆಕ್ ದೇವಸ್ಥಾನದ ಎದುರು ಸಿಲೆಕಲ್ಲ್‌ಡ್ ಅಕ್‌ಲೆನ ಪುದರ್‍ ಬರೆದ್ ಪಾಡುವೆರ್‌ಗೆ, ಬೂಕುಡು ಪಟಲಾ ಪಾಡುವೆರ್‌ಗೆ, ಅವು ಸೂರ್‍ಯ ಚಂದ್ರೆ ಉಪ್ಪಮುಟ್ಟು ಉಪ್ಪುಗೆ!....

`ತಾನ್‌ಲಾ ಒಂಜಿ ಗಲಿಗೆ ಬರ್‍ಪೆಂದ್' ಸೀತಕ್ಕೆ ಕೋಡೆನೇ ಎಗಡ್ರೆ ಬುಡೆದಿಡ ಪಂಡ್‌ದಾತ್‌ಂಡ್.  ರಾಜುನ ಅಪ್ಪೆ ಕೊರಪಳಕ್ಕೆ `ಬನ್ನಗ ರಾಜುನ್ಲಾ ಲೆತೊಂದ್ ಬಲ್ಲಾಂದ್' ಪಂತೆರ್‍, ಸದನೆ ಬರಾಂದೆ ಕುಲ್ಲುವೆನಾ?

ಏತೇ ಅಮಸರ ಕುಟ್‌ಂಡಲಾ ಸೀತಕ್ಕೆನ ಒರ್ಬಡಿದ ಬೇಲೆ ಮುಗಿನಗ ಪೊರ್ತು ಬಯ್ಯಾಂಡ್.  ಅಟಿಲ್ ಆವೊಡೇ?  ಕೋಡೆ ಬೋವು ಪಾಡಿಡ್ದ್ ಪೆಜ್ಜಿದ್ ಕೊಣದಿನ ಕಲ್ಲಲಾಂಬುಗು ಒಂಜಿ ತೌತೆ ಮೂರ್‍ದ್ ಪಾಡ್ದ್, ನುಪ್ಪುದ ಕರ ಜಾವಾದ್ ಕೋರಯಿಗ್ ಕಬಿಡ್ದ್ ದೀದ್ ಬಿಸಲೆಡ್ ಕಜಿಪು ಕೊದಿಪಾದ್ ಆನಗ ಸದನೆಲಾ ಓಟೇಲ್ಡ್ ಬೇಲೆ ಆದ್ ಬತ್ತೆ.  ರಡ್ರಡ್ದ್ ಉಂಡೆರ್‍.  ರಾಜು ಎಂಚಲಾ ಮದ್ದೆನೆಡಿಂಚಿ ಕಾತೊಂದು, `ಪೋಯಿ'ಂದ್ ಬಂಗ್ರ ಬರೊಂದಿತ್ತೆ.  ಮೂವೆರಪ್ಪ ಪಿದಾಡ್ದೆರ್‍.  ಇನಿ ರಾತ್ರೆದ ಪೂಜೆ, ಬಲಿ ತೂವರೆ ಉಂಡು.

"ನನ ಏತ್ ದೂರ ಉಂಡುಯಾ ಅಪ್ಪಾ?"

- ಸದನೆ ಕೇಂಡೆ.  ಸೀತಕ್ಕೆಗ್ ತೆರಿಂಡ್-ಜೋಕ್ಲೆಗ್ ನಡತ್ತ್‌ದ್ ಕಾರ್‍ ಬೇನೆ ಅವರೆ ಸುರುವಾಂಡ್‌ಂದ್.  ಇಲ್ಲ್ ಪಿದಾಡ್ನಗನೆ ಪೊತು ಕಂತರೆ ಆತ್ಂಡ್.  ಇತ್ತೆ ದಾಲ ರಡ್ಡ್ ಮೈಲ್ ಸಾದಿ ಕರಿದುಪ್ಪು ಆತೆ.  ನಡತ್ತ್‌ದೇ ಪೋವೊಡಾಯಿನ ಸಾದಿ.  ಈ ಮಾರ್ಗೊಡು ಒಂಜಿ ಬಸ್ಸ್ ದಿನೊಕ್ಕು ರಡ್ಡ್ ಸರ್ತಿ ತಿರ್‍ಗುಂಡು.  ದೇವಸ್ಥಾನ ಮುಟ್ಟೂಡ್‌ಂದಾಂಡ ಉಲತಾದಿದೆ ನಾಲ್ ಮೈಲ್ ಸಾದಿ ಉಂಡು.  ಆಂಡ ಸದಾನಂದನ ಬಜಿಕಾರ್‌ಗ್ ರಸ್ತೆದ ಕಲ್ಲ್‌ಲ ಕಂತೊಂದುಡಂಡು.  ಜೋಕುಲೆನ್ ಓಡೆಗ್‌ಲಾ ಲೆತೊಂದು ಪೋಪಿನಿಂದ್‌ಂಡ ಬಂಙಪ್ಪ!  ಇತ್ತೆ ಎಂಚಾಂಡಲ ಮಂಗಟ್ಟಾದ್ ನನ ಆಜಿ ಮೈಲ್ ನಡಪಾವೊಡತ್ತ!.....

ಸೀತಕ್ಕೆ ಇಂಚಂದಲ್.  "ನನ ದಿಂಜ ದೂರ ಇಜ್ಜಿದೆ ಮಗಾ, ನಮ ಎಗಡ್ರೆ ಇಲ್ಲಲ್ದ್ ನಿಕಲೆ ಸಾಲೆ ಪೋಯಿನ್ಯಾಡ್ದ್ ರಡ್ಡ್ ಬಕ್ಕರ್‍ ಮಿಕ್ಕು ಆತೆ....."

ಕಾರ್‍ದಡಿ ನೆಲ ಕತ್ತಲೆ ಪಾಡ್ದ್.  `ಕಣ್ಣ್ ಕುಸ್‌ ರ್‍ಂಡ ತೋಜುಜಿ' ಇನ್ಪಿಲೆಕಾಂಡ್.  ರಾಜುಡ ಬೆಟ್ರಿ ಇತ್ತಂಡ್;  ಐತ ಬೊಲ್ಪುಡ್ ನಡತೆರ್‍ ಪೋಪಿನ ಸಾದಿ ಒಂಜಿ ಮೂಜಿ ಮೈಲ್ ಬಾರೀ ಪೋಡಿಗೆದವು.  ಓಲ್ಲಾ ರಾತ್ರೆ ದಿಂಜ ಮಿನಿ ಆದ್ ಪೋಂಡ ಕಡ್‌ದ ಬರಿಟ್ ತಿಕ್‌ದ್ ಬೂರ್‍ದು ಜೋಕುಲು ಪೋಡ್ಯೆರ್‍!  ಇಂಚಪ್ಪ ಉಂದೇ ಕಾಡ್ಡೊಂಜಿ `ನೈಪಿಲಿ'ಲಾ ತಿರ್‍ಗೊಂದುಂಡುಂದ್ `ಗಾಬ್' ಆತ್‌ಂಡ್!  ಮೆಣ್ಪುರಿ ರಾಪುನ ತೂದೇ ಪೋಡ್ಯುನ ಈ ಜೋಕುಲು ನನ ಪಿಲಿ ಮಿನಿ ಎದುರು ಬತ್ತ್ಂಡ ಚಡ್ಡಿ ಚಂಡಿ ಮಲ್ತೊಂದ್ ಅರ ಬಾಯ್ ಕೊರ್‍ವೆರ್‍.  ಕತ್ತಲೆ ಆಯಿಬೊಕ್ಕ ನರ ಪುರಿತ ಸಂಚಾರ ಇಜ್ಜಿ.  ಕಾಡ್‌ಡ್-ಬಲ್ಲೆಡ್ ಏರ್‍ ದೆಂಗ್‌ದ್ ಕುಲ್ಲಿಯೆರ್‌ಡಲ ತೆರಿಯಂದ್.

"ಅಂದದೆ ಜೋಕುಲೆ, ನಿಕ್‌ಲೆಗ್ ತದಿ ಸಾಗರೆಂದ್ ಯಾನೊಂಜಿ ಕತೆ ಪನ್ಪೆ-ಆವಂದಾ?"

ಸೀತಕ್ಕೆ ಇಂಚ ಪನ್ನಗೆ ಜೋಕುಲೆನ ಕೆಬಿ ಅರಲ್‌ಂಡ್.  ಅವುಲಾ ರಜುಗು ಪೊಸ ಪೊಸ ಕತೆ ಕೇನ್ನುಂದ್ ಪಂಡ ಮರ್ಯಲೊಡು ಕೈತಿನ ಕರುಕುರುಂದ್ ತಿನ್ಪಿನಾತ್ ಕುಸಿ.

`ಹಾಂ, ಹಾಂ,- ಪನಿ' ಇಂದೆರ್‍ ಇರ್ವೆರ್‍ಲಾ.

ಸೀತಕ್ಕೆ ಸೊಂಟೊಗ್ ತಿಕ್ಕಾವೊಂದಿನ ಬಚ್ಚಿರೆದ ತಂಚಿಡ್ದ್ ಬೀಜ ಗೆತ್ತ್ ತಿಂದ್‌ದ್.  ಪಿಚಿಕ್ಕಂಚರ ಒರ ಉಬ್ಬಿದ್, ದತ್ತ್ ಬಲತ್ತ್ ಒಲ ತೂಯಲ್.  ತಿರ್ಲೊಲಿಕೆ ಬತ್ತ್ಂಡ್.  ನನ ಕುಡ್ತಕುಮೇರ್‍ ಕಡತ್ತ್ಂಡ ತಿಕ್ಕು ನವೇ ಕುಂಟಲ ಕಾಡ್.  ಆ ಕುಂಟಲ ಕಾಡ್‌ದ ಪಾಡಿಡೇ ಏತ ಮಾತ ಕತೆ ಪಿರವುದು ನಡತ್ತ್‌ಜಿ!..... ಮಡ್ಮಯಿ ಲ್‌ಗ್ ಒರ ಪೋದು ಮುಟ್‌ಂಡ್ ಬೊಕ್ಕ ಪೋಡಿಗೆ ಇಜ್ಜಿ.....

"ಇಂದಾ.  ಉಂದು ದಾಲ ಪತ್ತ್ ಪದಿನೈನ್ ವರ್ಸ ಪಿರವುದ ಕತೆ, ಅದಗ ಇತ್ತೆದಲೆಕ್ಕ ಆಲ್ಪಲ್ಪ ಇಲ್ಲ್, ಅಂಗಡಿ, ಇಲೆಟ್ರಿ ಬೊಲ್ಪು ಮಿನಿ ದಾಲ ಇತ್ತ್‌ಜಿ.  ಎಡ್ಮೇರ್‍ ಡೊಂಜಿ, ಬೊಳ್ಳೆಡೊಂಜಿ ಅಂಗಡಿ ಬುಡ್‌ಂಡ ತಿರ್ಲೊಲ್ಕೆಡೊಂಜಿ ಓಟ್‌ಲ್, ಒಂಜಿ ಗಡಂಗ್-ಬೊಕ್ಕ ಮಡ್ಮಯಿಲ್ ಮುಟ್ಟು ಸಾದ್ಯಪುಡೆ ಕಾಡಬಲ್ಲೆನೇ, ಮಣ್ಣ್‌ದ ಮಾರ್‍ಗವೊಂಜಿ ಇತ್ತೆದಲಕನೆ ಆಪಗಲಾ ಇತ್ತ್ಂಡೇ.  ಆಂಡಲಾ ಬಸ್ಸ್ ಕಾರ್‍ ಮಿನಿ ತಿರ್‍ಗೊಂದಿತ್ತ್‌ಜಿ.  ಓಲೊಲು ತೂಂಡಲಾ ಕಾಡ್, ಬಲ್ಲಗೆ, ಬೆದ್ರ್‍ ಪುಂಡಲ್.  ಕುಂಟಲಕಾಡ್‌ದ ಗಿಜಿರ್‌ಪಾಡಿದ ಬರಿಟೆ ಪಗೆಲ್‌ಗ್ಲಾ ನರಮಾನಿ ಒರಿಯೊರಿ ತಿರ್‍ಗರೆ ಪೋಡ್ಯೋಂದಿತ್ತೆರ್‍.

ಮಡ್ಮಯಿಲ್‌ಡ್ ಅದಗ ಒಂಜಿ ಬೇತೆ ನಮುಂದ ಗಂಗಸರದ ಗುತ್ತಿಗೆ ಇತ್ತ್ಂಡ್‌ಗೆ.  ಮಾತ ಇತ್ತೆದ ಲೆಕ ಸರ್ಕಾರ ಲೈಸನ್ಸ್ ಕೊರ್ದು ಗಡಂಗ್ ನಡಪಾವೊಂದಿತ್ತ್‌ಜಿ;  ಹಳ್ಳಿಡ್ ಕೆಲವು ಇಲ್ಲ್‌ಲೆಡ್ ಕಂಟ್ರಿ ಗಂಗಸರ ಬೆಯ್ಪಾವೊಂದ್‌ತ್ತೆರ್‍.  ಆನಿದ ಆ ಗಡಂಗ್‌ಗ್ ಮೂವೆರ್‌ ಕಾಯಂ ಗಿರಾಕಿಲು ಇತ್ತೆರ್‌ಗೆ, ಅಕಲ್ನ ಪುದಾರ್‍ ಎಂಚಿನಪ್ಪಾ..... ಸುಡ್ಕಾಡ್‌ದವು..... ಬಂಜಿಡುಂಡು ಬಾಯಿಗ್ ಬರ್‍ಪುಜಿಯೆ..... ಹಾಂ! ಎಂಚಿನವುಲ ಉಪ್ಪಡ್‌-ಅಕುಲು ಮೂವೆರ್‍ ಆಂಜೊವು ಮೂಜಿ ಜಾತಿದಕುಲು;  ಅಂಚಂದ್ ಬಾರೀ ಜೋಸ್ತ್ಯಲ್ಲು.  ಅನುಮುಪ್ಪ ದಿನಲಾ ಅಕುಲು ಬಯ್ಯದನಗ ಆ ಮಡ್ಮಯಿಲ್ದ ಗುತ್ತಿಗೆದ ಬಾಕಿಲ್‌ಡ್ ಪೋದು ಪಟ್ಟಾಂಗೋಗು ಕುಲ್ಯೆರ್‌ಡ ಉಣ್ಕೆಲ್ ರಾತ್ರೆ ಮುಟ್ಟು ಉರ್ದಕಲ್ನ ಜಾತಕ ಬುಡ್ಪಾದ್ ನಾಲಯಿದ ನರ್ಕೆ ಗೆತ್ತೊಂದು, ನಡೀರ್‍ ಆನಗ-ಇಲ್ಲಗ್ ಪಿದಾಡಿಯೆರ್‌ಡಲಾ ಆಂಡ್, ಅತ್ತಾ ಪರ್‍ದ್ ಮೂಕುಮುಟ್ಟು ಆಂಡ ಗುತ್ತಿಗೆದ ಬಾಕಿಲ್‌ಡೇ ಮಗರ್‍ದ್ ಮನದಾನಿ ಕಾಂಡೆ ಪೋಯೆರ್‌ಡಲಾ ಆಂಡ್.  ಮೂವೆರೆಗ್ಲಾ ಮದ್ಮೆ ಆದ್ ಬುಡೆದಿ ಬಾಲೆಲು ಮಿನಿ ಇತ್ತೆರ್‍.

ಆನಿ..... ಇಂಚೆನೆ ಮರ್ಯಲದ ದಿನ ಕಾರ್ತಿಂಗೊಲ್ಡು ಬೆನ್ನಿ ಸಾಗೊಳಿ ಮಾತಾ ಮುಗಿದ್‌ಂಡ್.  ಇನಿತ ದಿನತಲೆಕ ಬರ್‍ಸದ ಬರೆಗಾಲ ಅತ್ತ್‌ ಆನಿ ಬರ್ಸ ಗೀರ್‍ ಕಟ್‌ದ್ ಬರೊಂದುಂಡು.  ಇಂಚೆನೆ ಕತ್ತಲೆ ಆದ್ ಪೋತುಂಡು.  ಆತಾವನಗ ಮಡ್ಮಯಿಲ್ ತುದೆನ್ ಓಡೊಡು ದಾಂಡೊಂದ್ ಬತ್ತಿನ ಪೊಸ ಜನ ಒರಿ ಗುತ್ತಿಗೆದ ಉಲಾಯಿ ಬತ್ತೆರ್‍.

ಸಾಧಾರ್‍ನ ಮುಪ್ಪತ್ತಯಿನ್ ನಲ್ಪ ಒರ್ಸ ಪ್ರಾಯ ಆವು.  ಎಡ್ಡೆ ಗನಾಗಟ್ಟಿದ ಪೊರ್ಲು ಜನ.  ಸೋಕುದ ಅಂಗಿ ಕುಂಟು, ಸೂಟು ಬುಟೀಸ್ ಮಾತ ಇತ್ತ್‌ಂಡ್‌ಗೆ.  ಆಯೆ ಕೈಟಿತ್ತಿನ ಒಂಜಿ ನೇಲ್ಯ ಪೆಡಿಗೆನ್ ಆ ಮೆಯಿ ದೀದ್ ಬರ್ಸದ ನೀರ್‍ ಜತ್ತೊಂದಿತ್ತಿ ಒಚ್ಚರೆಂದ್ ಪೆಟ್ಟಿಗೆದ ಬೀಗ ಗೆತ್ತೆ.

ಗುತ್ತಿಗೆಡ್ ಗಂಗರ ಮಾರುನ ಒರಿ ಜವಣೆ ಇತ್ತೆ.  ಬೇತೆ ಇತ್ತಿನಕ್ಲು ಆ ಮೂವೆರ್‍ ಕಾಯಂ ಗ್ರಾಕಿಲು, ಆಕುಲು ಬತ್ತಿನ ಪೊಸಬನೇ ಕಣ್ಕಣ್ಣ್ ತೂಯೆರ್‍.  ಪೆಟಿಗೆದ ಬಾಕಿಲ್ ಜತ್ತಿನಪಗ ಉಲಾಯಿ ಎಡ್ಡೆಡ್ಡೆ ವಸ್ತುಲು ತೋಜಿಯ.  ನೋಟುದ ರಡ್ಡ್ ಮೂಜಿ ಅಟ್ಟಿಲು ಇತ್ತ.  ಕೈಟ್ ವಾಚಿ, ಬಿರೆಲ್‌ಡ್ ಉಂಗಿಲ ಬಾರೀ ಕಿರಯದವು ಆದುಪ್ಪು!  ಈ ಜನ ಪಿದಾಯಿ ಊರುಡ್ಡು ಬತ್ತಿನಾಂದ್!

ಆಯೆ ಆಂಗಿದ ಕಿಸೆಡ್ದ್ ಉದ್ದು ಸಿಕ್ರೆಟ್ ಗೆತ್ತ್‌ದ್ ಪೊತ್ತಾದ್ ಒಂಜಿ ದಮ್ ಒಯ್ತೆ.  ಆಡೇಗೇ ಕುಲ್ಲಿಯೆ.  ತೂಪಿನ ಆ ಮೂವೆರ್‌ಡ ಕೇಂಡೆ.

"ಅಂದೆಯೆ ಕೊಡಂಗಲಗ್ ನನ ಏತ್ ದೂರ ಉಂಡು?"

ಕೊಡಂಗಲಗಾ?  ಈ ಬರ್ಸೊಡು ರಾತ್ರೆಗ್ ಎಂಚ ಪೋಪರ್‍ ಈರ್‍?  ಏರೆಡೆಗ್ ಪೋವೊಡು, ಒಲ್ತುಬತ್ತರ್‍?  ಮೂವೆರ್‌ಲ ಕೇಂಡರ್‍.

"ಯಾನ್ ಬತ್ತಿನಿ ಬೊಂಬಾಯಿಡ್ದ್.  ಕಿಂಞಡೇ ಯಾನ್ ಅಡೆಗ್ ಪೋಯಿನಾಯೆ, ದುಬಾಯಿಗ್ ಪೋದ್ ಪತ್ತ್ ವಸ್ಮ ಆಂಡ್.  ಊರುಗು ಉಂದುವೇ ಸುರೂ ಬಪ್ಪಿನಿ.  ಇತ್ತೆ ದಾಲ ಇರ್ವ ವರ್ಸ ಮಿಕ್ಕು ಯಾನ್ ಬರಂದೆ.  ಅಂಚಾದ್ ಮುಲ್ಪ ಏರಗ್‌ಲ ಎನ್ನ ಪೊಲಬು-ಗುರ್ತ ಉಪ್ಪುನು ಕಷ್ಟ.  ಇತ್ತೆ ತುದೆತ ಅಪೆಲ್ ಮುಟ್ಟು ಒಂಜಿ ಟ್ಯಾಕ್ಸಿಡ್ ಬತ್ತೆ.  ಬನ್ನಗ ಕಡೇಸ್‌ಂಡ್ ಮೂಲು ನನಲಾ ಸೇತ್ಮೆ ಆತ್‌ಜಿ ಅತಾ?"

ಆಯೆ ಪಾತೆರೊಂದಿತ್ತಿಲೆಕನೆ ಪರಿಯೆ.  ಪರ್‍ಪಿಲೆಕನೆ ಪಾತೆರ್ಯೆ ಮೊಕಲೆಗ್ ನಾಲಾಯಿಡ್ ಜೊಲ್ಲೆ ಅರಿಮಡ್ ಆಯಗ್ ತೆರಿಂಡ್.  ಗುತ್ತಿಗೆದಾಯಡ ಪಂಡ್ದ್ ಅಕ್ಲೆಗ್‌ಲಾ ಮೂಜಿ ಗ್ಲಾಸ್ ಗಂಗರ ಕೊರ್‍ರೆ ಪಂಡೆ.

"ಕೊಂಡಂಗಲಡ್ ಈರೆಗ್ ಏರ್‍ನ ಪೈಕ್‌ಡ್?  ಒರಿ ಕೇಂಡೆ"

"ಮರ್ಸಿನ ಬಾಯಿಂದ್ ಎನ್ನ ಅಪ್ಪೆನ್ ಪುದಾರ್‍.  ಅಪ್ಪೆರ್‍ ಮಾತ್ರ ಉಪ್ಪುನು ಊರುಡು.  ಬೇತ ಏರ್‍ಲಾ ಇಜ್ಜಿ, ಯಾನ್ ಬರ್‍ಪೆಂದ್ ಕಾಕಜಿಲಾ ಪಾಡ್ದ್‌ಜಿ"

ಮೂವೆರ್‌ಲಾ ಪಿಸಪಿಸಂದ್ ಪಾತೆರೊಂಡೆರ್‍.  "ಮರ್ಸಿನ ಬಾಯಿನ ಮಗೆನಾ ಈರಿತ್ತೆ?  ಬುಡಿ ಸುದ್ದಿ.  ಈರ್‍ ಸುರೂಟೇ ಪನರೆ ಇಜ್ಜ, ಎಂಕ್ಲೆ ಇಲ್ಲ್ ಅಲ್ಪನೆ!  ಈರೆನ್ ಅಡೆಮುಟ್ಟು ಮುಟ್ಟಾವುನ ಕೆಲಸ ಎಂಕಲ್ನ.  ಬಲೆ ಪೋಯಿ" ಇಂದೆರ್‍.

`ಅಂದಾ?'! ಬಾರಿ ಕುಸಿ ಆಂಡ್ ಅಯಗ್.  ನನೊಂತೆ ಕುಲ್ಲುದ್ ಬಂಜಾರ ಪರ್ಯೆ, ಬರ್‍ಸ ಒಂತೆ ಪನಿ ಆನಗ ಲಕ್‌ದ್ ಪಿದಡಿಯೆರ್‍.  ಒರಿ ದುಬಾಯಿದಾಯನ ಪಟ್ಟಿಗೆ ತುಂಬೊಂಡೆ.

ಕುಂಟಲಕಾಡ್‌ದಲ್ಪ ಬನ್ನಗ ತುಂಬೊಂದಿನಾಯೆ ಪೆಟಿಗೆ ತಿರ್‍ತ್ ಜಾವಯೆ, ದುಬಾಯಿದಾಯೆ ದಾದಂದ್ ಕೇನೊಡು ದುಂಬು ಮೂವೆರ್‍ಲಾ ಆಯನ ಮಿತ್ತ್ ಬೂರ್ದ್ ಅಡ್ಡ ಮಗ್‌ತ್ತ್‌ದ್ ಕಕ್ಕಿಲ್ ಪುಜೆಂಕಿಯೆರ್‍.....

ಪುಣ ಬೂರ್‌ಂಡ್!  ಸುಲಾಬೊಡು ತೈತಿನಾಯನ ಪುಣೊನು ಒಯ್ತೊಂದು ಪೋದು ಕಾಡ್‌ದ ಉಲಾಯಿ ಪುದೆಲ್‌ಡ್ ಮದೆ ಮಲ್ತೆರ್‍.  ಒರಿ ಪಾರ್‍ದ್‌ಪೋದು ಒಲ್ತಾವೊಂಜಿ ಬಲ್ಲ್‌ಕನತ್ತೆ.  ಪುಣೊನು ಕಾಡ್‌ದುಲಾಯಿ ಒಂಜಿ ಗೋಲ್ದ ಮರಕ್ಕ್ ನೇಲಾದ್ ದೀಯೆರ್‍.  ಪೆಟಿಗೆ ಪತೊಂದು ಮೂವೆರಪ್ಪ ತನತನಕ್ಲೆ ಇಲ್ಲಗ್ ಪೋದು ಪೆಟಿಗೆಡಿತ್ತಿನೆನ್ ಮೂಜಿ ಪಾಲ್ ಮಲ್ತೆರ್‍.  ಸಾವಿರ ಗಟ್ಲೆ ಕಾಸ್, ಬಂಗರ್‍ ಒರಿಯೊರಿಯನ್ ಪಾಲ್‌ಗ್ ಬತ್ತ್ಂಡ್.

ಅಂಚ ಕೆರ್‍ದ್ ಮರಕ್ ನೇಲಾಯಿನ ಪುಣೊನು ನಲೈನ್ ದಿನೊಡ್ದು ಬೊಕ್ಕ ಬಿಜಕ್ರೆ ಅರಾವರೆ ಬತ್ತಿನ ಪೊಂಜೊವು ತೂದು ದಿಗಿಲ್ ಪಾರ್‌ಂಡ್, `ಒಪ್ಪದೇಯೆರೆ!ಽಽ' ಇಂದ್ ಅಲ್ಕ್ ಬೂರ್‍ದು ಕಲ್ಕಿಯೆರ್‍, ಮರಟ್ ಗುಯ್ಯಿಂದ್ ಕಿಲೆಂಜಿ ರಾವೊಂದಿತ್ತ.  ಏರಾ ಒರಿ ಮರಕ್ ಬಲ್ಲ್ ಪಾಡೊಂದು ಪೆರಣ ಬುಡ್ತೆ ಇಂದ್ ಊರುಗು ಬತ್ತ್‌ದ್ ಆಂಜೆವೆಗ್ ತೆರಿಪಾಯಂರ್‍.  ಬೊಕ್ಕ ಪುಣ ಏರ್‍ನಾಂದ್ ಒರಿಲಾ ಪನ್ಪಿನಕುಲೇ ದಾಂತೆ ಅವು ಮಾಜಿದ್ ಪೋಂಡು.  ಮರ್ಸಿನ ಬಾಯಿಗ್ ಮಗೆ ದಾಂತೆಪೋಯಿನವುಲಾ ಗೊತ್ತಾತ್‌ಜಿ.....

ಸೀತಕ್ಕೆನ ಕತೆ ಕೇಂಡ್ದ್ ಇರ್ವೆರ್‍ ಜೋಕುಲೆಗ್ಲಾ ಮೆಯಿ ಕೊಕ್ಕೆರ್ತ್ ಪೋಂಡು.  ರಾಜುಗು ದಾದನೋ ಅಂದಾಜಾಂಡ್.  ಕೇಂಡೆ:

"ಅಂಚ ಕೆರ್ತಿನ ಆ ಮೂವೆರ್‍ ಇತ್ತೆ ಓಲ್ಲೆರ್‍?"

"ಅವ್ವನ್ ಕೇನ್ಬರದೆ ಜೋಕ್ಲೆ?.  ಒರೊಕ್ ಅಕುಲು ಮಾತ ಮುಲ್ಲಾದಿಗೆ ದಿಂಜೆದ್ ನೇಲನೇಲ್ಯ ಇಲ್ಲ್ ಕಟ್ಟಾಯೇರ್‍, ಎಡೇನ ಕರ್ಚಿ ಮಲ್ತೆರ್‍.  ಆಂಡ ಏರ್‍ ತೊಜೆರ್‌ಡಲಾ ದೇಯೆರ್‍ ತೂಪುಜೆರಾ.  ಮಲ್ತಿನ ಹಾಲ್ ಕೆಲಸ ತನ್ನ ಮನಸ್‌ನಾಂಡಲ ತಿನ್ಪುಜಾ?  ಮಾನ್ಯ ಕೆರ್‍ನ ಮಗುರೆನ ಒರ್ಸ ಆ ಮೂವೆರೆಡ್ ಒರಿ ಅವೇ ಸಾದಿಡೆ ಬನ್ನಗ ಆಯಗ್ `ಧಸಕ್ಕಂದ್' ತಿಗೆಲೆಗ್ ದಾದವಾ ಪೊಗ್ಗಿ ಲೆಕಾಂಡ್‌ಗೆ.  ಇಲ್ಲಗ್ ಪೋದು ಜೆತ್ತಿನಾಯೆ ನೆತ್ತರ್‍ ಕಕ್ಕ್‌ದ್ `ಬಡಕ್ಕ' ತೈತೆ.  ನನೊರಿಲಾ ಕೆಳ್ಕಿಲ್ ಬಲ್ಲ್ ಗೆತೊಂದ್ ಪೋಯೆ, ಅಕಲ ಜೋಕುಲು ಆಲೆಲು ಬೊಕ್ಕಲಾ ತಾದಿಡೇ ಬೂರಿಯೆರ್‍.....

ಸೀತಕ್ಕೆ ಪನ್ಪಿನ ಉಂತಾದ್ ಬಚ್ಚಿರೆದ ತಂಚಿಡ್ದ್ ಬಜ್ಜೆಯಿದ ತುಂಡು ಪೂಲು ಬಾಯಿಂಗ್ ಪಾಡೊಂಡೊಲು.  ಕಥೆ ಕೆನೊಂಕೇನೊಂದು ಜೋಕ್ಲೆಗ್ ಕುಂಟಲ ಕಾಡ್ ಕಡತ್ತ್ ಪೋಯಿನವೇ ತೆರಿಜಿ.  ಆಂಡ್ ಒಂಜಿ ನಮೂನಿ ಪೋಡಿಗೆಡ್ ಕಣ್ಣ್‌ಗ್ ಮುತ್ತೊಡಾಯಿನ ನಿದ್ರೆ ಒಡೆಗಾ ಪಾರ್‍ದ್ ಸರಾಗ ನಡತ್ತೆರ್‍.  ಕದೊನಿ, ನಗಾರಿ, ಓದ್ಯೆ, ಬೆಡಿ, ಬೇಂಡ್, ಗರ್ನಾಲ್‌ದ ಸಬುದ ಅಂದಾ-ಅತ್ತಾಂದ್ ಕೆಬಿಕ್ ಬೂರ್‍ರೆ ಸುರುವಾಂಡ್.  ದೇವಸ್ಥಾನ ಕೈತಲಾಂಡ್‌ಂದ್ ತೋಜುಂಡು.

"ಅಂದೆಯೆ ಸೀತಕ್ಕಾ, ಅಕುಲು ಮೂವೆರ್‍ ಆ ಪೊಸಬನ್ ಲೆತೊಂದ್ ಪೋತಿನೆನ್ ಗುತ್ತಿಗೆಡಿತ್ತಿನ ಬೇಲೆದಾಯೆ ತೂತ್‌ಜೆನಾ?  ಆಯಗಾಂಡ್ಲ ಪಂತೊಲಿಯೇ?"  ರಾಜು ಕೇಂಡೆ.

"ಪನರೆ ಪಂತೊಲಿಯೆ, ಸೀತಕ್ಕೆ ಪಂಡಲ್." ಆಂಡ ಮಾನ್ಯಕೆರಿನ ಮೊನದಾನೇ ಪುಲ್ಯಕಾಂಡೆ ಆ ಮೂವೆರ್‍ಲಾ ಆರೆ ಇಲ್ಲಗ್ ಬತ್ತ್‌ದ್, " ಬಾಯಿ ಮಿನಿ ಬುಡ್ರಿಯ ಇಂದಾಂಡ ನಿಕ್ಕ್‌ಲಾ ಆಯನವೆ ಗತಿ ತೋಜಾವಂದ್ ತೆಗೆ ಬಾಪ್‌ರೆ" ಮಲ್ತೆರ್‍, ಜೂವ ಓರಿಂಡ ನಟ್‌ದಾಂಡ ಬದ್ಕೆ `ಇನ್ನೊಂದು ಆರ್‍ ರಾತ್ರೋರಾತ್ರಿ ಲಕ್‌ದ್ ಪಾರ್‍ಯೆರ್‍.  ಲತ್ತ್ ಪಿರಯದ ಬುಡೆದಿ ಜೋಕುಲೆನ್ ಬುಡ್ಡು, ಗಟ್ಟಾಗ್ ಪಾರ್‌ಯೆರ್‍!' ಪಾತೆರ ಉಂತಾದ್ `ಹೂಂಽಽ' ಇಂದ್ ಸೀತಕ್ಕೆ ಉದ್ದೊಗೊಂಜಿ ಉಸುಲು ಬುಡ್ಯೊಲುಃ `ಓಲಾಉಪ್ಪೆರ್‍'. ಬರುವೆರ್‍...... ಒಂಜತ್ತ್ ಒಂಜಿ ದಿನ ಬರುವೆರ್‍ ಇಂದ್ ಕಾತೊಂದು ಮುತ್ತೇಸನ ಇನಿಮುಟ್ಟುಗೆತ್ತ್‌ಜಿ.  ಅವು ಆನಿ ಗುತ್ತಿಗೆಡ್ ಬೇಲೆಡಿತ್ತಿನ ಬೇತೆ ಏರ್‍ಲಾ ಆತ್ತ್ ರಾಜೋ, ಉಂಬ್ಯನ-ಎನ್ನ ಸದನನ ಅಮ್ಮೆರೇ.

--ಇನಿ ಮುಟ್ಟು ಪನಂದಿನೆನ್ ಸೀತಕ್ಕೆ ಇನಿ ಈ ಜೋಕುಲೆ ಎದುರು ಪಂಡೊಲು.  ಸದನಗ್ ದೊಂಡೆಡ್ ಎಂಚಿನವಾ ತಿಕೊನಿಲೆಕ್ ಆಂಡ್;  ದಾದಂದ್ ಆಯಗ್ ತೆರಿಜಿ..... ರಾಜು ಕುಡ ಕೇಂಡೆ,

"ಅಂದ್ಽಽ..... ಆ ಮೂವೆರೆಡ್ ಮೂಜಿನೆದಾಯೆ ಸೈತಿನಿ ಎಂಚ"

ಆರಾ?..... ಆರ್‍ನ ಸೌಬಾಗ್ಯೊನು ಇನಿಕ್ ದಾದೆನ್ ಪನ್ಪಿನಿ!  ಬಾಕಿದ ಇರ್ವೆರ್‍ ಸೈತಿನೆಟ್ ಮೇರೆನವುಲ `ಕೈ' ಉಂಡುಂದ್ ಕೆಲವೆರ್‍ ಪನ್ಪೆರ್‍..... ಅವು ಮಾತಾ ನಂಕ್ ದಾಯೆ ಮಗಾ?  ಎನಲೆಕಂತಿನಾಲ್ ದೇವರ್‍ ಕೈಕಾರ್‌ಗ್ ಸುಕ ಕೊಂರ್ಡ ಬೆಂದ್ ತಿನುವೆ ಸಿವಾಯಿ ನನೊರಿಯನ ತಿಂದ್‌ದ್ ಯಾನ್ ಉದ್ದಾರ ಅವೆಂದ್ ಆಸೆ ಮಲ್ಪಯೆ..... ಹಾಂ.  ಆ ಮೂಜನೆದಾರ್‍..... ಏರೆಡ್ಲಾ ಪನಡೆ ಜೋಕುಲೇ, ಆರೇ ನಮ್ಮ ನಮ್ಮ!.....

ಆತೊರ್ತುಗು ಗುಡುಮ್ಮಂದ್ ಕದಿನದ ಸಬುದ ಮಾತೆರೆನ್ಲಾ ಅಲಕ್ಕ ಉಂತಾಂಡ್!......

            *****

ಕೀಲಿಕರಣ: ಕಿಶೋರ್‍ ಚಂದ್ರ

ಮುರುಳಿ ಮೌನವಾಗಿದೆ

- ಡಾ || ಬಿ. ಪ್ರಭಾಕರ ಶಿಶಿಲ

ಏಕೆ ಮುರಳೀ
ನಿನ್ನ ಕೊಳಲು ನುಡಿಯದಾಗಿದೆ
ಸಪ್ತವರ್ಣ ಸಪ್ತಸ್ವರ
ಮಿಡಿಯದಾಗಿದೆ

    ರಾಗನಂದನದಲೀ ಪಿಕವು
    ರೆಕ್ಕೆ ಮುರಿದು ಅಡಗಿದೆ
    ಭಾವತಂತಿ ಕಡಿದು ಹೋಗಿ
    ರಾಗ ಸೆಲೆಯು ಉಡುಗಿದೆ

ತಂಪೆಲರಲಿ ಸಿಡಿಮದ್ದಿನ
ಗಂಧಕವು ತುಂಬಿದೆ
ತಣ್ಣೀರಲು ಕಣ್ಣೀರಿನ
ಲಾವಾರಸ ಬೆರೆತಿದೆ

    ಓಟದಲ್ಲೇ ಕಾವ್ಯ ಉದಿಪ
    ಕಾಲವೆಲ್ಲಿ ಹೋಗಿದೆ
    ಕಿರುನಗೆಗಳು ದಾವಾನಲವಾಗಿ
    ಕಾವ್ಯ ದಹಿಸಿದೆ

ಕಾವ್ಯ ಸೆಲೆಯ ನೂರುಬೇರು
ಕಮರಿ ಹೋಗಿ ಬಿಟ್ಟಿದೆ
ಧನಕನಕದ ಝಣಝಣದಲಿ
ಭಾವಲೋಕ ಬತ್ತಿದೆ

    ಅಡ್ಡಗೋಡೆ ಕುಟ್ಟಿ ಕೆಡೆವ
    ಕಾವ್ಯ ಹುಟ್ಟಬೇಕಿದೆ
    ಮನುಜಕುಲವು ಒಂದೇ ಎಂಬ
    ನಾದ ನುಡಿಸಲಾಗದೆ

ಮುರಳೀ ಓ ಮುರಳೀ
ಏಕೆ ಮುರಳಿ, ಎಕೆ ಮುರಳಿ
ಏಕೆ ಮುರಳೀ
ನಿನ್ನ ಕೊಳಲು
ಮೌನವಾಗಿದೆ?

೨೦೦೨
    *****

ಕೀಲಿಕರಣ: ಕಿಶೋರ್‍ ಚಂದ್ರ

ಜೀವನ ಕಾವ್ಯ

- ಮಸನೊಬು ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಮನುಷ್ಯರು ಏನನ್ನೋ ಕಂಡು
ಹಿಡಿಯುತ್ತಾರೆ.  ಅದಕ್ಕಾಗಿ ಪ್ರಕೃತಿಯನ್ನು
ಉಪಯೋಗಿಸುತ್ತಾರೆ.  ಈ ಎಲ್ಲಾ ಪ್ರಯತ್ನಗಳು
ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ.
ಇದರ ಪರಿಣಾಮವಾಗಿ ಇಂದು ಪೃಥ್ವಿ
ಮಾಲಿನ್ಯಗೊಂಡಿದೆ.  ಮಾನವನ ಅಭಿವೃದ್ಧಿ
ವಿಚಾರಗಳು ಗೊಂದಲಮಯವಾಗಿದೆ.
ಅಧ್ವಾನದ ಆಧುನಿಕ ದಿನಗಳಿಗೆ
ಆಹ್ವಾನವಿತ್ತಾಗಿದೆ.

ಈ ತೋಟದಲ್ಲಿ ನಾವು ಶ್ರಮ ರಹಿತ
ಕೃಷಿ ಮಾಡುತ್ತಿದ್ದೇವೆ ಪರಿಪೂರ್ಣವಾದ,
ಸ್ವಾದಯುಕ್ತ ಧಾನ್ಯಗಳನ್ನು ಮತ್ತು ಹಣ್ಣುಗಳನ್ನು
ತಿನ್ನುತ್ತೇವೆ.  ಇದರಿಂದ ನಮ್ಮೆಲ್ಲ ಚಟುವಟಿಕೆಗಳ
ಹಿಂದಿರುವ ಜಗತ್ತಿನ ಹೃದಯಕ್ಕೆ ನಾವು
ಹತ್ತಿರವಾಗುತ್ತೇವೆ.  ಬದುಕು
ಅರ್ಥಪೂರ್ಣವಾಗುವುದು.  ಆತ್ಮತೃಪ್ತಿ
ದೊರೆಯುವದು.  ಜೀವನ ಒಂದು ಕಾವ್ಯ.

     *****

ರೋಮಾಂಚನ!

- ಡಾ || ರಾಜಪ್ಪ ದಳವಾಯಿ

ರೋಮಾಂಚನ ! ನಿನ್ನ ನೆನಪೆಂಬ ಮಧುರ ಗಳಿಗೆ
ಎನ್ನೆದೆಯ ನೋವಿಗೆ ಪರಿಹಾರದ ಸಿಹಿಗುಳಿಗೆ

ಇವೆ ಇವೆ ನಿನ್ನೊಂದಿಗೆ ಕಳೆದ ಕ್ಷಣವೆಲ್ಲ ಜೀವಂಥ
ನೆನಪಾಗಿ ಕಾಡುತಿಹೆಯಲ್ಲೆ ನನ್ನ ಸದಾ ದಾವಂತ

ಯಾವೊಂದೆ ಆದರೂ ನೆನಪ ಸುರಳಿ ಬಿಚ್ಚಿ ಗುಂಪು
ನಾನು ಸಾಕೆಂದರೂ ನುಗ್ಗಿನೂರು ನೂರು ತಂಪು

ನನ್ನ ಯಾನ ಸದಾ ನಿನ್ನ ನೆನಪೆಂಬ ನಾವೆ ಮೇಲೆ
ಸಾಗಿ ಸಾಗಿ ನಡೆಯುತ ನಿನ್ನ ಜೊತೆಗೇ ತೇಲೆ

ಎವೆಯಿಡದೆ ದಿಟ್ಟಿಸಿ ನಿನ್ನ ದಾರಿಯ ನಿರೀಕ್ಷೆಗೆ
ನೀನು ಎಸೆದೆಯೇನು ನನ್ನ ಕಾಲಾಗ್ನಿ ಪರೀಕ್ಷೆಗೆ

        *****

ಕೀಲಿಕರಣ: ಕಿಶೋರ್‍ ಚಂದ್ರ

ಕಕ್ಷೆ

- ಗಿರಿಜಾಪತಿ ಎಂ. ಎನ್

ಹಕ್ಕಿ ಬಳಗ ಮೇಲೇರುತ ಸಾಗಿದೆ
ಹರುಷ-ಹರುಷ ಹೊತ್ತು
ಮಣ್ಣಿನಣುಗ ತಾ ಸೋತು ಸೊರಗುತಿಹ
ಬದುಕಲು ಪಡೆಯಲೊಂದು ತತ್ತು ||

ಜ್ಞಾನ ವಿಜ್ಞಾನದಾಗಸದೆತ್ತರ
ಮಿಂಚು ಹುಳದ ಮಿಣುಕು
ಬಾಳ ಬಾಂದಳಕೆ ತಿಂಗಳ ಬೆಳಕನು
ಕೊಡ ಬಲದೆ, ಯಾವ ಕ್ಷಣಕುಽ ||

ಏರಿ-ಏರುತಲಿ ಹಾರಿ ಸಾಗುತಿರೆ
ಸಿರಿ ವೈಮಾನದ ಯಾನ
ಅಂಬಲಿಗ್ಹವಣಿಸೋ ಕಂದಗಳಿಗೆಂತೋ
ಹಸಿವ್ಹಸಿವಿನ ತೋಂತನನ ||

ಇರುವುದನುಣ್ಣದ ನಿರದನು ಬಯಸೊ
ಸಿರಿಗರ ಬಡಿದು ನಿಂತ ಜನರೊ
ಇರುವಿಕೆಗಾಗಿಯುಽ ಉಣ್ಣಲಿರದೆ
ಹಪ ಹಪಿಸಿ ತಪಿಸೊ ಜನರು ||

ತಂತ್ರ-ತಂತ್ರಗಳು-ಪಾರತಂತ್ರ್‍ಯ
ಬಲೆ ನೇಯುವ ಬಿನ್ನಾಣ
ವಿಭ್ರಾಂತಿ-ಭ್ರಾಂತಿ ಮುಸುಕಿನಲಿ
ಸ್ವಾತಂತ್ರ್‍ಯವಾಗುತಿದೆ ನಿತ್ಯ ಹರಣ ||

ಬಣ್ಣ ಬಣ್ಣದಿ ತೋರಿದರೇನು
ಬೆಳೆ ಬೆಳೆದ ನೀಲ ನಕ್ಷೆ
ಬಣ್ಣಿಪ ಬಾಯ್ಗಳು ತುಂಬಬಹುದೆ
ಹಸಿದೊಡಲ ಚೀಲ ಕಕ್ಷೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಧನಿಗಳು ದೊಂಬಿಗೆ ಹೋಗಿದ್ದಾರೆ

- ಡಾ || ಬಿ ಪ್ರಭಾಕರ ಶಿಶಿಲ

ಕಪಿಲಳ್ಳಿಗೆ ಆ ಹೆಸರು ಬರಲು ಪುರಾಣದ ಮಹಾಮುನಿ ಕಪಿಲನೇ ಕಾರಣನೆಂದೂ, ಅವನು ಕಪಿಲಳ್ಳಿಯ ಉತ್ತರ ಮತ್ತು ಪೂರ್ವಕ್ಕೆ ಎತ್ತರದ ಗೋಡೆ ನಿರ್ಮಿಸಿರುವ ಪಶ್ಚಿಮ ಘಟ್ಟಗಳ ಸೆರಗಿನ ಅಸಂಖ್ಯಾತ ಗುಹೆಗಳಲ್ಲಿ ಲೋಕಶಾಂತಿಗಾಗಿ ತಪಸ್ಸು ಮಾಡುತ್ತಾ, ಮನೋ ನಿಗ್ರಹ ಕದಡಿದಾಗ ಅಲ್ಲೇ ದಕ್ಷಿಣದಲ್ಲಿ ವೈಯ್ಯಾರದಿಂದ ಬಳಕುತ್ತಾ ಮಂದಗಮನೆಯಾಗಿ ಪ್ರವಹಿಸಿ ಪಶ್ಚಿಮದ ಅರಬಿ ಕಡಲನ್ನು ಸೇರುವ ತಪಸ್ವಿನಿಯ ಶುಭ್ರ ಸ್ಪಟಿಕ ಸಲಿಲದಲ್ಲಿ ಮಿಂದು ಸಂತೃಪ್ತನಾಗಿ ಮತ್ತೆ ಎತ್ತರದ ಪರ್ವತಗಳತ್ತ ಹೋಗಿ ತಪಸ್ಸು ಮುಂದುವರಿಸಿ ಸಮಾದಿಸ್ಥನಾಗಿ ಹೆಸರೇ ಇಲ್ಲದ ಹಳ್ಳಿಗೊಂದು ಪೌರಾಣಿಕ ಸ್ಥಾನಮಾನ ಕಲ್ಪಿಸಿದನೆಂದೂ ಊರ ವಿಪ್ರರು ಮತ್ತು ವಿಪ್ರಾತಿವಿಪ್ರರು ಸ್ಥಳ ಪುರಾಣವನ್ನು ಹೇಳುವುದುಂಟು.  ತಪಸ್ವಿನಿ ಕಪಿಲ ಮುನಿಯ ಮಡದಿಯೆಂದೂ, ಅವಳೊಮ್ಮೆ ಉಗ್ರ ತಪಸ್ಸಲ್ಲಿ ಮುಳುಗಿದ್ದಾಗ, ಮನೋನಿಗ್ರಹ ಕಳೆದುಕೊಂಡಿದ್ದ ಕಪಿಲಮುನಿಯ ಯಾಚನೆಯನ್ನು ಧಿಕ್ಕರಿಸಿ ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿದಳೆಂದೂ, ಪತ್ನೀ ವಿರಹಪೀಡಿತ ಕಪಿಲ ಮುನಿಯ ಉಗ್ರ ತಪಸ್ಸಿನ ತಾಪದಿಂದ ಮೂರು ಲೋಕಗಳು ಕಂಗೆಟ್ಟು ದಾರಿ ಕಾಣದಾದಾಗ ಹಿಮವತ್ ಪರ್ವತದಿಂದ ಸಾಕ್ಷಾತ್ ಪರಮೇಶ್ವರನೇ ಕಪಿಲಳ್ಳಿಗೆ ಇಳಿದು ಬಂದು ಕಪಿಲ ಮುನಿಯನ್ನು ಸಂತೈಸಿ ಅವನ ಇಷ್ಟದ ಪ್ರಕಾರ ತಪಸ್ವನಿಯ ಬಲದಂಡೆಯಲ್ಲಿ ನೆಲಸಿ ಕಪಿಲೇಶ್ವರನಾದಲ್ಲಿಯವರೆಗೆ ಕತೆ ಮುಂದುವರೆಯುತ್ತದೆ.

ಕಪಿಲಳ್ಳಿ ಎಂಬ ಹೆಸರಿನ ಬಗ್ಗೆ ಒಂದು ಐತಿಹ್ಯವೂ ಇದೆ.  ಬಹಳ ಬಹಳ ವರ್ಷಗಳ ಹಿಂದೆ ಚುಮ್ಮುಣ್ಣಿ ಕೊರಪ್ಪೊಳು ಎಂಬ ಶೂದ್ರಾತಿಶೂದ್ರಳೊಬ್ಬಳು ಕಾಣೆಯಾದ ತನ್ನ ಗಬ್ಬದ ದನ ಕಪಿಲೆಯನ್ನು ಹುಡುಕುತ್ತಾ ಹುಡುಕುತ್ತಾ ನದಿ ದಾಟಿ, ಗುಡ್ಡವೊಂದರಲ್ಲಿ ಮೇಯುತ್ತಿದ್ದ ದನವನ್ನು ಕಂಡು ಹೇಗೋ ಪುಸಲಾಯಿಸಿ ಹೊರಡಿಸುವಾಗ ಎತ್ತರದ ಸ್ಥಳವೊಂದರಲ್ಲಿದ್ದ ವಿಚಿತ್ರ ಕಲ್ಲೊಂದು ಕಣ್ಣಿಗೆ ಬಿತ್ತು.  ಕೆಳಗಡೆ ಚಪ್ಪಟೆ ಮತ್ತು ಮೇಲೆ ದುಂಡಗಾಗಿದ್ದ ಆ ಕಲ್ಲು ಅವಳಿಗೆ ಇಷ್ಟವಾಗಿ ಮಕ್ಕಳಿಗೆ ಆಟಕ್ಕಿರಲೆಂದು ಭಾರವಾದರೂ ಕಷ್ಟಪಟ್ಟು ಎತ್ತಿಕೊಂಡು ದನವನ್ನು ಅಟ್ಟಿಕೊಂಡು ನದಿ ದಂಡೆಗೆ ಬರುವಾಗ ಎಲ್ಲಿತ್ತೋ ಪಟ್ಟೆ ಹುಲಿ, ದನದ ಕುತ್ತಿಗೆಗೇ ನೇರವಾಗಿ ಹಾರಿ ಆಕ್ರಮಣ ಮಾಡಿತ್ತು.  ಪ್ರಾಣಭೀತಿಯಿಂದ ಚುಮ್ಮಣ್ಣಿ ಕೊರಪ್ಪೊಳು ಕೈಯಲ್ಲಿದ್ದ ಕಲ್ಲನ್ನು ಅಲ್ಲೇ ಹಾಕಿ ನದಿಗೆ ಧುಮುಕಿ ಈಜಿ ಪಾರಾಗಿ ಬಂದವಳು ಈಚೆ ದಡದಿಂದ ಜನರನ್ನು ಸೇರಿಸಿ ನದಿ ದಾಟಿ ಆಚೆ ದಡಕ್ಕೆ ಹೋದಾಗ ಕಪಿಲೆ ಗತಪ್ರಾಣವಾಗಿ ಹುಲಿರಾಯ ಹೊಟ್ಟೆ ತುಂಬಾ ತಿಂದು ಹೋಗಿದ್ದ.  ಅಳಿದುಳಿದ ಭಾಗಗಳನ್ನು ಅಲ್ಲೇ ಗುಂಡಿ ತೆಗೆದು ಹೂತ ಮೇಲೆ ಕಲ್ಲಿನ ಸಂಗತಿ ನೆನಪಾಗಿ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಅದನ್ನು ಕಂಡು ಎತ್ತಿಕೊಳ್ಳಲೆಂದು ಅತ್ತ ಧಾವಿಸಿದಾಗ ಅದಾಗಲೇ ಅದನ್ನು ಗಮನಿಸಿದ್ದ ವಿಪ್ರಾತಿವಿಪ್ರರು "ಮುಟ್ಟಬೇಡ" ಎಂದು ಗರ್ಜಿಸಿದ್ದಕ್ಕೆ ಅವಳು ಶಿಲೆಯಂತೆ ನಿತುಬಿಟ್ಟಳು.  ಅವರದನ್ನು ಚೆನ್ನಾಗಿ ನೋಡಿ ಸರಿಯಾಗಿ ನಿಲ್ಲಿಸಿ, "ಇದು ಪಾಣಿಪೀಠ ಸಹಿತದ ಶಿವಲಿಂಗ.  ಇದನ್ನು ಇಲ್ಲೇ ಪ್ರತಿಷ್ಠಾಪಿಸ ಬೇಕು" ಎಂದು ಹೇಳಿ, ದಿನ ನಿಶ್ಚಯ ಮಾಡಿ ಗುಡಿಕಟ್ಟಿ ಬ್ರಹ್ಮಕಲಶವಾಗಿ ದೇವರಿಲ್ಲದ ಹಳ್ಳಿಗೊಂದು ದಿಕ್ಕು ತೋರಿದ್ದರು.  ಹುಲಿಯ ಬಾಯಿಗಾಹುತಿಯಾದ ಕಪಿಲೆ ದನದಿಂದಾಗಿ ಉರು ಕಪಿಲಳ್ಳಿಯಾಗಿ, ದೇವರು ಕಪಿಲೇಶ್ವರನಾದನೆಂದೂ, ತಪಸ್ವಿನಿಗೆ ಚುಮ್ಮುಣ್ಣಿ ನದಿ ಎಂಬ ಹೆಸರಿತ್ತೆಂದೂ ಶೂದ್ರಾತಿಶೂದ್ರರು ಹೇಳುತ್ತಾರೆ.  ಊರಿನಲ್ಲಿರುವ ಧರ್ಮ ಸಂರಕ್ಷಣಾ ಪರಿಷತ್ತು ಪುರಾಣ ಕತೆಯನ್ನಷ್ಟೇ ಕಪಿಲೇಶ್ವರ ಸ್ಥಳ ಪುರಾಣ ಕೃತಿಯ ಮೂಲಕ ಪ್ರಚುರಪಡಿಸುತ್ತಿರುವುದರಿಂದ ಐತಿಹ್ಯ ಕತೆ ಶೂದ್ರಾತಿಶೂದ್ರರ ಮಾನಸದಿಂದಲೂ ಮರೆಯಾಗುತ್ತಾ ಹೋಗುತ್ತಿದೆ.

ಕಪಿಲಳ್ಳಿಯ ರುದ್ರರಮಣೀಯ ಪ್ರಶಾಂತತೆ ಮತ್ತು ಏಕತಾನತೆ ಕದಡಬೇಕಾದರೆ ಊರಿಗೆ ಊರೇ ಸಂಭ್ರಮದಿಂದ ಕಾಯುವ ಕಪಿಲೇಶ್ವರನ ಏಳು ದಿನಗಳ ಜಾತ್ರಾ ಮಹೋತ್ಸವ ಆರಂಭವಾಗಬೇಕು.  ದೂರದ ಮಲೆಯಾಳ ದೇಶದ ತಂತ್ರಿಗಳ ಮಂತ್ರ-ತಂತ್ರ, ದೇವರನ್ನು ಹೊತ್ತು ಪ್ರದಕ್ಷಿಣೆ ಬರುವ ಅಡಿಗಳ ಅಂಗಕಾಭಿನಯ, ಮಲೆಯಾಳೀ ಮಾರಾರುಗಳ ಚೆಂಡೆಗಳ ಅಬ್ಬರ, ಗೋಪುರ ಬಾಗಿಲಲ್ಲಿ ನೂರಾಎಂಟು ಭೂತಗಳ ಕೋಲ, ಗುಡ್ಡದ ಬುಡದಲ್ಲಿ ಕುಕ್ಕುಟ ಪಂಚಾಂಗ ಶಾಸ್ತ್ರಾನುಸಾರ ಕುಕ್ಕುಟ ಕದನದ ಕರೆಯೋಲೆ ಅಚ್ಚುಹಾಕಿಸಿ ನಡೆಯುವ ಕೋಳಿ ಅಂಕ, ಯಾವ್ಯಾವುದೋ ಉರುಗಳಿಂದ ಬರುವ ಬಳೆ, ಪೀಪಿ, ಪುಗ್ಗೆ, ಪಾತ್ರೆ-ಪಗಡಿ, ಮಣಿ ಸಾಮಾನು, ಬಟ್ಟೆಬರೆ, ಗೊಂಬೆ ಮಾರುವವರೊಂದಿಗೆ ಸ್ಥಳೀಯ ಚಾ-ಕಾಫಿ, ಸೋಜಿ, ಕಲ್ತಪ್ಪ, ಗೆಣಸಿನಂಗಡಿಗಳು ಸ್ಪರ್ಧಿಸಿ, ಮರದ ತೊಟ್ಟಿಲುಗಳು ಕಿರ್‍ರೋಂ ಎಂದು ಹೊಸ ಲೋಕವನ್ನು ನಿರ್ಮಿಸಿ ಬಿಡುತ್ತವೆ.  ಆಗೆಲ್ಲಾ ಕಪಿಲಳ್ಳಿಯ ಶೂದ್ರ, ಅತಿಶೂದ್ರ, ವಿಪ್ರ, ಅತಿವಿಪ್ರರೆಂಬ ಚಾತುರ್ವರ್ಣದೊಡನೆ ಮ್ಲೇಂಚ್ಫರ ಮಿಶ್ರಣವಾಗಿಬಿಡುತ್ತದೆ.

ಏಳು ದಿನಗಳ ಜಾತ್ರೆ, ಕೋಲ, ಕುಕ್ಕುಟ ಕದನ ಮುಗಿಯುತ್ತಿದ್ದಂತೆ ಆಕಾಶವೆಲ್ಲಾ ಥಳಥಳಿಸಿ, ಗುಡುಗುಗಳು ಆರ್ಭಟಿಸಿ ಸಿಡಿಲು ಅಪ್ಪಳಿಸುವುದರೊಂದಿಗೆ ಧೋ ಎಂದು ಮಳೆ ಸುರಿದು, ಹಳೆಯದೆಲ್ಲವೂ ಕೊಚ್ಚಿಕೊಂಡು ಹೋಗಿ ತಪಸ್ವಿನಿ ಸೊಕ್ಕಿ ಹರಿಯತೊಡಗುತ್ತಾಳೆ.  ಮಿಂಚು ಬಡಿದು, ಸಿಡಿಲಪ್ಪಳಿಸಿ ಸಾವು ಸಂಭವಿಸದಿದ್ದರೆ ಊರವರ ಭಕ್ತಿಯಿಂದ ಕಪಿಲೇಶ್ವರ ಸಂತುಷ್ಟನಾಗಿದ್ದಾನೆಂದೂ, ಯಾರಾದರೂ ಸತ್ತುಹೋದರೆ ಎಲ್ಲೋ ಮಡಿಕೆಟ್ಟು ಹೋಗಿ ಅಶುದ್ಧವಾಗಿ ಕಪಿಲೇಶ್ವರನಿಗೆ ಸಿಟ್ಟು ಬಂದಿದೆಯೆಂದೂ ಜನರು ಆಡಿಕೊಳ್ಳುವುದುಂಟು.

ಕಪಿಲಳ್ಳಿಯಿಂದ ಹೊರಗಿನ ವಿಶ್ವಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಪಶ್ಚಿಮಾಭಿಮುಖ ಮಣ್ಣ ರಸ್ತೆಯಲ್ಲಿ ಮಳೆಗಾಲದಲ್ಲಿ ಮನುಷ್ಯರು ಸಂಚರಿಸಲು ಅಸಾಧ್ಯವಾಗಿಬಿಡುತ್ತದೆ.  ಬೇಸಿಗೆಯಲ್ಲಿ `ಓಂ ಕಪಿಲೇಶ್ವರಾಯ ನಮಃ ಕಪಿಲಳ್ಳಿ' ಎಂಬ ಹಣೆಬರಹ ಹೊತ್ತು ಕಪಿಲಳ್ಳಿ ಧನಿಗಳ ಜೀಪು ಅದರಲ್ಲಿ ಓಡಾಡುತ್ತದೆ.  ಅದು ಬಿಟ್ಟರೆ ಊರಿಗೆ ಬರುವ ವಾಹನವೆಂದರೆ ಘಟ್ಟದಿಂದ ಬೆಲ್ಲ, ಚಾ ಹುಡಿ, ಕಾಫಿ ಹುಡಿ, ಹುಳಿ, ಕೊತ್ತಂಬರಿ, ಉದ್ದು, ಕಡಲೆ, ಸಾಸಿವೆ, ಜೀರಿಗೆ ಇತ್ಯಾದಿ ಇತ್ಯಾದಿ ಸಾಮಾನುಗಳನ್ನು ತುಂಬಿಕೊಂಡು ಬರುವ ಎತ್ತಿನ ಗಾಡಿಗಳು.  ಹಾಗೆ ಬಂದ ಸಾಮಾನುಗಳು ಕಪಿಲಳ್ಳಿಯ ಅಡಿಕೆ, ತೆಂಗು, ಭತ್ತ, ಗೆಣಸು, ಬಾಳೆಕಾಯಿ, ಸೀಗೆಕಾಯಿ, ಕರಿಮೆಣಸು, ಗೇರುಬೀಜಗಳಿಗೆ ಸಾಟಿ ವಿನಿಮಯವಾಗಿ ಬಿಡುತ್ತಿದ್ದವು.  ಇರುವೊಂದು ಸರಕಾರೀ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು ಸರಕಾರೀ ಕಾಗದ ಪತ್ರಗಳ ವಿಶ್ಲೇಷಣೆ ಮಾಡಿ ಊರಿನ ಜನರಿಗೆ ಸಹಕರಿಸುತ್ತಾರಾದರೂ ತಳ್ಳಿ ಅರ್ಜಿ ಬರೆಯಲು ಅವರು ಒಪ್ಪುವುದಿಲ್ಲವೆಂಬ ಗಂಭೀರ ಆಪಾದನೆಯನ್ನೂ ಹೊತ್ತಿದ್ದಾರೆ.

ಕಪಿಲಳ್ಳಿ ಧನಿಗಳಿಗೆ ಹತ್ತೆಕರೆ ಅಡಿಕೆ ತೋಟ, ಇಪ್ಪತ್ತು ಮುಡಿ ಗದ್ದೆ, ಹದಿನೈದೆಕರೆ ಕಾನಬಾಣೆ, ಐದೆಕರೆ ಪೊರಂಬೋಕು ಜಾಗ, ಅದರ ಮೇಲೆ ಕಪಿಲಳ್ಳಿಯ ಏಕೈಕ ವಾಹನದ ಚಕ್ರವರ್ತಿ ಎಂಬ ಸ್ತುತಿ, ಸೊಂಟದಲ್ಲಿ ಸದಾ ನೇತಾಡುವ ಕಪ್ಪು ಮಿರಿಮಿರಿ ಕಂತ್ರಿ ಪಿಸ್ತೂಲೆಂಬ ಭಯಾನಕ ಆಯುಧದಿಂದಾಗಿ ಕಪಿಲಳ್ಳಿಯಲ್ಲಿ ಅವರೆದುರು ನಿಲ್ಲುವವರೇ ಇರಲಿಲ್ಲ.  ಕಪಿಲೇಶ್ವರನ ದೇವಾಲಯದ ಆನುವಂಶಿಕ ಮೊಕ್ತೇಸರನೇ ಕಪಿಲಳ್ಳಿ ಧನಿಗಳ ಮಾತಿಗೆ ಕೋಲೆ ಬಸವನಂತೆ ತಲೆಯಾಡಿಸಿ ಬಿಡುತ್ತಾನೆಂದರೆ ಇನ್ನುಳಿದ ಹುಲುಮಾನವರ ಪಾಡೇನು?  ಮೂಲೆಮನೆ ಪರಮೇಶ್ವರಯ್ಯ ಎಂಬ ಅವರ ಪರಮ ಪಾವನ ನಿಜನಾಮಧೇಯವು ಜನಮಾನಸದಲ್ಲಿ ನೆಲೆಗೊಳ್ಳದೆ ಹೋದರೂ, ಕಪಿಲಳ್ಳಿ ಧನಿ ಎಂಬ ಪರಮೋಚ್ಫ ಬಿರುದು ಅವರನ್ನು ಆತ್ಮ ಸಂತೃಪ್ತಿಯಿಂದ ಬೀಗುವಂಥೆ ಮಾಡಿತ್ತು.  ಮಳೆಗಾಲದಲ್ಲಿ ತಪಸ್ವಿನಿ ಸೊಕ್ಕಿ ಹರಿಯುವಾಗ ಒಮ್ಮೊಮ್ಮೆ ತೇಲಿಹೋಗುವ ಹೆಣಗಳು ಕಪಿಲಳ್ಳಿಯ ಧನಿಗಳ ಬಹುಮುಖ ಸಾಧನೆಗಳ ಒಂದಂಗವೆಂದು ಜನರು ಒಮ್ಮೊಮ್ಮೆ ಮಾತಾಡುವುದುಂಟು.

ಮಳೆಗಾಲದ ಆರಂಭದ ದಿನಗಳಲ್ಲೊಂದರಂದು ಕಪಿಲಳ್ಳಿ ಧನಿಗಳು ಎಳೆಹೆಣ್ಣು ದೊಂಬಿಯ ಮನೆಯ ಎದುರು ಬಾಗಿಲಿನ ಚಿಲಕ ತೆಗೆದು ಸಂತೃಪ್ತವದನರಾಗಿ ಹೊರಬರುತ್ತಿರುವಂತೆ ದೇಸುಲುನ ಮಗ ಪೀಂಟೆಲು ಗುರುವಪ್ಪನು ಆ ದಾರಿಯಲ್ಲಿ ಅಡ್ಡ ಹಾದು ಬಿಟ್ಟು.  ಕಪಿಲಳ್ಳಿ ಧನಿಗಳನ್ನು ಕಂಡ ಮೇಲೆ ಮುಜುರೆ ಸಲ್ಲಿಸದೆ ಹೋಗುವುದು ತಪ್ಪಾಗುತ್ತದೆಂದು ನಡುಗುತ್ತಾ ದಂತ ಪಂಕ್ತಿಗಳನ್ನು ಪ್ರದರ್ಶಿಸಿ ಅಳು ನಗುಗಳ ಜಂಟಿ ವರಸೆಯಲ್ಲಿ, "ಅಡ್ಡ ಬಿದ್ದೆ ಉಳ್ಳಯಾ" ಎಂದ.  ಈ ಅಪರ ಹೊತ್ತಲ್ಲಿ ಎಳೆಹೆಣ್ಣು ದೊಂಬಿಯ ಮನೆಯ ಕಡೆ ಬಂದದ್ದೇ ಇವ ಪತ್ತೇದಾರಿಕೆ ಮಾಡಿ ತನ್ನನ್ನು ಹಿಡಿಯುವುದಕ್ಕೇ ಇರಬೇಕೆಂದು ಖಚಿತವಾಗಿ ನಖಶಿಖಾಂತ ಉರಿ ಎದ್ದ ಕಪಿಲಳ್ಳಿ ಧನಿಗಳು ಅಲ್ಲೇ ಬಿದ್ದಿದ್ದ ತೆಂಗಿನ ಕೊತ್ತಳಿಂಗೆ ಎತ್ತಿ ಬೀಸಿಬಿಟ್ಟರು.  ಎಡ ಕಿವಿಯ ಹತ್ತಿರ ಬಿದ್ದ ಬಲವಾದ ಪೆಟ್ಟಿಗೆ ತತ್ತರಿಸಿದ ಪೀಂಟೆಲು ಗುರುವುವಪ್ಪನ "ಸತ್ತೆ ಉಳ್ಳಯಾ" ಎಂಬ ಮರಣಾಕ್ರಂದನ ಕೇಳಿ ಕಂಗಾಲಾಗಿ ಮೆನಯೊಳಗಿನಿಂದ ಹೊರಬಂದ ದೊಂಬಿಯ ಕಣ್ಣೆದುರೇ ಪೀಂಟೆಲು ಗುರುವಪ್ಪನು ದಢಾರೆಂದು ಕೆಳಗೆ ಬಿದ್ದು ಸ್ವಲ್ಪ ಹೊತ್ತು ಕೈಕಾಲು ಬಡಿದು ತಣ್ಣಗಾಗಿ ಬಿಟ್ಟನು.

ಅನುದ್ದೇಶಿತವಾಗಿ ನಡೆದು ಹೋದ ಘಟನೆಯಿಂದ ಕಪಿಲಳ್ಳಿ ಧನಿಗಳು ಗಾಬರಿಯಾಗಿ ಎಳೆಹೆಣ್ಣು ದೊಂಬಿಯನ್ನು ನೋಡಿದರೆ ಅವಳು ಮುಖದ ರಕ್ತವೆಲ್ಲಾ ಆರಿಹೋಗಿ ಬಿಳಿಚಿ ನಿಂತಿದ್ದಳು.  ಆಷಾಢಪೂರ್ವದ ಈ ಜಡಿಮಳೆಯಲ್ಲಿ ಮನೆಯಿಂದ ಯಾರೂ ಹೊರಬೀಳಲಾಗದ ಈ ಮುಸ್ಸಂಜೆಯಲ್ಲಿ ಆ ಆಯುಸ್ಸು ತೀರಿದ ಶನಿ ಸಾಯಲೆಂದೇ ಇಲ್ಲಿಗೆ ಬರಬೇಕೆ?  ಎಳೆಹೆಣ್ಣು ದೊಂಬಿ ಹೆಣಗಳನ್ನು ಕಂಡಿದ್ದರೂ ತನ್ನ ಕಣ್ಣೆದುರೇ ಹಸಿ ಹಸೀ ಜೀವವೊಂದು ಹೀಗೆ ಒದ್ದಾಡಿ ಶವವಾಗುವುದನ್ನು ಈವರೆಗೆ ಕಂಡವಳಲ್ಲ.  ಅವಳ ಮುಖ ಭೀಭತ್ಸವಾಗಿ ಕಣ್ಣಲ್ಲಿ ಭಯ ಮೂಡಿ ಇನ್ನೇನು ಭೀತಿಯ ವಿಕಾರ ಚೀತ್ಕಾರ ಹೊರಬೀಳಬೇಕು ಅನ್ನುವಷ್ಟರಲ್ಲಿ ಕಪಿಲಳ್ಳಿಯ ಧನಿಗಳು ತಮ್ಮ ಹೆಗಲ ಉತ್ತರೀಯದಿಂದ ಅವಳ ಬಾಯನ್ನು ಬಲವಾಗಿ ಮುಚ್ಚಿ, "ಸುಮ್ಮನಿರು.  ಈಗ ಬಿದ್ದಿರೋದು ಒಂದೇ ಹೆಣ.  ಶಬ್ದ ಹೊರಟರೆ ಸಾಕ್ಷಿಯ ಹೆಣವೂ ಬೀಳುತ್ತದೆ" ಎಂದು ಗುಡುಗಿದರು.

ಬಡಪಾಯಿ ಎಳೆಹೆಣ್ಣು ದೊಂಬಿಯ ಚೀತ್ಕಾರ ಗಂಟಲಲ್ಲೇ ಉಳಿದು ಕಪಿಲಳ್ಳಿ ಧನಿಗಳಿಗೆ ಕೈ ಮುಗಿದಾಗ ಅವರು ತಮ್ಮ ಕೈ ಹಿಂದಕ್ಕೆ ತೆಗೆದುಕೊಂಡರು.  ಎಳೆಹೆಣ್ಣು ದೊಂಬಿ ಪೀಂಟೆಲು ಗುರುವಪ್ಪನ ನಿಶ್ಶಬ್ದ ದೇಹ, ಅತಿ ವಿಕಾರ ಮುಖ ನೋಡಿ ಕುಕ್ಕರು ಕುಳಿತು, ಗದಗುಟ್ಟುವ ತೊಡೆಗಳಲ್ಲಿ ಮುಖ ಮುಚ್ಚಿಕೊಂಡು ನಿಶ್ಶಬ್ದವಾಗಿ ಅತ್ತು ಧೈರ್ಯ ತಂದುಕೊಳ್ಳಲು ಯತ್ನಿಸಿದಳು.  ಹಿಂದೊಮ್ಮೆ ಸರಿಸುಮಾರು ಇದೇ ಹೊತ್ತಲ್ಲಿ ತನ್ನ ಮನೆಯಿಂದ ಕಳ್ಳಹೆಜ್ಜೆಯಲ್ಲಿ ಹೊರಬಿದ್ದಿದ್ದ ಕಪಿಲಳ್ಳಿ ಧನಿಗಳನ್ನು ಇಲ್ಲೇ, ಹೀಗೇ ನೋಡಿದ್ದ ಗುರುವಪ್ಪನು ಹಲ್ಲುಕಿಸಿದು, "ಎಲ್ಲಿಗೆ ಹೋಗಿದ್ರಿ ಉಳ್ಳಯಾ?" ಎಂಬ ಪರಮ ಅಧಿಕ ಪ್ರಸಂಗದ ಪ್ರಶ್ನೆ ಕೇಳಿದ್ದಕ್ಕೆ ತನ್ನನ್ನಿವನು ಅಣಕಿಸುತ್ತಿದ್ದಾನೆಂದು ಕೋಪದಿಂದ ಕಪಿಲಳ್ಳಿ ಧನಿಗಳು ಬಲವಾಗಿ ಗುರುವಪ್ಪನ ಮುಸುಡಿಗೆ ಇಟ್ಟದ್ದು, ಆ ಏಟಿನ ರಭಸಕ್ಕೆ ಅವನ ಮುಸುಡು ಶಾಶ್ವತವಾಗಿ ಈಶಾನ್ಯ ಭಾಗಕ್ಕೆ ತಿರುಗಿ ಹೋದದ್ದು ಅಲ್ಲಿಯವರೆಗೆ ಮೇಪತ ಗುರುವಪ್ಪನಾಗಿದ್ದವ ಪೀಂಟೆಲು ಗುರುವಪ್ಪಾನಾಗಿ ಕಪಿಲಳ್ಳಿಯ ಇತಿಹಾಸದಲ್ಲಿ ದಾಖಲಾದದ್ದು ಅವಳಿಗೆ ನೆನಪಾಯಿತು.  ಆ ವರೆಗೆ ಗುಟ್ಟಾಗಿಯೇ ಇದ್ದ ತನ್ನ ಮತ್ತು ಕಪಿಲಳ್ಳಿ ಧನಿಗಳ ಸಂಬಂಧ ಊರಿಡೀ ಪ್ರಚಾರವಾಗಿ, `ಧನಿಗಳು ದೊಂಬಿಗೆ ಹೋದರೆ ಗುರುವಪ್ಪನ ಮುಸುಡು ಈಶಾನ್ಯಕ್ಕೆ ತಿರುಗುತ್ತದೆ' ಎಂಬುದು ಒಂದು ಜಾನಪದೀಯ ಒಗಟಾಗಿ ಕಪಿಲಳ್ಳಿಯ ಮೌಖಿಕ ಪರಂಪರೆಗೆ ಹೊಸ ಸೇರ್ಪಡೆಯಾಗಿ ಹೋಗಿತ್ತು.

ಮದುವೆಯಾಗಿ ಕಪಿಲಳ್ಳಿಗೆ ಬಂದ ಎರಡನೇ ವರ್ಷ ತನ್ನ ಕೈ ಹಿಡಿದವ ಹೊಟ್ಟೆಗೊಂದು ಪ್ರೇಮಫಲವನ್ನೂ ನೀಡದೆ ಮಳೆಗಾಲದಲ್ಲಿ ತಪಸ್ವಿನಿಯಲ್ಲಿ ತೇಲಿಹೋಗಿದ್ದ.  ಯಾವುದೋ ಮುಳ್ಳುಕಂಟಿಗೆ ಸಿಕ್ಕಿಕೊಂಡಿದ್ದ ಮೀನುಗಳು ಕಚ್ಚಿ ಕಚ್ಚಿ ತಿಂದುಳಿದ ಅವನ ಅವಶೇಷಗಳನ್ನು ಅಲ್ಲೇ ಒಟ್ಟು ಮಾಡಿ ಬಿಂಕಿಕೊಟ್ಟು ಬಂದ ಎಳೆಹೆಣ್ಣು ದೊಂಬಿ ಗಂಡನ ಪಾರ್ಶ್ವವಾಯು ಪೀಡಿತ ಅಪ್ಪನನ್ನು ಬಿಟ್ಟು ತವರಿಗೆ ಹೋಗಲು ಮನಸ್ಸೊಪ್ಪದೆ ಕಪಿಲಳ್ಳಿಯಲ್ಲೇ ಉಳಿದಿದ್ದಳು.  ಗಂಡ ಸತ್ತು ಒಂದು ತಿಂಗಳಾಗುವ ಮೊದಲೇ ಕಪಿಲಳ್ಳಿ ಧನಿಗಳು ಮನಗೆ ಬಂದು, "ಹೀಗಾಯಿತೇ" ಎಂದು ಲೊಚಗುಟ್ಟಿ, ಒಂದಷ್ಟು ದುಡ್ಡನ್ನು ಮಲಗಿದಲ್ಲೇ ಇರುವ ಗಂಡನ ಅಪ್ಪನಿಗೆ ನೀಡಿ, "ಏನಾದರೂ ಬೇಕಿದ್ದರೆ ಕೇಳಲು ನಾಮಸು ಮಾಡಬೇಡ.  ಗಂಡ ತೀರಿಹೋಗಿದ್ದಾನೆಂದು ಹೆದರಿಕೊಳ್ಳಬೇಡ.  ನಾನಿಲ್ವಾ?" ಎಂದು ಧೈರ್ಯ ನೀಡಿ ಹೋಗಿದ್ದರು.

ಮತ್ತೆರಡೇ ದಿನ ಕಳೆದು ಇಳಿಹೊತ್ತಲ್ಲಿ, ಧೋ ಎಂದು ಸುರಿಯುವ ಮಳೆಯಲ್ಲಿ ಮನೆಗೆ ಬಂದು ಚಾಪೆಯಲ್ಲೇ ಬಿದ್ದಿದ್ದ ಮಾವನಿಗೆ ಒಂದು ಬಾಟಲು ಭರ್ತಿ ನೀಡಿದ್ದಕ್ಕೆ, ಮುದುಕನ ಮುಖ ಬ್ರಹ್ಮಾನಂದದಿಂದ ಬೆಳಗಿ, ಬಾಟಲ್ಲನು ಖಾಲಿ ಮಾಡಿ ಸ್ವಲ್ಪ ಹೊತ್ತಲ್ಲಿ ಇಹವನ್ನೇ ಮರೆತಂತೆ ಗೊರಕೆ ಹೊಡೆಯತೊಡಗಿದಾಗ ಕಪಿಲಳ್ಳಿ ಧನಿಗಳು ಅಗಳಿ ಹಾಕಿ ತನ್ನೆಡೆಗೆ ಬಂದಿದ್ದರು.  ತಾನು ಕೊಸರಿಕೊಂಡಾಗ ಪಿಸ್ತೂಲು ತೋರಿಸಿ, "ಒಪ್ಪಿದರೆ ಸೈ, ಇಲ್ಲದಿದ್ದರೆ ನಿನ್ನ ಗಂಡ ಹೋದಲ್ಲಿಗೆ ಕಳುಹಿಸಿ ಬಿಡುತ್ತೇನೆ" ಎಂದದ್ದೇ ಕೈಕಾಲು ಉಡುಗಿ ಕುಸಿದವಳನ್ನು ಹಾಗೇ ಒಳ ಕೋಣಗೆ ಎತ್ತಿಕೊಂಡೊಯ್ದು ಹಸಿ ಹಸಿ ಸುಖವುಂಡಿದ್ದರು.  ಇದು ಮತ್ತೆ ಮತ್ತೆ ಆವರ್ತಿಸಿದಾಗ ವಿರೋದಿಸುವುದನ್ನೇ ಮರೆತ ಎಳೆಹೆಣ್ಣು ದೊಂಬಿ ತೀರಾ ಯಾಂತ್ರಿಕವಾಗಿ ವಸ್ತುಸ್ಥಿತಿಗೆ ಒಗ್ಗಿಕೊಂಡಿದ್ದವಳ ಬದುಕಿನಲ್ಲಿ ಈಗ ಇನ್ನೊಂದು ತಿರುವು ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿ ನಡುಗಿದಳು.  ಮಳೆಗಾಲದ ಆರಂಭದಲ್ಲಿ ತಪಸ್ವಿನಿಗೆ ಬಲಿಯೊಂದು ದೊರೆತಿದ್ದು, ಒಂದಕ್ಕೇ ಮುಗಿಯುತ್ತದಾ ಅಲ್ಲಾ ಏಕೈಕ ಸಾಕ್ಷಿಯಾದ ತನ್ನವರೆಗೂ ಮುಂದುವರಿಯುತ್ತದಾ ಎಂಬ ಆತಂಕದಿಂದ ಅವಳ ನಡುಕ ಹೆಚ್ಚಾಯಿತು.

"ಏನು ಯಕ್ಷಗಾನ ನೋಡಿಕೊಂಡು ನಿಂತಿದ್ದಿ?  ಬೇಗ ಹೋಗಿ ಒಂದು ಹುರಿಹಗ್ಗ ತೆಗೆದುಕೊಂಡು ಬಾ.  ತಪಸ್ವಿನಿಯಲ್ಲಿ ನೀರು ಉಕ್ಕೇರುತ್ತಿರುವ ಸದ್ದು ಕೇಳಿಸುತ್ತಿದೆಯಲ್ಲಾ?  ಈ ಕತ್ತಲಲ್ಲೇ ಕೆಲಸ ಮುಗಿಸಿದರೆ ನಾಳೆ ಗುರುವಪ್ಪನಿಗಾಗಿ ಅವನ ಅಪ್ಪ, ಅಮ್ಮ ಹುಡುಕಾಟ ಆರಂಭಿಸಬೇಕಾಗುತ್ತದೆ.  ಇಂಥದ್ದೆಲ್ಲಾ ಕಪಿಲಳ್ಳಿಯಲ್ಲಿ ಮಳೆಗಾಲದಲ್ಲೇ ಆಗುತ್ತಿರುವುದು ತಪಸ್ವಿನಿಯ ದಯೆಯೆಂದೇ ಹೇಳಬೇಕು.  ಕಳೆದ ವರ್ಷ ಡಿಕ್ಲರೇಷನ್ನಿನಲ್ಲಿ ನನಗೆ ಎದುರುಬಿದ್ದು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಹೇಳಿದ ನಿನ್ನ ಗಂಡ;  ಈಗ ನಾವಿಬ್ಬರೂ ಸಂಜೆ ಹೊತ್ತು ನಡೆಸುವುದೇನೆಂದು ಕಂಡುಹಿಡಿದು ಊರಿಡೀ ಹೇಳಿಕೊಂಡು ಬಂದ ಈ ನರಪೇತಲ ಪತ್ತೇದಾರ!  ಹೇಗೂ ಮುಗಿಯಿತಲ್ಲಾ ಇವನಿಗೆ ತಪಸ್ವಿನಿಯ ನೀರಿನ ಋಣ?  ಅರೆ, ಅದೇನು ಪುರಾಣ ಕೇಳುತ್ತಾ ನೀನು ನಿಂತಿರೋದು?  ಓಡು, ಬೇಗ ಓಡು."

ಎಳೆಹೆಣ್ಣು ದೊಂಬಿ ಮನೆಯೊಳಗೆ ಓಡಿ ತಡಕಾಡಿದಳು.  ಅಲ್ಲೇ ನೂರು ಗಜ ದೂರದ ತಪಸ್ವಿನಿಯಲ್ಲೇ ಮಿಂದು ಮನೆಗೆ ದಿನಾ ಅಲ್ಲಿಂದಲೇ ನೀರು ತರುವವಳ ಮನೆಯಲ್ಲಿ ಬಾವಿಯ ಹಗ್ಗ ಎಲ್ಲಿಂದ ಬರಬೇಕು?  ಕಾವೇರಿಯನ್ನು ಕಟ್ಟಿಹಾಕುವ ಪುಟ್ಟ ಹಟ್ಟಿಗೆ ಓಡಿದಳು.  ಕಾವೇರಿ ಆರಾಮವಾಗಿ ಮೆಲುಕು ಹಾಕುತ್ತಾ ಮಲಗಿತ್ತು.  ಇವಳಿಗಿರುವ ನೆಮ್ಮದಿಯೂ ತನಗಿಲ್ಲದಾಯಿತೇ ದೇವರೇ ಎಂದುಕೊಂಡು ಕಾವೇರಿಯ ಹತ್ತಿರಕ್ಕೆ ಬಂದು ಅದರ ಎರಡು ಕೋಡುಗಳ ನಡುವೆ ತುರುಸತೊಡಗಿದಾಗ ಅದು ತಲೆಯನ್ನು ಮೇಲೆತ್ತಿತು.  ಅದರ ಕುತ್ತಿಗೆಯ ಕೆಳಗೆ ಮಾಲೀಸು ಮಾಡುತ್ತಾ ಮಾಡುತ್ತಾ ಅದಕ್ಕೆ ಗೊತ್ತಾಗದಂತೆ ಮೆಲ್ಲ ಹಗ್ಗ ಬಿಚ್ಚಿ, ಗುರುವಪ್ಪನೊಟ್ಟಿಗೆ ಕಪಿಲಳ್ಳಿ ಧನಿಗಳು ತನ್ನನ್ನೂ ಹೆಣವಾಗಿಸಿ ತಪಸ್ವಿನಿಯಲ್ಲಿ ತೇಲಬಿಟ್ಟರೂ, ಕಾವೇರಿ ಹೊರ ಹೋಗಿ ಹುಲ್ಲು ಮೇದು ಬದುಕಿಕೊಳ್ಳುತ್ತಾಳೆ ಎಂದುಕೊಳ್ಳುತ್ತಾ ಕಣ್ಣೀರು ತುಂಬಿ ಗುರುವಪ್ಪನ ಹೆಣವಿದ್ದಲ್ಲಿಗೆ ಬಂದಳು.

"ಈ ಕುಂಬು ಲಟ್ಟೂಸು ಹಗ್ಗ ನಿನ್ನ ಬೊಜ್ಜಕ್ಕಾ ತಂದದ್ದು?  ಬೇರೆ ಹುಡುಕಿ ತಾ" ಎಂದು ಕಪಿಲಳ್ಳಿಯ ಧನಿಗಳು ಗರ್ಜಿಸಿದಾಗ ಎಳೆಹೆಣ್ಣು ದೊಂಬಿ ಅಡ್ಡಕ್ಕೆ ತಲೆಯಾಡಿಸಿದಳು.  "ನಿನ್ನ ಕರ್ಮ.  ಕಟ್ಟು ಅವನ ಕುತ್ತಿಗೆಗೆ".  ನಡುಗುವ ಕೈಗಳಿಂದ ಎಳೆಹೆಣ್ಣು ದೊಂಬಿ ಪೀಂಟೆಲು ಗುರುವಪ್ಪನ ಕುತ್ತಿಗೆಗೆ ಹಗ್ಗ ಸಿಕ್ಕಿಸಿದಳು.  "ಹ್ಞುಂ, ಎಳಕೊಂಡು ನಡಿ" ಎಂದು ಕಪಿಲಳ್ಳಿಯ ಧನಿಗಳು ಆಜ್ಞಾಪಿಸಿದಾಗ, "ಬಾಗಿಲು ಎಳಕೊಂಡು ಬಂದುಬಿಡುತ್ತೇನೆ" ಎಂದು ಎಳೆಹೆಣ್ಣು ದೊಂಬಿ ಮನೆಯೊಳಗೆ ಹೋಗಿ ಬಾಟಲಿ ಪ್ರಭಾವದಿಂದ ಮೈಮೇಲಿನ ಸ್ವಯ ಕಳಕೊಂಡು ಮಲಗಿದ್ದ ಮುದುಕನ ಕಾಲು ಹಿಡಿದು ನಮಸ್ಕರಿಸಿ "ಕಾವೇರಿ ದನಕ್ಕಿರುವ ಪುಣ್ಯವೂ ಇದಕ್ಕಿಲ್ಲವಲ್ಲಾ" ಎಂದುಕೊಳ್ಳುತ್ತಾ ಮನೆಯನ್ನು ಕೊನೆಯ ಬಾರಿಗೊಮ್ಮೆ ಎಂಬಂತೆ ನೋಡಿ ಬಾಗಿಲೆಳೆದುಕೊಂಡು ಹೊರಬಂದಳು.

"ಆಯತಾ ನಿನ್ನದು?  ಕುತ್ತಿಗೆಗೆ ಹಗ್ಗ ಹಾಕಿದವಳು ನೀನೇ.  ಅದನ್ನು ಎಳಕೊಂಡು ನದಿಯತ್ತ ನಡೆ."  ಕಪಿಲಳ್ಳಿಯ ಧನಿಗಳ ಮಾತಿನ ಅರ್ಥವಾಗಿ ಎಳೆಹೆಣ್ಣು ದೊಂಬಿ ಮತ್ತಷ್ಟು ನಡುಗಿದಳು.  ಹೆಣವನ್ನು ಎಳಕೊಂಡು ಹೋಗುವಾಗ ಯಾರಾದರೂ ಕಂಡರೆ ತಾನೇ ಕೊಲೆಗಾರ್ತಿಯಾಗಿ ಬಿಡುತ್ತೇನೆ!  ಅವಳ ಮನಸ್ಸಿನ ಆಂದೋಲನದ ಅರಿವಾಗಿ ಧನಿಗಳು ಹೇಳಿದರು.  "ಅರ್ಥ ಆಗುವುದಿಲ್ವಾ ನಿನಗೆ?  ಅವನನ್ನು ಈಗ ನಾನು ಮುಟ್ಟಿದರೆ ಸ್ನಾನ ಮಾಡಿ ಜನಿವಾರ ಬದಲಾಯಿಸದೆ ಮನೆಗೆ ನುಗ್ಗುವಂತಿಲ್ಲ.  ಮನೆಯಲ್ಲಿ ತಂದಿಟ್ಟ ಜನಿವಾರ ಮುಗಿದು ಹೋಗಿದೆ.  ಈ ಜಡಿಮಳೆಗೆ ಬೇರೆಲ್ಲೀಂತ ಹುಡುಕಿ ತರುವುದು?  ನೀನೀಗ ಎಳಕೊಂಡು ಹೋಗದಿದ್ದರೆ ಈ ಹೆಣ ಹೀಗೆ ನಿನ್ನ ದನದ ಹಗ್ಗ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಇಲ್ಲೇ ಬಿದ್ದಿರುತ್ತದೆ.  ನಾಳೆ ಪೋಲಿಸರು ಬಂದು ಈ ಎಳೆಹೆಣ್ಣು ಎಳಕೊಂಡು ಹೋಗಿ ಲಾಕಪ್ಪಿನಲ್ಲಿ ಕೆಡವಿಕೊಂಡರೆ ಮುಂದೆ ಏನೇನಾಗಬಹುದು ಯೋಚಿಸು.  ಆಮೇಲೆ ಕಪಿಲೇಶ್ವರನೂ ನಿನ್ನನ್ನು ಬಚಾವು ಮಾಡಲಾರ."

ನಡುಗುವ ಕೈಗಳಿಂದ ಎಳೆಹೆಣ್ಣು ದೊಂಬಿ ಪೀಂಟೆಲು ಗುರುವಪ್ಪನ ಹೆಣವನ್ನು ಎಳೆದುಕೊಂಡು ನದಿಯತ್ತ ಸಾಗಿದಳು.  ಪೀಂಟೆಲು ಗುರುವಪ್ಪನ ಕೊಲೆಯಿಂದ ಹುಟ್ಟುಕೊಳ್ಳಲಿರುವ ಅನಾಹುತಗಳ ಅವ್ಯಕ್ತ ಭೀತಿ, ಮಳೆಯಿಂದ ತೊಯ್ದು ಹೋದ ಗದಗುಟ್ಟುವ ಶರೀರ, ಇದೀಗ ಸೊಕ್ಕಿ ಹರಿಯುವ ತಪಸ್ವಿನಿಯ ಗರ್ಜನೆ ಸೇರಿ ಅವಳ ತ್ರಾಣವೆಲ್ಲಾ ಎಲ್ಲೋ ಸೋರಿ ಹೋದಂತಾಗಿ ತಪಸ್ವಿನಿಯತ್ತ ನೋಡಿ, "ನನ್ನನ್ನು ಯಾಕೆ ಹೆದರಿಸುತ್ತೀಯೆ?  ನಿನ್ನಂತೆ ನಾನೂ ಹೆಣ್ಣು.  ಕಳೆದ ವರ್ಷ ನನ್ನ ಗಂಡನನ್ನು ನುಂಗಿದ್ದು ಸಾಕಾಗದಿದ್ದರೆ ಬಾ, ನನ್ನನ್ನೂ ನುಂಗು.  ಆದರೆ ಪೀಂಟೆಲು ಗುರುವಪ್ಪನನ್ನು ಕೊಂದದ್ದು ನಾನಲ್ಲ.  ಕಪಿಲಳ್ಳಿ ಧನಿಗಳು.  ದೈರ್ಯವಿದ್ದರೆ ಅವರನ್ನು ಹೆದರಿಸು" ಎಂದು ತುಟಿಯಲ್ಲೇ ಮಣಮಣಿಸಿ ದಂಡೆ ಮೀರಿ ಹರಿಯುತ್ತಿರುವ ತಪಸ್ವಿನಿಯ ನೀರು ಕಾಲಿಗೆ ಸೋಕುತ್ತಲೇ ಉಸ್ಸಪ್ಪಾ ಎಂದು ಅಲ್ಲೇ ಪಚಕ್ಕನೆ ಕುಳಿತುಬಿಟ್ಟಳು.

ಕಪಿಲಳ್ಳಿ ಧನಿಗಳು ಪೀಂಟೆಲು ಗುರುವಪ್ಪನ ಸಾವಿಗೆ ಕಾರಣವಾದ ಕೊತ್ತಳಿಂಗೆಯಿಂದ ಅವನ ಹೆಣವನ್ನು ನೂಕುತ್ತಾ ನೂಕುತ್ತಾ ನೀರಿಗೆ ಉರುಳಿಸಿದರು.  ಮೊಣಕಾಲವರೆಗಿನ ನೀರಲ್ಲಿ ಮುಂದೊತ್ತಿದಾಗ ಸ್ವಲ್ಪ ಎತ್ತರದ ಬಂಡೆಯೊಂದು ಆಧಾರಕ್ಕೆ ಸಿಕ್ಕಿತು.  ಹೆಣವನ್ನು ನೂಕುತ್ತಾ ಮುಂದಕ್ಕೆ ಸರಿಸಿದರು.  ನೀರಿನ ಸೆಳೆತಕ್ಕೆ ಮುಂದೆ ಹೋದ ಹೆಣ ಅಲ್ಲೇ ಸುಳಿಯಲ್ಲಿ ಚಕ್ರಾಕಾರವಾಗಿ ಸುತ್ತತೊಡಗಿದ್ದನ್ನು ನೋಡಿ ಬಂಡೆಯಿಂದ ಕೆಳಗಿಳಿದು ಅದರ ಕುತ್ತಿಗೆಯಿಂದ ಹಗ್ಗವನ್ನು ಬಿಡಿಸಿ ಬಲವಾಗಿ ನೀರಿಗೆಸೆದರು.  ಆದರೂ ಹೆಣ ಅಲ್ಲೇ ಸುತ್ತುತ್ತಿರುವುದನ್ನು ಕಂಡು ನಾಳೆ ಖಂಡಿತವಾಗಿಯೂ ಈ ಪೀಂಟೆಲು ಗುರುವಪ್ಪ ತನ್ನ ಕುತ್ತಿಗೆಗೇ ತಂದುಹಾಕುತ್ತಾನೆಂದುಕೊಂಡು, "ದೊಂಬೀ, ಹಾಳಾದವನ ಹೆಣ ಸುಳಿಯಲ್ಲೇ ಸುತ್ತುತ್ತಿದೆ.  ಒಂದು ಉದ್ದದ ಬಡಿಗೆ ಕೊಟ್ಟರೆ ದೂರಕ್ಕೆ ನೂಕಿ ಬಿಡುತ್ತೇನೆ" ಎಂದು ಬೊಬ್ಬಿಟ್ಟರು.  ಇದು ಧನಿಗಳ ಹೊಸಪಟ್ಟು.  ಪೀಂಟೆಲು ಗುರುವಪ್ಪನ ಹೆಣ ನೂಕುವ ನೆಪದಿಂದ ತನ್ನನ್ನು ಸುಳಿಗೆ ನೂಕಿ ಬಿಡುವ ತಂತ್ರವೆಂದು ಅವಳಿಗೆ ಖಚಿತವಾಯಿತು.  ತಾನು ಬದುಕಿದ್ದು ಪೋಲಿಸರ ಕೈಗೆ ಸಿಕ್ಕಿ ಯಮಯಾತನೆ ಪಡುವುದಕ್ಕಿಂತ, ಬಚಾವಾದರೂ ಪ್ರತಿದಿನ ಕಪಿಲಳ್ಳಿ ಧನಿಗಳ ಕೆಳಗೆ ಕೊರಡಾಗಿ ಬಿದ್ದುಕೊಳ್ಳುವುದಕ್ಕಿಂತ ತಪಸ್ವಿನಿಯ ಮಡಿಲು ಸೇರುವುದೇ ಒಳ್ಳೆಯದೆಂದುಕೊಂಡು ಅಲ್ಲೇ ಬೇಲಿಯ ಬದಿಯಲ್ಲಿ ಬಿದ್ದಿದ್ದ ಉದ್ದದ ಬಡಿಗೆಯೊಂದನ್ನು ತಂದು, ಸ್ವತಂತ್ರಳಾಗಿರುವ ಕಾವೇರಿ ದನವನ್ನು, ಬದುಕಿಯೂ ಸತ್ತಂತಿರುವ, ತಾನೀಗ ತಪಸ್ವಿನಿಯಲ್ಲಿ ತೇಲಿಹೋದರೆ ಮಲಗಿದಲ್ಲಿಯೇ ಹೊಟ್ಟೆಗಿಲ್ಲದೆ ಸಾಯಲಿರುವ ಮುದುಕ ಮಾವನನ್ನು ನೆನೆಯುತ್ತಾ, ಬಂಡೆಯ ಮೇಲೇರಿ ಅದನ್ನು ಕಪಿಲಳ್ಳಿ ಧನಿಗಳಿಗೆ ಕೊಟ್ಟಳು.

ಕಪಿಲಳ್ಳಿ ಧನಿಗಳು ಬಂಡೆಯಿಂದ ನದಿಗಭಿಮುಖವಾಗಿ ಇಳಿದು ಸುಳಿಯಲ್ಲಿ ಚಕ್ರಾಕಾರವಾಗಿ ಸುತ್ತುತ್ತಿದ್ದ ಪೀಂಟೆಲು ಗುರುವಪ್ಪನ ಹೆಣವನ್ನು ಬಡಿಗೆಯಿಂದ ನೂಕುತ್ತಿರುವಂತೆ ಪ್ರವಾಹ ಒಮ್ಮೆಲೇ ಹೆಚ್ಚಾಗಿ ಆಯತಪ್ಪಿ ಬಿದ್ದುಬಿಟ್ಟರು.  ಕೈಕಾಲು ಬಡಿಯುತ್ತಾ ಚಕ್ರಾಕಾರವಾಗಿ ಸುತ್ತುತ್ತಿದ್ದ ಅವರು, "ದೊಂಬೀ, ದೊಂಬೀ, ನಿನ್ನ ಸೀರೆ ಬಿಚ್ಚು.  ಅದನ್ನು ಎಸೆದು ನನ್ನನ್ನು ಎಳಕೋ" ಎನ್ನುತ್ತಾ ಕಿರಿಚತೊಡಗಿದರು.  ಎಲ್ಲವನ್ನೂ ನೋಡುತ್ತಾ ಕಲ್ಲಾಗಿ ನಿಂತಿದ್ದ ಎಳೆಹೆಣ್ಣು ದೊಂಬಿಯನ್ನು ನೋಡಿ ಸಾವು ಕೂಗು ಹಾಕಿದರು.  "ದೊಂಬೀ, ಏನು ನೋಡುತ್ತಾ ನಿಂತಿದ್ದಿ? ನನ್ನನ್ನು ಬದುಕಿಸು.  ನಿನ್ನ ತಂಟೆಗೆ ಬರುವುದಿಲ್ಲ.  ನಿನ್ನ ಸೀರೆ ಎಸಿ, ಎಸಿ" ಎಂದು ಆ ಸ್ಥಿತಿಯಲ್ಲೂ ಬೊಬ್ಬಿಟ್ಟರು.  ಇದ್ದಕ್ಕಿದ್ದ ಹಾಗೆ ಭೋರ್ಗರೆತ ಹೆಚ್ಚಾಗಿ ಬಂದ ಪ್ರವಾಹದಲ್ಲಿ ಕೈಕಾಲು ಬಡಿಯುತ್ತಾ ಪೀಂಟೆಲು ಗುರುವಪ್ಪನ ಹೆಣದೊಂದಿಗೆ ತೇಲಿಹೋದರು.  ಅವರ ಬೊಬ್ಬೆ ಕೇಳದಾದಾಗ ಅವರು ಕಣ್ಮರೆಯಾದದ್ದು ಖಚಿತವಾಗಿ ಎಳೆಹೆಣ್ಣು ದೊಂಬಿ ದಡಕ್ಕೆ ಧಾವಿಸಿ, ತಪಸ್ವಿನಿಗೆ ಕೈ ಮುಗಿದು, ಕೆಂಪು ನೀರನ್ನು ಹೊಟ್ಟೆ ತುಂಬಾ ಕುಡಿದು, ತಲೆಗೂ ಚಿಮುಕಿಸಿ ಕಾಲೆಳೆದುಕೊಂಡು ಮನೆಯತ್ತ ನಡೆದಳು.

ಪೀಂಟೆಲು ಗುರುವಪ್ಪ ಮತ್ತು ಕಪಿಲಳ್ಳಿ ಧನಿಗಳು ಒಂದೇ ದಿನ ಕಾಣೆಯಾದ ರಹಸ್ಯ ಎಳೆಹೆಣ್ಣು ದೊಂಬಿ ಮತ್ತು ಜೀವನದಿ ತಪಸ್ವಿನಿಯನ್ನು ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ.  ಎಳೆಹೆಣ್ಣು ದೊಂಬಿ ಅದನ್ನು ಯಾಗಿರೂ ಹೇಳುವುದಿಲ್ಲ.  ಈ ಗುಟ್ಟನ್ನು ತಪಸ್ವಿನಿ ತನ್ನ ಗರ್ಭದಲ್ಲೇ ಇಟ್ಟುಕೊಳ್ಳುವುದರಿಂದ ಅದೆಂದೂ ಹೊರಗೆ ಬರುವುದಿಲ್ಲ.

ಕಪಿಲಳ್ಳಿಯ ಜನಮಾನಸದಿಂದ ಕಪಿಲಳ್ಳಿ ಧನಿಗಳು ಎಂದೆಂದಿಗೂ ಮಾಸಿ ಹೋಗುವುದಿಲ್ಲ.  ಕಪಿಲಳ್ಳಿ ಧನಿಗಳ ನೆನಪಾದಾಗಲೆಲ್ಲಾ ಲಹರಿ ಬಂದವನೊಬ್ಬ ಇದ್ದಕ್ಕಿದ್ದಂತೆ, "ಧನಿಗಳು ಎಲ್ಲಿಗೆ ಹೋಗಿದ್ದಾರೆ?" ಎಂದು ಕೇಳುತ್ತಾನೆ.  ಆಗ ಉಳಿದವರು ಸಾಮೂಹಿಕವಾಗಿ "ಧನಿಗಳು ದೊಂಬಿಗೆ ಹೋಗಿದ್ದಾರೆ" ಎಂದು ಉತ್ತರಿಸುತ್ತಾರೆ!
                                   *****
ಕೀಲಿಕರಣ: ಕಿಶೋರ್‍ ಚಂದ್ರ

ಬುದ್ಧಿ ಇಲ್ಲವೇ ನಿನಗೆ

-ಶಿಶುನಾಳ ಶರೀಫ್

ಬುದ್ಧಿ ಇಲ್ಲವೇ ನಿನಗೆ
ನಿದ್ರೆಯೆಂಬೋ ನಿಜ ಹಾದರಗಿತ್ತಿ ?          ||ಪ||

ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ
ಕದ್ದಡಗಿದೀಕಾಯದ ಮನೆಯೊಳು
ಎದ್ದು ನೋಡಿದರೆ ಎಲ್ಲಿ ಪೋದಿಯೋ ?      ||೧||

ಸೋಗ ಮಾಡಿ ನೀ ಹ್ಯಾಗಾರ ಬರತಿ
ತೂಕಡಿಕಿಯೆಂಬಾಕಿ ನೀ ಬಲು ಗರತಿ
ಬಾಗಿ ಬಾಯೊಳಗೆ ಆಕಳಿಕಿ ತರತಿ
ಸಾಕು ಹೋಗು ಎನ್ನೊಳು ಸರತಿ              ||೨||

ಹೀನಲೌಡಿ ಹಿಂದಕ್ಕೆ ಸರಿ ಜೋಕೆ
ಜ್ಞಾನಯೆಂಬೋ ಕಣ್ಣಿಗೆ ಮುಸುಕ್ಹಾಕಿ
ಮೌನದಿಂದ ಶಿಶುನಾಳಧೀಶನ
ಧ್ಯಾನ ಕೆಡಿಸುವದು ಇದ್ಯಾವ ರೀತಿ ?         ||೩||

        ****

ಕೀಲಿಕರಣ: ಎಂ.ಎನ್.ಎಸ್. ರಾವ್

ಸರ್ಕಾರಿ ಆಸ್ಪತ್ರೆ

- ಮಂಜುನಾಥ ವಿ ಎಂ

ನಾನು ನೋಡಿದ ಬೇಸಗೆಯ ಅಪರಿಪೂರ್ಣ ಚಿತ್ರವಿದು:

ಒಳರೋಗಿಗಳು ಇನ್ನೆಂದಿಗೂ ಹೊರಬರದಂತೆ ಕಾರಿಡಾರ್‌ನ
ಕತ್ತಲ ಗುಹೆಯಲ್ಲಿ ಹೋದ ಬೇಸಗೆಯ ಹಗಲುಗಳನ್ನು ಕಾಣಲೆತ್ನಿಸುತ್ತಾ,
ಎಣಿಸುತ್ತಾ ತಟಸ್ಥರಾಗಿ ಹೋಗಿದ್ದರು.

ದಗಲ್ಬಾಜಿ ವೈದ್ಯನೊಬ್ಬ ಹೊಸದಾಗಿ ನೇಮಕಗೊಂಡ ನರ್ಸ್ ಅನ್ನು
ಕಕ್ಕಸುಕೋಣೆಯ ಗೋಡೆಗೆ ನಿಲ್ಲಿಸಿಕೊಂಡು ಅವಳ ಶರೀರದ ರಂಧ್ರಗಳಿಗೆ
ಶಾಖ ಊದುತ್ತಿದ್ದ.

ಅನ್ನನಾಳಗಳು ಹೂಮರದಂತೆ ನಗರದ ಗಾಳಿಗೆ ಮಿಡುಕುತ್ತಿರುವಂತೆ,
ಬಲಿತ ಬೀದಿ ನಾಯಿಗಳು ಬಾಗಿಲಲ್ಲಿ ನಾಲಗೆ ಬೀಸುತ್ತಿದ್ದವು.

ಸೆಪ್ಟೆಂಬರ್‌ನ ಒಂದು ರಾತ್ರೆ ಇದೇ ಆಸ್ಪತ್ರೆಯಲ್ಲಿ
ನನ್ನ ತಂದೆಯನ್ನು ಕೊಂದು ಹಾಕಿದ್ದರು.

ಅಲ್ಲಿ ಬಾಲ್ಕನಿಯಲ್ಲಿ ಮುದಿ ದಾದಿಯೊಬ್ಬಳು
ತನ್ನ ಒಳ ಉಡುಪುಗಳನ್ನು ಒಣಗಿಸಿಕೊಳ್ಳುತ್ತಿದ್ದಳು,
ಸರ್ಕಾರಿ ಆಸ್ಪತ್ರೆಯ ಒಳಗಿನ್ ಚಿತ್ರಣದಂತೆ ಅವಳ ಮೈ ಮೇಲೂ ಬಟ್ಟೆಯಿರಲಿಲ್ಲ.

ಅದು ರಂಜನೀಯವೆನಿಸಿದ್ದರಿಂದ ಹಾಡೆಂದು ಭಾವಿಸಿದೆ.
          *****

ನೀ ಬರುವೆಯೆಂದು

- ಡಾ || ರಾಜಪ್ಪ ದಳವಾಯಿ









ನೀ ಬರುವೆಯೆಂದು ತಲ್ಲಣವೆ ಕ್ಷಣ ಕ್ಷಣ
ಬರುವ ದಾರಿಯ ನೆನಪು ನವಪುಲಕದೂರಣ

ನಿರೀಕ್ಷೆಯ ಮಹಾಪೂರ ನನ್ನ ಮೇಲೆ ಸುರಿದಂತೆ
ಮನಸು ನಿರ್ವ್ಯಾಪಾರ ಮಾಡುವ ಸಂತೆಯಂತೆ

ಇಲ್ಲೇ ನಿಜರೂಪದ ನೆನಪ ಬಿಸಿಲಗುದುರೆ
ಕಾಣ್ವ ಕಾತರತೆಯಲ್ಲೆ ಕಾಣದಿಹ ನಶ್ವರತೆ

ಕಾಯುವ ಹಿಂಸೆಯೊಳು ಪ್ರತೀಕ್ಷೆ ಮೈಪುಲಕ
ಸ್ವರ್ಗ ನರಕಗಳೆ ಅವಿರ್ಭವಿಸಿದ ಕೈಚಳಕ

ನೀ ಬಹೆಯೆಂಬ ನೆನಪು ನವದೊಂದಧ್ಬುತ
ಜಗದ ಸುಖಿ ನಾನೇ ಅದನನುಭವಿಸುತ

        *****

ಕೀಲಿಕರಣ: ಕಿಶೋರ್‍ ಚಂದ್ರ

ಬೊಲ್ಲ

- ಮುದ್ದು ಮೂಡುಬೆಳ್ಳೆ

ಈತ್ ಮಲ್ಲ ಗಂಡಾಂತ್ರ ಊರುಗು ಬರ್‍ಬುಂಡುಂದ್ ನರಮನಿ ಕನಮನಸ್‌ಡ್‌ಲಾ ಎನ್ನ್‌ದ್‌ಜೆರ್‍.  `ಅಮಾಸೆದಾನಿ ಊರು ಮುರ್ಕುಂಡುಗೆ' ಇನ್ಪಿನ ಸುದ್ದಿ ಗೊತ್ತಾಯಿನೆಡ್ದ್ ಬೊಕ್ಕ ಮಾದಣ್ಣಲೆಕ ಇತ್ತಿನ ಪರಬೆರೆಗ್ ಪೇಂಟೆದಕ್ಲೆಗ್‌ಲ, ಬಡವೆರೆಗ್‌ಲ, ಮಲ್ಲಕ್ಲೆಗ್ಲಾ ಮಾತರೆಗ್ಲಾ ಓಲುದಾಂತಿನ ಪೊಡಿಗೆ ದಿಂಜಿದ್‌ಂಡ್.

ಮುಡಾಯಿಡ್ ಘಟ್ಟ ಪಡ್ಡಾಯಿಡ್ ಕಡಲ್ ಇಪ್ಪುನ ಆ ಊರುಡು ಕರಿನ ಕೆಲವು ದಿನೊಡ್ದಿಂಚಿ ನರಮಾನಿ ಇನಿಮುಟ್ಟ ತೂದ್ ಕೇನಂದಿನ ಬರ್ಸದ ಬೊಲ್ಲ ತೂವೊಂದುಲ್ಲೆರ್‍, ಊರುದ ನಡುತಟೊಂಜಿ ತುದೆ;  ಪಾಪನಾಶಿನಿ ತುದೆಂದ್ ಆತ ಪುದರ್‍.  ತುದೆತ ಪಡ್ಡಾಯಿ ಮರ್‍ಗಿಲ್ ಅರ್ಧ ಊರು;  ಅಲ್ಪ ಊರ್ದ ಪೇಂಟೆ ಅಂಗಡಿಲು, ಸಂತೆ ಮಾರ್ಕೇಟ್ ಪಂಚಾಯತ್ ಆಫೀಸ್, ಬೇಂಕ್, ಸರ್ಕಾರಿ ಸಾಲೆ, ಕಾಲೇಜುಲು, ಇಗರ್ಜಿ, ರಾಮರಾಯೆರ್‍ನ ಹೊಟೇಲ್ `ಗಾಯತ್ರಿ ಭವನ' ಉಂದು ಮಾತ ಉಂಡು.  ಮುಡಾಯಿಡ್ ದಿಂಜ ಉಪ್ಪುನು ಸಾಗ್ವೊಳಿದ ಕಂಡೊಲು, ತಾರೆ, ಕಂಗ್, ಬಾರೆದ ತೋಟೊಲು, ಇಲ್ಲ್‌ಲು ಅತ್ತಂದೆ ದೇವಸ್ಥಾನ, ಗರಡಿ, ದೈವದ ಸಾಣ ಉಂದು ಮಾತ ಉಂಡು.

`ಆಡಿಡ್ದ್ ಬೊಕ್ಕ ಅರೆಗಾಲ; ಮಾಯಿಡ್‌ದ್ ಬೊಕ್ಕ ಮಾರಿಯಾಲ' ಇನ್ಪಿ ಗಾದೆ ಈ ಸರ್ತಿ ಊರುಡು ಸತ್ಯ ಆಯಿಜಿ.  ಮರಿಯಾಲ ಅಕೇರಿ ಆವೊಂದು ಬತ್ತ್ಂಡಲ ಬರ್‍ಸದ ಪಾರೂ ಪಣಿದಾಂತೆ ಪರ್‍ರೆ, ಸಾಗೊಳಿ ಮಲ್ಪರೆಗ್ ನೀರ್‍ ದಾಂತೆ ಸುರೂಟು ಜನ ಕಂಗಾಲಾಯೆರ್‍.  ಪುನರಸೆಟ್ಟ್ ದಾಂತಿನ ಬರ್‍ಸ ಪುಷ್ಯ ನಕ್ಷತ್ರ ಸುರುವಾಪಿಲೆಕನೆಟ್ಲಾ `ರಪರಪ' `ದರಿಪರೆ' ಸುರುವಾಯಿನ ಈತ್ ದಿನೊಟು ರಾತ್ರೆಪಗೆಲ್ ಗೀರಿಕಟ್‌ ಬರೊಂದೇ ಉಂಡು.  ಬಚ್ಚಿದೀ ತುದೆಟ್ `ಇಪಿರಿಮಿತಿ' ಬೊಲ್ಲ ದಿಂಜಿದಿನಿ ಮಾತ್ರ ಆತ್ತ್;  ಪಡ್ಡಯಿದ ಇಲ್ಲಿಲ್ಲ್ ಸಮುದ್ರದ ಪಾಲಾವೊಂದು ಉಂಡುಂದ್ ಸುದ್ದಿ ತಿಕೊಂದುಂಡು.  ದುರ್ಮತಿ ಸಂವತ್ಸರದ ಲಕ್ಷಣ ಉಂದಾದಾನ್ಯಂದ್ ಕೆಲವೆರ್‍ ಪನ್ಪರ್‍.

ದಿಂಜಿದ್ ತಮೆಲುನ ತುದೆ, ಗೀರಿ ಕಟ್ಟ್‌ದ್ ಬರ್‍ಪುನ ಬರ್‍ಸ, ಪುರ್ಸೊತ್ತ್ ಕೊರಂದಿನ ತೆಡಿಲ್ ಮೆಂಚಿದ ಅರಬಾಯಿ, ಮಂಡೆ ಪಿದಾಯಿ ಪಾಡಿಯೆರೆ ಬುಡಂದೆ `ರುಮು ರುಮು'ಂದ್ ಬೀಜುನ ಗಾಲಿ ಬರ್‍ಸ..... ನೇತ ನಡುಟ್ಲು ಮನೋಹರೆ ಕಡವುದಡೆಗ್ ಬತ್ತ್‌ದ್ ಓಡೊಡು ತುದೆ ದಾಂಟ್‌ದ್ ಪೇಂಟೆಗ್ ಪೋಯೆ.  ಇಂಚಪ್ಪ, ಮನೋಹರಾಗ್ `ಒಂತೆ ಬೆಚ್ಚಗೆ';  ಸಾವಿತ್ರಿ ಇಲ್ಲಡ್ದ್ ಪಿದಾಯಿ ಬರ್‍ಪುಜೊಲ್ಗೆ ಇಂಚಮಾತ ಊರುಡು ಸುದ್ದಿ ಉಂಡು.  ಸುದ್ದಿ ಆವಂದೆ ಗುಟ್ಟುಡೇ ಏತೊ ಸಂಗತಿಲು ಊರುಡ್ ನಡಪುಂಡು.  ಆಂಡ ಎದುರು ತೋಜುನಾಕ್ಲು ಸುದ್ದಿ ಆಪೆರ್‍.

ಪಾಪನಾಶಿನಿ ತುದೆತ ಮುಡಯಿ ಮೆಯಿಟ್ ಕಡವುದ ಬಾಕಿಲ್‌ದ ಇಲ್ಲ್ ಮಾದಣ್ಣನವು.  ಸಾವಿತ್ರಿ ಮಾದಣ್ಣನ ಕಡೀರ ಮಗಲ್.  ಆಕ್ಲೆನ ಇಲ್ಲ್ ದಾಂಟ್‌ದ್ ಮಿತ್ತ್‌ಗ್ ಪೋಂಡ ಇತ್ತೆ ಬಲ್ಲದ ನೀರ್‌ದ ಅಡಿಟ್ಟುಪ್ಪುನ ನಾಲ್ ಕೊಯ್ಲ್ ಕಂಡ, ಪತ್ತ್ ತಾರೆಲು ಅಕ್ಲನವೇ.  ಕೈತಲ್ ಅಲ್ಪಲ್ಪ ಇಪ್ಪುನ ಸುಮಾರ್‍ ನೂದು ಇಲ್ಲ್‌ಲೆಡ್ ಕಣಕ್‌ದ ಬೇರದ ಕರಿಯಪ್ಪೆರೆನ ಉಪ್ಪರಿಗೆದ ಇಲ್ಲ್.  ಕಟುವೊಣ ಕಂತ್ರಾಟ್‌ದ ಡಿಸಿಲ್ವೆರೆನ ಟೇರಿಸ್ ಇಲ್ಲ್, ಸುಬ್ಬಣ್ಣ ಭಟ್ರೆನ ಆನೆ ಬಾಕಿಲ್‌ದ ಇಲ್ಲ್ ಬುಡ್‌ಂಡ ಬೊಕ್ಕ ಎಚ್ಚಿನವು ಮುಳಿತ ತತ್ತ್ಂಡ ಬೈತ್ತ ಮಾಡ್‌ದ ಇಲ್ಲ್‌ಲು.

ತಗ್ಗ್ ಸಾಲ್‌ದ ಇಲ್ಲ್‌ಲು ಪೂರ ಅರ್ಧರ್ಧ ನೀರ್‌ಡ್ ಮುರ್ಕೊಂದುಲ್ಲ ಜನೊಕ್ಲು ಇತ್ತಿನ ಅರಿಬಾರ್‍.  ಕಂಜಿ-ಕೈಕಂಜಿಲೆನ ಕೂಡಾವೊಂದು ಬತ್ತ್‌ದ್, ಇತ್ತಿನೆಟ್ಟ್ ಒಂತೆ ಏರ್ಕೆಡುಪ್ಪುವ ಸುಬ್ಬಣ್ಣೆರೆನ ಅಂಗಣೋಡು ಪತ್ರದ ಮಾಡ್‌ದ ಅಡಟ್ ಪೊಗ್ಗುದು ದಿನ ಗೆನಿಪುವೆರ್‍.  ಬೊಲ್ಲ ಏರೊಂದೇ ಉಂಡು.  ಪಂಚಾಯತ್ ಮೆಂಬರ್‌ನಕ್ಲು ನಾಲಾಜಿ ಜನ, ಊರುದ ಸಾಲೆದ ಮಾಸ್ಟ್ರೆನಕ್ಲು ಕೆಲವೆರ್‍, ಯುವಕ ಮಂಡಲದ ಜವ್ವನೆರ್‍, ಮಾತ ಊರಿಡೀ ತಿರ್‍ಗೊಂದು ಅಲ್ಪಲ್ಪ ಜನೊಕುಲ್ನ ಸಾಮಾನ್, ಬಾಜನೊಲು, ಅರಿಬಾರ್‍, ಎರ್‍ಲು-ಕೈಕಂಜಿಲೆನ್, ಅಪಾಯಡ್‌ದ್ ದೂರ ಕೊನೇರೆಗ್ ಸಾಯ ಮಲ್ತೊಂದುಲ್ಲೆಲ್ನ.  ತಾಸಿಲ್ದಾರ್‍ರ್‌ಲ ಜೀಪ್‌ಡ್ ಬತ್ತ್‌ದ್ ಜಾಗ್‌ಡೇ ತರ್‍ಗೊಂದುಲ್ಲೆರ್‍.

ಕಡವುದಿಲ್ಲದ ಮಾದಣ್ಣೆ ಮಾತ್ರ ಬಾಯಿಡ್ ಬಚ್ಚಿರೆ ಅಗ್ಯೊಂದು ಇಲ್ಲದ ಪಿದಾಯಡ್ ಮೊರಂಪು ಮುಟ್ಟ ನೀರ್‌ಡ್ ಅಂಚಿಂಚಿ ಕಾರ್‍ ಪಾಡೊಂದುಲ್ಲೆ.  ಈ ಗಲಾಟೆಡ್ ಸಾವಿತ್ರಿ ಒಡೆಗ್ ಪೋಯೊಲು?  ಜುವ್ವೊಡು ಉಲ್ಲೊಲಾ?  ಅತ್ತ್ ಬೊಲ್ಲೊಗ್ ಲಾಗಿದ್ ಪೋಯೆಲಾ'ಂದ್ ಗೊತ್ತಾತ್‌ಜಿ.  ಸಾವಿತ್ರಿಲಾ, ಸುಬ್ಬಣ್ಣೆರೆ ಮಗೆ ಮನೋಹರೆಲಾ ಮೋಕೆಡುಪ್ಪುನ ತನ್ಕ್ ಗೊತ್ತಾವನಗ, `ಉಂದು ಮಾತ ಬೊಡ್ಚಿಂ'ದ್ ತಾನ್ ಸಾವಿತ್ರಿಗ್ ತೀರಿನಾತ್ ಪಂಡ್‌ಜೆನಾ?  ಬಾಯಿಡ್ ಮಾತ್ರ ಅತ್ತ.  ಸುದ್ದಿ ಕೆಬಿಕ್ ಬೂರಿನಾನಿ ದಪ್ಪುದ ಬಡುವೊಂಜಿ ಸಾವಿತ್ರಿನ ಬೆರಿಟ್ ಪೊಡಿಯಾತ್‌ಜಾ?  ಮನೋಹರೆ ಪಾಪದ ಆನೇ.  ಆಂಡ, ಆಯಗ್ಲಾ ತಾನ್ ಜೋರು ಮಲ್ತ್‌ಜೆನಾ?  ಇರ್ವೆರ್‍ಲಾ ಕೆಬಿತ ಮಿತ್ತ್ ಅವೆನ್ ಪಾಡೊನ್‌ಜೆರ್‍.  "ಇತ್ತೆ ಮಾತ ಜಾತಿ ಬೇದ ಇಜ್ಜಿ, ಬೇತೆ ಬೇತೆ ಜಾತಿದ ಆಣ್ ಪೊಣ್ಣು ಮದಿಮೆ ಆವೊಲಿ, ನಿಕ್ಲು ಹಿರಿಯೆರ್‌ನಕುಲು ಒಂಜಿ ಒಪ್ಪಿಗೆ ಕೊರ್ದು ಆಶೀರ್ವಾದ ಮಲ್ಪುಲೆಂದೇ ಹಟಕಟಿಯೆರ್‍.

ಮಾತಲಾ ಮಾದಣ್ಣಗ್ ಸಮಾ ನೆನೆಪುಂಡು, ಅಕೇರಿ ಅಕೇರಿಗ್ ತಾನ್, `ದೇವೆರೆ ಚಿತ್ತ'ಂದ್ ಮನಿಪಂದೆ ಕುಲ್ಲಿಯೆ.  ಆಂಡ ಸುಬ್ಬಣ್ಣೆರ್‍!.....

ಕಾಲೇಜ್‌ಡ್ ಕಲ್ಪುನ ಮುಗಿತ್ತ್‌ದ್ ಕೆಲಸ ನಾಡೊಂದುಪ್ಪುನ ಮನೋಹರೆ ಕರಿನ ಸ್ವಾತಂತ್ರ್‍ಯೋತ್ಸವದಾ ಸಾವಿತ್ರಿನ್ ಲೆತೊಂದು ಅಪ್ಪಯ್ಯನ ಕೈತಲ್ ಪೋಯೆ.  "ಅಪ್ಪಯ್ಯ, ಯಾನ್ ಇಂಬಳೆನ್ ಮದಿಮೆ ಆಪೆ"ಂದ್ ಕತೆ ಮಾತ ತೆರಿಪಾನಗ, ಸುಬ್ಬಣ್ಣೆರ್‍ ಕೋಪೊಡು ಕೊದ್ದಿದ್, ಸಾವಿತ್ರಿಗ್ ಮೋನೆಗ್ ಉಬ್ಬಿದ್, ನಾಲೀಸ್ ಮಲ್ತ್‌ದ್ ಕಡಪುಡಿಯೆರ್‍;  ಮನೋಹರನ್, `ಈ ಎನ್ನ ಮಗೆ ಅತ್ತ್‌ಂ'ದೆರ್‍.

ಊರ್‌ಡು ಇಡೀ ಎಡ್ಡೆ ಗುಣತ್ತ ಪೊರ್ಲುಕಂಟ್ ಪೊಣ್ಣುಂದ್ ಪುದರ್‌ದ ಸಾವಿತ್ರಿ ಆನಿ ಬತ್ತ್‌ದ್ ಇಲ್ಲದ ಉಲಾಯಿ ಸೇರ್‌ದ್ ಮೌನ ಆಯಲ್;

ಈತಾದ ಒರ್ಸನೇ ಕರಿಂಡ್, ಇತ್ತೆ ಬೊಲ್ಲ ಏರ್‍ರೆಗ್ ಸುರುವಾನಗ ಜೂವ ಒರಿಯೊಡುಂದಾಂಡ ಅಣ್ಣೆರೆ ಅಂಗೋಣೊಗು ಮಾತೆರ್‍ಲಾ ಪೋವೊಡುಂದ್ ಮುರಾನಿಯೇ ಮಾತೆರ್‌ಲಾ ಪಿದಾಡ್ದೆರ್‍.  ಆಂಡ ಆವಿತ್ರಿ, "ಯಾನ್ ಆ ಇಲ್ಲಗ್ ಕಾರ್‍ ದೀವಯೆ"ಂದ್ ಹಟ ಕಟಿಯೊಲು;  ಅಲೆನ್ ಬಲಾತ್ಕಾರೊಡೇ ಅಣ್ಣೆರೆ ಇಲ್ಲಮುಟ್ಟು ಪತೊಂದ್ ಬತ್ತ್ಂಡಲ, ಕುಡ್ತೊಂದು ಬಲ್ತಿನ ಪೊಣ್ಣು ಮುರೆಡೊಂದ್ ಒಂಚಿ ಪೋಂಡುಂದ್ ತೆರಿಜಿ.  ಮನೋಹರೆ ನಿರುದ್ಯೋಗಿ.  ಐತ ಮಿತ್ತ್ ಈ ಬೇನೆ.  ಇತ್ತೆ ಸಾವಿತ್ರಿನ ಸುದ್ದಿ ಕೇಂಡ್ದ್ ಮರ್ಲ್ ಪತ್ತಿಲೆಕ ಆತ್‌ಂಡ್.  ಒರ ತುಂದೆತ ಮುಡಯಿ ಬತ್ತಿನಾಯೆ ಪರಿ ಪಡ್ಡಯಿ ಪೇಂಟೆದಂಚಿ ಆ ಬೊಲ್ಲದ ನಡುಟೇ ಓಡ ಒಚ್ಚಂದು ಪೋಯೆ.

ಮಾದಣ್ಣಗ್ ಅಕ್ಲಾಸ ಬುಡ್ಬಿನ ಒಂಜೇ ಕೆಲಸ.  ಬುಡೆದಿ, ಇನ್ಯ ಜೋಕುಲು ಆ ಮಲ್ಲ ಇಲ್ಲಡ್ ಕಣನೀರ್‍ ಜಪುಡಾವೊಂದು ಸಾವಿರ ಜನೊಕ್ಲೆ ನಡುಟು ದಾದ ಮಲ್ಪುವೆರಾ?  ತಾನ್ ಇನಿಮುಟ್ಟು ಮರ್ಯಾದಿಡ್ ದಿನ ಕಳೆಯೆ.  ತನ್ನ ಪ್ರಾಯದ ಹಿರಿಯೆರ್‍ ನಂದು ಸೆಟ್ರು.  ಕುಪ್ಪು, ಪೂಜಾರಿ, ಮಡ್ತಿನ ಬಾಯಿ, ಸುಬ್ರಾಯ ನ್ಯಾಕೆರ್‍, ಜಾಕಿ ಸಲ್ದಾನೆರ್‍ ಮಾತೆರ್‍ ಒರಿಯೊರಿಯೆ ಈ ಲೋಕೊಡ್‌ದ್ ಬೇಗ ಪೋಯೆರ್‍;  ತನ್ಕ್ ಮಾತ್ರ ನನಲಾ ಕಾಲ ಬತ್ತ್‌ಜೀ.  ಊರು ಮುರ್ಕುನಗ ಮಾತೆರಪ್ಪ ಸೈಪಿನ ಕಾಲ ಇತ್ತೆ ಬತ್ತ್ಂಡ್;  ಆಂಡ, ಕೊಂಡಾಡೊಡು ತಾಂಕಿನ ಮಗಲೆನ ಒಂಜಿ ಮದ್ಮೆ ಮಲ್ತ್ ಸೈಯರೆ ತಿಕ್‌ಜಿ;  ತನಡ್‌ದುಂಬು ಆಲೇ ಮಿನಿ......?

ಮಾದಣ್ಣೆ ಉಂತೊಂದೇ ಎತೆ ಗೆಪ್ಪುನ ತೂದು, ಪುತ್ತೂರುಡುದು ಕರಿನ ವಾರೊಡು ಆಪೆದಿಲ್ಲಗ್ ಬಿನ್ನೆ ಬೈದಿನ ಅಪ್ಪಣ್ಣೆ, ಆತ್ ದೂರೊಡಿತ್ತಿನಾರ್‍ ಕೈತಾರಲ್ ಬರ್‍ಪೆರ್‍.  "ಮಾದಣ್ಣಾ, ಇಂದು ದೈತ, ಪರಿವಾಡಿ ಇರೆನಾ?"ಂದ್ ಕೇಂಡರ್‍.  "ಈ ಸರ್ತಿ ನಮ ಮಂತೆರೆನ ಗೊಬ್ಬು ಕೈದಾಪುಲೆಕೊ ಸೋಜುಂಡು"ಂದೆರ್‍.  ಮಾದಣ್ಣೆ ಮಂಡ ಆಡಾಯೆ.  ಉಡಾಯಿ ತರೆದರ್‍ತ್ ತೂವನಗ ಬರ್ಸದ ನಡುಟು ಕೊಡೆ, ಕೊರಂಬು, ತತ್ರ, ಕಂಬೋಳಿ, ರೈನ್‌ಕೋಟ್‌ಡ್ ಬರ್‍ಸೊಡುಂತುದು ತೂಪಿನ ಜನಜಾತ್ರೆ!  ಊರ್‍ದ ದೇವಸ್ಥಾನದ ತೇರ್‌ದಾನಿ, ಅಬ್ಸೇಕದಾನಿ, ಗರಡಿದ ನೇಮದಾನಿ, ಇಗರ್ಜಿದ ಪರ್ಬ ಸಾಂತ್‌ಮಾರಿದಾನಿ, ಅಂಗಾರ್‍ ಸಂಟೆ, ಕಂಬುಲ ಅತ್ತ್‌ಂಡ್ ಮೇಡ್ಲ್‌ದ ಕೋದಕಟ್ಟದಾನಿ ಕುಸೀಟ್, ಗಮ್‌ಜಾಲಿಡ್ ಜಾತ್ರೆ ಸೇರುನ ಜನ ಇನಿಲಾ ಜಾತ್ರೆ ಆತೆರ್‍ ಅಂಡ - ಇನಿ ಜೂವ ಕೈಟ್ ಪತೊಂದು.  `ಇತ್ತೆನಾ ಬೊಕ್ಕನಾ' ಮುಕುದು ಪೋಪಿನ ತನ್ಕ್‌ಲೆ ಇಲ್ಲ್ ಬಿತ್ತ್‌ಲ್, ಮಣೆ ಮಂಚಾವು ಉಂದೆನ್ ಎನ್ನೊಂದು ಬಂಜಿ ತೌರಿನಲೆಕ, ಕರ್‍ಲ್ ಕತ್ತೆರಿನಲೆಕ ಆವೊಂದುಂಡು.  `ಹೋ'ನ್ಪಿನ ಗೌಜಿ ಒಂಜಿ ಅತ್ತಂದೆ ಈ ಬರ್ಸದ.  ಬೊಳ್ಳದ ಅಬ್ಬರೊಡು ಜನೊಕ್ಲೆನ ಪಾತರ ದಾಲ ಕೇನುಜಿ.

ಪಾಪನಾಶಿನಿದ ಮುಡುಯಿ ಮರಿಲ್‌ಡ್ ಇಂಚ ಬೊಲ್ಲ ಮುರ್‍ಕಮುರ್ಕಾವೊಂದು ಬತ್ತ್ಂಡ್, ಪಡ್ಡಾಯಿ ಮೆಯಿತ ಪೇಂಟೆಗ್ ಇತೋರ್ತ ಬೊಲ್ಲ ಪೊಗ್ಗಂದಿನೆಟಾತ್ರ, ಕಾಮತೆರ್‍ನ ಅಂಗಡಿದ ಬಾಕಿಲ್‌ಡ್, ಸದಾಸಿವನ ಸೆಲೂನುದ ಉಲಯಿ, ಡಾಕ್ಟ್ರೆನ ಕ್ಲಿನಿಕ್‌ಡ್, ಮರ್ತಪ್ಪಣ್ಣನ ಬೀಡಂಗಡಿಡ್, ರಾವ್ರೂ ಯೆರ್‍ನ ಗಾಯತ್ರಿ ಭವನೊಡು ಜನ ಗುಂಪು ಸೇರ್ದ್ ಪಾತೆರೊಂದುಲ್ಲೆರ್‍.  ಸಾಲೆ, ಕಾಲೇಡ್, ಬೇಂಕ್, ಕಛೇರಿಲೆನ ಕಲವು ದಿನೊಡ್ಡಿಂಚಿ ಬಾಕಿಲ್ ಕಲೆತ್‌ಜಿ.  ಬ್ಯಾಂಕ್‌ದ ಮ್ಯಾನೇಜರ್‍ ಗಾಯತ್ರಿ ಭವನೊಡು ಕುಲ್ಲೊಂದು ಸಿಗರೇಟ್ ಒಯ್ಪುನಾರ್‍ ಎತೆ ಬುಡ್ಪೆರ್‍;  `ಈ ಊರ್‌ದಕ್ಲೆಗ್ ಕೊರಿನ ಜುವೆಲ್ ಲೋನ್, ಸಾಗುವಳಿ ಸಾಲ.  ನಾಲ್ ಪರ್ಸೆಂಟ್ ಬಡ್ಡಿದಸಾಲ ಉಂದು ಮಾತ ನನ ಪಿರತಿಕ್ಕುನ ಸಾದಿ ಎಂಚ, ಪಿರ ತಿಕ್ಕ್‌ಜಿಂದಾಂಡ ತನ್ನ ಕೆಲಸದ ಗತಿ ದಾನೆ.....?' ಇಂಚ ಅರೆನ ಯೆತೆ.  ಅರೆಗ್ ಗುರ್ತದಾಂತಿನ ಮನೋಹರೆ ಅರೆನ ಎದುರು ಸೀಟ್‌ಡ್ ಈ ಲೋಕೊಡೇ ದಾಂತಿನಾಯಲೆಕ ಕುಲ್ಲುದೆ.

ಗಾಯತ್ರಿ ಭವನೊಡು ಸುಮಾರು ಇರ್ವ-ಇರ್ವತ್ತೈನ್ ಜನ ಕುಲೊಂದು ಪಾತರೊಂದುಲ್ಲೆರ್‍, ಹೋಟೇಲ್‌ಗ್ ಮನ್ಪಲದ ಪೇಪರ್‍ ಬರ್‍ಪುಂಡು; ಆಂಡಲಾ, ಆಯಿಡ್ದ್ ದಿಂಜ, ಊರು, ಪರವೂರುದ ಸುದ್ದಿಲು ಅಲ್ಪ ಜನತ್ತ ಬಾಯಿಡ್ದ್ ಕಬಿಕ್ಕ್ ತಿಕ್ಕುಂಡು.  ಬೆಚ್ಚಬೆಚ್ಚ ಗಟ್ಟಿ ಬಜೆ ಅಗ್ಯೊಂದು, ಚಾ ಪರೊಂದು ಉಪ್ಪುಲೆಕನೆ........ ಮುಡಯಿಡ್ ಬೊಲ್ಲ ಏರ್‌ದಿನ ಸುದ್ದಿ, ಕಡಲ್ ಉಲಾಯಿ ಬರೊಂದುಪ್ಪುನ ಸುದ್ದಿ ಸಾಮಾನ್ದ ಅರಿತಾರಾಯ್ದ ಕಿರಿಯ ದಿನೊಡ್ದಿನ ಏರುನ ಸುದ್ದಿ, ಲಾತೂರ್ದ ಭೂಕಂಪದ ಸುದ್ದಿ ಬತ್ತ್‌ದ್ ಕಂಬುಳದಿಲ್ಲದ ಗಣೇಶೆರ್‍ ಇಂಚಂದೆರ್‍.  "ಈ ಪಿರ್ಯದ ಕಾಲೊಡು ಬದ್‌ಕರೆ ಎಂಚಲಾ ಸಾಧ್ಯ ಇಜ್ಜಿ, ಭೂಮಿದ ಮಿತ್ತ್ ನರಮಾನಿನ ಅನ್ಯಾಯಲಾ ಮಿತಿಮೀರ್‍ಂಡ್ ಇಂದ್ ದೇವೆರೇ ಮೂನಿದ್ ಲೋಕೊಗು ಈ ಗಂಡಾಂತ್ರ ಕಡಪುಡ್ದೆರಾ ದಾನಿಯಾ!  ಪೋವಡ್ ಪೂರಾ ಮುರ್‍ಕಡ್, ಎಂಚಲಾ..... ಪುಟುದಿನಾಯಗ್ ಒರ ಸೈಯರೆ ಉಂಡತ್ತಾ?  ಇತ್ತೆ ಮಾತೆರ್‍ಲಾ ಒಟ್ಟುಗೇ ಸೈಕ......"

ಮಾತರ್‍ಲಾ `ಅಂದ್ ಅಂದ್ಂ'ದೆರ್‍.  ಆಂಡ ಬೆರಿಕೇ ಬೂರ್‍ರೆ ಉಪ್ಪುನ ಗಂಡಾಂತ್ರೊನು ನಿನೆತ್‌ದ್ ಕೆಲವೆರ್‍ನ ಮೈತ ರೋಮ ಕೊಕ್ಕರ್‌ಂಡ್.  ರಡ್ಡ್ ದಿನೊಡ್ದು ಪಿರಾವು ಜುವ ದೆತ್ತೊಂದು ಸೈತಿನ ಚೀಂಕ್ರ ಸೇರ್ಗಾರನ ಮಗೆ ಸುರೇಶನ ಸುದ್ದಿ ಗೆತ್ತೆರ್‍.  ಎದುರು ಮೆಯಿತ ಬೇಂಚಿಡಿತ್ತಿನ ಹರಿಯಪ್ಪೆರ್‍ ನಾಲೂರು ತಿರ್‍ಗ್‌ದಿನ ಅನುಭವಸ್ಥೆ.  ಆರ್‍ ಪಂಡೆರ್‍ "ತೂಲೆ ಗಣೇಶೆರೇ, ಜುವಗೆತ್ತೊನ್ನುಂದ್ ಪಂಡ ಇತ್ತೆ ಜನೊಕ್ಲಗ್ ಒಂಜಿ ಪೇಶನ್ ಆತ್ಂಡ್.  ಕುಸಾಲಾತ್‌ಂಡ್, ಆತ್ಮಹತ್ಯೆ ಮಲ್ತೊನಿನಕ್ಲು ಏಲೇಲ್ ಜನ್ಮೊಡು ನೆಗರೊಡೆ, ಬೆರ್ಮರಕ್ಕಸೆರಾದ್ ಪುಟುವೆರ್‌ಗೆ!  ಜನೊಕ್ಲೆಗ್ ಮರ್‍ಲತ್ತ, ಒರ ಪೋಯಿನ ಜೂವ ಬೊಕ್ಕೊರ ಬೋಡುಂದ್ ಪಂಡ ಬರ್‍ಪುಂಡ ಪನಿ.  ಇನಿ ಒಂಜಿ ಕಷ್ಟ, ದುಃಖ ಬತ್ತ್ಂಡ್‌ಂದ್ ಜುವ ಗೆತ್ತೊಂಡ, ಎಲ್ಲೆ ಅವ್ವೇ ನರಮನ್ಯಗ್ ಕಂಡಿತ್ತ ಬರ್‍ಪಿನ ಸುಖ ಸಂತೋಸೊನ್ ಅನ್ಪೆಪರೆ ಯೋಗಿತ ಉಂಡಾ?  ನ್ಯಾಯೊಡು ಬದ್‌ಕರೆ ಬೋಡಾಯಿನೆನ್ ನಮ ಲೋಕೊಡು ಗೆತೊನೊಡೇ.  ಇತ್ತೆದ ಕೆಲವು ಜವನೆರೆಗ್.  ಪನಿತ್ ಪಾಪುನಾತ್‌ ತಲ್ಮೆ ಇಜ್ಜಿ.  ಒಂಜಿ ಪರೀಕ್ಷೆಡ್ ಪೈಲಾಂಡ್ಂದೆರ್‍, ಒಂಜಿ ಮೋಕೆ ಮಲ್ತಿನ ಆಣ್ ಮದಿಮೆ ಆಯಿಜೆಂದೆರ್‍, ಒಂಜಿ ಆಪೀಸ್‌ಡ್ ಬೇಲೆ ತಿಕ್‌ಜಿಂದರ್‍-ಪೋಯೆರ್‍, ಜೂವ ಗೆತ್ತೊಂಡೆರ್‍!  ದೇಗ್?.....  ನನೊರ ಪರೀಕ್ಷೆ ಪಾಸಾವರೆ ಬಲ್ಲಿಯಾ?  ನನೊಂಜಿ ಆಣ್ ಮದಿಮೆ ಆಪಿನಾಯೆ ಉಪ್ಪುಜೆನಾ, ಆಫೀಸ್‌ದ ಕೆಲಸ ಅತ್ತ್ಡ ದಿನ ಕಳೆಪಾವುನ ಬೇತೆ ದಾಲಾ ಬೇಲೆ ತಿಕ್ಕಂದಾ?  ಅತ್ತ್ ಬೇತೆ ದಾಲ ತಾದಿ ಇಜ್ಜಾ.....?  ಜುವ ಗೆತ್ತೊಂಡ ಬೊಕ್ಕದಾಲ ಉಂಡಾ?  ಆಪುಂಡಾ!  ದಾಲ ಅತ್ತ್ ಗಣೇಶೆರೇ, `ಸೈತಿ ಎರ್‍ಮೆಗ್ ಐಯಲ ಪೇರ್‌'ನ್ಪಿ ಗಾದೆ ಇಜ್ಜಾ, ಅಂಚ, ಏರ್‍ ಸೈತೆರಾ ಅಕ್ಲೆನ್ ಕೊಡ್ಲೆ ನಮ ಪುಗರ್‌ದ್ ಅಟ್ಟೊಡ್ ದೀಪ.  ಅಂಚಾದ್, ಪೊರ್ಲಾಪುಂಡ್‌ಂದ್ ಜುವ ಗೆತ್ತುನುವೆರ್‍.  ಅಕ್ಲು ಸೈತುದ್ ರಡ್ಡ್ ದಿನೊಟ್ಟು ಲೋಕ ಅಕ್ಲೆನ್ ಮದಪುಂಡು ಉಂದು ಅಕ್ಲೆಗ್ ಗೊತ್ತುಂಡಾ ಪನಿ?  ಅತ್ತ್, ಒರಿ ಸೈತೆಂದ್ ಬಾಕಿದಕುಲು ಅಕ್ಲೆ ಒಟ್ಟುಗು ಬರ್‍ದು ಸೈಯರೆ ಆಪುಂಡಾ?  ಜೂವ ಗೆತೊಂದು ಪೋದು ಬಾಕಿದಕ್ಲೆಗ್ ದುಃಖ ಬೇನೆ ಕೊರ್‍ಪುನಿದಾಯೆ?  ಅವು ಬಲ್ಲಿ ತೊಲೆ.....

ಮನೋಹರೆ `ಧಿಡ್‌ಕ್ಕ' ಲಕ್ದ್ ಪಿದಾಯಿ ಪಿದಾಡ್‌ದ್ ಉರಬಡುತ ಪೆಟ್ಟ್‌ದಲೆಕ್ಕ ದರ್ಪುನ ಗಾಲಿ, ಬರ್ಸದ ನಡುಟು ಒಂಚಾ ಮದೆ ಆಯೆ..... `ತಟಾಲ್ಲಂ'ದ್ ತೆಡಿಲ್ ಮಂಚಿ ಸುವಾಂಡ್.....!

ಬರ್ಸ ಒಂಜೇಲೆಕ ಬರೊಂದುಂಡು.  ಇಡೀ ಊರು ಕಣ್ಣ್‌ಡ್ ಎಣ್ಣೆ ಪಾಡೊಂದು ಕುಲ್ಲಿಲೆಕ ರಾತ್ರೆ ಕರಿಂಡ್.  ಮನದಾನಿದ `ಅಮಾಸೆ' ದಾನಿ ಬೊಲ್ಪು ಸೂರ್ಯೆ ತೋಜಿಜೆ.  ಪರಬೆರೆಗ್ ಕರಿವರ್ಸ ಪಾಲೆದ ಕೆತ್ತೆದ ಮರ್ದ್ ಪರ್‍ತಿನ ನಿನೆಪಾಂಡ.  ಊರು ನಿಲಿಕೆ ಮಸ್ಕ್ ಕತ್ತಲೆ ದಿಂಜಿಂಡ.  ಬೊಳ್ಳ ಊರುದ ಮಿತ್ತ ಅಬ್ಬರೊಡ ಏರೊಂದುಂಡು.  ಪಾಪನಾಶಿನಿ ತುದೆಕ್ಕ್ ಮುಪ್ಪ ಮೈಲ್‌ಡ್ ಮುಡಯಿ ಮೆಯಿಟ್ ಕಟ್ಟ್‌ದಿನ ಅಣೆಕಟ್ಟ ದರೀಂಡ್‌ಗೆ.  ಅಂಚಿಂಚಿಟ್ ರಡ್ಡ್ - ಮೂಜಿ ಹಳ್ಳಿಲು ಮುರ್‍ಕಿಯಗೆಂದ್ ಸುದ್ದಿ ಆಂಡ್.  ಆಣೆಕಟ್ಟ ಉಡೆಯಿನೆಟಾತ್ರ ಕೆಂಪು ನೀರ್‌ದ ಪರ್ವತನೇ `ದಿಸಿ ದಿಸೀಲಂ'ದ್ ಊರ್‌ದ ಕೈತಲ್ ಪಾರ್‌ದ್ ಬತ್ತ್‌ಂಡ್!  ಕುಬಲ್ ಮಾತ್ರ ತೋಜುನ ಇಲ್ಲುಲು ಇತ್ತೆ ಪೂರಾ ಮುರ್‍ಕಿಯ.  ಮರ ಮುಂಚಾವು, ಬೈತ ರಾಶಿ, ಕಂಜಿಕೈಕಂಜಿಲು ಮಾತ್ರ ಅತ್ತ್, ಪುಣೊಕ್ಲೆನ ರಾಶಿಲ ಬೊಲ್ಲೊಡ್ ಬರ್‍ರೆ ಪೋಯೆರಂ ಸುರವಾನಗ ಪೊಂಜೊವು, ಜೋಕೆನ ಬೊಬ್ಬೆ ಬರ್ಸದ ರಾಪುಡು ಮಾಜಿದ್ ಪೋಂಡು.  ರಂಗಣ್ಣನ ಭೂತದ ಕೊಯ, ಊರ ದೇವಸ್ಥಾನ, ಆಫೀಸುಲು, ಐನ್ ಸೆಂಟ್ಸ್‌ದ ಜಾಗೆದ ಇಲ್ಲ್‌ಲು, ಮುಳಿತ ಮಾಡ ಇಲ್ಲಲ್ಲು, ಡಿಸಿಲ್ವೆರೆನ ಸಿಮೆಂಟ್ ಸ್ಟಾಕ್‌ದ ಗುದಾಮು, ಕರಿಯಪ್ಪ ಸಾವುಕಾರ್‍ರೆನ, ಕಣಕ್‌ದ ಕೂಪು ಮಾತ..... ಮಾತ ಬೊಲ್ಲದ ಬಾಯಿ ಸೇರ್‌ಂಡ್.

`ದೀಢೀರ್‌'ಂದ್ ಆನೆಬಾಕಿಲ್‌ದ ಪರಗೋಡೆ ಮಗ್‌ರ್‌ಂಡ್, ಜಬ್ಬೆರ್‍, ಜೋಕುಲು, ಪೊಂಜೋವು, ಸೋಕುದಕುಲು, ಸೀಕ್‌ದಕುಲ್ಲಂದ್ ಇಂದ್ ಮಾತ ತೂವಂದೆ ಒಂಜಾತ್ ಜನ ಗೋಡೆದ ಮಣ್ಯರಾಸಿದ ಅಡಿಟ್ ಬೂರ್ಯೆರ್‍.

ಬೊಲ್ಲ ಸುಬ್ಬಣ್ಣೆರೆನ ಜಾಲ್‌ಗ್, ಇಲ್ಲಕಡಿಕ್ ಜಗಲಿಗ್ ಮಿತ್ತರೊಂದು ಬತ್ತ್‌ದ್ ಅಂಗಣೊಗು ಬನ್ನಗ ನನೊಂಜಿ ಬೊಬ್ಬೆ ಆಂಡ್.  ಒಂಜಾತ್ ದೂರೊಡು ಒಂಜೆಕೊಂಜಿ ಸೀರೆದ ಸೆರಗ್‌ಂಡ್ ಕಟೊಂದಿನ ಒಂಜಿ ಪೊಣ್ಣು ಒಂಜಿ ಆಣನ ಪುಣೊಕ್ಲು ಒಂಜಿ ಗಲಿಗೆ ಮಿನ್ಕ್‌ದ್ ಮಾಯಕ ಆಂಡ.  "ಅಲಾ, ಅವು ಸಾವುತ್ರಿಲಾ ಮನೋಹರೆಲಾ ಅತ್ತಾ?"  ಇಂದ್ ಪೊಂಜೊವು ಕಲ್ಕಿಯರ್‍.

                *    *    *

ಊಂದು ಮಾತ ನಡತ್‌ದ್ ಇನಿಕ್‌ದಿನ ಕೆಲವು ಕರಿದ್ಂಡ್.  ಬದ್‌ಕ್‌ದ್ ಒರಿದಿನ ಕೆಲವೆ ಜನಕ್ಲು ಇತ್ತೆ ಜಾತಿಬೇದ ದಾಂತೆ, ಬಂಜಿದ ಬಡವುದ, ತುತ್ತೈತದ ಆಲಚನೆಗ್ ಪಿದಾಡ್ದೆರ್‍........

            *****

ಕೀಲಿಕರಣ: ಕಿಶೋರ್‍ ಚಂದ್ರ

ಸ್ವರ್ಣಪಂಜರ

- ಗಿರಿಜಾಪತಿ ಎಂ. ಎನ್

ನಾನು ಹಕ್ಕಿ ಆದರೂಽನು
ಹಾರಲಾರೆ ಇನ್ನುಽ ನಾಽನು ||

ಪುಕ್ಕ ಬಿಗಿದ ಕ್ರೂರಗಣ್ಣು
ಯಾವ ಯುಗದ ಮಾಯೆಯೋ
ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ
ಸ್ವತಂತ್ರ ಬರೀ ಛಾಯೆಯೋ ||

ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ
ಶಂಕೆಯಲೆಯಲೆ ಭೀತಿಯು
ಅನಿಲನಿಲದ ಕೊರಳ ರವದಲಿ
ಕಣ್ಣ ಬಯಕೆಯ ಗೀತೆಯು ||

ಆವ ಮೊಟ್ಟೆಯೊಡೆದು ಬಂದ
ಶೂಲ ಶೃಂಖಲೆ ಪಂಜರಿ
ಯಾವ ಮತಿಯೊಳ್ಮಥಿಸಿ ಬಂದ
ನಿಯತಿ ಯತಿಯ ಕಣ್ಣುರಿ ||

ಗ್ರಹ ತಾರೆ ಕಾಯ ಪಥಗಳಲ್ಲೂ
ಕರಿನೆರಳ ಸರಳ ಬಂಧನ
ಶತ ಶತಮಾನಗಳ ಹೆರಿಗೆಯಲ್ಲೂ
ವಿಪಿನ ವಿಪನದ ರೋದನ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಸಣ್ಣ ಹುಡುಗನ ಶಡುವಿಗೆ

-ಶಿಶುನಾಳ ಶರೀಫ್

ಸಣ್ಣ ಹುಡುಗನ ಶಡುವಿಗೆ
ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡದು       ||ಪ||

ಆಣಕವಾಡು ಶಿವನಂದಿ ಪಿಟೀಲಿಗೆ
ತಣಕ ಚರಂತಿಯ ತಾಳ ಕುಟೀಲಗೆ
ಹೆಣಕ್ಕಾಡುವ ಸೊಟ್ಟದ ಕೌಚಾಪಿಗೆ
ಕಣಕಹಚ್ಚಿ ಬಾರಿಸುವ ಮೃದಂಗದ
ಘನಶಾಸ್ರ ಅರಿಯದ ಗುಣಗೇಡಿಗಳಿಗೆ        ||೧||

ಹೊಸಹಳ್ಳಿ ಗ್ರಾಮದ ಗಾಣಿಗ ಕುಲ
ರಸಿಕನಾದನೋ ಆಗ ಸಾಲಿಗೆ ಬಂದು
ಅಸಮ ಪ್ರಸಂಗಕ ಸರಿ ಇಟ್ಟನು ಇದು
ಕಿಸಿ ಕಿಸಿ ಹಲ್ಲುಗಳ ತೆರೆದು ನಕ್ಕನವ
ಹೆಸರಿಗೆ ಕಾಲನ ಹೊಸತರ ಚೇಷ್ಟಿಗೆ          ||೨||

ಪುಂಡ ಶಿಶುನಾಳಧೀಶನ ಸೇವಕ
ತೊಂಡ ಶೂರನ ಗ್ರಾಮ ಸಂಹಾರಕ
ಪಂಡಿತರಿಗೆ ಹಿತವಾದ ವಿಚಾರಕ್ಕೆ
ಮಂಡಲದೊಳು ಗುರುಲಿಂಗ ಕೃಪಾಂಗಗೆ
ಇಂಗಿತವರಿಯದ ಮಂಗಮನುಜರಿಗೆ        ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಎರಡು ಮುಖ

- ಎಂ.ಎನ್.ಎಸ್. ರಾವ್

ಏನು ಮಾಡೋದು ಯಾವಾಗಲೂ ಎಲ್ಲಾದಕ್ಕೂ ಎರೆಡೆರಡು ಮುಖ

ಮನುಷ್ಯನಿಗೆ ಹೆಚ್ಚು ಆಸೆ ಯಾವುದು ಕೆಟ್ಟದ್ದೋ ಅದರ ಮೇಲೆ
ಯಾರಿಗೆ ಗೊತ್ತಿಲ್ಲ ತಂಬಾಕು ದೇಹಕ್ಕೆ ಘೋರ ಘೋರ
ಸಿಗರೇಟು ಸೇದಲು ಮನೇಲಿ ಹೆಂಡತಿ ಅಡ್ಡಿ ಬೀದೀಲಿ ಕಾನೂನು ಅಡ್ಡಿ
ಆದರೂ ಅದನ್ನು ಬಿಟ್ಟು ಬದುಕೋದು ಅವರಿಗೆ ಹೇಗೆಂದು ಗೊತ್ತಿಲ್ಲ

ರೈತರಿಗೆ ತಂಬಾಕೇ ಬೆಳೀಬೇಡಿ ಅಂದ್ರೆ ಅವರು ದುಡ್ಡು ಮಾಡೋದು ಬೇಡವೇ
ತಂಬಾಕೇ ಬೆಳೀದ್ರಿದ್ರೆ ಸರ್ಕಾರ ಸುಂಕ ಹಾಕದೇ ದೇಶ ಅಭಿವೃದ್ಧಿ ಹೇಗೇ
ಬೆದುರು ಬೊಂಬೆ ಚಿತ್ರ ಸಿಗರೇಟು ಪ್ಯಾಕ್ ಮೇಲೆ ಮುದ್ರಿಸಿದರೆ ಸಾಕೇ
ಸುಂಕ ಹಾಕಲು ಬೇರೇನು ಇಲ್ಲವೆ ತಂಬಾಕು ಬೆಳೆ ನಿಲ್ಲಿಸೋದು ಹೇಗೇ
           *****

ದೂರದಲ್ಲಿದ್ದೇನೆ

- ಮಂಜುನಾಥ ವಿ ಎಂ

ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ,
ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು.

ಯಂತ್ರ, ವಾಹನಗಳ ಹೊಗೆ;  ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ,
ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ
ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ.

ಮುರಿದು ಬಿದ್ದಿರುವುದು ನನ್ನ ಮನೆ-
ಆದ್ದರಿಂದ ನಾನೀಗ ದೂರದಲ್ಲೆಲ್ಲೋ ವಾಸವಿದ್ದೇನೆ;

ಅದೊಂದು ಸೂಳೆಯರು ಬಿಟ್ಟುಹೋದ ಕಸಾಯಿಖಾನೆಯಲ್ಲಿ.

        *****