- ಶಿಶುನಾಳ ಶರೀಫ್
ನಡೆನುಡಿಯಿಂದ ನಾವು ನಡೆಯಬೇಕಣ್ಣಾ
ದೇಹವಿದು ತಮ ನಡುವೆ ಬಿದ್ದು ಹೋಗತೈತಣ್ಣಾ ||ಪ||
ಭಜನೆಯ ಮಾಡ್ವಾಗ ಭೇದಭಾವ ಬಿಟ್ಟು ಭಜಿಸಬೇಕಣ್ಣಾ
ಅಣ್ಣತಮ್ಮರೆಂದು ತಿಳಿಯಬೇಕಣ್ಣಾ ||೧||
ಪರ ಹೆಣ್ಣು ಮಕ್ಕಳು ಎದುರಿಗೆ ಬಂದರೆ ನಜರಿಡಬೇಕಣ್ಣಾ
ನಿನ್ನ ಭಗಿನಿಯರೆಂದು ತಿಳಿಯಬೇಕಣ್ಣಾ ||೨||
ವಸುಧಿಯಲಿ ಶಿಶುನಾಳಧೀಶನ ದಯವ ಗಳಿಸಬೇಕಣ್ಣಾ
ಗುರುಗೋವಿಂದನ ಧ್ಯಾನಮಾಡಣ್ಣಾ ||೩||
*****
ಕೀಲಿಕರಣ: ಎಮ್.ಎನ್.ಎಸ್.ರಾವ್
ನಡೆನುಡಿಯಿಂದ ನಾವು ನಡೆಯಬೇಕಣ್ಣಾ
ದೇಹವಿದು ತಮ ನಡುವೆ ಬಿದ್ದು ಹೋಗತೈತಣ್ಣಾ ||ಪ||
ಭಜನೆಯ ಮಾಡ್ವಾಗ ಭೇದಭಾವ ಬಿಟ್ಟು ಭಜಿಸಬೇಕಣ್ಣಾ
ಅಣ್ಣತಮ್ಮರೆಂದು ತಿಳಿಯಬೇಕಣ್ಣಾ ||೧||
ಪರ ಹೆಣ್ಣು ಮಕ್ಕಳು ಎದುರಿಗೆ ಬಂದರೆ ನಜರಿಡಬೇಕಣ್ಣಾ
ನಿನ್ನ ಭಗಿನಿಯರೆಂದು ತಿಳಿಯಬೇಕಣ್ಣಾ ||೨||
ವಸುಧಿಯಲಿ ಶಿಶುನಾಳಧೀಶನ ದಯವ ಗಳಿಸಬೇಕಣ್ಣಾ
ಗುರುಗೋವಿಂದನ ಧ್ಯಾನಮಾಡಣ್ಣಾ ||೩||
*****
ಕೀಲಿಕರಣ: ಎಮ್.ಎನ್.ಎಸ್.ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ