ನಿಲ್ಲು ಮನವೆ

- ಗಿರಿಜಾಪತಿ ಎಂ. ಎನ್

ನಿಲ್ಲು ಮನವೆ, ನಿಲ್ಲು ಇಲ್ಲಿ ಇನ್ನು,
ಒಮ್ಮೆ ಹೊರಳಿ ನೋಡು,
ನಾಗಾಲೋಟದ ಧಾವಂತದಲಿ
ಪಡೆದುದೇನೆಂಬುದ ಕಾಣು...

ಜಗವನಾಳುವ ಶಕ್ತಿತ್ರಯಗಳನು
ಮೀರಲು ಜೀವನವಿನ್ನೇನು?
ಎಲ್ಲೋ ಕಳೆದುದನಿನ್ನೆಲ್ಲೋ
ಹುಡುಕಿರೆ ದೊರೆಯುವುದಿನ್ನೇನು...!

ಸುಖದ ಸಾಧನ ನಿನ್ನಾಚೆ ಎಲ್ಲಿದೆ,
ಜೀವ ಭಾವ ಕಣದಲಿ ಬೆರೆತಿದೆ...
ಸುಖದ ಕಾರಣವಿಲ್ಲಿ ಚೆಲ್ಲಿದೆ
ಪ್ರೀತಿ ನೇಹ-ಮೋಹ ದಿ ಹೊಸೆದಿದೆ...

(ಶಕ್ತಿತ್ರಯಗಳು- ಹಸಿವು, ಪ್ರೀತಿ ಮತ್ತು ಕಾಮ)
        *****

ಕೀಲಿಕರಣ: ಕಿಶೋರ್‍ ಚಂದ್ರ

ಕುರುವರಿಯದ ಕುಂಬಾರಗ ಹೇಳಲು

-ಶಿಶುನಾಳ ಶರೀಫ್

ಕುರುವರಿಯದ ಕುಂಬಾರಗ ಹೇಳಲು
ಮಾರಿಗ್ಹೊಡದ ಮಾದಿಗರಣ್ಣಾ           ||ಪ||

ಕಾರಹುಣ್ಣಿವಿ ದಿನ ಕೋರಿಯ ಹೊತಗೊಂದು
ಬೋರಗಲ್ಲಿಗೆ ಬಡದೀರಿ ಸುಣ್ಣಾ         ||೧||

ಹುರಿಕಟ್ಟಿನ ಹೋರಿಗೆ ಗೊಟ್ಟವ ಹಾಕಲು
ಕುಟ್ಟಿ ಉಪ್ಪು ಎಣ್ಣಿ ಆರಿಷಿಣ              ||೨||

ಹುರಿಯಕ್ಕಿ ಹೋಳಿಗೆ ಕರಿದ ಕೋಡಬಳಿ
ಹಣಿಕಟ್ಟಿನೊಳು ಮೂರು ಹೆಣಕೆಣ್ಣಾ   ||೩||

ವಲ್ಲಭ ಶಿಶುನಾಳ ಬಲ್ಲಿದ ಗುರುವಿಗ
ಕಲ್ಲಿನೊಳಗ ಕರಿ ಹರಿದರಣ್ಣಾ          ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಅಭಿಮಾನವಿಡು


- ಗಿರಿಜಾಪತಿ ಎಂ. ಎನ್

ಅಭಿಮಾನವಿರಲೀ,
ದೇಶ, ಭಾಷೆಯ ರೀತಿ, ನೀತಿಯ ಸಿರಿಯುಸಿರಲಿ,
ವಿಶ್ವಕೋಶದ,
ಧಮನಿ ದಮನಿಯ, ಬಿತ್ತಿ ಬೆಳೆಸಿದ ತೋಳಲಿ....
ಎಲ್ಲ ಲೋಕದ,
ನಾಕವಿದುವೆ ಪುಣ್ಯ, ಸಗ್ಗಕೆ ಭೂಮಿಕೆ,
ಜ್ಞಾನವೆಲ್ಲಕೂ
ಮೂಲವಿದುವೆ, ಧ್ಯಾನ ನಂದನ ಚಂದ್ರಿಕೆ,
ಧೃವಗಳೆಲ್ಲಕೂ
ಧೃವವ ತೋರಿದೆ ಈ ಮಣ್ಣಿನೆದೆಯ ಬಾಂದಳ,
ವಿಶ್ವನೇಹದೊಸುಗೆಗೆ
ಕೈಯ ಚಾಚಿದೆ ಕಂದದಂದದ ಜೋಗುಳ,
ಎಲ್ಲ ಸಂಸ್ಕೃತಿ ಸಾರವಿಲ್ಲಿ,
ಉತ್ಕೃತಿಯ ತೆರದ ಹರಹಿನಲ್ಹಬ್ಬಿದೆ
ನೂರು-ಸಾವಿರ-ಕೋಟಿ ತತ್ವವ
ಮಾನ್ಯ ಭಾವ ದೇಶದಿ ತಬ್ಬಿದೆ
ಬರಿಮಣ್ಣಲ್ಲದ
ಈ ಮಣ್ಣಲಿ ವಿಶ್ವದೈವದ ಬಲವಿದೆ,
ವ್ಯಷ್ಠಿಯಲ್ಲದ
ಸಮಷ್ಠಿಬಲದಲಿ ಜೀವನವು ತಾ ಸಾಗಿದೆ.

        *****

ಕೀಲಿಕರಣ: ಕಿಶೋರ್‍ ಚಂದ್

ಕುಂಬಾರಕಿ ಈಕಿ ಕುಂಬಾರಕಿ

-ಶಿಶುನಾಳ ಶರೀಫ್

ಕುಂಬಾರಕಿ ಈಕಿ ಕುಂಬಾರಕಿ ಈ
ಬ್ರಹಾಂಡವೆಲ್ಲ ತುಂಬಿಕೊಂಡಿರುವ        ||ಪ||

ಚಿನ್ನ ಎಂಬುವ ಮುಣ್ಣನು ತರಸಿ
ತನ ಎಂಬುವ ನೀರನು ಹಣಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ             ||೧||

ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯ್ನ ಎಂಬುವ ಬಡಗಿಯ ಊರಿ
ಮುನ್ನೂರರವತ್ತ ಸುತ್ತನು ತಿರಗಿ
ಗಡಗಿ ತಯಾರು ಮಾಡುವಾಕಿ             ||೨||

ಆಚಾರ ಎಂಬುವ ಆವಿಗೆ ಮುಚ್ಚಿ
ಆರುವ ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗೆ ಓದು ಮಾರುವಾಕಿ                 ||೩||

ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ಹೊಸಧಿಯೊಳು ಶಿಶುನಾಳಧೀಶನ ಮುಂದೆ
ಧ್ಯಾನದ ಮುಗಿಯೊಂದು ಇಡುವಾಕಿ      ||೪||

                        ****

ಕೀಲಿಕರಣ: ಎಂ.ಎನ್.ಎಸ್. ರಾವ್

ಪ್ರಶ್ನೆಗಳು

- ಗಿರಿಜಾಪತಿ ಎಂ. ಎನ್

ಎಲ್ಲಿ ನೀನು, ನಿನ್ನೆ ನೆಲೆಯು,
ತಿಳಿವುದೆಂತು ನಿನ್ನೊಳದನಿ,
ಬಣ್ಣವೇರಿ ನಿಂತ ಮೊಗಕೆ,
ಕಾಣಬಹುದೆ ನಿಜ ದನಿ?
ವಿಸ್ತೃತ ಜಗವೆ ಕಿರಿದು ಮಾಡಿ
ಕೀರ್ತಿ ಶಿಖರವೇರಿ ನಿಂತು
ನನ್ನ-ನಿನ್ನ ದೂರಮಾಡಿದೆ,
ಸರಕು-ಸಂಸ್ಕೃತಿ ದಾಳದಲ್ಲಿ
ಏನೆಲ್ಲ ಕಳೇದೀಡಾಡಿದೆ....?
ಬೆಳೆದೆ ಬೆಳೆದೆ ಬರಿದೆ ಬೆಳೆದೆ...?
ಸಣ್ಣ ಸಣ್ಣವನಾಗಿಯುಳಿದೆ...!
ಯಾವ ಕಾರಣ... ನಿನ್ನ ಹರಣ...
ಮಾರಿ ಮಸಣಕೆ ತೋರಣ...!
ತೈಲ ತೀರಿದಾ ಹಣತೆಯಂತೆ...
ದಿನವು ಕಮರಿದೆ ಚಿತೆಯಲಿ
ನಗುವುದೆಂತಿನ್ನು ನೀನು
ಪ್ರೀತಿಸೆಲೆಯ ಬರದಲಿ
ಮಾತೇ ಇರದ ಶೂನ್ಯ ಮುಖದಲಿ

        *****

ಕೀಲಿಕರಣ: ಕಿಶೋರ್‍ ಚಂದ್ರ

ಬಿದ್ದಿಯಬೇ ಮುದುಕಿ

-ಶಿಶುನಾಳ ಶರೀಫ್

ಬಿದ್ದಿಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದಿಯಬೇ ಮುದುಕಿ      ||ಪ||

ಸಧ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದಿಯಬೇ ಮುದುಕಿ      ||೧||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟೀಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದಿಯಬೇ ಮುದುಕಿ      ||೨||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನ್ವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದಿಯಬೇ ಮುದುಕಿ      ||೩||
            ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎಚ್ಚರವಿರಲಿ

- ಗಿರಿಜಾಪತಿ ಎಂ. ಎನ್

ಶಿಖರ ಶೃಂಗಗಳೆನಿತೆನಿತೆ ಇರಲಿ
ನಿನ್ನ ಸಾಧನೆಯ ಹಿರಿಮೆ ಗರಿಮೆಗೆ,
ಪ್ರೀತಿ ಹಣತೆ ನಂದದಿರಲಿ,
ಮಧುರ ಭಾವ ಬಂಧುರ ಬದುಕಿಗೆ

ಇಂದು ನಾಳೆಗಳಲಿ ನೀನೆ
ನಿನ್ನ ಪರಧಿಯ ನೇಸರ,
ಒಂದರೊಳಗೊಂದಾಗೋ ಪ್ರೀತಿಗೆ
ನೀನೆ ತಿಂಗಳಂಗಳ ಚಂದಿರ,

ನಿನ್ನ ಭವತವ್ಯ ನಿನ್ನಲಿ,
ಬಿತ್ತಿ ಬೆಳೆವಾ ತರುಸುಮಲತೆ,
ಇರಲಿ ಎಚ್ಚರವಿರಲಿ ನಿನ್ನಲಿ,
ಹೊತ್ತಿ ಉರಿದಿತು ಬಾಳ್ಚಿತೆ.
        *****

ಕೀಲಿಕರಣ: ಕಿಶೋರ್‍ ಚಂದ್ರ

ತಂಗಿ ನಮಗೆ ಕೊಡಿರೆಂದು

-ಶಿಶುನಾಳ ಶರೀಫ್

ತಂಗಿ ನಮಗೆ ಕೊಡಿರೆಂದು
ಕೊಟ್ಟಳ್ಹಂಗಿನರಕಿಯನು                          ||ಪ||

ಇಂಗಿತ ಅರಿದವ ಆಣ್ಣ ನೀ ಬಾರೆಂದು
ಬಂಗಿ ಸೇದಿಸಿ ಬ್ರಹ್ಮಾಂಡದ ಬಯಲೊಳು   ||ಅ.ಪ.||

ತನುತ್ರಯಕ್ಕೆ ತಾ ಬಾಧ್ಯಳೋ
ಎನ್ನ ಘನ ಆತ್ಮಕ್ಕೆ ಪ್ರಸಿದ್ಧಳೋ
ವನಜಾಕ್ಷಿಯು ತನ್ನ ಚಿನುಮಯ ರೂಪದಿ
ಮನಮುಟ್ಟಿ ಹರಸುತ                             ||೧||

ಆನಂದವಾಯ್ತು ಇದು ಬಹು
ಸ್ವಾನಂದಮಯವಾಯ್ತು ಸಿಂಧು ತಾನೇ
ತಾನಾದಂಥ ಜ್ಞಾನಿ ಗುರುಗೋವಿಂದ
ಏನೊಂದನೆಣಿಸದೇ ತಾನಿತ್ತ ವರವನು       ||೨||
****

ಕೀಲಿಕರಣ: ಎಂ.ಎನ್.ಎಸ್. ರಾವ್

ಸಾಕ್ಷಾತ್ಕಾರ

- ಗಿರಿಜಾಪತಿ ಎಂ. ಎನ್

ನಿನ್ನೆ ಧ್ಯಾನವೆ ನನ್ನ ಉಸಿರಲಿ,
ಹಸಿರ ತೆರೆದಲಿ ನೆಲೆಸಲಿ...
ನಿನ್ನೆ ದರುಶನವೆನ್ನೆ ಮನದಲಿ,
ಬಾಳ ಭರವಸೆ ತುಂಬಲಿ....

ಇರುಳು ಕವಿದೆಡೆಯಲ್ಲಿ
ನಿನ್ನಯ ಬೆಳಕಿನುತ್ಸವ ಕೊನರಲಿ,
ಮನವು ಕದಡಲು
ನಿನ್ನ ನೇಹದ ಮಧುರ ಗಾನವು ತಣಿಸಲಿ...

ಬೇಗೆಗಳಾ ಬವಣೆಯಲ್ಲಿ,
ನಿನ್ನ ಕೈಯದು ತಾ ಹಿಡಿಯಲಿ,
ಬಾಳ ಬಂಡಿಯ ಹಾದಿಯಲ್ಲಿ,
ನಿನ್ನ ಜೊತೆ-ಹಿತ ದೊರೆಯಲಿ...

        *****

ಕೀಲಿಕರಣ: ಕಿಶೋರ್‍ ಚಂದ್ರ

ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ

-ಶಿಶುನಾಳ ಶರೀಫ್

ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ
ಆಣಿದ ಜಾಲಕೆ ನಿನ್ನಾ ಬೆನ್ನ ಹತ್ತಿ ಮುನಿ ಜನ
ನುಣ್ಣಗ ಸಂದಾನ್ನವರು ಮನುಜರು ಚನ್ನಚಲ್ವಿಕೆಗೆ ಸೋತು ಆರಣ್ಯದಿ
ರನ್ನ ಸಿದ್ಧ ಋಷಿಗಳನು ಕೆಣಕಿ ಬಲಗಣ್ಣು
ಸೊನ್ನಿಮಾಡಿ ಕಾಮ ಪಾಶದಿ ಮಣ್ಣುಗೂಡಿಸಿದೆ
ಬಿಡು ಮಾಯಿ ಹೌದು ಬಿಡು
ಘನ್ನ ಘಾತಕನ ಕಂಡೆ ನಮ್ಮನ್ನಾ        || ೧ ||

ಮೊದಲಿಗೆ ಶಿವನೊಳು ಮುದದಿ ಮೋಹಿಸಿದಳು
ಕದನ ಹಚ್ಚಿ ಲಂಕಾದ್ರಿಯ ಸುಡಿಸಿದಿ
ಅದನ ತಿಳಿದು ಸುಗ್ರೀವನ ಮಡದಿಗೆ ನಜರಿಟ್ಟು
ವಾಲಿಯನು ಹೊಡಸಿದಿ
ಒದಗಿ ಬ್ಯಾಗ ಬ್ರಹ್ಮನ ಶಿರಗಡಿಸಿದಿ
ಇದನ ಕೇಳಿ ಎಮಗೆ ಹೆದರಿಕೆ ಬರುತಿರೆ
ಎದುರಿಗೆ ಬರದಿರು ಪದಮಸುನಿಯಳೆ || ೨ ||

ಆರೆಣೆಗಾಣೆ ನಿನಗೆ ನಾರಿಮಣಿಯರೊಳಗೆ
ಮೀರಿದೊಯ್ಯಾರೆ ಈಗ ಮೂರುಲೋಕಾ ನಿನ್ನ ಕೆಳಗೆ
ದ್ವಾರಕನಗರವ ನೀರೊಳು ಮುಣಗಿಸಿ
ನಾರಾಯಣನ ಮೆಟ್ಟಿ ಕುಳಿತೆ ಸಖಿ
ಧಾರಣಿಪತಿ ಪಾಂಡವರ ಜೂಜಿನಲಿ ಸೇರಿ ಆಡವಿಗಟ್ಟಿಸಿ ನಿನ್ನ ಗುಣಾ
ಸಾರಲೇನು ಶಿಶುನಾಳಧೀಶನ ಮುಂದೆ ತೋರಿಸದಿರು
ಬಡಿವಾರ ಬಜಾರಿ                         || ೩ ||

****

ಕೀಲಿಕರಣ: ಎಂ.ಎನ್.ಎಸ್. ರಾವ್

ನವ್ವಾಲೆ ಬಂತಪ್ಪ ನವ್ವಾಲೆ

-ಕಂನಾಡಿಗಾ ನಾರಾಯಣ

ಲ್ಲು ಲ್ಲಲೇ ನವಿಲೇ ನ್ನ ಕಣ್ಣಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ!
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ
ತಾಳಲಾರದು ಜೀವ ಹೇಳಬಾರೆ
      -ಮಧುರ ಚೆನ್ನ

ಚೆಲುವಯ್ಯ ಹಿತ್ತಲಿನ ಬಣವೆಯಿಂದ ಬತ್ತದ ಹುಲ್ಲನ್ನು ಹಿರಿಯಲು ಕೈಹಾಕುತ್ತಿದ್ದಂತೆಯೇ ಗಾಬರಿಗೊಂಡ ಯಾವುದೋ ಪ್ರಾಣಿಯೊಂದು ಬೆಟ್ಟದತ್ತ ಓಡಿಹೋದಂತಾಗಿ ಮೊಲವೋ, ಹಂದಿಯೋ ಇರಬಹುದೆಂದು ತಿರುಗಿನೋಡಿದ. ಆದರೆ ಮಬ್ಬುಗತ್ತಲೆಯಲ್ಲಿ ಅದರ ಹಾರು‌ಓಟದಿಂದಾಗಿ ಅದೊಂದು ಕಾಡು ಕೋಳಿಯಿರಬಹುದೆಂದು ಅದರ ಸ್ವರೂಪದಿಂದಾಗಿ ಊಹಿಸಿದ್ದು ಬಿಟ್ಟರೆ ಇಂತದೇ ಪ್ರಾಣಿ ಅದೆಂದು ಗುರುತಿಸಲಾಗಲಿಲ್ಲ. ಆದರೆ ಕೈಗೆ ಸಿಕ್ಕ ಬೇಟೆಯೊಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಹೋದ ದುರಾದೃಷ್ಟಕ್ಕೆ ಪರಿತಪಿಸಿದ. ಓಡಿಹೋಗಿ ಅದೇನೆಂದು ನೋಡೋಣವೆಂತಲೋ ಅಥವಾ ಹಿಡಿಯುವ ಹೊಡೆಯುವ ಪ್ರಯತ್ನ ಮಾಡೋಣವೆಂತಲೋ ಅಸಿದರೂ ಇಳಿಜಾರಾದ, ಕಡಿದಾದ ಗುಡ್ಡ ಅದು. ಅಲ್ಲಿ ಸಾಕಷ್ಟು ಗಿಡಮರಗಳೂ ಇದ್ದು ಅದನ್ನು ಅಷ್ಟು ಸರಾಗವಾಗಿ ಹತ್ತಲಾಗುವಂತಿರಲಿಲ್ಲ. ಎಷ್ಟೋ ಸಲ ಆ ಗುಡ್ಡದ ಮೇಲೆ ಕಡಿದ ಮರದ ದಿಮ್ಮಿಗಳನ್ನು ಉದ್ದುದ್ದ ಮಾಡಿ ಕೆಳಗೆ ಜಾರಿಬಿಟ್ಟು ಮನೆಯ ಬಳಿ ಲ್ಲಿಸಿಕೊಳ್ಳುತ್ತಿದ್ದುದೂ ಉಂಟು.

ಹಾಗೆಯೇ ಬಣವೆಯನ್ನು ಒಂದು ಸುತ್ತು ಹಾಕಿ ಪರಿಶೀಲಿಸಿದ. ಯಾವ ಪ್ರಾಣಿಯ ಇರುವಿಕೆಯ ಲಕ್ಷಣವೂ ಕಾಣಲಿಲ್ಲ. ಬಣವೆಯ ಮರೆಯಲ್ಲಿ ಮೂತ್ರ ವಿಸರ್ಜನೆಗೆ ಕುಂತ. ಆದರೆ ಎಂಥದೋ ಸರಸರ ಹರಿದಾಡಿದಂತಹ ಸದ್ದಾಗಿ ಗಾಬರಿಯಿಂದ ಕಣ್ಣನ್ನು ಕಿರಿದು ಮಾಡಿ ನೋಡಿದರೆ.. ಹಾವು! ಅರೆ, ಇಷ್ಟು ಬೇಗ ಹಾವೂ ವಾಕಿಂಗಿಗೆ ಬಂದುಬಿಟ್ಟಿತೇ ಎಂದು ಆಶ್ಚರ್ಯದಿಂದ ನೋಡುನೋಡುತ್ತಿದ್ದಂತೆಯೇ ಅದು ಎಲ್ಲಿಯೋ ಮಾಯವಾಗಿಬಿಟ್ಟಿತು. ಆದರೆ ಎಲ್ಲಿ ಹುಲ್ಲು ಅಲುಗಾಡುತ್ತಿದೆಯೋ ಅಲ್ಲಿ ಹಾವಿರುತ್ತದೆಯೆಂಬ ಕಲ್ಪನೆಯಿಂದ ಹುಡುಕುತ್ತಿದ್ದರೆ, ಅದ್ಯಾವ ಮಾಯದಲ್ಲೋ ನವಿಲೊಂದು ಹಾವಿನಹೆಡೆಯನ್ನು ಮೆಟ್ಟಿ ಕುಕ್ಕಿಕುಕ್ಕಿ ಮಣಿಸುತ್ತಿತ್ತು... ಹಾವೂ ತನ್ನ ಜೀವ ಉಳಿಸಿಕೊಳ್ಳಲು ಸೆಣಸಾಡುತ್ತಿತ್ತು. ಅಷ್ಟರಲ್ಲಿ ಅದನ್ನು ನೋಡಿಬಿಟ್ಟ ಚೆಲುವಯ್ಯ ಎಲ್ಲಿ ಅದನ್ನು ತನ್ನ ಹಿಡಿತದಿಂದ ಪಾರುಮಾಡಿಬಿಡುತ್ತಾನೋ ಎಂದು ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ದರದರನೆ ಎಳೆದುಕೊಂಡು ಗುಡ್ಡ ಹತ್ತಿಹೋಯಿತು.

ಇದೇಕೆ ಈ ಬೆಳಗು ಇಂಥದೊಂದು ಘಟನೆಗೆ ಸಾಕ್ಷಿಯಾಯಿತು ಎಂಬ ಬಗ್ಗೆ ಒಳಗೊಳಗೇ ಕಸವಿಸಿಗೊಂಡ. ಇವತ್ತು ಯಾರ ಮುಖ ನೋಡಿ ಎದ್ದೆನೋ, ಇನ್ನೂ ಏನೇನು ಕಾದಿದೆಯೋ ಎಂಬ ಅಳುಕಿನೊಂದಿಗೇ, ಭಯಗೊಂಡು ಬೆಳಕು ಹರಿದ ನಂತರವೇ ಹಸುಗಳಿಗೆ ಹುಲ್ಲು ಹಾಕಿದರಾಯಿತೆಂದುಕೊಂಡು ಅಲ್ಲೆಲ್ಲಾದರೂ ಇನ್ನೂ ಆ ಹಾವು ತಪ್ಪಿಸಿಕೊಂಡು ಇದ್ದಿರಬಹುದೆಂಬ ಭಯದಿಂದ ಮನೆಯೊಳಕ್ಕೆ ಓಡಿಬಂದು ದಢಾರನೆ ಬಾಗಿಲು ಹಾಕಿಕೊಂಡ. ಯಾರಾದರೂ ಕಳ್ಳರುಗಿಳ್ಳರು ಬಂದರೇನೋ ಎಂದೊಮ್ಮೆ ಕಣ್ಣುಬಿಟ್ಟು ನೋಡಿದ ಆತನ ಹೆಂಡತಿ ಮತ್ತೆ ಹಾಗೆಯೇ ದ್ದೆಗೆ ಜಾರಿದಳು.
***
ಈ ಕಾಡಿನಲ್ಲಿ, ಈ ಕತ್ತಲು ಸಾಮ್ರಾಜ್ಯದಲ್ಲಿ ಪ್ರಾಣಿಪಕ್ಷಿಗಳದ್ದೇ ಕಾರುಬಾರು. ಆದರೆ ಅವು ಬೆಳಕಾಗುತ್ತಿದ್ದಂತೆಯೇ ಭಯಾನಕ ಮನುಷ್ಯರ ಭಯದಿಂದ ಬದುಕಿದ್ದಾವೋ ಇಲ್ಲವೋ ಎಂಬಂತೆ ಅಡಗಿಹೋಗಿಬಿಡುವುದನ್ನು ಕಲ್ಪಿಸಿಕೊಂಡು ಸುಮ್ಮನೇ ಮಲಗಿದ. ಹಾಗೇ ಸುಮ್ಮನೆ ಆಲೋಚಿಸಿದ: ಈ ರಾತ್ರಿಯಲ್ಲಿ ಈ ಕಾಡಿನಲ್ಲಿ ಅದೆಷ್ಟು ಪ್ರಾಣಿಗಳು, ಅದೆಷ್ಟು ಪಕ್ಷಿಗಳು ತಮ್ಮ ಪ್ರಾಣಕ್ಕಾಗಿಯೋ, ಆಹಾರಕ್ಕಾಗಿಯೋ ಹೋರಾಡಿದ್ದಾವೋ; ಆ ಹೋರಾಟದಲ್ಲಿ ಅವೆಷ್ಟು ತಮ್ಮ ಜೀವವನ್ನು ಕಳೆದುಕೊಂಡಿದ್ದಾವೋ.. ಅಮಲ್ ಪ್ಲಾನೆಟ್‌ನಲ್ಲಿ ಬಿಂಬಿಸುವ ಪ್ರತಿಯೊಂದು ಘಟನೆಗಳೂ ಇದೊಂದು ರಾತ್ರಿಯಲ್ಲಿಯೇ ಈ ಕಾಡಿನಲ್ಲಿ ಘಟಿಸಿಹೋಗಿರಬಹುದು. ಆದರೆ ಅದೆಲ್ಲ ಯಾರಿಗೂ ಗೊತ್ತೇ ಆಗುವುದಿಲ್ಲ, ಬೆಳಗ್ಗೆ ನ್ಯೂಸೂ ಆಗುವುದಿಲ್ಲ. ಆದರೆ ಕ್ಷುಲ್ಲಕ ಮನುಷ್ಯಗೆ ಎಲ್ಲೋ ಏನೋ ಒಂದು ಸಣ್ಣ ನೋವಾದರೂ, ಅದೊಂದು ದೊಡ್ಡ ನ್ಯೂಸ್ ಆಗಿಬಿಡುತ್ತದೆ. ಇದು ಕೇವಲ ಮನುಷ್ಯರದ್ದೇ ಪ್ರಪಂಚ ಎಂದು ಎಲ್ಲರೂ ಭಾವಿಸಿಬಿಟ್ಟಿದ್ದಾರೆ...

ಒಂದುವೇಳೆ ತಾನೇನಾದರೂ ದೊಡ್ಡ ಪತ್ರಿಕೆಯೊಂದಕ್ಕೆ ಸಂಪಾದಕನಾಗಿಬಿಟ್ಟರೆ ಇಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಕೊಡಬೇಕೆಂದುಕೊಂಡ. ಆದರೆ ತಾನು ಹಾಗೆ ಪತ್ರಿಕೆಯೊಂದಕ್ಕೆ ಸಂಪಾದಕನಾಗುವುದೂ, ಗಾಂಧಿಮಹಾತ್ಮ ಒಂದೇ ಒಂದುದಿನ ಈ ದೇಶದ ಪ್ರಧಾಯಾಗಿ ಹೆಂಡ ಸಾರಾಯಿ ಬ್ರಾಂಡಿ ಬೀರುಗಳನ್ನೆಲ್ಲಾ ಬಂದು ಮಾಡುವುದೂ ಎರಡೂ ಒಂದೇ ಎಂದುಕೊಂಡು ತಿಳಿದ್ದೆಗೆ ಜಾರಲು ಪ್ರಯತ್ನಿಸಿದ. ಹೆಂಡತಿಯ ಮೈಮೇಲೆ ಕಾಲು ಹಾಕಿ ದ್ದೆಯನ್ನು ಆವಾಹಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆ ನವಿಲು, ಆ ಹಾವು ಒಟ್ಟಿಗೇಕೆ ಅಲ್ಲಿಗೆ ಬಂದಿದ್ದವು ಎಂಬಿತ್ಯಾದಿ ಪ್ರಶ್ನೆಗಳಿಂದಾಗಿ ದ್ದೆಯೇ ಬಾರದೇ ಪರದಾಡಿದ.

ಬರೀ ಬೆಳಕಾದರಷ್ಟೇ ಸಾಲದು, ಅಚ್ಚನೆಯ ಬಿಸಿಲು ಮೇಲೇರಿ ಬರಲಿ ಎಂದು ಕಾದಿದ್ದವನಂತೆ ಮತ್ತೆ ಬಣವೆಯ ಬಳಿಗೆ ಹೋದ. ಅಲ್ಲೆಲ್ಲಾ ಪರಿಶೀಲಿಸಿದ. ಬೆಳಗಿನ ಝಾವ ತಾನು ನೋಡಿದ ಘಟನೆಗೆ ಪುರಾವೆ ಸಿಗುವಂತಹ ಅವಶೇಷಗಳು ಅಲ್ಲೆಲ್ಲೂ ಕಾಣಲಿಲ್ಲ. ತಾನು ಆ ದೃಶ್ಯವನ್ನು ನೋಡದೇ ಇದ್ದಿದ್ದರೆ ಇಂಥದೊಂದು ಘಟನೆ ನಡೆದಿರುವುದಕ್ಕೆ ಪುರಾವೆಯೇ ಇರುತ್ತಿರಲಿಲ್ಲವಲ್ಲ ಎಂದುಕೊಂಡ. ಆದಾಗ್ಯೂ ತಾನು ನೋಡಿದ್ದು ಕನಸಿನಲ್ಲೇನೋ ಎಂಬ ಭ್ರಮೆಯಿಂದ ತಲೆಕೆಡಿಸಿಕೊಂಡವನಂತೆ ಕಣ್ಣಲ್ಲಿ ಕಣ್ಣಿಕ್ಕಿ ನೋಡಿದ.. ಊಹ್ಞುಂ..

ಅದನ್ನು ಅಲ್ಲಿಗೇ ಮರೆತು ಬಣವೆಯಿಂದ ಹುಲ್ಲನ್ನು ಹಿರಿದುಕೊಂಡು ಹಿಂದಿರುಗುವ ವೇಳೆಗೆ ಕಾಲಿಗೆ ಏನೋ ಸಿಕ್ಕು ಅಪ್ಪಚ್ಚಿಯಾದಂತಾಯಿತು. ಕಾಲು ಹಸಿಹಸಿಯಾದಂತಹ ಅನುಭವವಾಗಿ ಗಾಬರಿಯಿಂದ ಹಾವೋ ಕಪ್ಪೆಯೋ ಇರಬಹುದೆಂದು ದಡಬಡಾಯಿಸಿ ನೋಡಿದ.. ಮೊಟ್ಟೆಯೊಂದು ಕಾಲಿಗೆ ಸಿಕ್ಕಿ ಒಡೆದು ಹೋಗಿತ್ತು..
ಆ ಘಟನೆಯ ಎಲ್ಲ ವಿವರಗಳು ಸ್ಪಷ್ಟವಾಗಲಾರಂಭಿಸಿದವು.. ನವಿಲೊಂದು ಹುಲ್ಲಿನ ಬಣವೆಯ ಅಟ್ಟಣಗೆಯ ಆಸರೆಯಲ್ಲಿ ಮೊಟ್ಟೆಯಿರಿಸಿ ಕಾವು ಕೊಡಲು ಬಂದಿರುವುದು, ತನ್ನ ಮೊಟ್ಟೆ ತಿನ್ನಲು ಬಂದಿರುವ ಹಾವನ್ನು ನವಿಲು ರೋಷದಿಂದ ಕೊಂದಿರುವುದು ಇತ್ಯಾದಿ.. ಮೊಟ್ಟೆಗಾಗಿ ನಡೆದ ಅವುಗಳ ಅಷ್ಟೊಂದು ಹೋರಾಟದಲ್ಲೂ ಉಳಿದಿದ್ದ ಆ ಮೊಟ್ಟೆಯನ್ನು ಅನ್ಯಾಯವಾಗಿ ತಾನು ತುಳಿದುಹಾಕಿಬಿಟ್ಟೆನಲ್ಲಾ, ಒಂದು ನವಿಲನ್ನು ಹುಟ್ಟುವ ಮೊದಲೇ ಕೊಂದುಬಿಟ್ಟೆನಲ್ಲಾ ಎಂದು ಪರಿತಪಿಸಿದ. ಹುಷಾರಾಗಿ ಹೆಜ್ಜೆಯಿಟ್ಟು ಉಳಿದ ಮೊಟ್ಟೆಗಳು ಎಲ್ಲಿರಬಹುದೆಂದು ಹುಡುಕಾಡಿದ. ಬಣವೆಯ ಅಡಿ ಮೆತ್ತನೆಯ ಹುಲ್ಲುಹಾಸಿನ ಮೇಲೆ ಇಟ್ಟ ನಾಲ್ಕು ಮೊಟ್ಟೆಗಳು ಸಿಕ್ಕವು. ಅವುಗಳನ್ನು ಒಮ್ಮೆ ಮುಟ್ಟಿ ನೋಡಿ ಸಂಭ್ರಮಿಸಬೇಕೆಂದು ಅಸಿದರೂ, ಆ ನವಿಲು ಮನುಷ್ಯರ ವಾಸನೆಗೆ ಆ ಮೊಟ್ಟೆಗಳಿಗೆ ಮತ್ತೆ ಕಾವು ಕೊಡಲಾರದೇನೋ ಎಂಬ ಅಳುಕು ಉಂಟಾಗಿ ಸುಮ್ಮನೇ ಹಿಂದಿರುಗಿ ಬಂದ.

ಪ್ರತಿದಿನ ಮೊಟ್ಟೆಗಳನ್ನು ಗಮಸುತ್ತಲೇ ಇದ್ದ. ಆದರೆ ಆ ನವಿಲು ಮತ್ತೆ ಹೊಸದಾಗಿ ಮೊಟ್ಟೆ ಇಡಲಾಗಲೀ, ಇಟ್ಟ ಮೊಟ್ಟೆಗಳಿಗೆ ಕಾವು ಕೊಡಲಾಗಲೀ ಬರಲೇ‌ಇಲ್ಲ. ತನ್ನ ಪಾಡಿಗೆ ತಾದ್ದ ಅದನ್ನು ತಾನೇ ಹಾಳು ಮಾಡಿದೆನೇನೋ ಎಂಬ ಅಪರಾಧೀ ಪ್ರಜ್ಞೆಯಿಂದ ತೊಳಲಾಡಿದ. ಪ್ರಾಯಶಃ ಆ ಹೋರಾಟದಲ್ಲಿ ಹಾವಿನ ಕಡಿತಕ್ಕೆ ಸಿಕ್ಕು ನವಿಲು ಸತ್ತುಹೋಗಿರಬಹುದೇನೋ ಎಂದು ಭಾವಿಸಿ, ಮೊಟ್ಟೆಗಳನ್ನಾದರೂ ರಕ್ಷಿಸಬೇಕೆಂದುಕೊಂಡು ಅವುಗಳನ್ನು ಒಂದು ಮೊರದಲ್ಲಿ ಜೋಪಾನವಾಗಿ ಜೋಡಿಸಿಕೊಂಡು ಬಂದು, ಮನೆಯಲ್ಲಿ ಕಾವಿಗೆ ಕುಂತಿದ್ದ ಕೋಳಿಯ ಮಂಕರಿಯಲ್ಲಿ ಅದಕ್ಕೆ ಗೊತ್ತಾಗದಂತೆ ಇಟ್ಟುಬಿಟ್ಟ.
***

ಕೋಗಿಲೆಯ ಮೊಟ್ಟೆಗೆ ಕಾಗೆ ಕಾವು ಕೊಟ್ಟಂತೆ ನವಿಲಿನ ಮೊಟ್ಟೆಗೆ ಕೋಳಿ ಕಾವ ಕೊಟ್ಟು ಮರಿಮಾಡಿತು. ಆದರೆ ಅದೇನು ವ್ಯತ್ಯಾಸವಾಯಿತೋ ಗೊತ್ತಿಲ್ಲ, ಕೇವಲ ಎರಡು ಮರಿಗಳು ಮಾತ್ರ ಹುಟ್ಟಿದವು. ಇನ್ನೆರಡು ಮೊಟ್ಟೆಗಳಿಗೆ ಇನ್ನೊಂದಿಷ್ಟು ಕಾಲ ಕಾವು ಡಿದರೆ ಮರಿಗಳಾಗಬಹುದೇನೋ ಎಂದು ಆಶಿಸಿ, ಕೃತಕವಾಗಿ ಬತ್ತದ ಹುಲ್ಲು, ಗೋಣಿಚೀಲಗಳನ್ನು ಮುಚ್ಚಿಟ್ಟು ಕಾವು ಡಲು ಪ್ರಯತ್ನಿಸಿದ. ಆದರೆ ಎಂಟು ಹತ್ತು ದಿನ ಕಳೆದರೂ ಆ ಲಕ್ಷಣ ಕಾಣದೇ, ಕುತೂಹಲದಿಂದ ಒಂದು ಮೊಟ್ಟೆಯನ್ನು ಹೊಡೆದು ನೋಡಿದ. ಕೊಳೆತದ ಕೆಟ್ಟ ವಾಸನೆಯೊಂದು ಇಡೀ ಪರಿಸರವನ್ನು ವ್ಯಾಪಿಸಿ ವಾಂತಿಯ ವಾಕರಿಕೆ ಉಮ್ಮಳಿಸಿ ಬಂತು. ಇನ್ನೊಂದು ಮೊಟ್ಟೆಯನ್ನು ಹೊಡೆಯುವ ಪ್ರಯತ್ನ ಮಾಡದೇ ತಿಪ್ಪೆಯಲ್ಲಿ ಹೂತಿಟ್ಟು ಬಂದ.

ದಿನಗಳೆದಂತೆ ಬೇಗ ಬೇಗ ದೊಡ್ಡವಾದ ನವಿಲಿನ ಮರಿಗಳಿಗೂ ತನ್ನ ಮರಿಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸಿದ ತಾಯಿಕೋಳಿ ಓಡಾಡಿಸಿಕೊಂಡು ಕುಕ್ಕಲಾರಂಭಿಸಿತು. ತಾಯಿಯ ಬೆಚ್ಚನೆಯ ಪ್ರೀತಿ ಅವುಗಳಿಗೂ ದಕ್ಕಲಿ ಎಂದು ಚೆಲುವಯ್ಯ ಮಾಡಿದ ಪ್ರಯತ್ನಗಳೆಲ್ಲ ಆ ಕೋಳಿಯ ಮುಂದೆ ನಡೆಯಲಿಲ್ಲ. ಅವಾರ್ಯವೆಂಬಂತೆ ಬೇರೆಬೇರೆ ಮಂಕರಿಯಲ್ಲಿ ಮುಚ್ಚಲಾರಂಭಿಸಿದ. ಆದರೆ ಮೇಯಲು ಮಾತ್ರ ಒಟ್ಟಾಗಿ ಬಿಡಲಾರಂಭಿಸಿದ. ತನ್ನ ಮರಿಗಳಿಗೆ ಮೇವನ್ನು ಜಾಸ್ತಿ ಸಿಗುವಂತೆ ನೋಡಿಕೊಳ್ಳುತ್ತಿದ್ದ ಕೋಳಿ, ನವಿಲಿನ ಮರಿಗಳ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿತ್ತು. ಆದರೆ ಹದ್ದು, ನಾಯಿಯಂತಹ ಪರಕೀಯ ವೈರಿಗಳು ಬಂದಾಗ ಮಾತ್ರ ತಾಯಿಯಂತೆ ರಕ್ಷಿಸುತ್ತಿತ್ತು!

ಚೆಲುವಯ್ಯ ಕೋಳಿಗಳನ್ನು ಕೊಟ್ಟಿಗೆಯಲ್ಲಿ ಮುಚ್ಚುತ್ತಿದ್ದರೂ ನವಿಲಿನ ಮರಿಗಳನ್ನು ಮಾತ್ರ ಮನೆಯೊಳಗೇ ಮುಚ್ಚುತ್ತಿದ್ದ. ಅದೇಕೋ ಕೋಳಿಮರಿಗಳ ಜೀವಕ್ಕಿಂತ ನವಿಲಿನ ಮರಿಗಳ ಜೀವ ಹೆಚ್ಚು ಬೆಲೆಯುಳ್ಳದ್ದು ಎಂದು ಅವಗರಿವಿಲ್ಲದೇ ಅಸಿಬಿಟ್ಟಿತ್ತು. ಆದರೆ ಅದರ ತ್ಯಾಜ್ಯದ ವಾಸನೆಯು ಮನೆಯೊಳಗೆಲ್ಲ ಹರಡಿ ಹೆಂಡತಿ ಎಗರಾಡಲಾರಂಭಿಸಿದಳು. ಮೇಲಾಗಿ, 'ಅದರ ವಾಸನೆಗೆ ಮನೆಯೊಳಕ್ಕೆ ಹಾವುಗೀವೇನಾದರೂ ಬಂದರೇ.. ಮಕ್ಕಳಿರುವ ಮನೆ ಬೇರೆ..' ಎಂಬ ಭಯ ಹುಟ್ಟುಹಾಕಿದಳು. ಆದರೆ ಆರು ಏಳನೇ ಕ್ಲಾಸು ಓದುತ್ತಿದ್ದ ಮಕ್ಕಳೂ ಅವುಗಳೊಂದಿಗೆ ಆಟ ಆಡುತ್ತಾ, 'ನವಿಲು ನಮ್ಮ ರಾಷ್ಟ್ರಪಕ್ಷಿ..' ಎಂದು ಶಾಲೆಯಲ್ಲಿ ಬಾಯಿಪಾಠ ಮಾಡಿದ್ದನ್ನು ಅವ್ವಗೆ ಮನವರಿಕೆ ಮಾಡಿಕೊಡುತ್ತ, 'ಅವು ಮನೆಯೊಳಗೇ ಇರಲಿ ಬಿಡವ್ವ..' ಎಂದು ಒಪ್ಪಿಸುವಲ್ಲಿ ಯಶಸ್ವಿಯಾದವು.
ಮರಿಗಳು ದಿನದಿನಕ್ಕೂ ಬೆಳೆದು ದೊಡ್ಡವಾಗಲಾರಂಭಿಸಿದವು. ಬರುಬರುತ್ತ ಒಂದು ಗಂಡಾಗಿಯೂ ಇನ್ನೊಂದು ಹೆಣ್ಣಾಗಿಯೂ ಕಾಣಲಾರಂಭಿಸಿದವು. ಗಂಡಿನ ತಲೆಯ ಮೇಲೆ ಕಿರೀಟವೂ, ಬಾಲವೂ ಬೆಳೆಯಲಾರಂಭಿಸಿತು. ಹೆಣ್ಣುಮರಿ ಮಾತ್ರ 'ಗಿರಿರಾಜ' ಕೋಳಿಯಂತೆ ಕಾಣುತ್ತಿತ್ತು.

ಎಷ್ಟು ದಿನ ಎಂದು ಮನೆಯೊಳಗೆ ಮುಚ್ಚಿಟ್ಟುಕೊಳ್ಳುವುದು ಎಂದು ಹೊರಗೆ ಬಿಡಲಾರಂಭಿಸಿದ. ಹಾಗೆ ಮನೆಯಿಂದ ಹೊರಬಂದ ತಕ್ಷಣ ಎಲ್ಲ ಸಾಕುಪ್ರಾಣಿಗಳೂ, ಕಾಡುಪಕ್ಷಿಯಾದ ಇದು ಎಲ್ಲಿ ಶಾಶ್ವತವಾಗಿ ಊರನ್ನು ಸೇರಿಕೊಂಡು ತಮ್ಮ ಅಸ್ಥಿತ್ವಕ್ಕೇ ಧಕ್ಕೆ ತಂದುಬಿಡುವುದೋ ಎಂದು ಹೆದರಿಕೊಂಡು ವೈರಿಯಂತೆ ನೋಡಲಾರಂಭಿಸಿದವು. ಬೆಕ್ಕುಗಳು, ಹುಲಿಯ ನೇರ ವಾರಸುದಾರ ತಾನೇ ಎನ್ನುವಂತೆ ಹಲ್ಲು ಕಿರಿದು ಗುರ್ ಎಂದು ಘರ್ಜಿಸಲಾರಂಭಿಸಿದವು. ನಾಯಿಗಳು, ಬೊಗಳಿದರೆ ಎಲ್ಲಿ ತಪ್ಪಿಸಿಕೊಂಡುಬಿಡುತ್ತವೋ ಎಂದು ಮೆಲ್ಲಗೆ ಕಳ್ಳಹೆಜ್ಜೆಯಲ್ಲಿ ಬಂದು ಗಬಕ್ಕನೆ ಹಿಡಿಯಲು ಪ್ರಯತ್ನಿಸುತ್ತಿದ್ದವು. ಪುಣ್ಯಕೋಟಿ ವಂಶದ ದನಗಳೂ ಕೂಡ ಉಷ್ಟ್ರಪಕ್ಷಿಯನ್ನು ನೋಡಿದವುಗಳಂತೆ ಬೆದರಿ ಹಾಲು ಕೊಡಲು ಸ್ವರ ಬಿಡದೇ ಸತಾಯಿಸುತ್ತಿದ್ದವು.

ಚೆಲುವಯ್ಯನ ಮನೆಯ ಕೋಳಿಯ ಹೊಟ್ಟೆಯಲ್ಲಿ ನವಿಲಿನ ಮರಿಗಳು ಹುಟ್ಟಿವೆ ಎಂದು ಪ್ರಚಾರವಾಗಿ ಹತ್ತಾರು ಜನ ನೋಡಲು ಬರಲಾರಂಭಿಸಿದರು. ಹಾಗೆ ಬಂದವರು ಥರಾವರಿ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. 'ನವಿಲು ಕಾಡಲ್ಲಿ ಇರಬೇಕಾದ್ದು. ಅದನ್ನು ಸಾಕುವುದು ಸೃಷ್ಟಿ ಯಮಕ್ಕೆ ವಿರುದ್ಧವಾದದ್ದು. ಅದರಿಂದ ಇಂತಿಂಥ ಅಪಾಯಗಳು ಬಂದೊದಗುತ್ತವೆ. ಮೊದಲು ಇವುಗಳನ್ನು ಕಾಡಿಗೆ ಓಡಿಸಿಬಿಡಿ..' ಎಂದು ಜೋತಿಷ್ಯ ಗೊತ್ತೆನ್ನುವ ಊರಬ್ರಾಹ್ಮಣರು ಹೆದರಿಸಲಾರಂಭಿಸಿದರು. ಆದರೂ ಅನಾಥವಾಗಿರುವ ಅವುಗಳನ್ನು ಕಾಡಿಗೆ ಓಡಿಸಿಬಿಡಲು ಚೆಲುವಯ್ಯಗೆ ಯಾಕೋ ಮನಸ್ಸು ಬರಲಿಲ್ಲ.

'ಅವುಗಳಿಗೆ ನಾವು ಹಾಕುವ ಮೇವು ಸಾಕಾಗುವುದಿಲ್ಲ, ಅವು ಕಾಡಿನಲ್ಲಿ ಏನೇನು ತಿನ್ನುತ್ತವೋ ನಮಗೆ ಗೊತ್ತಿಲ್ಲ. ಅವು ಸ್ವಚ್ಛಂದವಾಗಿ ಕಾಡಿನಲ್ಲಿ ಆಡಿಕೊಂಡು ಬರಲಿ, ಬಿಟ್ಟುಬಿಡೋಣ..' ಎಂದು ಮಗ ಹೇಳಿದ ಮೇಲೆ ಆಗಲಿ ಎಂದು ಒಪ್ಪಿಕೊಂಡ ಚೆಲುವಯ್ಯ. ಶಾಲೆಗೆ ರಜೆಯಿರುವುದರಿಂದ, ಅವು ಎಲ್ಲಿ ಕಳೆದುಹೋಗಿಬಿಡುತ್ತವೋ ಎಂಬ ಆತಂಕದಿಂದ, ಒಂದೆರಡು ವಾರ ಕಾಲ ಅವುಗಳ ಜತೆ ಇದ್ದು ಮೇಯಿಸಿಕೊಂಡು ಬರುವಂತೆ ದೊಡ್ಡ ಮಗ ಸುರೇಶಗೆ ಒಪ್ಪಿಸಿದ.
ಗುಡ್ಡದ ಇಳಿಜಾರಿನಲ್ಲಿರುವ ತನ್ನ ಮನೆಯಿಂದ ಬಯಲು ಗದ್ದೆ ಕಡೆಗೆ ಮೇಯಲು ಹೊಡೆದುಕೊಂಡು ಹೋದ ಮಗ, ಅವು ಅವರಿವರ ಗದ್ದೆಯಲ್ಲಿ ಬತ್ತದ ತೆನೆಯನ್ನು ತಿನ್ನುತ್ತವೆ ಎಂಬ ಆಪಾದನೆಯನ್ನು ಹೊತ್ತು ತಂದ. ಆದರೆ ಕಬ್ಬಿನ ಗದ್ದೆಗೆ ಹೋದಾಗ ಮಾತ್ರ ಅದರ ಸೋಗೆಯ ಬಣ್ಣದ ಜೊತೆ ಕಳೆದುಹೋಗಿಬಿಡುವ ಆತಂಕ ಎದುರಿಸಿದ. ಆದರೆ ರಾಜ ರಾಣಿ ಎಂದು ಕೂಗು ಹಾಕಿದರೆ ಸಾಕು, ಅವು ಎಲ್ಲಿರುತ್ತಿದ್ದವೋ ಅಲ್ಲಿಂದಲೇ, ಇಷ್ಟು ದಪ್ಪದ ಗಂಟಲಿನ ತುಂಬ ಕೂಗುಹಾಕುತ್ತ ಓಡಿಬಂದುಬಿಡುತ್ತಿದ್ದವು. ಅವುಗಳಿಗೆ ಆ ಕಷ್ಟ ಏಕೆ, ಎಲ್ಲಿರುತ್ತವೆಯೆಂಬುದು ತಿಳಿದರೆ ತಾನೇ ಅಲ್ಲಿಗೆ ಹೋಗಬಹುದೆಂದು ಅವುಗಳ ಕೊರಳಿಗೆ ದನಗಳಿಗೆ ಕಟ್ಟುವಂತೆ ಗಂಟೆಗಳನ್ನು ಕಟ್ಟಿಬಿಟ್ಟ. ಮೊದಲು ಒಂದೆರಡು ಸಲ ಅವು ತಮ್ಮ ಬೋಳು ಕುತ್ತಿಗೆಯಿಂದ ಜಾರಿಸಿಕೊಂಡುಬಿಟ್ಟವಾದರೂ ಅವನ ಪ್ರೀತಿಯ ಹೊಡೆತಕ್ಕೆ ಹೆದರಿ, ಉದುರಿಹೋಗುತ್ತಿದ್ದರೂ ಕೊರಳೆತ್ತಿ ಸಿಕ್ಕಿಸಿಕೊಳ್ಳುವುದನ್ನು ರೂಢಿ ಮಾಡಿಕೊಂಡವು.

ಯಾವಾಗ ಅವು ಮೇಯ್ದ ನಂತರ ಸಂಜೆ ಮನೆಯನ್ನು ತಾನಾಗಿಯೆ ಹುಡುಕಿಕೊಂಡು ಬರಲಾರಂಭಿಸಿದವೋ ಆವಾಗ, ಮತ್ತು ರೆಕ್ಕೆ ಬಲಿತು ತಮ್ಮ ಕಾಲ ಮೇಲೆ ತಾವು ಂತುಕೊಳ್ಳುವ ಶಕ್ತಿಯನ್ನು ಗಳಿಸಿದವೋ ಆವಾಗ ಕಾಯಲು ಹೋಗುವುದನ್ನು ಲ್ಲಿಸಿದ ಮಗ, ಶಾಲೆಗೆ ಹೋಗಲಾರಂಭಿಸಿದ. ಸುರೇಶನ ಮನೆಯಲ್ಲಿ ನವಿಲುಗಳಿರುವ ಸುದ್ದಿ ತಿಳಿದಿದ್ದ ಗೆಳೆಯರೆಲ್ಲ ಗುರುಗಳ ಮಾರ್ಗದರ್ಶನದಲ್ಲಿ ಶಾಲಾವಾರ್ಷಿಕೋತ್ಸವಕ್ಕೆ ನವಿಲನ್ನು ಕುರಿತು ರೂಪಕವೊಂದನ್ನು ರೂಪಿಸಿಕೊಂಡು ಪ್ರಶಂಸೆ ಗಳಿಸಿದರು. ನವಿಲಿನ ಪುಕ್ಕ ಹೊದ್ದು ನವಿಲಿನ ಪಾತ್ರ ಮಾಡಿದ ಸುರೇಶ, ತನ್ನ ಸಹಜಾಭಿನಯಕ್ಕೆ ಅಂತರಶಾಲೆಗಳ ಮಟ್ಟದಲ್ಲಿ ಬಹುಮಾನ ಗಳಿಸಿಕೊಂಡು ಇನ್ನಷ್ಟು ಹಿರಿಹಿರಿ ಹಿಗ್ಗಿ, ನವಿಲುಗಳ ಬಗ್ಗೆ ತನಗೆ ಗೊತ್ತಿಲ್ಲದೆಯೇ ಒಂದು ಬಗೆಯ ಪ್ರೀತಿಯನ್ನು ಬೆಳೆಸಿಕೊಂಡ.
***

ಒಂದು ದಿನ ದಮ್ಮಡಿ ಬಡಿಯುತ್ತ ರಾಗಬದ್ಧವಾಗಿ ಹಾಡು ಹೇಳುತ್ತ ಬಂದ ನವಿಲೇಹಾಳಿನ ಪಿಂಜಾರರು ನವಿಲಿನ ಗರಿಗಳ ಪೊರಕೆಯ ಹಿಡಿಯಿಂದ ಮಕ್ಕಳ ತಲೆಯನ್ನು ಸವರುತ್ತ, ಒಳ್ಳೆಯದಾಗುತ್ತದೆಯೆಂದು ಆಶೀರ್ವದಿಸುತ್ತ ನಾಲ್ಕಾಣೆ, ಎಂಟಾಣೆ ಭಿಕ್ಷೆ ಬೇಡುತ್ತಿದ್ದವರು, ಚೆಲುವಯ್ಯ ಸಾಕಿದ್ದ ನವಿಲುಗಳನ್ನು ನೋಡಿ, 'ಇದು ಮ್ದುಕ್ಕೆ ಸಾಕಬಾರದು. ನಮ್ದು ಕಲಂದರ್‌ಗೆ ಕೊಟ್ಟುಬಿಡಬೇಕು' ಎಂದು, ಬೂದುಗುಂಬಳಕಾಯಿಯನ್ನು ಶಾನುಭಾಗರು ಹಕ್ಕಿಂದ ಕೇಳುವಂತೆ, ಅವ್ವನ ಬಳಿ ಕೇಳಿದರು.

ಅವ್ವ ಎಲ್ಲಿ ಅವುಗಳನ್ನು ಹಿಡಿದುಕೊಟ್ಟುಬಿಡುತ್ತಾಳೋ ಎಂದು ಹೆದರಿದ ಸುರೇಶ ಓಡಿಹೋಗಿ ಗದ್ದೆಯಲ್ಲಿ ನೇಗಿಲು ಹೂಡಿದ್ದ ಅಪ್ಪಗೆ 'ಹುಯ್ಯಿಮಾಮ' ಬಂದು ನವಿಲನ್ನು ಕೊಟ್ಟುಬಿಡುವಂತೆ ಕೇಳುತ್ತಿರುವ ಸುದ್ದಿ ಮುಟ್ಟಿಸಿದ. ಅವನಷ್ಟೇ ಆತಂಕದಿಂದ ಓಡಿಬಂದ ಚೆಲುವಯ್ಯ ಎತ್ತಿಗೆ ಹೊಡೆಯಲೆಂದು ಮಾದರ ಕೆಂಡಗ ಮಾಡಿಕೊಟ್ಟಿದ್ದ ಚರ್ಮದ ಬಾರಿಕೋಲಿಂದ ಬಾರಿಸುವವನಂತೆ ಆಕ್ರೋಶ ವ್ಯಕ್ತಪಡಿಸಿ, ಅವರನ್ನು ಊರಿಂದಲೇ ಓಡಿಸಿಬಿಟ್ಟ.

ಸುರೇಶನ ಅನೇಕ ಗೆಳೆಯರು ಅವನಂತೆಯೇ ತಾವೂ ನವಿಲಿನ ಗರಿಗಳನ್ನು ಪುಸ್ತಕದಲ್ಲಿ ಇರಿಸಿಕೊಂಡರೆ ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆಯೆಂದು ನಂಬಿ, ತಂದುಕೊಡುವಂತೆ ಪೀಡಿಸಲಾರಂಭಿಸಿದರು. ಗರಿಗಳನ್ನು ಕಿತ್ತರೆ ಅವಕ್ಕೆ ನೋವಾಗುವುದರಿಂದ, ಅದಾಗಿ ಉದುರಿಬಿದ್ದಾಗ ಮಾತ್ರ ತಂದುಕೊಡುವುದಾಗಿ ಹೇಳುತ್ತಿದ್ದ. ಅಲ್ಲಿಯವರೆಗೂ ಕಾಯಲು ಸಿದ್ಧರಿಲ್ಲದ ಅವರು, ಅವುಗಳನ್ನು ಓಡಾಡಿಸಿಕೊಂಡು ಹಿಡಿದು ಕಿರೀಟದಂತಹ ಗರಿಯ ತುದಿಯನ್ನು ಕತ್ತರಿಯಿಂದ ಕತ್ತರಿಸಲು ಪ್ರಯತ್ನಿಸುತ್ತಿದ್ದರು.

ಒಂದು ಸಲ ಮಗನ ಸಹಪಾಟಿಯೊಬ್ಬ ಗರಿಯನ್ನು ಬೀಳಿಸಲು ಕಲ್ಲಿಂದ ಹೊಡೆದುದನ್ನು ನೋಡಿದ ಚೆಲುವಯ್ಯ, ಅವನ ಕೆನ್ನೆಗೆ ಛಟೀರನೆ ಒಂದು ಏಟುಕೊಟ್ಟು, 'ನಗೆ ನೋವಾಯಿತೇ?' ಎಂದು ಕೇಳಿದ.. 'ಹೊಡೆದರೆ ನಗೆ ಹೇಗೆ ನೋವಾಗುತ್ತದೆಯೋ, ಅವಮಾನವಾಗುತ್ತದೆಯೋ ಹಾಗೆಯೆ ಅದಕ್ಕೂ ನೋವಾಗುತ್ತದೆ, ಅವಮಾನವಾಗುತ್ತ್ತದೆ. ಆದ್ದರಿಂದ ಯಾವುದೇ ಪ್ರಾಣಿಗಾಗಲೀ ಪಕ್ಷಿಗಾಗಲೀ ಹೊಡೆಯಬಾರದು.. ಗೊತ್ತಾಯ್ತಾ..' ಎಂದು ಬುದ್ಧಿಮಾತು ಹೇಳಿದ.

ಆದರೆ ಆ ಹುಡುಗ ಹೀಗೀಗೆಂದು ತನ್ನ ಅಪ್ಪಗೆ ಹೇಳಿದ. ಅದರಿಂದ ತನ್ನ ಗೌಡತ್ವಕ್ಕೇ ಅವಮಾನವಾಯಿತೆಂದು ಕೆರಳಿದ ಊರಗೌಡ, ಊರ ಮುಂದಿನ ಅರಳೀಮರದಡಿ ನ್ಯಾಯಕ್ಕೆ ಸೇರಿಸಿದ. ನ್ಯಾಯ ಹೇಳಬೇಕಾದವನು ಆತನೇ ಆಗಿದ್ದರಿಂದ, 'ಕಾಡನವಿಲುಗಳು ಊರಿಗೆ ಬಂದದ್ದರಿಂದ ಊರಿಗೆ ಬರಬಾರದ ಕಷ್ಟ ಬಂದಿದೆ. ಬತ್ತದ ಗದ್ದೆಗಳನ್ನೆಲ್ಲ ಮೇಯ್ದು ಹಾಳುಮಾಡಿದ್ದಾವೆ, ಅವುಗಳನ್ನು ತಿನ್ನಲೆಂದು ಸೀಳುನಾಯಿ, ನರಿಗಳೆಲ್ಲ ರಾತ್ರಿಹೊತ್ತು ಊರಿಗೆ ಲಗ್ಗೆಯಿಡುತ್ತ, ಮನುಷ್ಯರು, ಸಾಕು ಪ್ರಾಣಿಗಳಿಗೆಲ್ಲ ಜೀವಭಯ ಉಂಟಾಗಿದೆ..

'ಹೀಗೆ ಹತ್ತಾರು ಸಮಸ್ಯೆಗಳು ಸೃಷ್ಟಿಯಾಗಿ ನೆಮ್ಮದಿಯೇ ಇಲ್ಲದಂತಾಗಿಹೋಗಿದೆ.. ಆದ್ದರಿಂದ ಒಂದೋ, ನವಿಲುಗಳನ್ನು ಈ ಕೂಡಲೇ ಊರಿಂದ ಹೊರಗೆ ಹಾಕಬೇಕು. ಇಲ್ಲವೇ, ಚೆಲುವಯ್ಯನ ಕುಟುಂಬವೇ ಊರಿಂದ ಹೊರಹೋಗಬೇಕು' ಎಂದು ಫರ್ಮಾನು ಹೊರಡಿಸಿಬಿಟ್ಟ. ಚೆಲುವಯ್ಯನ ಮನೆ ಜವಾಗಿಯೂ ಊರಾಚೆಗೇ ಇದ್ದರೂ, ಊರಿಂದ ಆಚೆ ಹಾಕುವ ಶಿಕ್ಷೆಯನ್ನು, ಅವಮಾನವನ್ನು ಸಹಿಸಿಕೊಳ್ಳದಾದ.

ಸಂದಿಗ್ಧಕ್ಕೀಡಾದ ಚೆಲುವಯ್ಯ ರಾತ್ರಿಯೆಲ್ಲ ಅವುಗಳನ್ನು ತನ್ನ ಮಕ್ಕಳಂತೆ ತಬ್ಬಿಕೊಂಡು ಅತ್ತುಬಿಟ್ಟ. ಎಲ್ಲಾದರೂ ಹಾರಿ ಹೋಗಿ ಬಿಡಬಾರದೇ ನವಿಲುಗಳೇ, ಹಾರಿಹೋಗಿ ಆ ಕರಿಮುಗಿಲ ಮರೆಯಲ್ಲೆಲ್ಲಾದರೂ ಬದುಕಿಕೊಳ್ಳಬಾರದೇ ಎಂದು ಕವಿಯಂತೆ ಕನವರಿಸಿದ.

ಮಾರನೇ ದಿನ, ಊರನ್ನು ಧಿಕ್ಕರಿಸಿ ತಾನು ಬಾಳುವೆ ಮಾಡಲಿಕ್ಕಾಗದ್ದರಿಂದ, ನವಿಲುಗಳನ್ನು ಕಾಡಿಗೆ ಓಡಿಸುವುದಾಗಿ ನಾಲ್ಕೈದು ಮನೆಗಳಿದ್ದ ಆ ಕಾಡೂರ ಜನರೆದುರು ಘೋಷಿಸಿದ. ಎಲ್ಲಾದರೂ ಬದುಕಿಕೊಳ್ಳಿ ಎಂದು ಗಟ್ಟಿಮನಸ್ಸು ಮಾಡಿ, ದೀಪಾವಳಿಯಲ್ಲಿ ಓರಿಗಳನ್ನು ಓಡಿಸುವಂತೆ, ಅವುಗಳ ಬಾಲಕ್ಕೆ ಪಟಾಕಿ ಹಚ್ಚಿ ಬೆದರಿಸಿ ಕಾಡಿನತ್ತ ಓಡಿಸಿಬಿಟ್ಟ. ಜನರೆಲ್ಲಾ ಊರಿಗೆ ಬಂದ ಸಂಕಷ್ಟಗಳೆಲ್ಲ ಬಗೆಹರಿದುಬಿಟ್ಟಂತೆ ಸಂಭ್ರಮಿಸಿದರು.

ಹೀಗೆ ಕಾಡು ಸೇರಿದ ನವಿಲುಗಳು ಇರುಳಾಗುವ ತನಕ ಕಾಡ ನವಿಲುಗಳೊಂದಿಗೆ ಸೇರಿ ಆಟವಾಡಿ ನಲಿದು ಸಂಜೆ ಮತ್ತೆ ಮನೆಗೆ ಬಂದವು. ಒಸಲು ದಾಟಿದ ಹೆಣ್ಣನ್ನು ಹೇಗೆ ಒಳಗೆ ಸೇರಿಸಿಕೊಳ್ಳಲಾಗದೋ ಹಾಗೆ, ಅವುಗಳನ್ನು ಮನೆಯೊಳಕ್ಕೆ ಸೇರಿಸಿಕೊಳ್ಳಲಾರೆನೆನ್ನುವಂತೆ ಚೆಲುವಯ್ಯ ರಾಕರಿಸಿ ಬಾಗಿಲು ಹಾಕಿಕೊಂಡ. ಅವೂ ಹಠಮಾಡಿ ಧರಣಿ ಕುಂತಂತೆ ಬಾಗಿಲಲ್ಲೇ ಜೂಗರಿಸಿ ಕುಂತುಕೊಂಡವು.

ಮಧ್ಯರಾತ್ರಿ ಎರಡೋ ಮೂರೋ ಗಂಟೆಯಿರಬೇಕು. ನವಿಲಿನ ವಿಕಾರವಾದ ಕಿರುಚಾಟ, ಅದರ ಕೊರಳಿಗೆ ಕಟ್ಟಿದ್ದ ಗಂಟೆಯ ಸದ್ದಿಂದಾಗಿ ಚೆಲುವಯ್ಯಗೆ ಎಚ್ಚರವಾಗಿ ಓಡಿಬಂದು ಬಾಗಿಲು ತೆರೆದ. ನಾಲ್ಕೈದು ಬೀದಿನಾಯಿಗಳು ಒಟ್ಟಾಗಿ ಸೇರಿ, ನವಿಲೊಂದನ್ನು ಅಟ್ಟಾಡಿಸಿಕೊಂಡು ಹಿಡಿದು, ಒಂದೊಂದೂ ಒಂದೊಂದು ಕಡೆ ಬಾಯಿಹಾಕಿ ಕೀಳಲಾರಂಭಿಸಿದ್ದವು. ಅಂಗಳದ ತುಂಬ ರಕ್ತ, ಪುಕ್ಕಗಳು ಚೆಲ್ಲಾಪಿಲ್ಲಿಯಾಗಿ ಹರಡಿ ಒಳ್ಳೆ ರಣರಂಗದಂತಾಗಿಹೋಗಿತ್ತು.

ಚೆಲುವಯ್ಯ ಅಬ್ಬರಿಸುತ್ತಾ ಬಂದು ಕೈಗೆ ಸಿಕ್ಕದ್ದರಿಂದ ಅಟ್ಟಾಡಿಸಿ ಹೊಡೆದು, ಅವುಗಳ ಬಾಯಿಯಿಂದ ನವಿಲನ್ನು ಬಿಡಿಸಿಕೊಂಡು, ಮಗುವಿನಂತೆ ತೊಡೆಯಮೇಲೆ ಹಾಕಿಕೊಂಡು ಉಪಚರಿಸಿದ. ಸುರೇಶ ಓಡಿಹೋಗಿ ಒಂದು ಚೊಂಬು ರು ತಂದ. ಅದರ ಮೈಮೇಲಿದ್ದ ರಕ್ತದ ಕಲೆಗಳನ್ನೆಲ್ಲ ತೊಳೆದು ಒಂದಿಷ್ಟು ರು ಕುಡಿಸಿದ. ಸಾಯುವಾಗ ಕೊನೆಯ ಗುಟುಕನ್ನು ಗುಟುಕರಿಸುವಂತೆ ಕುಡಿದ ಅದು ಶ್ಯಕ್ತವಾಗಿ ಬಿದ್ದುಕೊಂಡಿತು.

ಇನ್ನೊಂದು ನವಿಲು ಕೊಕ್ಕಿಂದ ಕುಕ್ಕುತ್ತ ಆಕ್ರಮಣಕಾರರ ಮೇಲೆ ಆಕ್ರಮಣ ಮಾಡಿತ್ತಾದರೂ ತನ್ನ ಆತ್ಮರಕ್ಷಣೆಗಾಗಿ, ಹಾರಲಾರದೇ ಹಾರಿ ತಪ್ಪಿಸಿಕೊಂಡು ಮನೆಯ ಮೇಲೆ ಕುಳಿತಿದ್ದುದು, ಸಾವಿನ ನಡುಕದಿಂದ ಹೊರಬಂದಂತೆ ಕೆಳಗೆ ಹಾರಿಬಂದು ಕಣ್ಣೀರು ಸುರಿಸಿತು. ತನ್ನ ಒಡಹುಟ್ಟಿದ ಹೆಣ್ಣುನವಿಲಿನ ಮೈಯ್ಯನ್ನೆಲ್ಲ ಕೊಕ್ಕಿಂದ ಸವರುತ್ತ ಸಾಂತ್ವನ ಹೇಳಿತು.

ಚೆಲುವಯ್ಯ ಉರುಮಂಜನ್ನು ಗಾಯಕ್ಕೆ ಮೆತ್ತಿದ. ಬೆಳಗ್ಗೆಯಾದ ಕೂಡಲೇ ಪೇಟೆಗೆ ತೆಗೆದುಕೊಂಡು ಹೋಗಿ ಡಾಕ್ಟರಿಗೆ ತೋರಿಸಬೇಕೆಂದುಕೊಂಡ.

ಆದರೆ ಬೆಳಗ್ಗೆ ಎದ್ದ ಊರಜನ, ಚೆಲುವಯ್ಯ ನವಿಲನ್ನು ಜವಾಗಿ ಕಾಡಿಗೆ ಓಡಿಸದೇ ಸುಮ್ಮನೆ ನಾಟಕ ಮಾಡಿದ್ದಾನೆಂದು, ರಾತ್ರಿ ನಡೆದ ಘಟನೆಯಿಂದ ಊರಿಗೆ ದ್ದೆ, ನೆಮ್ಮದಿಗಳೇ ಇಲ್ಲವೆಂದೂ, ಅದ್ದರಿಂದ ಚೆಲುವಯ್ಯನ ಕುಟುಂಬವನ್ನೇ ಊರಿಂದ ಬಹಿಷ್ಕರಿಸಬೇಕೆಂದು ಪಟ್ಟುಹಿಡಿದರು.

ಇದ್ಯಾವುದಕ್ಕೂ ಜಗ್ಗದ ಚೆಲುವಯ್ಯ, ವೆಲ್ಲಾ ಮನುಷ್ಯರಾ? ಮಗೆ ಮಾನವೀಯತೆ ಎಂಬುದೇನಾದರೂ ಇದೆಯಾ? ಎಂದೆಲ್ಲಾ ಬೈದು, ಗಂಡು ನವಿಲನ್ನು ಮನೆಯೊಳಗೆ ಕೂಡಿಹಾಕಿ ಹುಷಾರಾಗಿ ನೋಡಿಕೊಳ್ಳಲು ಮಗಗೆ ಹೇಳಿ, ಮಂಕರಿಯೊಳಗೆ ಮೆತ್ತೆಗೆ ಹುಲ್ಲನ್ನು ಹಾಸಿಕೊಂಡು, ಅದರಲ್ಲಿ ಗಾಯಗೊಂಡ ನವಿಲನ್ನು ಕೂರಿಸಿಕೊಂಡು ಪೇಟೆಯತ್ತ ನಡೆದ.

ವೆಟರ್ನರಿ ಡಾಕ್ಟರರು ಪರೀಕ್ಷಿಸಿ, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಡಿ, ಇಷ್ಟು ಉದ್ದನೆಯ ಔಷಧಿಯ ಚೀಟಿಯನ್ನು ಬರೆದುಕೊಟ್ಟರು. ಕಾಡುಪಕ್ಷಿಯೊಂದನ್ನು ಉಳಿಸಲು ಚಲುವಯ್ಯ ತೋರುತ್ತಿರುವ ಶ್ರದ್ಧೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಅದರಿಂದ ಖುಷಿಗೊಂಡು ಹೊರಬಂದರೂ ಮೆಡಿಕಲ್ ಷಾಪಿನಲ್ಲಿ ಆ ಔಷಧಿಗಳ ಬೆಲೆ ಸಾವಿರಾರು ರೂಪಾಯಿಗಳೆಂದು ಕೇಳಿ ಹೌಹಾರಿಹೋದ. ಮನೆಗೆ ಹೋಗಿ ದುಡ್ಡನ್ನು ತಂದು ಔಷಧಿಯನ್ನು ತೆಗೆದುಕೊಂಡು ಹೋಗುವುದೆಂದು ರ್ಧರಿಸಿದ.

ಇಂಜೆಕ್ಷನ ಪ್ರಭಾವದಿಂದ ಸ್ವಲ್ಪ ಚೇತರಿಸಿಕೊಂಡಂತಾದ ನವಿಲನ್ನು ಮನೆಯಲ್ಲಿ ಇರಿಸಿ ಅದಕ್ಕೆ ಮೇವು ಹಾಕುವಂತೆ ಹೆಂಡತಿಗೆ ಹೇಳಿ, ಆಕೆಯ ಕಾಸಿನಸರವನ್ನು ಈಸಿಕೊಂಡು ಪೇಟೆಯತ್ತ ನಡೆದ. ಮಾರ್ವಾಡಿ ಅಂಗಡಿಯೊಂದರಲ್ಲಿ ಅದನ್ನು ಅಡವಿಟ್ಟು ಔಷಧಿಯನ್ನು ಖರೀದಿಸಿ ಹಾಕಲು ಓಡೋಡಿ ಬಂದ.
ಅಷ್ಟರಲ್ಲಾಗಲೇ ಮನೆಯ ಮುಂದೆ ಪೊಲೀಸರು ಂತಿರುವುದನ್ನು ಕಂಡು ಚೆಲುವಯ್ಯ ದಂಗಾಗಿಹೋದ. ಯಾರಿಗೆ ಏನಾಯಿತೋ ಎಂದು ಓಡಿಹೋಗಿ ನೋಡಿದ. ಊರಗೌಡ ನವಿಲುಗಳನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡು ಹಿಂಸಿಸುತ್ತಿರುವ ಬಗ್ಗೆ ತನ್ನ ವಿರುದ್ಧ ದೂರು ಡಿರುವುದರಿಂದ ಅರೆಸ್ಟ್ ಮಾಡಲು ಬಂದಿರುವುದಾಗಿ ತಿಳಿದುಬಂತು. ತಾನು ಅವುಗಳ ರಕ್ಷಣೆ ಮಾಡುತ್ತಿರುವುದಾಗಿ ವಿಧವಿಧವಾಗಿ ಬೇಡಿಕೊಂಡರೂ, ಅದನ್ನೆಲ್ಲಾ ಕೋರ್ಟಿನಲ್ಲಿ ಹೇಳುವಿಯಂತೆ ಬಾ ಎಂದು ಎಳೆದುಕೊಂಡುಹೋದರು. ಗಾಯಗೊಂಡ ನವಿಲಿನೊಂದಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಹಾಕಿಕೊಂಡಿರುವುದಾಗಿ ಕೇಸು ದಾಖಲು ಮಾಡಿದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಕೋರ್ಟೂ ಸಹ ವಿಚಾರಣೆಯ ಸಲುವಾಗಿ ಮೂರು ದಿನಗಳವರೆಗೆ ಪೊಲೀಸರ ವಶಕ್ಕೆ ಡಿತು.

ಚೆಲುವಯ್ಯ ಲಾಕಪ್‌ಗೆ ಹೋಗುತ್ತಿದ್ದಂತೆಯೇ ಯಾವಯಾವ ಔಷಧಿಯನ್ನು ಏನು ಮಾಡಬೇಕೆಂದು ತಿಳಿಯದ್ದರಿಂದ, ಕಾಸಿನಸರ ಅಡಯಿಟ್ಟು ತಂದಿದ್ದ ಔಷಧಿಗಳೂ ಮೌನವಾಗಿ ಕುಂತಿದ್ದವು. ಒಂದು ದಿನಮಾನಕಾಲ ಒದ್ದಾಡಿ ಒದ್ದಾಡಿ ಹಾಗೂ ಹೀಗೂ ಗುಟುಕುಜೀವ ಹಿಡಿದುಕೊಂಡಿದ್ದ ಆ ಹೆಣ್ಣುನವಿಲು, ಇನ್ನು ತಂದ ಸಾಧ್ಯವಿಲ್ಲವೆನ್ನುವಂತೆ ಉಸಿರುಬಿಟ್ಟಿತು.
***

ಸುರೇಶ ಅಪ್ಪನ ಅನುಪಸ್ಥಿತಿಯಲ್ಲಿ, ಅವ್ವನ ಸಹಕಾರದೊಂದಿಗೆ ಹಿತ್ತಲಲ್ಲಿ ಒಂದು ಗುಂಡಿತೋಡಿ ಅದರ ಸಂಸ್ಕಾರವನ್ನು ನೆರವೇರಿಸಿದ. ಬದುಕುಳಿದಿದ್ದ ಆ ಗಂಡುನವಿಲು ವಿಕಾರವಾಗಿ ಕಿರುಚುವ ಮೂಲಕ ತನ್ನ ನೋವನ್ನು ತೋಡಿಕೊಂಡಿತು. ಒಂದೆರಡು ದಿನ ಕಾಳುಕಡಿಗಳನ್ನು ತಿನ್ನದೇ ಶೋಕ ಆಚರಿಸಿತು.
ಸ್ಟೇಷನಲ್ಲಿ ಮೂರು ದಿನ ಕಳೆದು ನಾಲ್ಕನೆಯ ದಿನಕ್ಕೆ ಅವನದೇನೂ ತಪ್ಪಿಲ್ಲ ಎಂದು ವಿಚಾರಣೆಯಿಂದ ತಿಳಿದು ಬಂದಿದ್ದರಿಂದ, ಸರ್ಕಾರದ ಊಟ ಬೇರೆ ದಂಡ ಎಸಿಯೋ ಏನೋ, ಚೆಲುವಯ್ಯನನ್ನು ಜಾಮೀನ ಮೇಲೆ ಬಿಡುಗಡೆ ಮಾಡಿ ಕಳಿಸಿದರು.

ಸಪ್ಪೆಮೋರೆ ಹಾಕಿಕೊಂಡು ಮನೆಗೆ ಬಂದ ಚೆಲುವಯ್ಯ, ಬದುಕುಳಿದಿದ್ದ ಗಂಡುನವಿಲಿನ ಮೇಲೆ ಮುಸಿಕೊಂಡಿದ್ದರಿಂದ, ಅದು ತನ್ನ ಕೊಕ್ಕಿಂದ ರಮಿಸುವಂತೆ ಅವನ ಮುಖವನ್ನೆಲ್ಲಾ ಸವರಿತು. ಮೈಮೇಲೆ ಬಿದ್ದು ಒರಳಾಡಿತು. ತನ್ನ ಜತೆಗೆ ಇದ್ದ ಒಂದು ಜೀವವೂ ಸತ್ತುಹೋಗಿದ್ದರಿಂದ, ಪಾಪ, ತನ್ನ ನೋವನ್ನು ನನ್ನ ಬಳಿ ಅಲ್ಲದೇ ಇನ್ನೆಲ್ಲಿ ತಾನೆ ತೋಡಿಕೊಳ್ಳಲು ಸಾಧ್ಯ ಎಂದು ಭಾವಿಸಿ, ಆತನೂ ಮರುಗಿ ಅದರ ತಲೆ-ಮೈ ತಡವಿ ಸಾಂತ್ವನ ಹೇಳಿದ. ಇನ್ನು ಮುಂದೆ ನಾದ್ದೇನೆ, ಹೆದರಬೇಡ ಎಂದು ಧೈರ್ಯ ಡಿದ.

ಆ ನವಿಲೇ ಸತ್ತುಹೋಗಿದ್ದರಿಂದ, ಪ್ಯಾಕೆಟ್ಟು ಹೊಡೆಯದೇ ಹಾಗೇ ಇಟ್ಟಿದ್ದ ಔಷಧಿಯನ್ನು ವಾಪಸ್ಸು ಕೊಟ್ಟು, ಸಾಲವನ್ನಾದರೂ ತೀರಿಸಿ ಕಾಸಿನ ಸರವನ್ನು ಬಿಡಿಸಿಕೊಂಡು ಬರೋಣವೆಂದು ಮೆಡಿಕಲ್ ಷಾಪಿಗೆ ಹೋದ. ಆದರೆ ಆತ ಆಗಲೇ ಬಿಲ್ಲು ಹರಿದಿರುವುದರಿಂದ ಔಷಧಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಬರುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಹೌಹಾರಿದ ಚೆಲುವಯ್ಯ ಜಗಳ ಮಾಡಿದ. ಅಂಗಡಿಯ ಮುಂದೆ ಧರಣಿ, ಉಪವಾಸ ಕೂರುವುದಾಗಿ ಬೆದರಿಸಿದ. ಕೊನೆಗೆ ಆತ ಡಿಸ್ಕೌಂಟ್ ದರದಲ್ಲಿ ಕೊಂಡುಕೊಳ್ಳುವುದಾಗಿ ಹೇಳಿ, ನೂರಕ್ಕೆ ಎಪ್ಪತ್ತೈದರಂತೆ ಹಿಂದಿರುಗಿಸಿದ.

ಅಷ್ಟು ಹಣದಲ್ಲಿ ಕಾಸಿನಸರವನ್ನು ಬಿಡಿಸಿಕೊಳ್ಳಲು ಸಾಧ್ಯವಾಗದೇ, ಇನ್ನೊಂದಷ್ಟು ದುಡ್ಡು ಸೇರಿಸಿಕೊಂಡು ಬಂದು ಬಿಡಿಸಿಕೊಳ್ಳುವುದೆಂದು ರ್ಧರಿಸಿ ಮನೆಯತ್ತ ನಡೆದ. ಆದರೆ ಕ್ರಮೇಣ ಮನೆಯವರ ತುತ್ತಿನ ಚೀಲ ತುಂಬಿಕೊಳ್ಳುವ ದರ್ದಿನಲ್ಲಿ ಹಣ ವಿಯೋಗವಾಗಿ ಆತನ ಹೆಂಡತಿಯ ಕಾಸಿನಸರದ ಕನಸು ಕನಸಾಗಿಯೇ ಉಳಿದುಹೋಯಿತು..

ತನ್ನ ತೀರ್ಮಾನವನ್ನು ಗೌರವಿಸದ್ದಕ್ಕೆ ಹೆಂಗೆ ಜೈಲಿಗೆ ಕಳಿಸಿದೆ ನೋಡು ಎಂದು ಗೌಡ ಮತ್ತೆ ಮತ್ತೆ ಮೀಸೆ ತಿರುವಿಕೊಂಡು ಹಂಗಿಸಿದಂತಾಗುತ್ತಿತ್ತು.. ಅದೇ ವೇಳೆಗೆ ತನ್ನ ತೀರ್ಮಾನಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲವಲ್ಲ ಎಂಬ ಹತಾಷೆ ಗೌಡಗೂ ಕಾಡಲಾರಂಭಿಸಿತು.. 'ನವಿಲನ್ನು ಕಾಡಿಗೆ ಅಟ್ಟಲು ಚೆಲುವಯ್ಯ ವಿಫಲನಾಗಿರುವುದರಿಂದ ಅವನು ಹಾಗೂ ಅವನ ಕುಟುಂಬವನ್ನು ಊರಿಂದ ಬಹಿಷ್ಕರಿಸಲಾಗಿದೆ. ಊರಿನ ಯಾರೂ ಅವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಕೂಡದು.. ಒಂದು ವೇಳೆ ಕದ್ದುಮುಚ್ಚಿ ಇಟ್ಟುಕೊಂಡರೆ ಅವರನ್ನೂ ಬಹಿಷ್ಕರಿಸಲಾಗುವುದು..' ಎಂದು ಏಕಪಕ್ಷೀಯವಾಗಿ ಘೋಷಿಸಿ, ಡಂಗುರ ಹೊಡೆಸಿದ..

ತನ್ನದಲ್ಲದ ತಪ್ಪಿಗೆ ಯಾಕೆ ಹೀಗೆಲ್ಲ ದ್ವೇಷ ಕಾರುತ್ತಿದ್ದಾನೆ ಎಂದು ಚೆಲುವಯ್ಯ ಆಶ್ಚರ್ಯಗೊಂಡ. ತಾನೇನು ತಪ್ಪು ಮಾಡಿದ್ದೇನೆ ಎಂದು ಅವಲೋಕಿಸಿಕೊಂಡ. ತಾನು ಮಾಡಿದ ಒಂದೇ ಒಂದು ತಪ್ಪೆಂದರೆ ಗೌಡನ ಮಗಗೆ ಹೊಡೆದದ್ದು.. ತಾನು ಬೇಕೆಂದೇನೂ ಹೊಡೆದಿಲ್ಲವಲ್ಲ, ಅವನು ತಪ್ಪು ಮಾಡಿದ್ದಕ್ಕೆ, ಅದೂ ಒಂದೇ ಒಂದು ಏಟು ಹೊಡೆದದ್ದಕ್ಕೆ ಇಷ್ಟೊಂದು ದ್ವೇಷವೇ.. ಎಂದು ಈ ದೇಶದ ಕಾನೂನು-ವ್ಯವಸ್ಥೆಗಳ ಬಗ್ಗೆಯೇ ಭ್ರಮರಸನಗೊಂಡವನಂತೆ ತನ್ನ ಮಗನ ಮುಂದೆ ಅವಲತ್ತುಕೊಂಡ.

ಊರು-ಕಾಡನ್ನೆಲ್ಲ ತನ್ನ ಸುಪರ್ದಿನಲ್ಲಿ ಇಟ್ಟುಕೊಳ್ಳಬೇಕೆನ್ನುವ ಉಮೇದಿನಲ್ಲಿ ಈ ಗೌಡ ಏನು ಮಾಡಲೂ ಹೇಸುವುದಿಲ್ಲವಲ್ಲ, ಇಂತಹ ಸಮಾಜದಲ್ಲಿ ಮುಂದೆ ನು ಹೇಗೆ ಬಾಳುತ್ತೀಯಾ ಮಗನೇ ಎಂದು ಪರಿತಪಿಸಿದ. ಊರ ಜನರ ಸಹವಾಸ ಅಸಹ್ಯವೆಸಿ, ತನ್ನ ಪಾಡಿಗೆ ತಾನು ಬಾಳಬೇಕೆಂದು ಬಯಸಿ ಜನಸಂಪರ್ಕವಿರದ ಅರೆಮಲೆನಾಡಿನ ಈ ಕಾಡಿಗೆ ಬಂದರೆ ಇಲ್ಲಿಯೂ ಈ ಜನಗಳ ಕಾಟ ತಪ್ಪಲಿಲ್ಲವಲ್ಲ ಎಂದು ಜೀವ ಸಂಕುಲದ  ಬಗ್ಗೆಯೇ ಜಿಗುಪ್ಸೆಗೊಂಡ.
***

ಒಂದು ದಿನ ಬೆಳಬೆಳಗ್ಗೆಯೇ ಪೊಲೀಸರ ಹಿಂಡು ಊರೊಳಕ್ಕೆ ನುಗ್ಗಿತು. ಬೆಳಗ್ಗಿನ ಉಪಕರ್ಮಗಳಿಗೆಂದು ಕೆರೆಕಡೆ ಹೋಗಿದ್ದ ಚೆಲುವಯ್ಯ ತನಗೆ ಇನ್ನೇನು ಕರ್ಮ ಕಾದಿದೆಯೋ ಎಂದು ಅವರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಒಂದು ಬಿದಿರಿನ ಮೆಳೆಯ ಮರೆಗೆ ಸರಿದುಕೊಂಡ. ಆದರೆ ಅವರ್‍ಯಾರು ಇವನನ್ನು ಹುಡುಕಿಕೊಂಡು ಬಂದವರಾಗಿರದೇ ಸೀದ ಗೌಡನನ್ನೇ ಹುಡುಕಿಕೊಂಡು ಬಂದಿದ್ದರು. ಪೇಟೆಯಲ್ಲಿ ಓದುತ್ತಿದ್ದ ಅವನ ದೊಡ್ಡ ಮಗ ಹಾಗೂ ಅವನ ಗೆಳೆಯನನ್ನು, ಜತೆಗೆ ಅದಕ್ಕೆ ಕುಮ್ಮಕ್ಕು ಡಿದ್ದಕ್ಕಾಗಿ ಗೌಡನನ್ನು ಅರೆಸ್ಟ್ ಮಾಡಿಕೊಂಡು ಹೊರಟರು. ಬೇಟೆಗೆ ಬಳಸಿದ್ದ ಬಂದೂಕು, ಹಣೆಗೆ ಕಟ್ಟುವ ಆರು ಷೆಲ್ಲಿನ ಬ್ಯಾಟರಿ, ಜತೆಗೆ ಸತ್ತ ಜಿಂಕೆಯ ಬಾಡಿಯನ್ನೂ ಸೀಜು ಮಾಡಿಕೊಂಡು ಹೋದರು.

ಇದೆಲ್ಲ ಹೇಗಾಯಿತು, ಈ ಕಾಡಿನಂತಹ ಊರಿನ ಸಮಾಚಾರ ಪೊಲೀಸರವರೆಗೆ ಹೇಗೆ ಹೋಯಿತು ಎಂದು ಜನರೆಲ್ಲ ಮಾತಾಡಿಕೊಳ್ಳುತ್ತ, ಅದರ ಕರ್ತೃ ಚೆಲುವಯ್ಯನೇ ಎಂಬಲ್ಲಿಗೆ ಬಂದು ಂತಿತು. ತನಗೆ ಏನೇನೂ ಗೊತ್ತಿಲ್ಲ ಎಂದರೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಆದರೆ ಹತ್ತಿರ ಬಂದ ಸುರೇಶ ಗುಟ್ಟಾಗಿ ತಾನೇ ಬೆಳಗ್ಗಿನ ಜಾವ ಹೋಗಿ ಪೊಲೀಸರಿಗೆ ತಿಳಿಸಿ ಬಂದಿದ್ದಾಗಿ ಹೇಳಿ, ಆಶ್ಚರ್ಯ ಹುಟ್ಟಿಸಿದ. ಇಷ್ಟೆಲ್ಲ ನಗೆ ಹೇಗೆ ಗೊತ್ತಾಯಿತು ಎಂದುದಕ್ಕೆ, 'ಇದು ನ್ನ ಕಾಲವಲ್ಲವಲ್ಲ' ಎಂಬ ಸುರೇಶನ ಚುಟುಕ ಉತ್ತರವನ್ನು ಚೆಲುವಯ್ಯ ಅರಗಿಸಿಕೊಳ್ಳದಾದ.

ಆ ಗಂಡು ನವಿಲುಮರಿ ತಾನು ಬೆಳೆದು ದೊಡ್ಡವನಾಗಿದ್ದೇನೆ, ಹೆಣ್ಣನ್ನು ಆಕರ್ಷಿಸುವಷ್ಟು ಪ್ರೌಢನಾಗಿದ್ದೇನೆ ಎಂಬಂತೆ, ತನ್ನ ಉದ್ದನೆಯ ಗರಿಗಳನ್ನು ಬಿಚ್ಚಿ ಛತ್ರಿಯಂತೆ ಹರಡಿಕೊಂಡು ನರ್ತಿಸಲಾರಂಭಿಸಿತು. ಸುರೇಶನೂ ಅದರ ಜೊತೆಗೆ ಹೆಜ್ಜೆ ಹಾಕಿದ. ಚೆಲುವಯ್ಯ ಈವರೆಗಿನ ತನ್ನ ನೋವು, ಸಂಕಟಗಳನ್ನೆಲ್ಲ ಮರೆತು ಅದರ ಆ ಕುಣಿತಕ್ಕೆ ಸಂಭ್ರಮಿಸಲಾರಂಭಿಸಿದ. ಹೆಂಡತಿ ಮಕ್ಕಳೂ ಜತೆ ಸೇರಿಕೊಂಡು ಕೇಕೆ ಹಾಕಿದರು. ಅದರ ಆ ಬಣ್ಣ.., ಅದರ ಆ ಗಾಂಭೀರ್ಯ.., ಅದರ ಆ ಸಂಭ್ರಮ.. ಯಾವ ಚಿತ್ರಕಾರನೂ ಚಿತ್ರಿಸಲಾರದಷ್ಟು ಆಪ್ತವಾಗಿತ್ತು, ಯಾವ ಕವಿಯೂ ವರ್ಣಿಸಲಾರದಷ್ಟು ಅಪ್ಯಾಯಮಾನವಾಗಿತ್ತು.

ತನ್ನ ಕಾಮಪ್ರಚೋದಕ ನರ್ತನದಿಂದ ಮುಜುಗರಗೊಂಡಂತೆ ನವಿಲು ಗರಿಮುಚ್ಚಿಕೊಂಡು, ನಾಚಿಕೆಯಿಂದ ಓಡಿಬಂದು ಚೆಲುವಯ್ಯನ ಮಡಿಲಿನಲ್ಲಿ ಮುಖ ಮರೆಸಿಕೊಂಡು ಕುಳಿತಿತು.. ಹೆಂಡತಿ ಮಕ್ಕಳೆಲ್ಲರೂ ನವಿಲನ್ನು ಮುಗಿಬಿದ್ದು ತಬ್ಬಿಕೊಂಡರು...
                 *****

ವಿಶ್ವರೂಪ

- ಗಿರಿಜಾಪತಿ ಎಂ. ಎನ್

ಈ ನೆಲವು ಬರಿಯ ಮಣ್ಣಲ್ಲವೊ
ಈ ನೆಲದ ನುಡಿ ಕಿರಿದಲ್ಲವೊ
ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ
ವಿಶ್ವರೂಪವು ತೆರೆದಿದೆ

ಬಿಂಕ ಬೆಡಗಿನ
ನುಡಿಯ ಸಂಕರ,
ತುಂಬ ಬಹುದೆ
ತಾಯ್ನುಡಿ ಸಾಗರ?
ಒನಪಿನೊನಪಿನ
ಶಬ್ದ ಡಂಗುರ
ತೋರಬಹುದೆ ಸತ್ಯ ಶಿವ ಸುಂದರ...

ಭಾಷೆಯೆಂಬುದು
ಅನ್ನ ನಿಯತಿಯೆ?
ಅನ್ಯ ತಾಯಲಿ
ಜೋಗುಳವೆಲ್ಲಿಯೊ?
ಮಧುರಾನುಭಂಧದ
ಭಾವದೊಳದನಿ
ನನ್ನ ತಾಯನುಡಿ
ಗೆಣೆಯೆಲ್ಲಿಯೂ...

ಯಾವ ಮಡಿಲದು
ನಿನ್ನನೊಳಕೊಳುವುದು
ಎಂಬುದೇತಕೆ
ಮರೆವೆಯೋ...
ನೂರು ಭಾಗ್ಯಕೆ,
ನೂರು ರಾಗಕೆ
ತನ್ನ-ಬೆಳಕನೆ ಹಿಡಿವುದು

        *****

ಕೀಲಿಕರಣ: ಕಿಶೋರ್‍ ಚಂದ್ರ

ಗಿರಣಿ ವಿಸ್ತಾರ ನೋಡಮ್ಮಾ

-ಶಿಶುನಾಳ ಶರೀಫ್

ಗಿರಣಿ ವಿಸ್ತಾರ ನೋಡಮ್ಮಾ
ಶರಣಿ ಕೂಡಮ್ಮ                                                        ||ಪ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ                ||ಅ.ಪ.||

ಜಲ ಆಗಿನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಆಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸೆವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ       ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳವಿಯೊಳು ಎಳೆತುಂಬುತದರೊಳು       ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಲ್ಯಾದವು ಹಿಂಜಿ
ಆಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಶುಮ್ನನು ಕೂಡಿ ಅಲ್ಲ್ಯಾಯ್ತೋ ಕುಕ್ಕಡಿ                 ||೩||

ಪರಮಾನೆಂಬುವ ಪಟ್ಟೇವೋ ಆಲ್ಲೆ
ಮಾರಾಕಿಟ್ಟೇವೋ ಅಲ್ಲೆ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ                  ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

ನಾನು ನಿನ್ನನ್ನು ಪ್ರೀತಿಸುತ್ತೇನೆ

-ಅಬ್ಬಾಸ್ ಮೇಲಿನಮನಿ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು.  ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು.  ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ ಅಹಂ ಎಳ್ಳಷ್ಟು ಇರದಿರುವುದು ಅಚ್ಚರಿಯ ಸಂಗತಿಯಾಗಿತ್ತು.  ಹುಡುಗಿಯರಿಗಂತೂ ಸರಿ, ಹುಡುಗರೆದುರಾದರೂ ಅವಳು ಯಾವ ಸಂಕೋಚವಿಲ್ಲದೆ ಮಾತನಾಡಿಸುವಳು.  ಯಾವಾಗಲೂ ತರಗತಿಯ ಕಡೆಗೆ ಆಲಕ್ಷಿಸಿ ಲೇಡೀಸ್ ರೂಮಿನೆದುರು ಅಣಕು, ತಮಾಷೆ, ಪೊಗರಿನ ಮಾತುಗಳಿಂದ ಸಿನಿಮಾ ಹಿರೋಗಳ ಸ್ಟೈಲ್‌ನಲ್ಲಿ ಕಣ್ಣುಗಳಿಂದಲೇ ಹುಡುಗಿಯರ ಬೇಟೆಯಾಡುತ್ತಿದ್ದ ಹುಡುಗರು ಅವಳ ದೆಸೆಯಿಂದಾಗಿ ತರಗತಿಗಳಿಗೆ ಚಕ್ಕರೆ ಹೊಡೆಯುವುದನ್ನು ನಿಲ್ಲಿಸಿದ್ದರು.  ಒಂದೊಂದು ಸಲ ಅವಳ ಸಲಿಗೆಯ ಮಾತುಗಳಿಂದ ಹುಡುಗರೆ ಮುಜುಗರಕ್ಕೊಳಪಡುವ ಪರಿಸ್ಥಿತಿ ನಿರ್ಮಾಣವಾಯಿತು.

ಚೆಲ್ಲು ಚೆಲ್ಲಾಗಿದ್ದ ಹುಡುಗಿ ಸಹಜವಾಗಿಯೇ ಆ ಶ್ರೀಮಂತ ಹುಡುಗನೊಂದಿಗೆ ಮಾತಾಡಿದ್ದಳು.  ಸ್ಫುರದ್ರೂಪಿಯಾಗಿದ್ದ ಅವನು ಹಿಂಡುಗಟ್ಟಲೆ ಗೆಳೆಯರನ್ನು ಬೆನ್ನಿಗೆ ಕಟ್ಟಿಕೊಂಡು ಉಡಾಫೆಯಿಂದಲೇ ವತಿðಸುತ್ತಿದ್ದ.  ಕ್ಲಾಸಿನಲ್ಲೂ ಅದೇ ಚಾಳಿ, ಅವನಿಂದ ಪ್ರಧ್ಯಾಪಕರಿಗೂ ತಲೆನೋವು.  ಅವನ ಕೀಟಲೆ, ಪೊಗರಿನ ವರ್ತನೆ, ಲೇವಡಿ ಮಾತುಗಳಿಂದ ಹುಡುಗಿಯರು ಕಪ್ಪೆಚಿಪ್ಪಿನೊಳಗೆ ಮುದುಡಿಕೊಂಡಂತಿರುತ್ತಿದ್ದರು.

ಇಡೀ ಕ್ಯಾಂಪಸ್ಸು ಅವನನ್ನು ಸಹಿಸಿಕೊಂಡಿತ್ತು.

ಆ ಹುಡುಗಿಯ ಬಗ್ಗೆ ಅವನಿಗೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು.  ಆದರೆ ಅದನ್ನು ಅವಳೆದುರು ಪ್ರಸ್ತಾಪಿಸುವ ಧಾರ್ಷ್ಟ್ಯವನ್ನು ತೋರಿಸಲಿಲ್ಲ.  ಗೆಳೆಯರೊಂದಿಗೆ ಹೇಳಿಕೊಂಡಿದ್ದ.  ಅವರು ಅವಳ ಮೇಲಿನ ಅವನ ಹುಚ್ಚಿನ ಕಿಚ್ಚಿಗೆ ಗಾಳಿಯೂದಿದ್ದರು.  ಅವನು ಚಿತ್ತಾರದ ಕನಸುಗಳಲ್ಲಿ ಮೀಯುತ್ತ ಪೂರ್ತಿ ಅವಳ ಹಂಬಲದಲ್ಲಿ ಚಡಪಡಿಸುತ್ತಿದ್ದ.  ಆಸೆ ಉಕ್ಕೇರುತ್ತಿದ್ದಂತೆ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಒಂದು ಸಾಲಿನ ಒಕ್ಕಣಿಕೆಯ ಕಾಗದವನ್ನು ಅವಳಿಗೆ ತಲುಪಿಸಿದ.

ಆ ಹುಡುಗಿ ಮಾತ್ರ ಸಹಜವಾಗಿದ್ದಳು.

ಅವನು ಆಕಾಶಕ್ಕೆ ನೆಗೆದಿದ್ದ.  ಅಂತ ಚೆಂದದ ಚೆಲುವೆಯನ್ನು ದಕ್ಕಿಸಿಕೊಂಡ ಸಂಭ್ರಮದಲ್ಲಿ ಗೆಳೆಯರು ಅವನಿಂದ ಜಬರದಸ್ತಾದ ಪಾರ್ಟಿ ಮಾಡಿಸಿದ್ದರು.  ಅವರಿಬ್ಬರ ಪ್ರಣಯದ ವಿಷಯವನ್ನು ಅವರೇ ಹರಡಿ ವರ್ಣರಂಜಿತಗೊಳಿಸಿದ್ದರು.  ಹುಡುಗನಿಗೆ ದಿನದ ಇಪ್ಪತ್ನಾಲ್ಕು ಗಂಟೆ ಅವಳದೇ ಧ್ಯಾನವಾಯಿತು.

ಪ್ರೀತಿಯೆಂದರೆ ಏನು?  ಹೆಣ್ಣು-ಗಂಡು ತೀರ ಹತ್ತಿರ ಹತ್ತಿರ ಬರಬೇಕು.  ಮನಸ್ಸು ಮನಸ್ಸು ಕೂಡಬೇಕು.  ಭಾವನೆಗಳು ಎರಕಗೊಳ್ಳಬೇಕು.  ಹೃದಯಗಳು ಮಾತಾಡಬೇಕು.  ಜೊತೆ ಜೊತೆಯಾಗಿ ಹೋಟ್ಲು ಸಿನಿಮಾ, ಪಿಕ್‌ನಿಕ್ಕು ಪಾರ್ಕು ಒತ್ತಾಯಿಸಿದರೂ ಅವಳು ಹೊಟೇಲಿಗೆ ಬರಲಿಲ್ಲ.  ಏಕಾಂತದಲ್ಲಿ ಮಾತಾಡಬೇಕೆಂದರೆ ಪಾರ್ಕಿಗೂ ಬರಲಿಲ್ಲ.  ಎದುರಾದರೆ ಮಾತಾಡುವಳು.  ನಗುವಳು, ಬರೆದುಕೊಳ್ಳಲು ನೋಟ್ಸ್ ಕೊಡುವಳು.  ಪ್ರೀತಿಯ ವಿಷಯ ಮಾತಾಡಬೇಕೆನ್ನುವಷ್ಟರಲ್ಲಿ ಮಾಯೆಯಾಗಿ ಬಿಡುವಳು.  ಅಂತರಂಗದ ವಿಚಾರವಾದರೂ ಏನು!

ಒಂದಿನ ಅವನು ಅವಳನ್ನು ಹಿಡಿದು ನಿಲ್ಲಿಸಿಯೇ ಬಿಟ್ಟ.  ಎದೆ ಒಡೆದು ಕೊಳ್ಳುತ್ತಿದ್ದರೂ, ಮೈ ಬೆವರುತ್ತಿದ್ದರೂ ಧೈರ್ಯದಿಂದ "ಐ ಲವ್ ಯು" ಎಂದುಬಿಟ್ಟ.  ಆಕೆ ಪಕಪಕನೆ ನಕ್ಕು ಬಿಟ್ಟಳು.  "ಪ್ಲೀಸ್ ನೀವು ನಗಬೇಡಿ, ನಿಮ್ಮ ಅಭಿಪ್ರಾಯ ಹೇಳಿರಿ" ಗೋಗರೆದ ಅವನು.

"ನಾನೇಕೆ ಹೇಳಬೇಕು?"
"ನಾನು ನಿಮ್ಮನ್ನು ಪ್ರೀತಿಸುತ್ತೇನೆ."
"ಪ್ರೀತಿಸು ಅಂತ ಯಾರು ಹೇಳಿದರು?"

ವಿಚಲಿತನಾದರೂ ಹುಡುಗ ಸಾವರಿಸಿಕೊಂಡ:  "ಹೇಳಿಕೆಯಿಂದ ಪ್ರೀತಿ ಹುಟ್ಟುವುದಿಲ್ಲ.  ಅದು ಹೃದಯದ ಸೆಲೆ, ನಾನು ಮನಸಾರೆ ಪ್ರೀತಿಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ" ಎಂದ.

"ಅಂದರೆ ನನ್ನ ಜೀವನವನ್ನು ಹಾಳು ಮಾಡುವ ವಿಚಾರವೋ?" ಅವನ ಮೇಲಿನ ದೃಷ್ಟಿ ಹೊರಳಿಸದೆ ಕೇಳಿದಳು ಹುಡುಗಿ.

"ನೀವು ನನ್ನನ್ನು ಪ್ರೀತಿಸುವುದಿಲ್ಲವೆ?" ಗಲಿಬಿಲಿಗೊಳಗಾದ ಹುಡುಗ.

"ಹುಡುಗಿ ಸ್ಪಷ್ಟವಾಗಿ ಹೇಳಿದಳು"  "ರೀ ಮಿಸ್ಟರ್‍, ನಾನು ಕಾಲೇಜಿಗೆ ಬಂದದ್ದು ಕಲಿಯಲಿಕ್ಕೆ, ಭವಿಷ್ಯ ರೂಪಿಸಿಕೊಳ್ಳುವುದಕ್ಕೆ - ಪ್ರೀತಿ, ಪ್ರೇಮದ ಹುಡುಗಾಟಕ್ಕಲ್ಲ."

ಹುಡುಗನ ಮುಖದಲ್ಲಿ ಭ್ರಮೆಗಳ ಗುರುತು ಒಂದೂ ಕಾಣಿಸಲಿಲ್ಲ.

              *****

ಕೀಲಿಕರಣ: ಕಿಶೋರ್‍ ಚಂದ್ರ

ಹಬ್ಬಿದ ಬಳ್ಳಿ

- ಗಿರಿಜಾಪತಿ ಎಂ. ಎನ್

ಪ್ರೀತಿ ಬಳ್ಳಿಯು ಹಬ್ಬಿದೆ
ಧರಣಿಯೆದೆಯ ಹಾಸಿನಲ್ಲಿ,
ನೀಲ ಮುಗಿಲ ಲೋಕದಲ್ಲಿ
ಗಾನ ಸುಧೆಯು ಸಾಗಿದೆ...

ನಾನೇ - ನೀನು, ನೀನೆ - ನಾನು,
ಬುವಿಯೆ - ಬಾನು, ಬಾನೇ ಬುವಿಯು,
ಸೇತುವಾಗಿ ಬೆಸೆದಿದೆ...
ಮೊದಲು ಕೊನೆಗಳಿಲ್ಲವಿಲ್ಲಿ
ಪ್ರೀತಿ - ಚೈತ್ರ ಸರಣಿಯಲ್ಲಿ,
ಕಾಲ ಯಾತ್ರೆಯು ನಡೆದಿದೆ...

ಮೋಡಗಟ್ಟಿ ಮಳೆಯ ಸುರಿಸಿ,
ಹರವದಾರಿಲಿ ಹಸಿರಗಟ್ಟಿಸಿ,
ಕಡಲಾಗಿ ಪ್ರೀತಿಯು ನುಡಿದಿದೆ...
ಉದಯೋದಯಕು ಶುಭದ ಹಕ್ಕಿ,
ಶಕುನ ಸ್ವರದಲಿ ಉಲಿದಿದೆ,
ಮಧುರ ಭಾವಗೀತೆಯ ಹಾಡಿದೆ...

ನನ್ನ - ನಿನ್ನಯ, ನಿನ್ನ - ನನ್ನಯ,
ಬಳಸಿನಿಂತ ಚೆಲ್ವ ಬಾಳ್ವೆಯ,
ಸಾಲು ತೋಪಲಿ ಹಸಿರ್‍ಹುಸಿರಾಗಿದೆ...
ಬಳ್ಳಿಗಾಸರೆಯಾದ ಮರದಲಿ
ಪ್ರೀತಿ ಚಂದನ ಹರಡಿದೆ
ಜಗದ ಬದುಕನು ಹಿಡಿದಿದೆ...

        *****

ಕೀಲಿಕರಣ: ಕಿಶೋರ್‍ ಚಂದ್ರ

ಮಾನಿನಿ ಮಾತಾಡಬ್ಯಾಡಮ್ಮಾ

-ಶಿಶುನಾಳ ಶರೀಫ್

ಮಾನಿನಿ  ಮಾತಾಡಬ್ಯಾಡಮ್ಮಾ
ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ                   || ಪ ||

ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು
ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು
                               ಪ್ರತಿ ಕಲಹವಾಯಿತು                         || ಅ. ಪ. ||

ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿರದರಿತು
                             ತಾ ಬ್ಯಾರೊಂದು ಸಂಗತಿಯ
ಕರಸಿದರು ಲಕ್ಷೇಶ್ವರದ ಪೌರಾಣಿಕ ನರಮತಿಯ
ಮೆರೆವ ಬಸವೇಶ್ವರ ಲೀಲಾಮೃತ ಶರಧಿಯೋಳ್ ವಿಷಮಾತ್ರ
                                         ಬೆರಸಿದ
ಮರುಳತನದ ಈ ಊರ ಗೌಡರಿಗೆ ಹಲವರು
                                       ಆರಿಕೆಯಿಲ್ಲದಾಯಿತು                    || ೧ ||

ಓದುವರಕ್ಷರವ ಇದರೊಳಗೆ
ವೇದಾಂತಮಾರ್ಗದ ಹಾದಿ ತಿಳಿಯದು ಶಾಸ್ತ್ರಿಯೆಂಬುವಗೆ
ಸಾಧಿಸಿತು ಇನ್ನು ಕ್ರೋಧ ಆಂದಾನಯ್ಯ ಗದಿಗೆಯ್ಯಗೆ
ಹಾದಿ ತಿಳಿಯದೆ ಹೀಂಗ ಜಂಗಮರವರು ಬೈದಾಡುತಿರೆ
ಬಸವಾದಿ ಪ್ರಮಥರು ಮೆಚ್ಚಲರಿಯರು ಮೇದಿನಿಗೆ
                                       ಮಹಾ ಚೋದ್ಯವಾಯಿತು               || ೨ ||

ಏನನಲಿ ಈ ಗ್ರಾಮದ ಜನರು ಸನ್ಮಾನನರಿಯದ ಕಾನನದ
                                    ಕಪಿ ಹಿಂಡಿನಂತಿಹರು
ಗಾನರಸದ ಮೇಳಕೆ ತಾವು ತಮ್ಮೊಳು ಕುಳಿತು ಕೇಳುವರು
ತಾನು ಶಿಶನಾಳೀಶ ಬಸವನ ಶೂನ್ಯ ಸಿಂಹಾಸನದ ವಿಸ್ತರ
ಹೀನ ಪಾಪಿ ಭವಿಗಳೊಡನೆ ಜ್ಞಾನಿಯಾದರೆ ನೀನು ಉಸುರದಿರು     || ೩ ||

                   ****

ಕೀಲಿಕರಣ: ಎಂ.ಎನ್.ಎಸ್. ರಾವ್

ದೇವರಿಗೆ ಬಿಟ್ಟಿದ್ದು


-ಅಬ್ಬಾಸ್ ಮೇಲಿನಮನಿ

ಬಿರು ಬೇಸಿಗೆ ಒಂದು ಮಧ್ಯಾಹ್ನ ಪಾಟೀಲ್ ಸರ್‍ ಭೇಟಿಯಾದರು.  ಹೊರ ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಅವರು ಕಂಡದ್ದು ಅದೇ ಮೊದಲು.  ಉಭಯಕುಶಲೋಪರಿ ತರುವಾಯ ಹೊಟೇಲಿಗೆ ಹೋಗಿ ಕಾಫಿಗೆ ಆರ್ಡರ್‍ ಕೊಟ್ಟು ಪಾಟೀಲರನ್ನು ಕೇಳಿದೆ:

"ನಿಮ್ಮ ಶಿಕ್ಷಕ ವೃತಿ ಹೇಗೆ ನಡೆದಿದೆ?"
"ಬಹಳ ಆರಾಮಾಗಿದೆ" ಎಂದರು ಪಾಟೀಲ ಸರ್‍.
"ನಿಮ್ಮ ಶಾಲೆಯಲ್ಲಿ ಎಷ್ಟು ತರಗತಿಗಳಿವೆ?"
"ಒಂದರಿಂದ ಐದು"
"ಸ್ಟಾಫ್?"
"ಫುಲ್ ಇದೆ".
"ಕಟ್ಟಡ?"
"ಬಾಗಿಲು, ಕಿಟಕಿ, ಸೂರಿನ ಹಂಚು ಪೂರ್ತಿ ಇಲ್ಲದಿದ್ದರೂ ಸ್ವಂತ ಕಟ್ಟಡ ಇದೆ."
"ಮಕ್ಕಳ ಸಂಖ್ಯೆ?"
"ಸಾಕಷ್ಟಿದೆ."
"ದಾಖಲಾತಿ.... ಹಾಜರಾತಿ?"
"ಹಾಜರಾತಿಯದೇ ಸಮಸ್ಯೆ."
"ಉಚಿತ ಪುಸ್ತಕ, ಬಟ್ಟೆ, ಬಿಸಿಯೂಟ ವ್ಯವಸ್ಥೆ ಇಲ್ಲವೆ?"
"ಎಲ್ಲ ಅನುಕೂಲವೂ ಇದೆ."
"ಹಾಗಾದರೆ ಮಕ್ಕಳ ಹಾಜರಾತಿ ಕಮ್ಮಿ ಏಕೆ?"
"ಊಟದ ವೇಳೆಯಲ್ಲಿ ಹಾಜರಾತಿ ಹೆಚ್ಚಿಗಿರುವುದು."
"ಮಕ್ಕಳ ಕಲಿಕೆಯ ಮಟ್ಟ."
"ಆರಕ್ಕೇರದು ಮೂರಕ್ಕಿಳಿಯದು."
"ಈ ಬಗ್ಗೆ ಸಹೇಬರು ಗಮನ ಹರಿಸುವುದಿಲ್ಲವೆ?"
"ಮಕ್ಕಳು ಶಾಲೆಗೆ ಬರಲಿ ಬಿಡಲಿ ವಾರ್ಷಿಕ ಪರೀಕ್ಷೆಯಲ್ಲಿ ಅವರೆಲ್ಲ ಪಾಸು."
"ಓದು - ಬರಹ ಇಲ್ಲದೆ ಪಾಸಾಗುತ್ತಾರೆಯೇ ಅವರು?"
"ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು.  ಅವರನ್ನು ನಪಾಸೂ ಮಾಡಬಾರದು."
"ಅವರ ಪ್ರಗತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲವೆ ನೀವು?"
"ಹೆಡ್‌ಮಾಸ್ಟರ್‍ ಆ ಕಾಗದ ಈ ಕಾಗದ ಎಂದು ಆಫೀಸಿಗೆ ಅಲೆದಾಡುವರು.  ನಮ್ಮಲ್ಲಿ ಕೆಲವರು ತರಬೇತಿಗೆ ಹೋಗುವರು.  ಕೆಲವರಿಗೆ ಗಣತಿ ಕಾರ್ಯ ಅದು-ಇದು ಎಂದಿರುವುದು ಮಕ್ಕಳಿಗೆ ಕಲಿಸಲು ಪುರುಸೊತ್ತೇ ಸಿಗುವುದಿಲ್ಲ"
"ಸಾಹೇಬರು ನಿಮ್ಮ ಶಾಲೆಯ ತಪಾಸಣೆಗೆ ಬರುವುದಿಲ್ಲವೆ?"
"ಹಿರಿಯ ಸಾಹೇಬರು ವರ್ಷಕ್ಕೊಮ್ಮೆ ಬರುತ್ತಾರೆ, ಕಿರಿಯ ಸಾಹೇಬರು ಬೇಕೆನಿಸಿದಾಗ ದಿಢೀರನೆ ಪ್ರತ್ಯಕ್ಷರಾಗುತ್ತಾರೆ."
"ಅವರಿಗೆ ಸಮಸ್ಯೆ ಅರ್ಥವಾಗುವುದಿಲ್ಲವೆ?"
"ತಮ್ಮ ವೈಯಕ್ತಿಕ ಬೇಡಿಕೆಗಳನ್ನು ಪೂರೈಸಿಕೊಂಡು ಹೋಗುವ ಅವರು ಕಲಿಸುವುದರ ಬಗ್ಗೆ ಚಕಾರವೆತ್ತುವುದಿಲ್ಲ.  ವಿಜಿಟ್ ಪುಸ್ತಕದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ.  ನಮ್ಮ ಶಾಲೆ ಬಹಳ ನೆಮ್ಮದಿಯಾಗಿದೆ."
"ಊರಿನವರು ಲಕ್ಷ್ಯ ಕೊಡುವುದಿಲ್ಲವೆ?"
"ನಮ್ಮದು ಸರಕಾರಿ ಶಾಲೆ, ಅದರ ಮೇಲೆ ಅವರ ಹಕ್ಕು ಇಲ್ಲ."
"ಇದೆಲ್ಲ ವಿಚಿತ್ರವಲ್ಲವೇ?"
"ಅದೆಲ್ಲ ಕವರಿನ ಮಹಿಮೆ!"
"ಕವರು ... ಏನದು?"
"ಸಾಹೇಬರಿಗೆ ನಾವು ಕವರು ಮುಟ್ಟಿಸುತ್ತೇವೆ."
"ಏಕೆ?"
"ಕವರಿನಲ್ಲಿ ನಮ್ಮ ದುಡ್ಡಿರುವುದು."
"ಸಾಹೇಬರಿಗೆ ಹಣ ಏಕೆ?  ಅವರಿಗೆ ಪಗಾರ ಇರುವುದಿಲ್ಲವೆ?"
"ಪಗಾರ ಅವರ ಸಂಸಾರಕ್ಕೆ ನಮ್ಮ ದುಡ್ಡು ಅವರ ಇತರೆ ಖರ್ಚಿಗೆ."
'ಇದೆಂಥ ವ್ಯವಸ್ಥೆ?"
"ನಮ್ಮ ದೋಷಗಳನ್ನು ಸಾಹೇಬರು ಮುಚ್ಚಿಕೊಳ್ಳುತ್ತಾರೆ.  ಸಾಹೇಬರ ದೋಷಗಳನ್ನು ದೊಡ್ಡ ಸಾಹೇಬರು.  ಅವರ ಮೇಲಿನವರ ದೋಷಗಳನ್ನು ಅದಕ್ಕೂ ಮೇಲಿನವರು ಬೇರಿನಿಂದ ಟೊಂಗೆಯ ತುದಿತನಕ ಇದೇ ವ್ಯವಸ್ಥೆ ಇರುವುದು."
"ಶಾಲೆ ಮತ್ತು ಮಕ್ಕಳ ಗತಿ?"
"ದೇವರಿಗೇ ಬಿಟ್ಟದ್ದು!"
                     *****

ಕೀಲಿಕರಣ: ಕಿಶೋರ್‍ ಚಂದ್ರ

ವಿಪರ್ಯಾಸ


- ಗಿರಿಜಾಪತಿ ಎಂ. ಎನ್

ಏನು ಬರೆಯಲಿ ಏನು ಹಾಡಲಿ
ದಿನದ ಕಾವ್ಯಕೆ ಶುಭನುಡಿ,
ನಿತ್ಯದುದಯವು ಬರೆವ ಮುನ್ನುಡಿ
ಪುಟ-ಪುಟಕೂ ನೀಡಲು ಕೆಂಗಿಡಿ,

ನಿಸರ್ಗ ಸಗ್ಗವು ಬೆಂಗಾಡಾಗಿರೆ
ಇನ್ನೆಲ್ಲಿ ಪೂಜೆಯು ಪ್ರಕೃತಿಗೆ,
ಇಂಚರದ ಬಳಗಕೆ ಠಾವೆ ಇರದಿರೆ
ಎಲ್ಲಿನ್ನೆಲ್ಲಿ ಗಾನವು ಕೊಳಲಿಗೆ,

ರಾಯರಳಿದರು ರಾಯತನವು ತಾ ಸಾಗಿರೆ,
ಯಾವ ನೆಲೆಯಿದೆ ಹಸಿವಿನೊಡಲಿಗೆ,
ಧರ್ಮದರ್ಥವು ಅನರ್ಥವಾಗಿರೆ
ಇನ್ನಾವ ಬೆಲೆಯಿದೆ ದೇವ ಪ್ರೀತಿಗೆ....

ಜಗವೆ ಮಾರುವ ಕಟ್ಟೆಯಾಗಿರೆ
ಕೊಡು ಕೊಳ್ಳುವವರೆತ್ತಬಲ್ಲರು ಮಾನ'ವ
ಸರಕು ನೂಪುರ ಗಂಟೆ ಮೊಳಗಿರೆ
ಸುಪ್ರಭಾತವೆಲ್ಲಿಯೋ ಮಾನವ....

        *****

ಕೀಲಿಕರಣ: ಕಿಶೋರ್‍ ಚಂದ್ರ

ಆರಗೊಡವಿನ್ನೇನು ಮಗಳೆ

-ಶಿಶುನಾಳ ಶರೀಫ್

ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮಾ            || ಪ ||

ದಾರಿಕಾರರು ನಿನ್ನ ಮಾರಿನೋಡಲು
ಮಾರಿಯತ್ತಿ ನೋಡ ಬೇಕಮ್ಮಾ           || ಅ. ಪ.||

ಆಸನ ದೊಡ್ಡಾ ಮಣಿಗಳ ಮಾಡಿ
ಅ ಶಶಿ ರವಿಗಳ ಕುಂಭಗಳ್ಹೂಡಿ
ಸೂಸುವ ಚಕ್ರದ ಎಲೆಗಳಮೇಲೆ
ದಶವಾಯುಗಳೆಂಬ ನುಲಿಗಳ ಬಿಗಿದು   || ೧ ||

ಹರಿಯನು ಬ್ರಹ್ಮನಾಳ ಮಾಡಿ
ಕುರುಹು ನಾಶಕ ಬೆನಕವ ಹೂಡಿ
ಪರಶಿವನೆಂಬುವ ದಾರವ ಕಟ್ಟಿ
ವೈರಾಗ್ಯವೆಂಬುವ ಬಿಲ್ಲುಗಳಿಟ್ಟು           || ೨ ||

ಜ್ಞಾನವೆಂಬುವಾ ಕದರನಿಟ್ಟು
ಮಾನವ ಧರ್ಮ ಹಂಜಿಯ ಪಿಡಿದು
ಅನುಭವವೆಂಬುವ ಎಳೆಗಳು ತೆಗೆದು
ಅನುವಿಲಿ ಸುಮ್ಮನೇ ನೂಲಮ್ಮಾ          || ೩ ||

ಕಕುಲಾತಿಯೆಂಬುವ ಕಸರನು ಕಳಿದು
ಸುಖ ದುಃಖೆಂಬುವ ಸಿರದೊಡಕಳಿದು
ಭಕುತಿಯೆಂಬುವಾ ಕೊಳವಿಯನ್ಹಿಡಿದು
ಕುಕ್ಕಡಿನೆಲ್ಲಾ ನೂಲಮ್ಮಾ                   || ೪ ||

ಇಪ್ಪತ್ತೊಂದು ಸಾವಿರದಾ
ಮೇಲಾರನೂರಾ ಎಳಿಗಳ ಹೊಯ್ದು
ತಪ್ಪದೇ ಎಣಕಿಯಮಾಡಿ ನೀನು
ಒಪ್ಪಿಸಿ ಪಟ್ಟೇವ ಸುತ್ತವ್ವಾ                   || ೫ ||

ಪ್ರತ್ಯಕ್ಷ ಪರಮಾತ್ಮನೆಂಬುವ
ಉತ್ತಮವಾದ ಹೊಳಾನೇಯ್ದು
ಕೃತ್ತಿವಾಸ ಶಿಶುನಾಳಧೀಶನಿಗೆ
ಮುಟ್ಟಿಸಿ ಮುಕ್ತಿ ಪಡಿಯವ್ವಾ                || ೬ ||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಕಳೆದುಹೋಗಲ್ಲ ಮಗು...ವ್ಯಾಕರಣ ದೋಷ ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ.   ಶೀಘ್ರದಲ್ಲೇ ಈ ಕಥೆಯನ್ನು ಮರು ಪ್ರಕಟಿಸಲಾಗುವುದು.  ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ.  - ಚಿಲುಮೆ ತಂಡ

ನೂಪುರ

- ಗಿರಿಜಾಪತಿ ಎಂ. ಎನ್

ಅಲ್ಲಿ - ಇಲ್ಲಿ ಹುಡುಕುವೇತೆಕೆ,
ಪ್ರೀತಿಯ ಬಳ್ಳಿಯ ಚಿಗುರಿಗೆ,
ನಿನ್ನ ಮನದಲೆ ಬೇರು ಬಿಟ್ಟಿಹ
ತರು-ಲತೆ ಸುಮದ ಮಾಟದ ಚೆಲ್ವಿಗೆ  ||

ಅವರ - ಇವರಲಿ ಅರಸುವೇತಕೆ
ನಿನ್ನ - ನೀನು ತಿಳಿಯದೆ,
ಅನ್ಯ ಪ್ರೀತಿಯ ಕಣ್ಣಕೂಟಕೆ
ಮುನ್ನ - ಬಾಳನು ಕಾಣದೆ,

ಪ್ರೀತಿಯೆಂಬುದು ದೇಹಕಲ್ಲವೊ
ಗೇಹದಾಚೆಯ ಪಲ್ಲವಿ,
ತುಂಬು ಜೀವನವೆಲ್ಲ ಪಾವನ
ಶೃತಿಲಯದ ಗೀತಿಕೆ ಜಾಹ್ನವಿ,

ಹೃದಯದಿಂಪು ತಂಪ ಮೋದ ಭಾವವೆ
ದೇವ ಪ್ರೀತಿಯ ಸಾಗರ,
ತಾಯ ತೆರಹದಾ ನೇಹ ಸಗ್ಗವೆ
ಪ್ರೀತಿ ನಿಯತಿಗೆ ನೂಪುರ,

ನಿನ್ನ ನೀನು ಮೊದಲು ಪ್ರೀತಿಸು
ದ್ವೇಷ ದಳ್ಳುರಿ ನಂದಿಸು,
ಚಣದ ಕಾಮನೆ ಹುಚ್ಚನಳಿಸು
ಜಗಕೆ ನಿನ್ನ ಇರವನೆ ತೋರಿಸು.

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ

-ಶಿಶುನಾಳ ಶರೀಫ್

ನಗಬಾರದಮ್ಮ
ಲಗುಬಿಗಿ ಸುಮ್ಮನೆ ಬೀಸಮ್ಮ                ||ಪ||

ಲಗುಬಿಗಿ ಸುಮ್ಮನೆ ಬೀಸಿ
ತಗಿದಾಳೋ ಹಿಟ್ಟಿನ ರಾಶಿ
ಬಿಗಿದ ಪುಟ್ಟಿಯೊಳು ಸೋಸಮ್ಮಾ           ||೧||

ಚಕ್ರದಿ ಕರೆಕಲ್ಲು
ಶುಕ್ರದಿ ಮುಕ್ಕುವ ಕಲ್ಲು
ವಕ್ಕರಿಸಿ ಮುಕ್ಕನ್ಹಾಕಮ್ಮಾ                    ||೨||

ಆಚ್ಚ ನಗಬಾರದು
ಬಾಳ ನಗಬಾರದು
ನಕ್ಕೋತ ಸುಮ್ಮನೆ ಬೀಸಮ್ಮಾ               ||೩||

ಆಸಮ ಗೋದಿಯ ಕಾಳು
ಹಸನಾಗಿ ಬೀಸಮ್ಮಾ
ದೇಶಕೆ ಶಿಶುನಾಳಧೀಶನ ಭಜಿಸಮ್ಮಾ      ||೪|| 
                   *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಹರಕೆಯ ಕುರಿ

-ಅಬ್ಬಾಸ್ ಮೇಲಿನಮನಿ

ಕುಟುಂಬದ ಯಜಮಾನನೊಬ್ಬ ಹರಕೆಯೊಂದನ್ನು ಹೊತ್ತಿದ್ದ.  ಬಹಳ ದಿನದ ಹರಕೆಯದು.  ಮೆನಯ ಕುಲದೇವರಿಗೆ ಕುರಿಯೊಂದನ್ನು ಅವನು ಬಲಿಕೊಡಬೇಕಾಗಿತ್ತು.  ಅದಕ್ಕಾಗಿ ಅವನು ಕುರಿಮರಿಯೊಂದನ್ನು ಸಾಕುತ್ತ ಬಂದಿದ್ದ.  ಕುರಿ ಸೊಪ್ಪು ಮೇಯ್ದು ದಷ್ಟಪುಷ್ಟವಾಗಿತ್ತು.

ಕುಲದೇವರು ನೆಲೆಸಿರುವ ಊರಿಗೆ ಹೊರಡುವ ಸಿದ್ಧತೆಯಾಯಿತು.  ಮಿನಿ ಟ್ರಕ್ಕು ಬಂದು ಮನೆಯ ಮುಂದೆ ನಿಂತಿತು.  ಯಜಮಾನನ ಮನೆಯ ಜನ, ಬಂಧು, ಬಳಗ, ಆಪ್ತವಲಯದವರು ಟ್ರಕ್ಕು ಏರಿದರು.  ಅವರ ನಡುವೆ ಹರಕೆಯ ಕುರಿ, ಕುಳಿತವರು ಅದನ್ನು ಭಕ್ತಿಯಿಂದ ಗಮನಿಸುತ್ತಿದ್ದರು.

ಸಂಭ್ರಮದಿಂದ ಚಲಿಸುತ್ತಿತ್ತು ಗಾಡಿ.  ಕೆಲವರು ಮಾತಿನ ಲಹರಿಯಲ್ಲಿ ಕಳೆದು ಹೋಗಿದ್ದರು.  ಪ್ರಾಯದ ಹುಡುಗ-ಹುಡುಗಿಯರು, ಹಾಡು, ಹಾಸ್ಯ, ಕೇಕೆಯಲ್ಲಿ ತನ್ಮಯರಾಗಿದ್ದರು.  ಆಗಾಗ ದೇವರ ಉಘೇ ಉಘೇ ಉದ್ಘೋಷವೂ ಮೊಳಗುತ್ತಿತ್ತು.

ತವಕ ತಲ್ಲಣದಲ್ಲಿ ಹರಕೆಯ ಕುರಿ ದಟ್ಟ ಮೌನ ಧರಿಸಿ ನಿಂತಿತ್ತು.  ಜನರ ಉತ್ಸಾಹ ನನ್ನ ಬಲಿಯ ದ್ಯೋತಕವೆಂದು ಕುರಿಗೆ ಮನದಟ್ಟಾಗಿತ್ತು.  ಆಗಾಗ ಅದು ಅಸಹಾಯಕವಾಗಿ ನಿಟ್ಟುಸಿರು ಚೆಲ್ಲುತ್ತಿತ್ತು.  ತಮ್ಮ ಹಿತಕ್ಕಾಗಿ ದುರ್ಬಲ ಪ್ರಾಣಿಗಳನ್ನು ಬಲಿಕೊಟ್ಟು ದೇವರು, ಧರ್ಮಗಳನ್ನು ದುರುಪಯೋಗ ಪಡಿಸಿಕೊಳ್ಳುವ ಜನರ ಹುನ್ನಾರಗಳಿಗೆ ಕುರಿ ಮೂಕವಾಗಿ ರೋಧಿಸುತೊಡಗಿತ್ತು.

ಗಾಡಿ ರಸ್ತೆಯುದ್ದಕ್ಕೂ ವೇಗವಾಗಿ ಓಡತೊಡಗಿತ್ತು.  ಅದರೊಂದಿಗೆ ಸ್ಪರ್ಧೆಗಿಳಿದಂತೆ ಜನರ ಹರ್ಷೋದ್ಗಾರ.

ಒಮ್ಮೆಲೆ ಧಡಲ್ ಎಂಬ ಸದ್ದು!

ಎದುರಿಗೆ ಬಂದ ಭೂತಾಕಾರದ ಟ್ರಕ್ಕೊಂದು ಮಿನಿಲಾರಿಗೆ ಭಯಂಕರವಾಗಿ ಡಿಕ್ಕಿ ಹೊಡೆದು ಪಕ್ಕದ ಕಮರಿಗೆ ನೂಕಿತ್ತು.

ಹಾಹಾಕಾರ, ಚೀತ್ಕಾರ, ನರಳಾಟ, ರಕ್ತದ ಕೋಡಿ.

ಲಾರಿ ಪುಡಿಪುಡಿಯಾಯಿತು, ಅದರೊಳಗಿದ್ದವರು ಒಬ್ಬರೂ ಉಳಿಯಲಿಲ್ಲ.

ದಿಬ್ಬದ ಮೇಲೆ ನಿಂತ ಹರಕೆಯ ಕುರಿ ಮಾತ್ರ ಬ್ಯಾ.... ಬ್ಯಾ.... ಎನ್ನತೊಡಗಿತ್ತು.

                       *****

ಕೀಲಿಕರಣ: ಕಿಶೋರ್‍ ಚಂದ್ರ

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ

-ಶಿಶುನಾಳ ಶರೀಫ್

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ
ಬೀಸೋಣ ಬರ್ರೆವ್ವ ಹಾಡ್ಯಾಡಿ                                                                ||ಪ||

ಹಸ್ತಿನಿ ಚತ್ತಿನಿ ಶಂಖಿನಿ ಪದ್ಮಿನಿ
ಕರಿತಾರೆ ಬರ್ರೆವ್ವ ಕೂಡಿ                                                                        ||ಅ.ಪ.||

ದೇಹವೆಂಬುವ ಬೀಸುಕಲ್ಲು ಶಿವಪುರದಾಗ
ಉಪ್ಪಾರನ ಕೈಲೆ ಹೊಡಿಸಿ
ಮೇಲೆ ಗಂಟಲು ಮ್ಯಾಗಿನ ಪಾಳಿಗೆ
ನಡುಮಧ್ಯದಿ ಬಾಯಿ ತೆಗಸಿ
ಕೆಳಗಿನ ಪಾಳಿಗೆ ಮಲಮೂತ್ರ ಬಿಡುತಿಹ
ಆಸವಲ್ಲದೊಂದ ತೂತ ತಗಸಿ
ತಕ್ಕಂಥ ಗೂಟವು ಕಾಯ ಮರದ ಮ್ಯಾಗ
ಸಾಗವಾನಿಯ ಕಟಗಿಯ ತರಿಸಿ
ಸವ್ವಾನೂರು ವರ್ಷ ಬಾಳುವ ಗೂಟಕ್ಕೆ
ಮೇಲೊಂದ ಆಣಸನು ಜಡಿಸಿ
ನಾನು ಬೇಕಾಗಿ ಬೀಸೇನೇ ಕಲ್ಲು ತರಿಸಿದ್ದೆನೇ
ಸೂತ್ರ ಎಂಬುವ ಚಿತ್ರ ತೆಗಸಿದ್ದೇನೇ
ವಾಯು ದೇಹವೆಂಬುವ ಪಿರಿಕಿ ಹಾಕಿದ್ದೇನೇ
ಇಂಥಾ ಕಲ್ಲು ಸಮತೋಲು ನಿಜಮನವೆಂಬ ಜಾಗದಾಗ ನಡಸಿದ್ದೆನೇ
ನಾರಿ ಕರಿಯುವನೇ ನಾರೇರು ಎಲ್ಲಾರು ಬರ್ರೆವ್ವ ಭದ್ರ್ಯಾರು ಕೂಡಿ                    ||೧||

ಆಬ್ಬರೆಂಬುವ ಗೋದಿ ಕಡಲಿಯ ತಂದು
ತನುವೆಂಬಂತಸ್ತದಿ ತೋಯಿಸಿ
ಮನದ ಮೈಲಿಗೆಯೆಂಬ ಮ್ಯಾಗಿನ ತೌಡು
ಅನುವಿಂದ ಒಳ್ಳಾಗ ಕುಟ್ಟಿಸಿ ತೆಗದು
ಸುಜ್ಞಾನವೆಂಬುವ ಧೂಳವ ಕೇರಿಸಿ
ಬುದ್ಧಿಎಂಬುವ ಬುಟ್ಟಿಯನು ತುಂಬಿಸಿ
ಧರ್ಮಯೆಂಬುವಂಥಾ ಬಲಗೈಲೆ
ಒಂದೊಂದೇ ಹಿಡಿ ಹಿಡಿ ಮುಕ್ಕನೆ ನಾ ಹಾಕಿಸಿ
ಕರ್ಮವೆಂಬುವಂಥಾ ಎಡಗೈಲೆ
ತಿರುತಿರುವಿ ಸಣ್ಣಾಗಿ ಮುಕ್ಕನುರಿಸಿ
ತ್ರಿಗುಣೆಂಬ ಹಿಟ್ಟನು ಗೂಡಿಸಿದ್ದೆನೇ
ಒಂಬತ್ತು ತೂತಿನ ಸಾಣಿಗೀಲೆ ಸಾಣಿಸಿದ್ದೆನೇ
ಇಂಥಾ ಹಿಟ್ಟು  ಬಚ್ಚಿಟ್ಟು
ಆತ್ಮವೆಂಬುವ ಆಮೃತದ ಗಡಿಗಿ ತಂಂಬಿಸಿದ್ದೆನೇ
ತಾಯಿ ಮಾಯಿ ತಾಯವ್ವನ ಕರಕೊಂಡು ನಡಿರೆವ್ವ ಆಡಗೀಯ ಮಾಡೀ             ||೨||

ಆನುಭವ ತನುಭವ ಚಿನುಮಯವೆಂಬುವ ಮೂರು ಒಲಿಯ ಗುಂಡು ಹೂಡಿ
ಕಾಮಕ್ರೋಧವೆಂಬ ಕಾಡಕಟ್ಟಿಗಿ ಸುಟ್ಟು ಬೇಗ ಓಲಿಯ ಪುಟಮಾಡಿ
ಪಂಚತತ್ವದಿಂದ ಪಕ್ವಾನ್ನ ಮಾಡಿ
ಗಡಿಗೆ ಇಳುವಿದ್ದೇನ್ರೇ ಪಟ್ಟಿ ತೀಡೀದ್ದೇನ್ರೇ
ಸಪ್ತಭೂತಂಗಳಿಗೆ ಗುಪ್ತ ಆಡಗಿಯ ಮಾಡಿ
ಹೊತ್ತಿದ್ದನ್ನವನು ನೀಡಿ
ಅನ್ನವು ತೀರಿತು ಗಡಿಗೆಯು ಒಡದೀತು
ಒಲಿಗುಂಡು ಬಿತ್ತ್ರೆವ್ವ ಒಂದು ಕಡಿ
ಕಾಳು ಕಡಿಗಾಯಿತು ಕಲ್ಲು ಇಲ್ಲುಳದಿತು
ಇನ್ನೆಲ್ಲಿ ಬಂದೀತು ಭೂಮಿ ಮೂಡಿ ನಾನು
ಕಾಳು ಹೋಂದಿದೆ ಮ್ಯಾಳ ಮುರಿದು ಗೀಳಾದೆ
ಸಾಧು ಸಾಧಕರೊಳು ವ್ಯಾಳಗಳದೆ
ಸುಳ್ಳೇ ಸಂಸಾರದೊಳು ಬಿದ್ದೆ ಪಾಪ ಹೊದ್ದೆ
ಪೊಡವಿಯ ಶಿಶುನಾಳಧೀಶನ ದಯದಿಂದ
ಕಡೆಗೆ ನಾ ಮಕ್ತಿಯ ಕಂಡೇ                                                                   ||೩||
                    *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಕ್ಕಾಂವ ಗೆದ್ದಾಂವ

-ಅಬ್ಬಾಸ್ ಮೇಲಿನಮನಿ

ಪತ್ರಕರ್ತನೊಬ್ಬ ಆ ಕಲಾವಿದನನ್ನು ಸಂದರ್ಶಿಸಲು ಬಂದ.  ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ತನ್ನ ಹಾಸ್ಯ ನಟನೆಯಿಂದ ಪ್ರಖ್ಯಾತಿ ಪಡೆದ ಕಲಾವಿದನ ಎದುರು ಕುಳಿತು ನೇರವಾಗಿ ಮಾತಿಗಿಳಿದ:

"ನಿಮಗೆ ನಗಿಸುವ ಕಲೆ ಹೇಗೆ ಕರಗತವಾಯಿತು?"

"ದುಃಖದ ಕಡಲಲ್ಲಿ ಮುಳುಮುಳುಗಿ ಎದ್ದಿದ್ದರಿಂದ" ಕಲಾವಿದ ಉತ್ತರಿಸಿದ.

"ನೀವು ಅಳುವ ಪಾತ್ರಗಳನ್ನು ಮಾಡಲೇ ಇಲ್ಲ."

"ಅಳುವವರನ್ನು ಈ ಜಗತ್ತು ಇಷ್ಟ ಪಡುವುದಿಲ್ಲ."

"ನಿಮ್ಮ ನಗೆಯ ಹಿಂದೆ ನೋವು ಅಡಗಿರುವುದೆಂದು ಅನುಮಾನ ನನಗೆ."

"ಆ ನೋವು ನನ್ನದು.  ಅದು ನನ್ನೊಂದಿಗೆ ಕೊನೆಯಾಗುವುದು."

"ದುಃಖವನ್ನು ಪ್ರಪಂಚದೊಂದಿಗೆ ಹಂಚಿಕೊಂಡರೆ ನೆಮ್ಮದಿ ಅನಿಸುವುದು."

"ಜನರು ಯಾವಾಗಲೂ ಸಂತೋಷದ ಸಂಗತಿಗಳನ್ನು ಬಯಸುತ್ತಾರೆ.  ಅವರೆದೆಗೆ ಸಂಕಟದ ಕಣ್ಣೀರು ಬಸಿದು ತಳಮಳಿಸುವ ಇಚ್ಛೆ ಇಲ್ಲ."

"ನಿಮ್ಮ ಮಗನೊಬ್ಬ ಕಾರು ಅಪಘಾತದಲ್ಲಿ ತೀರಿಕೊಂಡನೆಂದು ಕೇಳಿದೆ."

"ವಯಸ್ಸಿಗೆ ಬಂದ ಒಬ್ಬನೇ ಮಗನಿಗೆ ಕಿಚ್ಚು ಇಟ್ಟೆ.  ಒಬ್ಬ ಮಗಳು ಅಳಿಯನಿಂದ ಸುಡಿಸಿಕೊಂಡು ಬೂದಿಯಾದಳು.  ಎರಡನೆಯ ಮಗಳು ಕಾರು ಡ್ರೈವರ್‌ನೊಂದಿಗೆ ಓಡಿಹೋದಳು.  ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ಸತ್ತಳು.  ನನ್ನನ್ನೇ ಪ್ರೀಮಿಸುವ ನಾಟಕವಾಡಿ ಬಂದ ಸತಿ ಶಿರೋಮಣಿ ನನ್ನ ಸಂಪತ್ತು ದೋಚಿಕೊಂಡು ಪರಾರಿಯಾದಳು.  ಕೆಲವು ನಿರ್ಮಾಪಕರು ನನಗೆ ಹಣ ಕೊಡದೆ ವಂಚಿಸಿದರು.  ಆದರೂ ದೇವರು ನನ್ನನ್ನು ಉಳಿಸಿದ್ದಾನೆ.  ಬಹುಶಃ ಲೋಕದ ದುಃಖಿತರನ್ನು ನಗಿಸಲೆಂದೇ ಇರಬೇಕು" ಪಕಪಕನೆ ನಕ್ಕ ಕಲಾವಿದ.

"ನಿಮ್ಮ ಸಹನೆ ಅದ್ಭುತ"

"ಬದುಕಿನ ಪ್ರೀತಿ ಇದ್ದವರಿಗೆ ಸಮಾಧಾನವೂ ಇರಬೇಕು.  ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.  ರಂಗಭೂಮಿಯಲ್ಲಿ ದುಡಿದಿದ್ದೇನೆ.  ಜನರು ನನ್ನ ನಗೆಯಿಂದ ಸಂತೋಷ ಪಡುತ್ತಾರೆ.  ಅವರಿಂದ ನನಗೆ ತೃಪ್ತಿಯಿದೆ".

"ಕೊನೆಗೊಂದು ಪ್ರಶ್ನೆ.  ನಾಡಿಗೆ ನಿಮ್ಮ ಸಂದೇಶವೇನು?"

"ನಾನು ಮಹಾತ್ಮನಲ್ಲ, ಪವಾಡಪುರುಷನೂ ಅಲ್ಲ, ದೇವರು ನನಗೆ ನಗಿಸುವ ಕಲೆ ಕೊಟ್ಟಿದ್ದಾನೆ.  ಈ ಜೀವ ಇರುವತನಕ ಅಳುವವರನ್ನು ನಾನು ನಗಿಸುತ್ತಲೇ ಇರುತ್ತೇನೆ.  ಕವಿಯೊಬ್ಬರು ಹೇಳಿದ್ದಾರೆ ನಕ್ಕಾವ ಗೆದ್ದಾಂವ ಅಂತ.  ಅಳುವವರಿಗೆ ಇಲ್ಲಿ ಬದುಕಿಲ್ಲ" ಮತ್ತೆ ನಕ್ಕ ಕಲಾವಿದ.

                                *****

ಕೀಲಿಕರಣ: ಕಿಶೋರ್‍ ಚಂದ್ರ

ಕನ್ನಡಕ್ಕಿದೆಯೇ ಕಾಯಕಲ್ಪ?

- ರಾಮಸ್ವಾಮಿ ಡಿ.ಎಸ್

ಕನ್ನಡ ಸಮುದಾಯದ ಬಹುಮುಖೀ ಕನಸಾಗಿದ್ದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸಂಪನ್ನಗೊಂಡು ವಾರ ಕಳೆದಿದೆ. ಆಳುತ್ತಿರುವ ಸರ್ಕಾರವಂತೂ ಇದನ್ನೊಂದು ಅಭೂತ ಪೂರ್ವಸಾಧನೆಯೆಂದು ಬಿಂಬಿಸಲು ಮತ್ತು ಅದನ್ನು ನಂಬಿಸಲು ಮತ್ತೆ ಮತ್ತೆ ಜಾಹೀರಾತು ನೀಡಿ ಜನಸಮುದಾಯಕ್ಕೆ ಸಮ್ಮೇಳನ ನಡೆದುದನ್ನು ನೆನಪಿಸಿದೆ. ಇಪ್ಪತ್ತೈದು ವರ್ಷಗಳ ಅಂತರದಲ್ಲಿ ನಡೆದ ಈ ಸಮ್ಮೇಳನ ಸಾಧಿಸಿದ್ದಾದರೂ ಏನನ್ನು? ಎಷ್ಟೆಲ್ಲ ಪ್ರಚಾರ ಮತ್ತು ಸಂಪನ್ಮೂಲಗಳನ್ನು ಒಳಗೊಂಡಿದ್ದ ಸಮ್ಮೇಳನ ಒಟ್ಟೂ ನಿಟ್ಟಿನಲ್ಲಿ ಕನ್ನಡಕ್ಕೆ ಕೊಟ್ಟುದಾದರೂ ಏನು ಎಂದಿಲ್ಲಿ ಯೋಚಿಸಬೇಕಾದ ಅಗತ್ಯತೆ ಇದೆ.

ಏಕೆಂದರೆ ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿಗೂ ಕಳೆದೆರಡು ತಿಂಗಳ ಹಿಂದೆ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕಾರ್ಯಕ್ರಮ ಪಟ್ಟಿಗೂ ಯಾವ ವ್ಯತ್ಯಾಸಗಳೂ ಇರಲಿಲ್ಲ. ಸಾಹಿತ್ಯಸಮ್ಮೇಳನಕ್ಕೆ ಅಧ್ಯಕ್ಷರೊಬ್ಬರಿದ್ದುದನ್ನು ಬಿಟ್ಟರೆ ಉಳಿದಂತೆ ಎರಡೂ ಸಮ್ಮೇಳನಗಳಲ್ಲಿ ಚರ್ಚಿಸಲ್ಪಟ್ಟ ವಿಚಾರಗಳೂ ಭಾಗವಹಿಸಿದವರ ಹೆಸರುಗಳಲ್ಲೂ ಹೆಚ್ಚಿನ ವ್ಯತ್ಯಾಸಗಳೇನೂ ಇರಲಿಲ್ಲ. ಮತ್ತದೇ ಹಳೆಯ ವಿಚಾರಗಳ ಮೇಲಿನ ಒಣಚರ್ಚೆ, ವಿಚಾರಮಂಡಿಸುವ ಅದೇ ಅದೇ ಹಳೆಯ ಮುಖಗಳು, ವರ್ತಮಾನದ ತವಕ ಮತ್ತು ತಲ್ಲಣಗಳ ಗುಂಗಿರದ ನಿವೃತ್ತರ ಹಳೆ ಹಳೆ ಮಾತುಗಳ ಪುನರುಚ್ಛಾರ. ವರ್ಷಕ್ಕೊಮ್ಮೆ ತಪ್ಪದೇ ನಡೆಯುತ್ತಿರುವ ಸಾಹಿತ್ಯಸಮ್ಮೇಳನದ ಬಗ್ಗೆಯೇ ಸಾಕಷ್ಟು ಮಾತುಗಳಿರುವಾಗ ಅಂಥದೇ ಪರಿಶೆಯ ಮೂಲಕ ಸರಾಸರಿ ವೆಚ್ಚ ಮಾಡಿದ ಮೂವತ್ತು ಕೋಟಿರೂಪಾಯಿಗಳ ಲೆಕ್ಕ ಯಾವ ಪುರುಷಾರ್ಥ ಸಾಧನೆ ಮಾಡಿದೆ ಅಂತ ಕೇಳಿದರೆ ಅದು ಕನ್ನಡದ ದ್ರೋಹವೆಂದು ಆಯೋಜಕರೂ ಭಾಗವಹಿಸಿ ಭತ್ಯೆ ಪಡೆದವರೂ ಕರೆದಾರು.

ಉದ್ಘಾಟಕರ ಕನ್ನಡ ಪ್ರೀತಿ ಎಷ್ಟಿದೆಯೆಂದರೆ ಇನ್ಫೋಸಿಸ್ ಕಂಪನಿಗಿಂತಲೂ ವಿಪ್ರೋದಲ್ಲಿ ಕೆಲಸ ಮಾಡುವ ಕನ್ನಡಿಗರು ಹೆಚ್ಚಿದ್ದಾರೆ. ಬರಹ ಸೃಷ್ಜ್ಟಿಸಿದ ಶೇಷಾದ್ರಿ ವಾಸು ಸೇರಿದಂತೆ ಕನ್ನಡಕ್ಕೆ ತಂತ್ರಾಶವನ್ನು ಅಭಿವೃದ್ಧಿ ಪಡಿಸಲು ಇನ್ನೂ ಶ್ರಮಿಸುತ್ತಿರುವ ಹಲವರನ್ನು ಮರೆತದ್ದು ಏಕೆ? ಕವಿಗೋಷ್ಠಿ, ಸಿನಿಮಾಮಂದಿಯ ಮೆರವಣಿಗೆ, ಸಿನಿಮಾಹಾಡು, ವಿಚಾರ ಸಂಕಿರಣ, ಹಾಸ್ಯ ಇಷ್ಟರಲ್ಲೇ ವಿಶ್ವ ಕನ್ನಡ ಸಮ್ಮೇಳನ ಮುಗಿಯಿತೆಂದರೆ ಇದು ಕನ್ನಡಕ್ಕೆ ಕೊಟ್ಟ ಬಹುಮಾನವಾದರೂ ಏನು? ಈಗಾಗಲೇ ಸವೆದು ಹೋಗಿರುವ ಪ್ಲೇಟನ್ನೇ ಮತ್ತೆ ತಿರುಗಿಸಿ ಬರೋಬ್ಬರಿ ಮೂರುತಾಸುಗಳಷ್ಟು ದೀರ್ಘಕಾಲ ನಡೆದ ಹಾಸ್ಯೋತ್ಸವ ನಡೆಸಲು ವಿಶ್ವ ಕನ್ನಡಸಮ್ಮೇಳದ ಅಂಗಳ ಬೇಕಾಗಿತ್ತೆ? ವಿಶ್ವ ಸಮುದಾಯದಲ್ಲಿ ಕನ್ನಡದ ಬೆಳಕನ್ನು ಹಿಡಿದಿಡಲು ಮತ್ತು ಕನ್ನಡ ನೆಲೆಯಲ್ಲಿ ವಿಶ್ವವನ್ನು ನೋಡಿರುವ ಬಗೆಯನ್ನು ಅರಿಯಲು ಈ ಸಮ್ಮೇಳನ ಯಾವ ಕಿಡಕಿಯನ್ನು ತೆರೆಯಿತು ಅಂತ ಕೇಳಿದರೆ ನಿರಾಸೆಯಾಗುತ್ತದೆ. ಬರಿಯ ಸಾಹಿತಿಗಳ ಬುದ್ಧಿಜೀವಿಗಳ ಮಾಧ್ಯಮದ ದೈತ್ಯರ ಪ್ರದರ್ಶನಕ್ಕಷ್ಟೇ ಅವಕಾಶ ಸಿಕ್ಕಿದ್ದರ ಬಗೆಯಾದರೂ ಏನು?

ಮೂರುವರ್ಷಗಳಷ್ಟು ದೀರ್ಘಕಾಲದ ತಯಾರಿ ಮತ್ತೊಂದು ಜನಜಾತ್ರೆಯನ್ನಷ್ಟೇ ನಡೆಸಿತೆಂದರೆ ಅತಿಶಯ ಅಲ್ಲ. ಮೊದಲ ಸಮ್ಮೇಳನ ನಡೆದ ಕಾಲದ ಸಮಸ್ಯೆಗಳಿಗೂ ಈ ಕಾಲದ ಅವಶ್ಯಕತೆಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದೇ ಇದ್ದುದನ್ನು ಯಾಕೆ ಆಯೋಜಕರು ಗಮನಿಸಲಿಲ್ಲ? ಇವತ್ತು ಕನ್ನಡ ಅನ್ನುವುದು ಬರಿಯ ಭಾಷೆಯಾಗಿ ಮಾತ್ರವಲ್ಲ ಕನ್ನಡತನವೆನ್ನುವುದೇ ಜಾಗತೀಕರಣದ ಮುಂದೆ ಅಬ್ಬೇಪಾರಿಯಾಗಿ ನಿಂತಿದೆ. ಕನ್ನಡ ಶಾಲೆಗಳ ಹಾಜರಾತಿ ಗಮನಿಸಿದವರು ಯಾರಾದರೂ ಈ ಮಾತು ಧಾರಾಳವಾಗಿ ಹೇಳಬಹುದು. ದುಕಿಗೆ ಯಾವ ಭದ್ರತೆಯನ್ನೂ ಒದಗಿಸದ ಇಂಥ ಸಮ್ಮೇಳನಗಳು ಹೊಟ್ಟೆಗಿಲ್ಲದವರ ಜುಟ್ಟಿಗೆ ಕಟ್ಟಿದ ಮಲಿಗೆಯಲ್ಲವೇ? ಗಡಿವಿವಾದ, ಜಲವಿವಾದಗಳ ಬಗ್ಗೆ ಪುಂಖಾನುಪುಂಖ ಭಾಷಣ ಹೊಡೆಯುವವರಿಗೆ ಯುವ ಜನತೆ ಅನುಭವಿಸುತ್ತಿರುವ ಸಮಸ್ಯೆಗಳ ಸ್ವರೂಪವಾದರೂ ಗೊತ್ತೆ? ಕನ್ನಡದ ಹಿತ ಕಾಯದ, ವಿದೇಶದಲ್ಲಿರುವ ಕನ್ನಡಿಗನ ಆತ್ಮಸ್ಥೈರ್ಯ ಹೆಚ್ಚಿಸದ, ಕನ್ನಡಿಗರಿಗೆ ಬದುಕು ಕಟ್ಟಿಕೊಳ್ಳಲು ಹೊಸದೇನನ್ನೂ ಸೂಚಿಸದ ಈ ಸಮ್ಮೇಳನ ಯಶಸ್ವಿ ಅಂತ ಬೊಂಬಡ ಬಜಾಯಿಸುತ್ತಿರುವವರಿಗೆ ತಿಳುವಳಿಕೆ ಕೊಡುವವರಾದರೂ ಯಾರು?

         *****

ಕೀಲಿಕರಣ: ರಾಮಸ್ವಾಮಿ ಡಿ.ಎಸ್

ಅಳಬೇಡ ತಂಗಿ ಅಳಬೇಡ

-ಶಿಶುನಾಳ ಶರೀಫ್

ಆಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ         ||ಪ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕೆ ನೂಕಿದರವ್ವಾ
ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ           ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂತು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ               ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತ
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುವಾಳಧೀಶನ
ಆಂಗಳಕ ನೀ ಹೊರತಾದೆವ್ವ ಗೌರಿ                  ||೩||

                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಸೂರ್ಯನುರಿದ ಭೂಮಿಗೆ ತಂಪನೆರೆದ ಚಂದಿರ


-ಅಬ್ಬಾಸ್ ಮೇಲಿನಮನಿ

ಚಿತ್ರ: ರಾಂಗೋಪಾಲ್ ರಾಜಾರಾಮ್
ಮೂರು ದಿನಗಳಿಂದ ಅಮೀನೂರು ಜೀವಶವದಂತೆ ಉಸಿರಾಡತೊಡಗಿತ್ತು. ಗಾಳಿಗೆ ಬೀಸಲೋ ಬೇಡವೋ ಎನ್ನುವ ಸಂಧಿಗ್ಧತೆ. ಧಗಧಗ ಎನ್ನುವ ಸೂರ್ಯ ಭೂಮಿಯನ್ನು ಕಾದಹಂಚಿನಂತೆ ಮಾಡಿದ್ದ. ರಸ್ತೆಗಳಲ್ಲಿ ಮನುಷ್ಯರನ್ನು ಕಾಣದೆ ಬಿಡಾಡಿ ನಾಯಿ, ದನ ಮತ್ತು ಹಂದಿಗಳು ದಿಗಿಲುಗೊಂಡಿದ್ದವು. ಹಗಲೆಂಬೋ ಹಗಲು ಪೋಲೀಸರ ಲಾಟಿ ಮತ್ತು ಬೂಟುಗಳ ಸದ್ದಿಗೆ ಹೆದರಿಕೊಂಡಿತ್ತು. ಗೂಡು ಬಿಟ್ಟು ಹೊರಗೆ ಬರದ ಹಕ್ಕಿಗಳ ಎದೆ ತುಂಬ ತಲ್ಲಣ. ಕಿಟಕಿ, ಬಾಗಿಲು ಮುಚ್ಚಿದ ಮನೆಯೊಳಗೆ ಹೆಪ್ಪುಗಟ್ಟಿದ ಆತಂಕ.

ರಹೀಮ್ ಗಲ್ಲಿಯ ತನ್ನ ಪುಟ್ಟ ಗುಡಿಸಲಿನಲ್ಲಿ ಕ್ಕೆಕಾಲು ಕಟ್ಟಿ ಹಾಕಿದಂತೆ ಕುಳಿತಿದ್ದ. ಚಾಂದಬಿ ನಿರಂತರ ಹೊಯ್ದಾಡತೊಡಗಿದ್ದಳು. ಊರು ಆನುಭವಿಸುತ್ತಿರುವ ಆನಾಥ ಪ್ರಜ್ಞೆಯ ತಹತಹಿಕೆ ಆವಳೊಡಲಲ್ಲಿ ಸಂಕಟವನ್ನು ಸೃಜಿಸಿತ್ತು. "ಆ ಸ್ಯೆತಾನ್ ಬೇಟಾಗಳಿಗೆ ಹೇಳೋರು, ಕೇಳೋರು ಯಾರೂ ಇಲ್ಲೇನಂತೀನಿ. ಇಡೀ ಊರss   ಕಬರಸ್ತಾನ ಮಾಡಿ ಕುಂತಾವು ಬಾಡ್ಯಾಗೋಳು, ಧರ್ಮ, ದೇವರಂತ ಬದುಕೋರ ಜೀವಾ ಹಿಂಡಾಕ ಹತ್ತ್ಯಾವು. ಬಾಯಾಗ ಮಣ್ಣುಹಾಕ್ಲಿ ಹಿಂದಿನ ಕಾಲ್ದಾಗ ಇಂಥ ಹುಳಾ ನಾಶಾ ಮಾಡಾಕ ದೇವರು ಅವತಾರ ಎತ್ತಿ ಬರ್ತಿದ್ದನಂತ, ಈಗೆಲ್ಲಿ ಕಣ್ಮುಚ್ಚಿ ಕುಂತಾನೋ ಆಂವಾ ..... .." ಆಕೆ ಮಾತಾಡುತ್ತಲೇ ಇದ್ದಳು.

ಒಂದು ಸಂಜೆ, ಹುಡಗನೊಬ್ಬ, ಗಿರಣಿಯಲ್ಲಿ ಜೋಳ ಬೀಸಿಕೊಂಡು ಮನೆಗೆ ಹೊರಟ ಹುಡುಗಿಯೊಬ್ಬಳ ಜಡೆ ಎಳೆದು ಓಡಿ ಹೋದ ಪ್ರಸಂಗ, ಮಾತುಮಾತಲ್ಲಿ ಹಲವಾರು ತಿರುವುಗಳನ್ನು ಪಡೆದುಕೊಂಡು, ಊರನ್ನು ಪ್ರಕ್ಷುಬ್ಧಗೊಳಿಸಿ, ಕೋಮು ಗಲಭೆಯಾಗಿ ಮಾರ್ಪಟ್ಟು ಬೆಳಗು ಹರಿಯುವುದರೊಳಗೆ, ಹಾಲು ಮಾರುವ ಹಿಂದೂ ಹುಡುಗ, ಪೇಪರ್ ಹಂಚುವ ಮುಸ್ಲಿಮ ಹುಡುಗರನ್ನು ಬಲಿತೆಗೆದುಕೊಂಡಿತ್ತು. ನಿಪೇಧಾಜ್ಞೆ ಜಾರಿಯಾಗಿ, ವಾಹನಗಳಲ್ಲಿ ಬಂದ ಹಿಂಡುಹಿಂಡು ಪೋಲೀಸರು
ಗಾಳಿಯಲ್ಲಿ ಗುಂಡು ಹಾರಿಸುತ್ತ ಬೀದಿಬೀದಿಗಳಲ್ಲಿ ತಿರುಗಾಡಿಕೊಂಡ ಮೇಲೆ ದೊಂಬಿಯ ಸದ್ದು ಅಡಗಿತ್ತು.

ಆದರೆ ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿ ಸೋಕಿದ್ದೆ ನಿಗಿನಿಗಿಸುತ್ತಿತ್ತು. ಕರ್ಫೂವನ್ನು ಧಿಕ್ಕರಿಸಿಯೂ ಅಲ್ಲಲಿ ಬೆಂಕಿ ಹಚ್ಚಿದ, ಆಂಗಡಿಗಳನ್ನು ಲೂಟಿ ಮಾಡಿದ ಪ್ರಕರಣಗಳು ಸಂಭವಿಸಿ ಜನರ ತಲ್ಲಣ ಹೆಚ್ಚಿಸದೇ ಇರಲಿಲ್ಲ. ಕಂಡಲ್ಲಿ ಗುಂಡು ಹಾರಿಸುವ ಆಜ್ಞೆಯಿಂದ ಪೋಲೀಸರ ಕ್ಕೆಯಲ್ಲಿನ ಬಂದೂಕುಗಳು ಮನುಷ್ಯರ ಬೇಟೆಗೆ ಕಾತರಿಸುತ್ತಲೆ ಇದ್ದವು.

ಊರಿನ ಬಸ್ ನಿಲ್ಲಾಣದ ಹಿಂದುಗಡೆಗೆ ವ್ಯಾಪಿಸಿಕೊಂಡಿದ್ದ ರಹೀಮಗಲ್ಲಿ ಗುಬ್ಬಿ ಮರಿಯಂತೆ ಥರಗುಟ್ಟತೊಡಗಿತ್ತು. ಚಾಂದಬಿಯ ಮಾತುಗಳನ್ನು ಗಂಡ ಮುಷ್ತಾಕ್ ಕೇಳಿಯೂ ಕೇಳದಂತೆ ಕುಳಿತುಕೊಂಡಿದ್ದ. ಊರು ಭೀತಿಯೊಳಗಾದ ಹಿನ್ನಲೆಯಲ್ಲಿ ಎರಡು ವರ್ಷದ ಹಿಂದಿನ ಘಟನೆ ಆವನನ್ನು ಆವರಿಸಿಕೊಂಡಿತ್ತು. ಕಂಪನಿಯೊಂದರ ಟ್ರಕ್ಕು ನಡೆಸುತ್ತಿದ್ದ ಅವನು ಆಹಮದಾಬಾದಿಗೆ ಮಾಲು ತುಂಬಿಕೊಂಡು ಹೋದಾಗ ಕೋಮು ಗಲಭೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ದುರುಳರು ಆವನ ತಲೆಯ ಮೇಲಿನ ಟೋಪಿ ನೋಡಿ, ಸ್ಟೇರಿಂಗ್ ಮೇಲಿರಿಸಿದ್ದ ಆವನ ಎರಡೂ ಕೈಗಳನ್ನು ತಲವಾರಿನಿಂದ ತುಂಡರಿಸಿ ಟ್ರಕ್ಕಿಗೆ ಬೆಂಕಿ ಹಚ್ಚಿ ಹೋಗಿದ್ದರು. ಮುಷ್ತಾಕ್ ಆಲ್ಲಿಂದ ಜೀವ ಉಳಿಸಿಕೊಂಡು ಬಂದದ್ದು ಪವಾಡವನಿಸಿತ್ತು. ಒಂದು ಹೆಣ್ಣು ಎರಡು ಗಂಡು ಮಕ್ಕಳು. ಗಂಡ-ಹೆಂಡತಿ. ಎಂಥ ಸೊಗಸಾಗಿತ್ತು. ಬದುಕು! ಆಲ್ಲಾಹನಿಗದು ಮನಸ್ಸಿಗೆ ಬರಲಿಲ್ಲ. ದುಡಿಯುವ ಹುಮ್ಮಸ್ಸಿನ ಮುಷ್ತಾಕ್ ಕ್ಕೆಕಳೆದುಕೊಂಡು ಮನೆ ಹಿಡಿದು ಕುಳಿತಿದ್ದ. ಚಾಂದಬಿ ದಿಟ್ಟ ಹೆಂಗಸು, ಹತ್ತಾರು ಮನೆಗಳ ಕಸ-ಮುಸುರೆಗೆ ಹೋಗಿ ಬರುತ್ತ ಸಂಸಾರವನ್ನು ನಿಭಾಯಿಸಿತೊಡಗಿದ್ದಳು. ಅವಳ ಹಿರಿಯ ಮಗ ನೌಷಾದ್ ಬುದ್ಧಿವಂತ ಹುಡುಗ.  ಏಳನೆಯ ತರಗತಿಯವರೆಗೆ ಉರ್ದು ಕಲಿತು, ಎಸ್‌ಎಸ್‌ಎಲ್ಸಿ ಪರೀಕೆಯನ್ನು ಕನ್ನಡದಲ್ಲಿ ಬರೆದು ಹೈಸ್ಕೂಲಿಗೆ ಪ್ರಥಮ ಸ್ಥಾನಗಳಿಸಿದ್ದ. ಹಿಂದೂ ಹುಡುಗರ ಜೊತೆಗೆ ಅವನದು ಹೆಚ್ಚಿನ ದೋಸ್ತಿ. ಗಲ್ಲಿಯಲ್ಲಿ ಎಲ್ಲರಿಗೂ ಬೇಕಾದ ಹುಡಗ. ಮಗನನ್ನು ಹೊಗಳುವುದುದೆಂದರೆ ಚಾಂದಬಿಗೆ ಸಂಭ್ರಮ. ಮುಷ್ತಾಕನಿಗೆ ಮಗನ ಬಗ್ಗೆ  ಕನಸುಗಳಿದ್ದವು. ಅವನು ತಮ್ಮ ಭವಿಷ್ಯದ ಬೆಳಕು ಎಂದು ಭಾವಿಸಿದ್ದ. ಆದರೆ ಆ ದಿನದ ಕತ್ತಲು ಈ ಬೆಳಕನ್ನು ನುಂಗಿತ್ತು.

ದೇಶದ ಎಲ್ಲೋಒಂದು ಕಡೆಗೆ ಪ್ರತಿಮೆಗಾದ ಆಪಮಾನವನ್ನು ಫ್ರತಿಭಟಿಸಲು ಒಂದು ಕೋಮಿನವರು ಬಂದ್ ಆಚರಿಸಿದ್ದರು. ದುಷ್ಕರ್ಮಿಗಳು ಆ ಸಂದರ್ಭವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡು ಊರಲ್ಲಿ ದಂಗೆ ಸೃಷ್ಟಿಸಿದ್ದರು. ಮಸೀದೆಯಿಂದ ಇಷಾ ನಮಾಜು ಮುಗಿಸಿಕೂಂಡು ಮನೆಯತ್ತ ಧಾವಿಸಿದ್ದ ನಷಾದ್ ಮಂತಾಂಧನೊಬ್ಬನ ಚೂರಿ ಇರಿತಕ್ಕೆ ಸಿಕ್ಕು ನೆಲಕ್ಕುರುಳಿದ್ದ. ಆವನ ಹೊಟ್ಟಿಯೊಳಗಿಂದ ಹೊರಬಿದ್ದಕರುಳು
ಕಂಡ ಚಾಂದಬಿ ಮುಗಿಲು ಹರಿದು ಬೀಳುವಂತೆ ಆಕ್ರಂದಿಸಿದ್ದಳು.

ಚಾಂದಬಿಗೆ ಈಗ ಮಗನ ನೆನಪು ಕಾಡದೆ ಇರಲಿಲ್ಲ. ಆ ನೆನಪಿನ ತುಂಬ ತಳಮಳ. ಆದರ ತೆಕ್ಕೆಯಲ್ಲಿ ಸಿಲುಕಿಕೊಂಡರೆ ಆಕೆ ಎರಡು-ಮೂರು ದಿನ ಹಾಸಿಗೆ ಬಿಟ್ಟು ಏಳುವುದಿಲ್ಲವೆಂದು ಮುಷ್ತಾಕ್‍ನಿಗೆ ಗೊತ್ತು. ಅದಕ್ಕಾಗಿ ಅವನು ಅವಳ ಮಾತುಗಳಿಗೆ ಫ್ರತಿಕ್ರಿಯಿಸದೆ ಕುಳಿತಿದ್ದ.
 *****

ಮೊನ್ನೆಯೇ ತಿಂಗಳ ಕೊನೆ. ಆವಳಿಗೆ ನಾಲ್ಕು ಮನೆಯವರು ಪಗಾರಕೊಡಬೇಕು. ಗಾಂಧಿನಗರ ಬಡಾವಣೆಯಲ್ಲಿರುವ ಆ ಮನೆಯವರಿಗೆ ಚಾಂದಬಿಯ ಮೇಲೆ ವಿಶೇಷ ಆನ್ನುವಂಥ ಪ್ರೀತಿ. ಆವರು ಆಕೆಯನ್ನು ಕೆಲಸದಾಳು ಎಂದು ಗಮನಿಸಿದ್ದಿಲ್ಲ. ಎದೆಯಲಿ ಬ್ರಹ್ಮಾಂಡದಷ್ಟು ದುಮ್ಮಾನವನ್ನು ಹತ್ತಿಕ್ಕಿಕೊಂಡು ಆಕೆ ಚೊಕ್ಕಟವಾಗಿ ಕೆಲಸ
ನಿರ್ವಹಿಸುವ, ಮನುಷ್ಯ ಸಂಬಂಧದ ಗಂಧ ತೀಡುವ ಪರಿಯಿಂದ ಸಂಪ್ರೀತರಾದವರು. ಆವಳ ಮನಸ್ಸು ಸ್ವಚ್ಚ-ಮಾತು ನೇರ. ಮೈಗಳೃತನದಿಂದ ಹಣ ಪಡೆದುಕೊಳ್ಳುವ ತಕರಾರಿನವಳಲ್ಲ. "ಬೆವರು ಸುರಿಸಲಾರ್‍ದತಿಂದ ಆನ್ನ ಮೈಯಾಗ  ರಕ್ತಾ ಆಗುದಿಲ್ರಿ" ಎನ್ನುವ ಸ್ವಭಾವ. ಲಂಚ ತಿನ್ನುವ ಸಾಹೇಬರುಗಳ ಅಂತರಂಗವನ್ನು ಕಲಕದೇ ಬಿಡುತ್ತಿರಲಿಲ್ಲ ಆವಳ ಮಾತು. ತನ್ನ ತಾಪತ್ರಯಗಳ ಬಗ್ಗೆ ಚೂರೂ ಹೇಳಿಕೊಳ್ಳು-
ವವಳಲ್ಲ ಆದರೆ ನೌಷಾದನ ವಯಸ್ಸಿನ ಹುಡುಗರನ್ನು ನೋಡಿದರೆ ಆವಳ ಕಣ್ಣಂಚಿನಲ್ಲಿ ನೀರು ತುಳುಕುತ್ತಿತ್ತು. ಕೈಗೆ ಬಂದ ಮಗ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಸತ್ತುಬಿದ್ದ ದೃಶ್ಯ ಆವಳ ಕಣ್ಣೆದುರು ಕಟ್ಟಿ ಹೃದಯವನ್ನು ಫಾಸಿಗೊಳಿಸುತ್ತಿತ್ತು. ಚೂರಿ ರೂಪದಲ್ಲಿ ಬಂದು ಮಗನನ್ನು ನುಂಗಿ ಹಾಕಿದ ವಿಧಿಯನ್ನು ಆಕೆ ಒಳಗೇ ಶಪಿಸುತ್ತಿದ್ದಳು. ಎಳೆಯ ಮಗುವಿನ ರಕ್ತಕುಡಿದ ಧರ್ಮಾಂಧ ಹುಳುವನ್ನು ಜನ ಬೈದಾಡಿಕೊಂಡಿದ್ದರು.  ಆದರೆ ಆ ಹುಳುಗಳ ಪತ್ತೆ ಮಾತ್ರ ಆಗಿರಲಿಲ್ಲ.

ಈಗ ಆಂಥವೇ ಹುಳಗಳು ಊರಲ್ಲಿ ಗುಲ್ಲೆಟ್ಟಸಿ ಇಬ್ಬರು ಹಿಂದೂ-ಮುಸ್ಲಿಮ ಹುಡುಗರ ಮೇಲೆ ರಣಹದ್ದುಗಳಂತೆ ಎಗರಿ ಕುಕ್ಕಿದ್ದು ಕೇಳಿ ಚಾಂದಬಿಯ ಲಾವಾ ಕುದ್ದಿತ್ತು "ಯಾವ ರಾಕ್ಷಸಗೊಳು ಆ ಹುಡುಗರ ಜೀವಾ ನುಂಗಿದವೋ. ಆವರ ಕಟಬಾಯಿ ಹರೀಲಿ. ಆವರ ವಂಶ ನಿರ್ವಂಶ ಆಗ್ಲಿ ಆವರ ಉರುವಣಿಗ್ಯಾಗ ಉಪ್ಪು ತುಂಬಲಿ" ಎಂಬಿತ್ಯಾದಿಯಾಗಿ ಶಾಪದ ಕಿಡಿಗಳನ್ನು ಸಿಡಿಸಿದ್ದಳಾಕೆ. ಕೋಮು ಎನ್ನುವ ಕಾಳಿಂಗ ಸರ್ಪವನ್ನು ಕೆರಳಿಸುವ ನೀಚರ ಸೂಕ್ಷ್ಮಗಳು  ಚಾಂದಬಿಯ ಗ್ರಹಿಕೆಗೆ ನಿಲುಕುವಂತಿರಲಿಲ್ಲ.

ಚಾಂದಬಿ ಒಟ್ಟಳೇ ಎಷ್ಟು ಮಾತಾಡಿಯಾಳು. ಮುಷ್ತಾಕ್ ಕಿಮಿಕ್ ಎನ್ನದೇ ಕುಳಿತಿದ್ದ. ಮಕ್ಕಳಿಬ್ಬರು ಪುಸ್ತಕದಲ್ಲಿ ಮಗ್ಲರಾಗಿದ್ದರು. ಚಾಂದಬಿ ಬೇಸರದಿಂದ ಮೈಮುರಿದಳು. ತಟ್ಟನೆ ಆವಳಿಗೆ ಪದ್ಮಾ ಹೇಳಿದ ಮಾತು ನೆನಪಾದವು. ಪದ್ಮಾ ಆಫೀಸರೊಬ್ಬನ ಹೆಂಡತಿ. ಗಲಭೆಯ ಹಿಂದಿನ ದಿನ ಆಕೆ ಸ್ಪಷ್ಟವಾಗಿ "ನಮ್ಮ ರೂಪಾಗ ದಿನ ತುಂಬ್ಯಾವು. ಇವತ್ತ, ನಾಳೆ ಆವಳ ಹೆರಿಗೆ ಆಗತ್ತ. ಆಕಿ ಬಾಣಂತನಕ ನೀನು ಆಸರ ಆಗಬೇಕು. ಬೇಕಾದ್ರ ನೀನು ಕೆಲಸ ಮಾಡೋ ಮನಿ ಕಮ್ಮಿ ಮಾಡ್ಕೋ. ನಮ್ಮ ಮಾನಿಯಾಗ ಖಾಯಂ ಇರು. ನಿನ್ಗ ಬೇಡಿದಷ್ಟು ಪಗಾರ ಕೊಡ್ತೀನಿ" ಎಂದಿದ್ದಳು. ಆವಳ  ಗಂಡ ಚಂದ್ರಪ್ಪ ಊರಲ್ಲಿ ಇರುವುದೇ ಅಪರೂಪ. ಯಾವಾಗಲೂ ಟೂರ್ ಮೇಲೆ ಹೋಗುವವರು. ಹಿರಿಯ ಮಗ ಮೈಸೂರಲ್ಲಿ  ಓದುತ್ತಿದ್ದ. ಇನ್ನೂಬ್ಬ ಮಗ ಚಿಕ್ಕವನು. ರೂಪಾಳ ಬಾಣಂತನಕ್ಕೆ ಕಷ್ಟವಾಗಬಾರದು ಎಂಬ ಕಾರಣದಿಂದ ಚಂದ್ರಪ್ಪ "ನೀನು ಹಣದ ಬಗ್ಗೆ ಚಿಂತೆ ಮಾಡಬೇಡ" ಎಂದು ಚಾಂದಬಿಯನ್ನು ಕೇಳಿಕೊಂಡಿದ್ದರು.  "ರೊಕ್ಕದ ಮಾತು ಹೇಳಬ್ಯಾಡ್ರಿ ಸಾಹೇಬರ. ನಾಯೇನು ಆಸೇದಾಕಿ ಆಲ್ಲ. ರೂಪಾ ನನ್ನ ಬೇಟಿ ಸಮಾನ. ಅವಳ ಬಾಣಂತನ ನಾನss  ಮಾಡ್ತೀನಿ" ಎಂದಿದ್ದಳಾಕೆ.

"ಪಾಪ, ಆ ಹುಡುಗಿ ಹೆರಿಗಿ ಆತೊ ಏನೋ?" ಚಾಂದಬಿ ಈಗ ತೀವ್ರ ಚಡಪಡಿಸತೊಡಗಿದಳು. ಪದ್ಮಾನ ಮಾತು ಎದೆಯಲ್ಲಿ ಪ್ರತಿಧ್ವನಿಸಿದಂತಾಗಿ ಆಕೆ ಎದ್ದೂನಿಂತು "ನಾನು ಪದ್ಮಕ್ಕರ ಮಾನೆಗೆ ಹೋಗಿ ಬರ್ತೀನ್ರಿ" ಎಂದಳು.

"ನಿನ್ನ ತಲಿ ಖರಾಬ್ ಆಗೇತೇನು ? ಊರಾಗ ಒ೦ದು ನರಪಿಳ್ಳಿನೂ ತಿರಗಾಡಕ ಹತಿಲ್ಲ. ಹೋಗಿ ಬಂದೂಕಿನ ಬಾಯಿಗೆ ಬೀಳಬೇಕಂತಿಯೇನು ? ಸುಮ್ನ ಮಾನೆಯಾಗ ಕೂಡ್ರು"  ಮುಷ್ಟಾಕ್ ಹಗುರಾಗಿ ಗದರಿಸಿದ.

"ಪದ್ಮಕ್ಕ ಬಹಳ ಹೇಳ್ಯಾರ. ಊರಾಗ ಇಂಥ ಪರಿಸ್ಥಿತಿ. ಪಾಪ, ಆವರು ಏನು ಮಾಡ್ತಾರೋ ಏನೋ?" ಚಾಂದಬಿಯ ಮನಸ್ಸು ಆತ್ತಕಡೆ ಧ್ಯಾನಿಸಿತ್ತು.

"ಗದ್ದಲ ಎಬ್ಬಿಸುವ ಹರಾಮ್‌ಖೋರರಿಗೆ ಮನಷ್ಯಾರ ಸಂಕಟ ಆರ್ಥಾಗುದಿಲ್ಲ' ಮುಷ್ಟಾಕ್‍ನ ಧ್ವನಿಯಲ್ಲಿ ವ್ಯಥೆ, ಸಿಟ್ಟು ಎರಡೂ ಕಾಣಿಸಿದ್ದವು.

"ಆ ಸೂವರ್‌ಗಳ ತಗೊಂಡು ಏನು ಮಾಡೋದೈತಿ. ರೂಪಾ ಬೇಟಿಗೆ ಇದು ಪೈಲಾ ಹೆರಿಗೆ. ನಾನು ಹೋಗಿ ಬರ್‍ತೀನಿ" ಎಂದು ಚಪ್ಪಲಿ ಮೆಟ್ಟಿಕೊಂಡಳು ಚಾಂದಬಿ.

"ನಿಂದೂ ಹಠಾ ಬಹಳಾತು, ಪೋಲೀಸರ ಬಂದೂಕಿಗೆ ಮರುಕ ಇರುದಿಲ್ಲ!"
ಹೆಂಡತಿಯನ್ನು ತಡೆಯಲು ನೋಡಿದ ಮುಷ್ಟಾಕ್,

"ಬಸವಣ್ಣ ದೇವರ ಗುಡಿ ಸಂದಿ ಹಿಡಿದು ಹೋಗಿ ಬರ್‍ತೀನಿ. ನೀವೇನು ಚಿಂತಿ ಮಾಡಬೇಡ್ರಿ" ಎನ್ನುತ್ತ ಆಕೆ ಹೊಸಲು ದಾಟಿದಳು. ಅಂತಃಕರಣ ಹೃದಯ ಅವಳದು. ಆದರೆ ಪೋಲೀಸರ ಗುಂಡಿಗೋ, ಧರ್ಮಾಂಧರ ಕೈಗೋ; ಸಿಕ್ಕು ಬಿಟ್ಟರೆ ಆಕೆಯ ಗತಿಯೇನು ?  ಮುಷ್ಟಾಕವ ಚಿಂತಿಸಿದ.

ಚಾಂದಬಿ ತನಗೆ ಪರಿಚಿತವಾಗಿದ್ದ ಸಂದಿಗಳನ್ನು ಆತಂಕದ ಹೆಜ್ಜೆಗಳಿಂದಲೇ ಕ್ರಮಿಸಿದ್ದಳು. ಅವಳನ್ನು ನೋಡುತ್ತಲೇ ಪದ್ಮಾ, ಸಮಾಧಾನ ಅನುಭವಿಸುತ್ತ ಹೇಳಿದಳು. "ಬಾ, ಒಳಗ. ದೇವರು ಬಂದಂಗ ಬಂದಿ ನಮ್ಮವ್ವ, ರೂಪಾಗ ಹೆರಿಗೆ ಬ್ಯಾನಿ ಶುರು ಆದಂಗ ಕಾಣಸ್ತಾವು. ಇವರು ಬ್ಯಾರೆ ಮುಂಬೈಗೆ ಹೋಗ್ಯಾರ, ಸುಧಾ ಡಾಕ್ಟರು, ದವಾಖಾನಿಯಲ್ಲಿರ್‍ತೀನಿ ಕರ್‍ಕೊಂಡು ಬರ್ರಿ ಅಂದ್ರು. ನನ್ಗ ದಿಕ್ಕು ತಿಳಿದಂಗಾಗಿತ್ತು'.

"ರಸ್ತಾದಾಗ ರಿಕ್ಷಾ ಟಾಂಗಾ ಒಂದೂ ತಿರುಗಾಡವಲ್ಲುವು, ರೂಪಾನ್ನ ದವಾಖಾನಿಗೆ ಕರ್ಕೊಂಡು ಹೋಗುದು ಹ್ಯಾಂಗರಿ ಅಕ್ಕಾ? ಹೆರಿಗೆ ಇಲ್ಲೆ ಆಗ್ಲಿ ಬಿಡ್ರಿ, ನಾನು ರೂಪಾನ ಮುಂದss  ಇದ್ದೇನಿ. ನೀವೇನು ಗಾಬರಿ ಆಗಬ್ಯಾಡ್ರಿ" ಹೆರಿಗೆ ಮಾಡಿಸಿದ ಆನುಭವದ ಧೈರ್ಯದಿಂದಲೇ ಹೇಳಿದ್ದಳು ಚಾಂದಬಿ.

"ರೂಪಾಗ ಇದ ಬೊಚ್ಚಲ ಹೆರಿಗೆ, ಇವರು ದವಾಖಾನಿಯಾಗ ಆಗ್ಲಿ ಆಂದಾರ, ಆವಳತ್ತಿ ರೂಪಾ, ಗಂಡನ ಆಭಿಪ್ರಾಯನೂ ಅದss  ಐತಿ" ಎನ್ನುತ್ತ ಪದ್ಮಾ ಒಳಗೆ ಹೋದಳು. ಜಾಂದಬಿ ಆವಳನ್ನು ಹಿಂಬಾಲಿಸಿದಳು.

ಕುಳಿತಿದ್ದ ರೂಪಾ ತುಟಿ ಕಚ್ಚುತ್ತ ಎರಡೂ ಕೈಗಳನ್ನು ಚಲ್ಲಾಡತೊಡಗಿದ್ದಳು. ಪದ್ಮಾಳ ಮುಖದಲ್ಲಿ ಗಾಬರಿ ಒಡೆದು ಕಾಣಿಸಿತು. ಚಾಂದಬಿ, ರೂಪಾನ ಹತ್ತಿರ ಕುಳಿತು "ಬೇಟಿ, ನೀನು ಚಂದದ ಮಗನ ತಾಯಿ ಆಗ್ತಿ ತ್ರಾಸು ತಡಕೋರವ್ವ" ಎಂದು ತಲೆ ನೇವರಿಸಿದಳು, ಒಡಲಾಳದ ಆಸಾಧ್ಯ ನೋವಿಗೆ ತಾನು ಆಳಲ್ಲ ಎನ್ನುವಂತೆ ರೂಪಾ ತೀವ್ರವಾಗಿ ಒದ್ದಾಡತೊಡಗಿದಳು.

ಆರು ವರ್ಷಗಳ ಹಿಂದೆಯೇ ಅವಳ ಮದುವೆಯಾದದ್ದು. ಗಂಡ ಶ್ರೀಕಾಂತ ಕೆ‌ಇಬಿಯಲ್ಲಿ ಜೆ.ಇ. ಆಗಿದ್ದ ದಾಂಪತ್ಯದಲ್ಲಿ ಆನೂನ ಪ್ರೀತಿಯಿತ್ತು ತಂದೆಯನ್ನಿಸಿ ಕೊಳ್ಳುವ ಉಮೇದು ಇತ್ತಾದರೂ ಆದನ್ನು ಗಂಭೀರವಾಗಿ ಪರಿಗಣಿಸುವ ಪ್ರವೃತ್ತಿ ಅವನದಾಗಿರಲಿಲ್ಲ. ಈ ಬಗೆಗೆ ಧಾವಂತ ಇದ್ದುದು ರೂಪಾಳ ಆತ್ತೆ-ಮಾವಂದರಿಗೆ. ಮೊಮ್ಮಗ ಆಥವಾ ಮೊಮ್ಮಗಳ ಕಾಣುವ ಆಸೆ ಆವರಿಗೆ. ಶ್ರೀಕಾಂತ-ರೂಪಾ ವೈದ್ಯರಲ್ಲಿ ಪರೀಕ್ಷಿಸಿಕೊಂಡದ್ದು ಆವರ ಒತ್ತಾಸೆಗೆನೇ. ಇಬ್ಬರಲ್ಲೂ ದೋಷವಿರಲಿಲ್ಲ. ರೂಪಾಳಿಗೆ ಮಕ್ಕಳಾಗುತ್ತವೆಯೆಂದು ಡಾಕ್ಟರ್ ಭರವಸೆ ನೀಡಿದ್ದರು. ಆವಳತ್ತ್ರ್ಗೆ ಸಮಾಧಾನವಾಗಿತ್ತು. ಆದೇ ಉತ್ಯಾಹದಲ್ಲಿ ದೇವರು ದಿಂಡರು, ಹರಕೆಯೆಂದು ಆಕೆ ಸೂಸೆಯೊಂದಿಗೆ ಓಡಾಡಿದ್ದಳು. ಫಲವಂತಿಕೆ ಶೂನ್ಯವೆನಿಸಿತ್ತು. ಸಹನೆ ಕಳೆದುಕೊಂಡ ಆವಳು "ಸೊಸೆ ಗೊಡ್ಡು" ಎಂದು ತೀರ್ಮಾನಿಸಿದ್ದಳು. ರೂಪಾಳಿಗೆ ಕಿರಿಕಿರಿ ಶುರೂವಿಟ್ಟುಕೊಂಡದ್ದು ಆಗಲೇ. ಆದು ವಿಪರೀತ ಆನಿಸಿದಾಗ ಶ್ರೀಕಾಂತ  "ನಮಗ ಮಕ್ಕಳಾಗದಿದ್ರೂ ಚಿಂತೆ ಇಲ್ಲ, ಅನಾಧಾಶ್ರಮದ ಒಂದು ಮಗೂನ್ನ ತಂದು ನಾವೇ ಅದಕ್ಕೆ ತಾಯಿ-ತಂದೆ ಆಗ್ತೀವಿ. ನೀನು ರಾಮಾಯಣ-ಮಹಾಭಾರತ ಮಾಡಬ್ಯಾಡ" ಎಂದು ತಾಯಿಗೆ ಸ್ಪಷ್ಟವಾಗಿಯೇ ಹೇಳಿದ್ದ.

"ಅನಾಥ ಆತ್ತಮದ ಕೂಸು ನಮ್ಮ ರಕ್ತದ್ದು ಹ್ಯಾಂಗಾಗತ್ತೋ? ಬೇಕಾದ್ರ ಇನ್ನೊಂದು ಕನ್ಯಾ ಹುಡುಕಿ ಮದುವಿ ಮಾಡ್ತೀನಿ"
ತಾಯಿ ತನ್ನ ನಿರ್ಧಾರ ತಿಳಿಸಿದ್ದಳು.

"ಮದುವಿ ಅನ್ನೋದು ಸಣ್ಣ ಹುಡುಗರ ಆಟಲ್ಲ ರೂಪಾ ನನ್ನ ಹೆಂಡತಿ. ಕೊನೆತನಕ ಆಕೀನ ನನ್ನ ಹೆಂಡತಿ ಆಗಿದ್ದಾಳೆ" ಶ್ರೀಕಾಂತ ತನ್ನ ಆಖ್ಯೆರು ಆಭಿಪ್ರಾಯ ತಿಳಿಸಿದ್ದ.

ಮಗನ ಮಾತಿನಿಂದ ಸಿಟ್ಟುಗೊಂಡ ಆಕೆ "ಈ ಗೊಡ್ಡಿ ನಿನ್ನ ಮಾಟಾ ಮಾಡಿಸ್ಯಾಳ" ಎಂದು ಹಾರಾಡಿದ್ದಳು. ಅತ್ತೆಯ ಕೂರಲಗಿನ ಮಾತಿನಿಂದ ರೂಪಾ ಚಿತ್ತಹಿಂಸಯನ್ನು ನಿತ್ಯವೂ ಆನುಭವಂತಾಗಿತ್ತು. ಮನಸ್ಸು ದೇಹಗಳನ್ನು ನಿಸ್ತೇಜಿಸಿಕೊಂಡ ಮಗಳ ಬಗ್ಗೆ ತಾಯಿ ತಂದೆಗೂ ಚಿಂತೆ ಕಾಡತೊಡಗಿತ್ತು.

ವೈದ್ಯರ ನಂಬುಗೆ ನಿಜವೆನ್ನುವಂತೆ ರೂಪಾ ಗರ್ಭ ಧರಿಸಿದ್ದಳು. ಅವಳತ್ತೆ ಆವರಿಹೂವಾಗಿದ್ದಳು. ಸೊಸೆಯನ್ನು ನಾಜೂಕಾಗಿ ನೋಡಿಕೊಂಡಿದ್ದಳು. ಸೀಮಂತನ ಕೂಡಾ ಸಂಛ್ರಮದಿಂದಲೇ ಜರುಗಿತ್ತು. ಎಲ್ಲರೂ ಆವಳ ಹೆರಿಗೆ ಸುದ್ದಿಗಾಗಿ ಕಾತರಿಸುತ್ತಿದ್ದರು.

* * *

ಚಾಂದಬಿಗೆ ಈ ಹಕಿಕತ್ತು ಎಲ್ಲಾ ಗೊತ್ತು.
"ಯಾ ಪಾಕ್ ಪರವರ್ದಿಗಾರ್, ರೂಪಾ ಬೇಟಿಗೆ ಕರುಣಾ ತೋರ್‍ಸು. ಆವಳ ಹೆರಿಗೆ ಸುಸೂತ್ರ ಆಗ್ಲಿ" ಎಂದು ಮನಸ್ಸಿನಲ್ಲಿಯೇ ಬೇಡಿದಳು ಆಕೆ. ಮಗಳು ತಳಮಳಿಸುವುದನ್ನು ನೋಡಲಾಗದೆ ಪದ್ಮಾ "ಚಾಂದಬಿ, ಹ್ಯಾಂಗರ ಮಾಡಿ ರೂಪಾನ್ನ ದವಾಖಾನಿಗೆ ಕರ್‍ಕೊಂಡು ಹೋಗಬೇಕು" ಎಂದು ಗಡಬಡಿಸಿದಳು.  ಆವಳ ತುಮುಲವನ್ನು ಅರ್ಥಮಾಡಿಕೋಡ ಚಾಂದಬಿ "ರಸ್ತಾದಾಗ ಯಾವುದರ ಗಾಡಿ ಬರ್ತಾವೇನೋ ನೋಡಿ ಬರ್‍ತೀನಿ" ಎಂದು ಹೊರ ಬಂದಳು. ವಾಹನ ಸಿಗದಿದ್ದರೆ ಹೇಗೆ? ಪದ್ಮ ತಹತಹಿಸತೊಡಗಿದಳು.

ಚಾಂದಬಿ ರಸ್ತಗಿಳಿದಾಗ ಆಕಾಶದಲ್ಲಿ ದಟ್ಟದಟ್ಟ ಮೋಡ, ರಣಗುಡುವ ಸೂರ್ಯ ಅದರೊಳಗಿಂದ ಇಣಿಕತೊಡಗಿದ್ದ. ಆವನಿಗೂ ಕರ್ಫೂವಿನ ಆಂಜಿಕೆಯೇನೊ ಎಂದುಕೊಂಡಳಾಕೆ. ತುಸು ದೂರ ರಸ್ತೆ ಕ್ರಮಿಸಿ ವಾಹನಗಳನ್ನು ನಿರೀಕ್ಷಿಸಿದಳು. ದೂರದಲ್ಲಿ ಎಲ್ಲೋ ಪೋಲೀಸ್ ಜೀಪಿನ ಸದ್ದು ಕೇಳಿತ್ತು. ಮರುಕ್ಷಣ ಅದೂ ಸ್ತಬ್ದ. ನಿರಾಶೆಯಿಂದ ಮನೆಯ ಕಡೆಗೆ ಹೆಜ್ಜೆ ಕಿತ್ತಿಡುತ್ತಿರುವಂತೆ ಗಟಾರ್ ಪಕ್ಕದ ಬೇವಿನ ಮರಕ್ಕೆ ತಾಗಿಕೊಡು ತಳ್ಳೆಗಾಡಿ ಆಡಿ ಮೇಲಾಗಿ ನಿಂತಿತ್ತು. ಒಂದು ಗಾಲಿಯ ಟೈಯರು, ಟ್ಯೂಬು ಮನುಷ್ಯನ ದೇಹದಿಂದ ಹೊರಬಿದ್ದ ಕರುಳಿನಂತೆ ಜೋತಾಡ ತೊಡಗಿದ್ದವು. ಗಾಡಿಯ ಅಕ್ಕಪಕ್ಕ ಬದನೆ, ಮೆಣಸಿನಕಾಯಿ, ಟೊಮೆಟು, ಕೋತಂಬರಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಗಲಭೆ ಖೋರರ ದಾಳಿಗೆ ತಕ್ಕ ತರಕಾರಿ ಗಾಡಿಯದು. ಆದರ ಮಾಲೀಕನ ಸ್ಥಿತಿ ಏನಾಯಿತೋ ? ಚಾಂದಬಿ ಮನನ್ನು ಮರುಗಿತು. ಮತ್ತೊಮ್ಮೆ ಗಾಡಿ ನೋಡುತ್ತಿದ್ದಂತೆ ಆವಳ ಮಿದುಳಿನಲ್ಲಿ ಉಪಾಯವೊಂದು ಹೊಳೆಯಿತು. ಧಾವಿಸಿ ಮನೆಯತ್ತಬಂದು "ಪದ್ಮಕ್ಕ, ರಸ್ತಾದಾಗ ಒಂದೂ ಗಾಡಿ ಇಲ್ರಿ, ಆಲ್ಲೆ ಒಂದು ತಳ್ಳುಗಾಡಿ ಐತಿ, ನೀವು ತಪ್ಪು ತಿಳಿಬ್ಯಾಡ್ರಿ, ನೀವು ಹೂಂ ಆಂದ್ರ ಹೋಗಿ ಗಾಡಿ ತರ್ತೀನಿ. ರೂಪಾ ಬೇಟಿನ್ನ ಆದರ ಮ್ಯಾಲೆ ಮಲಗಿಸಿಕೊಂಡು ದವಾಖಾನಿಗೆ ಹೋಗೂಣು" ಎಂದಳು.

ತಳ್ಳುಗಾಡಿಯಲ್ಲಿ ಮಗಳನ್ನು ಕರೆದುಕೂಂಡು ಹೋಗುವುದೆ? ಎಲ್ಲ ಅನುಕೂಲವಿದ್ದೂ ಇಂಥ ಪರಿಸ್ಥಿತಿ ಬಂದುದಕ್ಕೆ ಪದ್ಮ ಕಸಿವಿಸಿದಳು. ಮಗಳ ನರಳಾಟ ಈ ಕಸಿವಿಸಿಯನ್ನು ನಿಮಿಷಾರ್ಧದಲ್ಲಿ ದೂರ ಮಾಡಿತು. "ಚಾಂದಬಿ, ನಮ್ಮಪುಣ್ಯಕ್ಕ ತಳ್ಳುಗಾಡಿಯರ ಸಿಕ್ತಲ್ಲ. ಲಗೂನ ತಗೊಂಡು ಬಾ" ಎಂದಳು ಪದ್ಮಾ.

ಚಾಂದಬಿ ಆವಸರದಿಂದ ಹೋದಳು. ಗಾಡಿಯನ್ನು ಚಿತ್ತಮಾಡಿ, ರಸ್ತೆಗೆ ತಂದು, ಉರುಳಲು ಮೊಂಡುತನ ಮಾಡಿದ ಗಾಡಿಯನ್ನು ಜೋರಾಗಿ ತಳ್ಳುತ್ತ ಮನೆಯ ಮುಂದೆ ನಿಲ್ಲಿಸಿದಳು. ಗಾಡಿ ಆವಸ್ಥೆಯ ನೋಡಿ ಪದ್ಮ ಚಿಂತೆಗೊಳಗಾದಳು. "ನಾನು ಗಾಲಿ ರಿಪೇರಿ ಮಾಡ್ತೀನಿ, ನೀವು ದಪ್ಪನ ಜಮಖಾನಾ ತಗೊಂಡು ಬರ್ರಿ" ಎಂದ ಚಾಂದಬಿ ಹರಿದ ಟ್ಯೂಬು-ಟೈರನ್ನು ಗಾಲಿಗೆ ಹೊಂದಿಸಿ ಅದರ ಮೇಲೆ ಬಟ್ಟೆ ಸುತ್ತಿ ವಾಯರ್ ಬಿಗಿದಳು. ಗಾಡಿ ಉರುಳಲು ಸಜ್ಜುಗೊಂಡುದು ಪದ್ಮಾಳಿಗೆ ಸಂತೋಷ ತಂದಿತು.

ರೂಪಾಳನ್ನು ಗಾಡಿಯ ಮೇಲೆ ಮಲಗಿಸಿ ಇನ್ನೇನು ಗಾಡಿ ತಳ್ಳಬೇಕೆನ್ನುವಷ್ಟರಲ್ಲಿ "ಚಾ೦ದಬಿ, ನನಗ ಅಂಜಿಕಿ ಸುರುವಾತು ನೋಡು, ಗಲಭೆ ಮಾಡೋರು ನಮ್ಮ ಮೇಲೆ ಬಿದ್ರೆ ಏನ್ ಗತಿ ಆಂತ ?" ಎಂದು ಅನುಮಾನಿಸಿದಳು ಪದ್ಮಾ.

"ಆಕ್ಕಾ, ನಾನೀದ್ದೀನಲ್ಲ ಬರ್ರಿ, ಬೇಟಿ ತ್ರಾಸು ಮಾಡ್ಕೋಳ್ಯಾಕ ಹತ್ಯಾಳ, ವಿಚಾರ ಮಾಡ್ಕೊಂತ ನಿಂದ್ರು ಟೈಂ ಆಲ್ಲ ಇದು. ಯಾವ ಪುಂಡ್ರು ಬರ್‍ತಾರ, ನಮ್ಮನ್ನ ತಡೀತಾರ ನಾನೂ ನೋಡ್ತೀನಿ" ಜಬರ್ದಸ್ತಾಗಿ ಹೇಳಿ ಗಾಡಿಯನ್ನು ತಳ್ಳಿಯೇ ಬಿಟ್ಟಳು ಚಾಂದಬಿ.

* * *

ತಳ್ಳುಗಾಡಿಯ ಸದ್ದು ರಸ್ತಯ ನೀರವತೆಯನ್ನು ಹೆದರಿಸುವಂತೆ ಇತ್ತು.

ಚಾಂದಬಿ ಸೀರೆಯ ಸೆರಗನ್ನು ಸೊಂಟಕ್ಕೆ ಭದ್ರವಾಗಿ ಸಿಕ್ಕಿಸಿಕೊಂಡು ಗಂಡಸಿಗಿಂತಲೂ ದಿಟ್ಟೆಯಾಗಿ ಗಾಡಿ ನೂಕುವುದನ್ನು ಪದ್ಮಾ ಬೆರಗುಗಣ್ಣುಗಳಿಂದ ನೋಡತೊಡಗಿದ್ದಳು.

ಗಾಂಧಿನಗರದ ದವಾಖಾನೆಗೆ ಹೋಗಲು ಒಂದು ತಾಸಾದರೂ ಬೇಕು. ಸಂದಿಗಳನ್ನು ಬಳಸುತ್ತ ಹೋದರೆ ಸಮಯ ತುಸು ಕಡಿಮೆ ಹಿಡಿಯುವುದು. ಆದರೆ ಇಕ್ಕಟ್ಟಾದ ಮಾರ್ಗದಲ್ಲಿ ಗಾಡಿ ತಳ್ಳುವುದು ಪ್ರಯಾಸದ ಕೆಲಸ. ಹೀಗಾಗಿ ಚಾಂದಬಿ
ನೇರ ರಸ್ತಯನ್ನೇ ಹಿಡಿದಿದ್ದಳು.

ಮಧ್ಯೆ ಜುಮ್ಮಾ ಮಸೀದೆ. ತುಸು ದೂರಕ್ಕೆ ಹೋದರೆ ಗಣೇಶ ಮತ್ತು ಹನುಮದೇವರ ಮಂದಿರಗಳು. ಊರಲ್ಲಿ ಕೋಮು ಗಲಭೆ ಶುರುವಾದರೆ ಎಲ್ಲರ ಗಮನ ಈ ಪ್ರದೇಶದ ಮೇಲೆಯೇ ಕೇಂದ್ರಿಕೃತ. ಮತಾಂಧರಿಂದ ದೇವರ ನೆಲೆಗಳಿಗೂ
ಆತಂಕ ಎಂದುಕೊಡಳು ಚಾಂದಬಿ.

ಅವಳ ಮಾತು ಪೊಲಲೀಸರ ಆಂತರಾಳ ತಟ್ಟಿತೇನೋ, ಅವರು ಬಂದೂಕುಗಳನ್ನು ಕೆಳಗಿಳಿಸಿ ರೂಪಾಳತ್ತ ನೋಡಿದರು.

"ಸುಧಾ ಡಾಕ್ಟರು ದವಾಖಾನ್ಯಾಗ ಆದಾರಿ, ಮಗಳನ್ನ ಅವರ ಕರ್‍ಕೊಂಡು ಬಾ ಆಂದ್ರು, ನಮಗ ಒಂದೂ ಗಾಡಿ ಸಿಗಲಿಲ್ಲ ನಮ್ಮ ಯಜಮಾನರೂ ಊರಾಗ ಇಲ್ಲ, ನಮ್ಮ ಚಾಂದಬಿ ಈ ಗಾಡಿ ಹುಡುಕಿ ತಂದ್ಲು" ಇಷ್ಟು ಹೇಳುವುದರೊಳಗೆ ಪದ್ಮಾಳ ಕಣ್ಣಲ್ಲಿ ನೀರೊಡೆದಿತ್ತು.

ಹಿಂದೂ-ಮುಸ್ಲಿಮರಲ್ಲಿ ಮನಸ್ತಾಪ ಹುಟ್ಟಿಸುವ ಹಲಾಲಕೋರ ಮನಸ್ಸುಗಳಿಗೆ ಪದ್ಮಾ-ಚಾಂದಬಿಯರ ಮನುಷ್ಯ ಸಂಬಂಧ, ಒಡಲಾಳಟ ತುಡಿತ ಆರ್ಥವಾಗಲು ಸಾಧ್ಯವೆ ? ಧರ್ಮಾಂಧರಿಗೆ ನಾಗರ ಹಾವಿನಂತೆ ಹೆಡೆ ಬಿಚ್ಚುವುದು, ನಿಷ್ಪಾಪಿಗಳನ್ನು ಕೊಲ್ಲುವುದಷ್ಟೆ ಗೊತ್ತು. ಮತ್ತದಕ್ಕೆ ಧರ್ಮದ ಆಹಮ್ಮಿಕೆ ಬೇರೆ. ಕರುಣೆಯ ಗರ್ಭದಿಂದ ಧಮ೯ ಹುಟ್ಟಿದೆ. ಎಲ್ಲರನ್ನೂ ಬದುಕಿಸಿ ಬಾಳಿಸುವ ಮಾನವೀಯ ಗುಣ ಅದರದು. ಈ ಸತ್ಯವನ್ನು ಆವರಣದೊಳಗೆ ಹುದುಗಿಸಿಟ್ಟು, ತಮ್ಮ ಸ್ವಾರ್ಥಕ್ಕೆ ಆದನ್ನು ವ್ಯಾಖ್ಯಾನಿಸುವ ರಾಕ್ಷಸರಿಗೆ ಮನುಷ್ಯ ಪ್ರೀತಿ ಬೇಕಾಗಿಲ್ಲ ಎಂದೆಲ್ಲಾ ಆಲೋಚನೆಗೆ ತೊಡಗಿದ್ದ ಪಿ.ಎಸ್. ಆಯ್ ವಾಸ್ತವಕ್ಕೆ ಬಂದು,

"ಎರಡೂ ಕಡೆಯ ಸ್ಯೆತಾನರು ಮಾರಕಾಸ್ತ್ರಗಳನ್ನು ಹಿದ್ಕೊಂಡು, ತಲೆಕೆಟ್ಟವರಂಗ ತಿರುಗಾಡಲಿಕ್ಕೆ ಹತ್ಯಾರ. ರಕ್ತದ ರುಚಿ ಹತ್ತಿದ ಮತಾಂಧರಿಗೆ ಮನುಷ್ಯರು ಕಾಣ್ಸುದಿಲ್ಲ. ಊರಾಗ ಹೆಜ್ಜೆಹೆಚ್ಚಿಗೂ ಆಪಾಯ ಐತಿ. ನೀವು ಜಲ್ದಿ ಹೋಗಿ ದವಾಖಾನಿ ಸೇರ್‍ಕೋರಿ. ಆಲ್ಲಿತನಕ ನಮ್ಮ ಪೋಲೀಸರು ನಿಮ್ಮ್ಮ ಕೂಡ ಬತ್ತಾರ, ನಿಜಗುಣ, ಸಮದ್ ನೀವಿಬ್ಬರೂ ಈ ಹೆಣ್ಮಕ್ಕಳನ್ನು ದವಾಖಾನಿವರೆಗೂ ಹೋಗಿ ಬಿಟ್ಟು ಬಿರಿ" ಎಂದು ಆಜ್ಞಾಪಿಸಿದರು.

ಚಾಂದಬಿ, ಪದ್ಮಾಳ ಕಣ್ಣು ಅರಳಸಿಕೂಂಡವು. ಪಿ.ಎಸ್.ಆಯ್. ಆವರ ಕಣ್ಣಲ್ಲಿ ದೇವರಾಗಿ ಏಜ್ಯಂಭಿಸಿದ. ಅವರು ಅವನಿಗೆ ಕೈಮುಗಿದು ಕೃತಜ್ಞತೆ ಸೂಚಿಸಿದರು.

ಚಾಂದಬಿ ಗಾಡಿ ತಳ್ಳಲು ಕ್ಕೆಹಚ್ಚಿದಳು.

ಸಮದ್ ಮತ್ತು ನಿಜಗುಣ ಬಂದೂಕಗಳನ್ನು ಹೆಗಲಿಗೆ ಹಾಕಿಕೊಂಡು "ನೀವು ಸರಿರಿ" ಎಂದು ಗಾಡಿಯನ್ನು ತಳ್ಳತೊಡಗಿದರು.

ಆವರು ದವಾಖಾನೆ ಸೇರುವುದರೊಳಗೆ ಸೂಯ೯ ಅಸ್ತಮಿಸಿದ್ದ.

ವೈದ್ಯರು ತುರ್ತಾಗಿ ರೂಪಾಳನ್ನು ಹೆರಿಗೆ ಕೋಣೆಗೆ ಸಾಗಿಸಿದರು.

ಸಿಜರಿನ್ಗಾಗಿ ಆವರು ಸಿದ್ದತೆ ಮಾಡಿಕೊಂಡಾಗಿತ್ತು. ಆದರೆ ರೂಪಾಳ ಹೆರಿಗೆ ತಡವಾಗಲಿಲ್ಲ ನಾರ್ಮಲ್ಲಾಗಿ ಆಕೆ ಗಂಡುಕೂಸಿಗೆ ಜನ್ಮ ನೀಡಿದಳು. ಆಸ್ಪತ್ತ್ರೆಯ ಆವರಣದಲ್ಲಿದ್ದ ಮರಗಳಲ್ಲಿ ಹಕ್ಕಿಗಳ ಕಲರವ ಕೇಳಿಸಿತು. ಕೂಸಿನ ಅಳುವಿನ ಧ್ಯನಿ ಅದರೊಂದಿಗೆ ಮೇಳೈಯಿಸಿತು.

ಪದ್ಮಾ-ಚಾಂದಬಿ ನಿರಾತಂಕವಾಗಿ ಉಸಿರಾಡಿಸಿದರು. ರೂಪಾಳ ಮುಖದಲ್ಲಿ ಹೂ ನಗು, ಸಂಜೆಯ ಆಕಾಶ ಶುಭ್ರವಾಗಿತ್ತು. ಆಲ್ಲಿನಕ್ಷತ್ತಗಳು ಫಳಫಳಿಸತೊಡಗಿದ್ದವು. ಮಧ್ಯ ಚಂದ್ರ ಚಂದವೆನಿಸಿದ್ದ ಆವನ ತಂಪು ಬೆಳಕು ಸೂಎಯನುರಿದ ಭೂಮಿಯನ್ನು ಮೆಲ್ಲಗೆ ಆವರಿಸಿತೊಡಗಿತು.

           *****

ಕೀಲಿಕರಣ: ಎಂ. ಎನ್. ಎಸ್. ರಾವ್

ಮಂಗ ಹೆಂಗಸಿವಳು

-ಶಿಶುನಾಳ ಶರೀಫ್

ಮಂಗ ಹೆಂಗಸಿವಳಂಗಳದೀ ಎಪ್ಪಾ
ಹಿಂಗದೆ ಬಂದಲ್ಲ್ಹ್ಯಾಂಗಾದಿ                                    ||ಪ||

ಕೊಂಗಿ ಮಾತನಾಡಿ ಹೆಂಗಸರ ಕಂಡರೆ
ಮುಂಗಡಿಯಲಿ ಕೆಟ್ಟವಳಾದಿ
ಮಾಟಗೇಡಿ ಮಡಸಿಯ ಮನಿಯು
ದಾಟಬೇಕು ಮನ್ಮಥ ಬೆಣಿಯು
ರಾಟಿಯ ನೂಲುವ ಪೋಟಿಯ ಹೇಳುತಲಿ
ಸೀಟಕತನಗೊಳಗಾಗಿ                                          ||೧||

ಕೆಟ್ಟ ಹೆಣ್ಣು ಇವಳು ಬೆದಗಡಿಕಿ
ಇಟ್ಟಳಂ ಕೆಟ್ಟ ಗುಣದ ಹಳೆ ಕಟಗಡಕಿ
ಕಿಟ್ಟದಗೊಂಬಿಹಾಂಗ ತೆರೆದು ಕಾಣತಾಳು ಇವಳಂಗದಿ||೨||

ಹುಶಾರಿ ನಡಿಯೋ ಈ ದಾರಿ
ಶವಿವಿಡಿದು ನಡಿಯೋ ತಳವಾರಗೇರಿ
ಕೊಳಕ ಲವಡಿ ನಮ್ಮತ್ತಿವಳಿಕಿ ಆರಿಯದೆ
ಹೊಯ್ಯಿಮಾಲಿಗೆ ಬಂದು ಒಳಗಾಗಿ                          ||೩||

ಬಾಯಿಮುಚ್ಚಿಕೋ ಆಂದರು ನಿಮಗ
ಯಾಕಾರ ಬಂದೆವಪ್ಪ ನಾವೀಗ
ನಾಯಿಹಾಂಗ ಬೊಗಳ್ಯಾಡುವಳಿವಳು
ತಾಯಿ ಹೇಳಿ ಕಲಿಸಿದ ಬುದ್ಧಿ                                  ||೪||

ಶಿಶುನಾಳಧೀಶನ ಕಂದಾ
ಹೊಸದಾಗಿ ಆ ಮಾರ್ಗದಿ ಬಂದಾ
ಕೊಸರಿದರಾಕಿಯು ಹೋಗದಿರು ತಮ್ಮಾ
ಉಸುರುವೆ ಕವಿ ತಾಪದಿ                                      ||೫||
                  *****
ಕೀಲಿಕರಣ: ಎಮ್.ಎನ್.ಎಸ್.ರಾವ್

ನಾನೆಂಬ ಹುಡುಕಾಟ

-ತಾರಿಣಿ ಶುಭದಾಯಿನಿ ಆರ್‍

ರೂಪ ಯೌವನಗಳದೆ
ಮೆರವಣಿಗೆ ಸಾಕು
ಬುದ್ಧಿ ಭಾವಗಳಿಗೆ
ಮನ್ನಣೆಯು ಬೇಕು
          - ಹೇಮ ಪಟ್ಟಣಶೆಟ್ಟಿ


-ಎಂದು ಘೋಷಿಸಿಸಕೊಂಡರೂ ಸಹ ಒಮ್ಮೊಮ್ಮೆ ಹೆಣ್ಣೊಬ್ಬಳ ಕವಿತೆಯ ಅಂತರಂಗ ತೆರೆದುಕೊಲ್ಳುವುದೇ ಇಲ್ಲ!  ಕಾವ್ಯವನ್ನು ಹೆಣ್ಣಿನ ದೇಹದ ಹೊರ ವಿವರಗಳಂತೆ ಗ್ರಹಿಸಿ ಗ್ಲಾಮರ್‍ ಅಂಶಗಳಾಗಿ ಗಣಿಸಿ ಚರ್ಚಿಸುವ ಅಪಾಯವೇ ಹೆಚ್ಚು.  ಸ್ತ್ರೀಲೇಖದ ಚೌಕಟ್ಟು ಸಿದ್ಧಗೊಳಿಸಿ ಅದರ ಮಿತಿಯಲ್ಲಿಯೇ ಓದುವ ಅಭ್ಯಾಸ ಬೆಳೆದದ್ದು ಬಹುಶಃ ಸ್ತ್ರೀವಾದ ಪ್ರಖರಗೊಂಡ ಕಾಲದಲ್ಲಿರಬೇಕು.  ಆಗಿನಿಂದ ಈಗಿನವರೆಗು ಹೆಣ್ಣುಲಕ್ಷಣಗಳನ್ನು ಹುಡುಕುವುದರಾಚೆ ವಿಮರ್ಶೆ ಬೆಳೆದೇ ಇಲ್ಲ.  ಹೇಮಾ ಪಟ್ಟಣಶೆಟ್ಟಿ ಕಾವ್ಯ ಕರ್ಮ ಪ್ರರಂಭಿಸಿದಾಗ ಅವರ ಸೌಭಾಗ್ಯವೋ ದೌರ್ಭಾಗ್ಯವೋ ಸ್ತ್ರೀಯರ ಕಾವ್ಯ ಹುಲುಸಾಗಿ ಬರುತ್ತಿತ್ತು.  ಆ ಗೆಲಾಕ್ಸಿಯಲ್ಲಿ ಇವರೂ ಒಬ್ಬರಂತೆ ಕಂಡು, ಅವರ ಕವಿತೆಗಳ ಗುಣಾವಗುಣಗಳ ಚರ್ಚೆ ಬಿಚ್ಚಿಕೊಂಡಂತೆ ಕಾಣುವುದಿಲ್ಲ.

`ವಿರಹೋತ್ಸವ'ದಿಂದ ಕಾವ್ಯಪ್ರವೇಶ ಪಡೆದ ಹೇಮಾ ಪಟ್ಟಣಶೆಟ್ಟಿ ಈವರೆಗೂ `ಹೊಸಹಾಡು', `ಕಣ್ಣುಗಳಲ್ಲಿ ಕನಸು ತುಂಬಿ'. `ಊಸಿರ ಬದುವಿನ ಗುಂಟ' - ಎಂಬ ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ.  ಒಂದೊಂದು ಸಂಕಲನಕ್ಕೂ ನಡುವ ಸಾಕಷ್ಟು ಅಂತರಗಳಿವೆ.  ಸುಮಾರು ೨೦-೨೫ ವರ್ಷಗಳಿಂದ ಕಾವ್ಯಕರ್ಮದಲ್ಲಿ ಆಸಕ್ತಿಯಿಟ್ಟುಕೊಂಡು, ಅದರಲ್ಲಿ ತೊಡಗಿಸಿಕೊಂಡ ಈ ಕವಯಿತ್ರಿಯ ಕಾವ್ಯ ಅವರ ಕಾಲದ ಕವಿಯಿತ್ರಿಯರ ದನಿಗಳಿಗಿಂತ ಭಿನ್ನವಾಗಿದೆ.  ಆದರೆ ಸಮೂಹಗಾನದ ಆಲಾಪದಲ್ಲಿ ಆ ಭಿನ್ನದನಿಯು ಅಷ್ಟಾಗಿ ಕೇಳದೇ ಹೋಗಿದೆ.

ಹೇಮಾ ಪಟ್ಟಣಶೆಟ್ಟಿಯವರ ಕಾವ್ಯ ಒಂದು ವಿಶೇಷ ಬಗೆಯ ಲಯವನ್ನು ಹೊಂದಿದೆ.  ಅದೆಂದರೆ, ಅಲ್ಲಿ ನಾವು ಕಾಣುವ ಪ್ರಶ್ನಾವಳಿಗಳು. ಕವಿತೆ ಅವರಲ್ಲಿ ಹುಟ್ಟುವುದೇ ಪ್ರಶ್ನೆಗಳನ್ನು ಹಾಕಿಕೊಳ್ಳುವುದರ ಮೂಲಕ.  ಮತ್ತು ನಾನು ಎಂಬ ಆತ್ಮಪ್ರತ್ಯಾಯದಿಂದಲೇ ಅವರ ಕಾವ್ಯ ಉಸಿರಾಡುತ್ತದೆ.  ಸ್ಥೂಲವಾಗಿ ಹೇಳಬಹುದಾದರೆ ಹೇಮಾ ಅವರದು ಆತ್ಮಕೇಂದ್ರಿತ  ಧೋರಣೆಯನ್ನು ಹೇಳುವಂತದ್ದು.

ಡಿ.ಆರ್‍. ನಾಗರಾಜ್ ಗುರುತಿಸುವಂತೆ ಮಹಿಳೆಯರ ಬರವಣಿಗೆಯಲ್ಲಿ `ನಾನು' ಎಂಬುದು ವಿವರಿಸಿಕೊಳ್ಳುವ ಹಂತದಲ್ಲಿ ಊಲಿದಿದೆ.  ಅದು ಬಹುಶಃ ಆ ಕಾಲದ ಎಚ್ಚೆತ್ತ ಪ್ರಜ್ಞೆಯನ್ನು ಇಟ್ಟುಕೊಂಡ ಸ್ತ್ರೀಯ ಬರವಣಿಗೆಗಳಲ್ಲಿ ಕಾಕತಾಳೀಯವೆಂಬಂತೆ ಈ ಸರ್ವನಾಮ ಕಾಣಿಸಿಕೊಳ್ಳುತ್ತ ಬಂದಿರುವುದು ಡಿ.ಆರ್‍. ಅವರ ಮಾತಿಗೆ ತಕ್ಕನಾಗಿ ಕಾಣುತ್ತದೆ.  ಹೇಮಾ ಈ ಅಂಶವನ್ನು ಕೈಬಿಟ್ಟಿಲ್ಲ.  ಮತ್ತು ಪ್ರಶ್ನಾರ್ಥಕ ನೆಲೆಯಲ್ಲಿ ನಿಂತು ಕೇಳಿ ಕೊಳ್ಳುವ, ಹುಡುಕುವ ಅವಕಾಶಗಳನ್ನು ಬಿಟ್ಟುಕೊಡುವುದೂ ಇಲ್ಲ.  ಆದರೆ ಇದರಲ್ಲಿಯೇ ಸಮೂಹನಿಷ್ಠೆಯ ಗುಣವಿರುವ, ಅದಂದರೆ ನಾನು ಎಂಬುದನ್ನು ಸಾರ್ವತ್ರಿಕವಾಗಿ ಗುರುತಿಸಿಕೊಂಡು, ಸ್ತ್ರೀ ಬದುಕಿನ ಗುಣಲಕ್ಷಣಗಳನ್ನು ಒಂದು ಹಂತದಲ್ಲಿ ಸಮೀಕರಿಸಿಕೊಂಡು ನೋಡುವುದನ್ನು ಹೇಮಾ ಅವರ ಕಾವ್ಯದಲ್ಲಿ ಕಾಣಲಾಗುವುದಿಲ್ಲ.  ಅಂದರೆ ಪ್ರತಿಭಾ ನಂದಕುಮಾರರ ಸಾಲು ಹೇಳುವಂತೆ `ನಾವು ಹುಡುಗಿಯರೇ ಹೀಗೆ' ಎಂತಲೋ, ಅಥವಾ ಎಚ್.ಎಸ್. ಮುಕ್ತಾಯಕ್ಕ ಹೇಳುವಂತೆ, `ನಿಮ್ಮ ಮಾನಾಪಮಾನವನು |  ಕಾಪಾಡಲು ನಿಮ್ಮಿಂದಲೇ ಪತಿವ್ರತೆಯರ ಪಟ್ಟಕ್ಕೇರಿ ಎಂದೋ ಹೀಗೆ.  ಆದರೆ ಹೇಮಾ ಈ ರೀತಿ ಸಾರ್ವತ್ರಿಕಗೊಳಿಸುವ ಗೋಜಿಗೆ ಹೋದಂತೆ ಕಾಣುವುದಿಲ್ಲ.  ಅಕಸ್ಮಾತ್ ಇದ್ದರೂ ಅದು ಗೌಣ ಎನಿಸುವುಷ್ಟು ಕಾಣುತ್ತದೆ.  ಸೂಕ್ಷ್ಮಗಳಿಗೆ ಎಡೆಯಿರದ, ಮಿಥ್‌ಗಳಿಗೆ ಹೇರಳವಾಗಿ ಅವಕಾಶ ಇರುವ ಈ ಸ್ತರದಲ್ಲಿ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ.  ಮೇಲಾಗಿ ಈ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ.  ಮೇಲಾಗಿ ಈ ಬಗೆಯ ಕವಿತೆಗಳಲ್ಲಿ ರಾಜಕೀಯ ಹಕ್ಕುಗಳ ಧ್ವನಿ ಸ್ಪಷ್ಟವಾಗಿ ಕೇಳುತ್ತಿರುತ್ತದೆ.  ಅಸಮಾನತೆಯ ಏರುಪೇರುಗಳ ಕುರಿತು ಯಾವುದೇ ಹಂತದಲ್ಲಿ ದನಿ ಎತ್ತುತ್ತಿರುವುದು ಕಾಣುತ್ತದೆ.

ಇದನ್ನು ಬಿಟ್ಟು ವ್ಯಕ್ತಿನಿಷ್ಠತೆಯನ್ನು ನೆಚ್ಚುವ `ನಾನು' ಎಂಬ ವಲಯಕ್ಕೆ ಬಂದರೆ ನಾನು ಎಂಬುದು ಆಧ್ಯಾತ್ಮಿಕ ಸ್ವರೂಪದಲ್ಲಿ, ಆತ್ಮನಿರೀಕ್ಷಣೆಯ ಸ್ವರೂಪದಲ್ಲಿ.  ಮೆಟಫಿಸಿಕಲ್ ಹಂತದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ.  ಕನ್ನಡ ಕಾವ್ಯ ಪರಂಪರೆಯಲ್ಲಿ ಆತ್ಮನಿಷ್ಠವಾದ ಆತ್ಮನಿರೀಕ್ಷಣೆ, ಆಧ್ಯಾತ್ಮಿಕ ಹುಡುಕಾಟವನ್ನು ಹೊಂದಿದ ಸಂಪದ್ಭರಿತ ಕಾವ್ಯಗಳೇ ಇವೆ.  ಆತ್ಮನಿರೀಕ್ಷಣೆಗೆ ಮಾದರಿಯನ್ನು ಹಾಕಿಕೊಟ್ಟ ಬಸವಣ್ಣನಂತಹ ಕವಿಗಳಿದ್ದಾರೆ.  ಬಸವಣ್ಣ ಆತ್ಮ ನಿರೀಕ್ಷಣೆಯ ಮಾಗದಲ್ಲಿ ನಾನು ಎಂಬುದನ್ನು ಬಳಸುವಾಗ ಸೂಕ್ಷ್ಮವಾಗಿ ಅದು ಸಾಮಾಜಿಕವಾದ ಮತ್ತು ವೈಯಕ್ತಿಕವಾದ ವಲಯಗಳೆರಡರಲ್ಲಿಯೂ ವಿಸ್ತರಿಸಿಕೊಳ್ಳುತ್ತಾರೆ.  ನಿಷ್ಠೆ, ಪ್ರಮಾಣಿಕತೆಯ ಸ್ವರೂಪಗಳು ಹೆಚ್ಚಾಗಿ ಸ್ಫಟಿಕದ ಪಾರದರ್ಶಕತೆಯನ್ನು ಸೂಚಿಸುತ್ತವೆಯಲ್ಲದೆ, ಹೊರಗಿನ ಸಾಮಾಜಿಕ ವರ್ತನೆಗಳಿಗೂ, ವೈಯಕ್ತಿಕ ವರ್ತನೆಗಳಿಗೂ ಇರಬಾರದ ಅಡೆತಡೆಗಳ ಬಗ್ಗೆ ಹೇಳುವಂತದ್ದಾಗಿದೆ.  ಆದರೆ ಆ ಪ್ರತೀಕಗಳ ಹಾದಿಯಲ್ಲಿ ಇರುವಂತೆ ಕಾಣುವ ಹೇಮಾ ಒಲವು ಆ ಹಂತದಲ್ಲಿಯೂ ನಿಂತಿಲ್ಲ.  ಇನ್ನು ಆಧ್ಯಾತ್ಮಿಕವಾದ `ನಾನು' ಎನ್ನುವುದು ಇಲ್ಲವಾಗುವ ಕ್ರಿಯೆಯನ್ನು ಸೂಚಿಸುವಂತದ್ದು.  ನಾನು ಎಂದರೆ ಏನು-ಎಂಬ ಪ್ರಶ್ನೆ ಹಾಕಿಕೊಳ್ಳುತ್ತ ಅದನ್ನು ಛೇದಿಸಿಕೊಳ್ಳುತ್ತ ಹೋಗುವುದು ಮತ್ತು ಕೊನೆಗೆ ಏನೂ ಉಳಿಯದೆ ಇರುವ ಒಂದು ಶೂನ್ಯಸ್ಥಿತಿಯಲ್ಲಿ ಕರಗುವ ಕಲ್ಪನೆಯದು.  ಈ ಬಗೆಯ ಹುಡುಕಾಟ ಅನುಭಾವದ ನೆಲೆಯನ್ನೂ ಹೇಮಾ ಕಾವ್ಯ ನಿರಾಕರಿಸುತ್ತದೆ.  ಆಧ್ಯಾತ್ಮಿಕ ಅಥವಾ ಡೈಡಾಕ್ಟಿಕ್ ಅನ್ನಿಸಿಕೊಳ್ಳುವ ಕಾವ್ಯದಲ್ಲಿ ಅತ್ಯಂತಿಕ ಅನ್ನಿಸಿಕೊಳ್ಳುವಂತದ್ದು ಇರತ್ತದೆ.  ಆ ಬಗೆಯ ಕೊನೆಮುಟ್ಟುವ ಆತುರವನ್ನು ಹೇಮಾ ಅವರ ಕಾವ್ಯ ತೋರುವುದಿಲ್ಲ.  ನಿರ್ಬಯಲು, ಬಯಲು, ಬೆತ್ತಲೆ - ಎಂಬ ಶಬ್ದಗಳನ್ನು ಅವರು ತಮ್ಮ ಕಾವ್ಯದಲ್ಲಿ ಆಗ್ಗಿಂದಾಗ್ಗೆ ಬಳಸಿದ್ದಾರೆ.  ಆದರೆ ಅವು ಪೂರ್ಣ ಸ್ವರೂಪದಲ್ಲಿ ಆಧ್ಯಾತ್ಮಿಕ ಆಶಯಗಳನ್ನು ಹೊಮ್ಮಿಸುವಂತೆ ಕಾಣುವುದಿಲ್ಲ.

ಇನ್ನೊಂದು ಬಗೆಯ ಹುಡುಕಾಟದ ಹಾದಿಯನ್ನು ಅವರ ಕಾವ್ಯ ಹುಡುಕುತ್ತಿದೆ:

ನಾನಾ ಎಂದು
ನನಗಿರುವ ಹಸಿರು
ನಾನಾ ಬಗೆ,
ಇದಕೆ ಸಮುದ್ರ ತೃಷೆ ನೆಲದೂಟ
ಆಕಾಶದತಿ ವ್ಯಂಜನ ಮೆಲ್ಲಬೇಕೆನ್ನುವ
                   (ಹಸಿವು: ಕಣ್ಣುಗಳಲ್ಲಿ ಕನಸು ತುಂಬಿ).

`ನಾನು' ಎನ್ನುವ ಸ್ವರೂಪ ದಿನದಿನಕ್ಕು ಬದಲಾಗುತ್ತ ಇರುವಂತಹದ್ದು.  ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣವಿರುವುದಿಲ್ಲ.  ಈ ಬದಲಾವಣೆ ಅಸ್ತಿತ್ವದ ಸೂಕ್ಷ್ಮಸ್ಥಿತಿಯನ್ನು ಸೂಚಿಸುತ್ತಿರುತ್ತದೆ.  ಬದಲಾಗುತ್ತಿರುವ ಸ್ಥಿತಿಗಳ ಸ್ವರೂಪ ಅರಿಯುವ ಪ್ರಯತ್ನ ಮತ್ತು ಅದನ್ನು ಅರಿಯುವ ಶೋಧದಲ್ಲಿ ತೊಡಗುವುದರಿಂದಲೇ ಹೇಮಾ ಅವರ ಕಾವ್ಯ ಪ್ರಶ್ನಾವಳಿಗಳನ್ನು ಹಾಕಿಕೊಳ್ಳುವ ವಿನ್ಯಾಸ ರೂಪಿಸಿಕೊಂಡಿದೆಯೇನೋ.  ನಿತ್ಯ ನೋಯುವ, ಸಾಯುವ, ರಗಳೆಗಳಲ್ಲಿ ಮುಳುಗಿರುವ ಲೋಗರ ಬದುಕಿನ ಅಣು ಕ್ಷಣದ ಸವಾಲಿನ ಪ್ರಶ್ನೆಗಳನ್ನು ಇಲ್ಲಿ ಅವರು ಕಾಣಲು ಬಯಸುತ್ತಾರೆ:

ಹೆಸರಾಗಿ ಹೆಸರಿನಲಿ ಕಳೆದು
ಹೋದಾಗ ಬಯಸಿದ್ದು ಬಂದಾಗ
ಗಳಿಕೆಯೇ ಕಳಯುವಿಕೆಯಾಗಿ
ಎಲ್ಲಿರುವೆ ಏನಾದ
ಬರಿ ತಾಯಿ-
ಪಳೆಯುಳಿಕೆ?
              (ತಲ್ಲಣ: ಉಸಿರ ಬದುವಿನ ಗುಂಟ)

ಹೇಮಾ ಈ ನಿತ್ಯದ ಬದುಕನ್ನು ಅನುಭವಿಸುವ ತಹತಹದಲ್ಲಿರುವ ಲಕ್ಷಣ ತೋರಿದರೂ, ಅದರಲ್ಲಿ ಉತ್ಸಾಹದ ಮೇರೆ ಮೀರುವ ಗುಣವಿಲ್ಲ.  ಆದರೆ ಅವರು ತಮ್ಮಿಂತಾವೆ ಹೇಳಿಕೊಳ್ಳುವಂತೆ ಬರುವ ಸಾಲುಗಳು ತಾನಾಗಿಯೇ ಹುಡುಕಾಟದ ದಾರಿಗೆ ಹೊರಳುವಂತಿವೆ.  ಈ ಸಾಲುಗಳನ್ನು ಗಮನಿಸಬೇಕು:

ನನಗೆ ಬೇಕಾದದ್ದು ಅಲ್ಲ ಕನಸಿನ ಲೋಕ
............................
ನನಗೆ ಭಾವದ ಸತ್ಯ ನಿತ್ಯ ಉಸಿರಿನ ಜೊತೆಗೆ
ಬದುಕಾಗಬೇಕು
               (ಆಯ್ಕೆ: ವಿರಹೋತ್ಸವ)

ಅವರ `ಉಸಿರ ಬದುವಿನ ಗುಂಟ ಸಂಕಲನದಲ್ಲಿ ಅವರು ಅಕ್ಕಮಹಾದೇವಿಯನ್ನು ತಡವಿಕೊಳ್ಳುತ್ತಾರೆ.  ಅನುಭಾವದ ಅಶಯ ಹುಟ್ಟಿಸಿದ ಹೆಣ್ಣಾಗಿ ಪುರುಷ ಪ್ರಧಾನ ಸಮಾಜದಲ್ಲಿ ಮನ್ನಣೆ ಪಡೆದ ಅಕ್ಕ, ಕವಯಿತ್ರಿಯರಿಗೆ ಮನೆ ಬಿಟ್ಟು ಹೋಗುವ, ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಕಾರಣಕ್ಕಾಗಿ ಅವರ ಪ್ರೀತಿ ಗಳಿಸಿದ್ದಾಳೆ.  ಆದರೆ ಹೇಮಾ ಪದ್ಯ ಪ್ರಾರಂಭವಾಗುವುದು ಹೀಗೆ:

ಈ ಬದುಕು ಈಗಲೂ ಗಹನ
ಕದಳೀವನ - ಎಂದು.

ಕದಳೀವನದ ಅನುಭಾವದ ಹೊಂದಿಕೆಗಳನ್ನು ಬದಿಗೆ ಸರಿಸುತ್ತಾ ಹೋಗಿ, ಬಾಳೇ ಬಾಳೇವು ಎಂಬ ಪದಗಳಲ್ಲಿ ಆಟವಾಡುತ್ತಾರೆ.  ಆದರೆ ಅಕ್ಕ ದಾಟಿ, ಮುಟ್ಟಿದ ಕದಳೀವನದ ಬಗ್ಗೆ ಲಕ್ಷ್ಯ ಇಲ್ಲಿ ಕವಯಿತ್ರಿಗಿಲ್ಲ.  ಅವರು ಅಕ್ಕನಿಗೆ ಕೇಳುವುದು ಇಷ್ಟು:

ಬೆಳೆಯಬಹುದಿತ್ತು ಇದೇ ಈ ಕದಳಿಯಲಿ
ಪ್ರತಿ ಉಸಿರ ಬದುವಿನ ಗುಂಟ ಬದುಕ ಬಾಳೆ
....................
ಇಹದ ಗಂಡನ ಕೂಡಿ, ಬದುಕಿ
ಎಲ್ಲ ಬ್ರಹ್ಮಾಂಡಗಳ ತದಕಿ
ಉಳಿಸಿ ನಿನ್ನದೇ ಅಸ್ಮಿತೆ
ಇಲ್ಲಿ ವಿಜೃಂಭಿಸಿದ ತರ್ಕಾತೀತ ಪ್ರಶ್ನೆ ಸವಾಲು
ದಿವ್ಯದಿಬ್ಬಗಳನ್ನು ನೀನೆದುರಿಸಿದ್ದರೆ....

-ಎನ್ನುತ್ತಾರೆ.  `ಇಲ್ಲಿ ಬದುಕುವುದೇ ಪ್ರಶ್ನೆ' ಎನ್ನುವ ಹೇಮಾ, ವಸ್ತುಸಹಜ ಬದುಕಿನ ವ್ಯಮೋಹ, ತಲ್ಲಣಗಳು ಮುಖ್ಯವಾಗುವುದನ್ನು ತಮ್ಮ ಕಾವ್ಯದಲ್ಲಿ ತಂದುಕೊಳ್ಳುತ್ತಾರೆ.

ಹೇಮಾ ಅವರು ಬಳಸುವ `ನಾನು' ಎನ್ನುವುದನ್ನು `ಬಯಲು' ಪದದ ಜೊತೆ ಇಟ್ಟು ನೋಡಬೇಕು ಅನ್ನಿಸುತ್ತದೆ.  ನಾನು ಎನ್ನುವುದು ಆವರಣಗಳಿಂದ ಆವರಿಸಿಕೊಂಡಿದೆ.  ಅದನ್ನು ಬಿಡಿಸಿಕೊಂಡು ಸಹಜತೆಯತ್ತ ತಿರುಗುವ ಮನಸ್ಸು ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ.  ಕದಳೀವನದ ಪರಿಭಾಷೆಯಲ್ಲಿ ವಿವರಿಸಬಹುದಾದರೆ ಹೇಮಾ ಅವರ ನಾನು ಎಂಬ ಸ್ವರೂಪ ಬದಲಾಗುವುದನ್ನೆ ಗುರುತಿಸಬಹುದು.  ಬಾಳೆಗಿಡ ಒಂದು ಕಂದನ್ನು ಹಾಕಿದೊಡನೆ ಸಾಯುತ್ತದೆ.  ಹೀಗೆ ವ್ಯಕ್ತಿತ್ವಗಳು, ಸಾಮಾಜಿಕ ಚಹರೆಗಳು ಬದಲಾಗಬೇಕೆಂದರೆ ಒಂದು ಸತ್ತೆ ಇನ್ನೊಂದಕ್ಕೆ ಅಸ್ತಿತ್ವ ಸಿಗುವಂತದ್ದು.  ಈ ಬದಲಾಗುವ, ನಿರಂತರತೆಯನ್ನೆ ಹೇಮಾ ತಮ್ಮ ಕಾವ್ಯಜೀವನದಲ್ಲಿ ಕಂಡಕೊಳ್ಳಬಯಸುವುದು.

ಹೇಮಾ ಪಟ್ಟಣಶೆಟ್ಟಿಯವರ ಕಾವ್ಯದಲ್ಲಿ ಆಗಿದ್ದಾಂಗೆ ಪ್ರಸ್ತಾಪಿಸಲ್ಪಡುವುದು ಮಗು ಮತ್ತು ಕನಸು.  ಈ ಸಾಲು ನೋಡಿ;

ನನ್ನ ಸಂತಯಿಸುವ ಮಕ್ಕಳು ಕವನಗಳು
                (ಸಂಕರ:  ವಿರಹೋತ್ಸವ).

ಮೊದಲ ಸಂಕಲನದಲ್ಲೇ ಇಂತಹ ಸಾಲುಗಳನ್ನು ಬರೆಯುವ ಹೇಮಾ ಈ ತನಕ ಅದನ್ನು ಉಳಿಸಿಕೊಂಡೇ ಬಂದಿದ್ದಾರೆ.

ನಮಗಾಗಿ ಬರುತ್ತದೆ
ನನ್ನ ಮುಗ್ಧ ಮಗುವಿನ ಹಾಗೆ
..................
ಒಂದು ಚಣ
ತುಟಿಯಂಲಚಿ ನಕ್ಕು!  ಮಗನನ್ನು ಎತ್ತಿಕೊಳ್ಳುತ್ತೇನೆ
               (ಯುಗಾದಿಗೊಂದು ಕನ್ನಡಿ:  ಕಣ್ಣುಗಳಲ್ಲಿ ಕನಸುತುಂಬಿ)

ಈ ಮಗು ಸಹಜ ಮುಗ್ಧತೆ ಅವರು ಬಯಸುವ ಭಾವ. ನಿರ್ಮಲವಾದ ಸಹಜತೆಯ ಸ್ವರೂಪದಲ್ಲಿ ಬರುವ ಮಗು ಅವರು ಸೇರಬಯಸುವ ಗುರಿ.  ಏನಾದೆ, ಏನಾದೆ ಎಂದು ಕೇಳಿಕೊಳ್ಳುತ್ತ ಮಗುವಿನ ಸೂಚನೆಗಳನ್ನು ಕೊಡುವಾಗ ಸ್ಥಿತಿಗೆ ಹಿಂದಿರುಗುವ ಬಯಕೆಯನ್ನು ಕಾಣಬಹುದು.  ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದಾದರೆ ಜೀವನ್ಮುಖಿ ಧೋರಣೆಯನ್ನೆ ಹೇಳುತ್ತದೆ.  ಒಂದಿಲ್ಲೊಂದು ಕಾರಣದಿಂದ ಅವರ ಕವಿತಗೆಳಲ್ಲಿ ಬದುಕಿನ ಪ್ರೇಮವು ಮೇಲುಗೈ ಪಡೆಯುತ್ತದೆ ಎನ್ನುವುದನ್ನು ಅವರ `ಗೆಳತಿ ಡಯಾನಾಗೆ' ಪದ್ಯ ವಿವರಿಸುತ್ತದೆ.

ಪ್ರಕೃತಿ ಹೇಮಾ ಕವನಗಳಲ್ಲಿ ಕಾಣಿಸಿಕೊಳ್ಳುವ ಮಹತ್ವ ಅಂಶ.  ಪ್ರಕೃತಿಯನ್ನು ವರ್ಣಿಸುವ ಧಾವಂತದಲ್ಲಿ ಹೇಮಾ ಪ್ರಕೃತಿಯನ್ನು ವಿವರಗಳನ್ನು ಬಯಸುವುದಿಲ್ಲ.  ಬದಲಾಗಿ, ಪ್ರಕೃತಿಯ ಸದಾ ಬದಲಾಗುವ ಸ್ವರೂಪಗಳೆ ಅವರ `ನಾನು' ಶೋಧದ ಭಾಗವಾಗಿದೆ.  ಪ್ರಕೃತಿ ಎನ್ನುವುದು ಮತ್ತೆ ಅಕ್ಕಮಹಾದೇವಿಯಲ್ಲಿ ಆಪ್ತವಾಗಿ ಒದಗುವಂತೆ ಹೇಮಾ ಅವರಿಗೆ ಕಾಣುವುದಿಲ್ಲ.  ಅದು ಅವರಿಗೆ ಅವರ ಸುತ್ತ ಇರುವ ವಾಸ್ತವ.  ಅದನ್ನು ಹುಡುಕಿ ಹೊರಡುವ ಚೈತನ್ಯವನ್ನಾಗಿ ಅವರು ನೋಡುವುದಿಲ್ಲ.

ಪ್ರಕೃತಿಯನ್ನು ಕವನಗಳಲ್ಲಿ ತರುವುದನ್ನೇ ಹೇಮಾ ಕಾಯಕ ಮಾಡಿಕೊಳ್ಳುವುದಿಲ್ಲ.  ಹಾಪ್‌ಕಿನ್ಸ್ ಕವಿ ಪ್ರಕೃತಿಯಲ್ಲಿನ ಅಂಶ ನಮ್ಮೊಳಗು ಚಾರ್ಜ್ ಆಗುವ ಬಗ್ಗೆ ಬರೆಯುತ್ತಾನೆ.  ಈ ಸಾವಯವ ಸ್ಪಂದನದ, ಆಗುವಿಕೆಯ ಕ್ರಿಯೆಯ ಮಧ್ಯೆ ಹೇಮಾ ಓಡಾಡಲು ಬಯಸುತ್ತಾರೆ.  ಈ ಅಂತಃಸತ್ವ ಹೆಣ್ಣಿನ ಕ್ರಿಯಾಶೀಲ ಚೇತನದ ಇನ್ನೊಂದು ಸ್ವರೂಪ.  ಅದನ್ನು ಹೇಮಾ ಹಿಡಿಯಲು ಬಯಸಿದಂತಿದೆ.

ಇನ್ನು ಹೇಮಾ ಅವರ ಆಶಯಗಳಿಗೆ ವಿರುದ್ಧವಾದ ಪದ್ಯಗಳೂ ಅವರ ಸಂಕಲನದಲ್ಲಿ ಸೇರಿಕೊಂಡಿವೆ!  ಅವು ನಾನು ಆಗಲೇ ವಿವರಿಸಿದಂತೆ ಕರೆಕ್ಟ್‌ನೆಸ್ ಅನ್ನು ಸಾಧಿಸ ಬಯಸುವ ಕವನಗಳು.  ಅವುಗಳನ್ನು ಹೇಮಾ ಭಾವಿಸಿ ಬರೆಯುವಂತೆ ಕಾಣುವುದಿಲ್ಲ.  ಹಾಗಾಗಿ ಅಂತಹ ಪದ್ಯಗಳು ಅವರ ಆಶಯಗಳಿಗೆ ಹೊರತಾಗಿಯೇ ನಿಲ್ಲುತ್ತವೆ.  ಜೊತೆಗೆ, ಕೆಲವೆಡೆ ಮಧ್ಯಮವರ್ಗದ ನಿಶ್ಚಿತತೆ ಅವರನ್ನು ಬಾಧಿಸದಂತೆ ಕಾಣುತ್ತದೆ.  ದೇಶಭಕ್ತಿಯ ಕವನಗಳು, ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಲು, ತೊಡಗುವ ಅರಿವು - ಇವು ಆ ವರ್ಗದ ಹೊಸ ಅರಿವಿನ ಪ್ರಕಟ ರೂಪವಾಗಿ ಕಾಣುತ್ತದೆ.  `ಸ್ವಯಂ ಸಿದ್ಧಳಾಗುವುದನ್ನು ಕಲಿಯುತ್ತೇನೆ' ಎನ್ನುವ, `ಹತ್ತರಲಿ ಹನ್ನೊಂದಾಗಿ ಬಾಳಲೊಲ್ಲೆ', ಎನ್ನುವ ಹೇಮಾ ಈ ಜಾಡಿನಲ್ಲಿ ಸಾಗುವುದು ಸ್ವಲ್ಪ ನಿರಾಶೆಯನ್ನೇ ಉಂಟುಮಾಡುತ್ತದೆ.  ನಿತ್ಯ ಉಸಿರಾಟದ ಸಹಜ ಲಯ ಅಂದುಕೊಳ್ಳದೆ, ಅದರ ಬದುವಿನಗುಂಟ ಸಾಗಬಯಸುವ ಸಹಜ ಬದುಕಿನ ಆಶಯದ ಕವಯಿತ್ರಿ ತಮ್ಮ ಹುಡುಕಾಟದ ದಾರಿಗಳನ್ನು ಇನ್ನಷ್ಟು ಆಳಕ್ಕೆ, ಅರಿವಿನ ವಿಸ್ತಾರದಿಂದ ಪಡೆದುಕೊಳ್ಳಲಿ ಎಂದು ಹಾರೈಸುವುದು ಕನ್ನಡ ಕವಯಿತ್ರಿಯರ ಬಗ್ಗೆ ಆಶಾವಾದಿಯಾದ ನನ್ನಂತವರಿಗೆ ಉಳಿದ ಆಯ್ಕೆ.
                               *****

ಕೀಲಿಕರಣ: ಕಿಶೋರ್‍ ಚಂದ್ರ

ಸ್ನೇಹ ಮಾಡಬೇಕಿಂಥವಳಾ

-ಶಿಶುನಾಳ ಶರೀಫ್

ಸ್ನೇಹ ಮಾಡಬೇಕಿಂಥವಳಾ
ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳಾ  ||ಪ||

ಚಂದ್ರಗಾವಿ ಶೀರಿನುಟ್ಟು
ದಿವ್ಯಕೊಮ್ಮೆ ಪಾರಿಜ ಮಗ್ಗಿ ಕುಬ್ಬಸತೊಟ್ಟು
ಬಂದಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು      ||೧||

ಆರಗಿಳಿ ಸಮ ನುಡಿಯು
ಚಲ್ವಸುಳಿನಾಬಿ ಕುಚ ಕುಂಭಗಳ ಹಂಸ ನುಡಿಯು
ಥಳಿಥಳಿಸುವ ತೋಳ್ತೊಡೆಯು
ಒಳ್ಳೆ ಬಳಬಳಕುವ ನಡುವಿನ ತಳಿರಡಿಯು           ||೨||

ಕುಸುಮಲೋಚನೆಯಳ ನೋಡಿ
ಕಾಮ ವಿಷಯ ಸುರತಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಧೀಶನ ದಯದಿಂದ ಕೂಡಿ          ||೩||
                   *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಭಾವಯಾನ

-ಕವೀಶ್ ಶೃಂಗೇರಿ

ಪ್ರೀತಿಯ ಮಾತು...
ಲವ್ವಲ್ ಹಿಂಗೇನೆ...
ಪ್ರೇಮವೆಂದರೆ ಹೇಳಲು ಬಯಸಿ, ಹೇಳಲು ಆಗದ ಮಧುರ ಭಾವನೆ... ಮಧುರ ಯೋಚನೆ... ಅರ್ಪಣೆ... ಸಮರ್ಪಣೆಯ ಸೂಚನೆ. L..o..v..e.. ಎಂಬುದು A to Z ಕನಸುಗಳ ಸಾಗರವೇ ಆಗಿದೆ.

ನನಗೆ ಬರುತ್ತಿರುವ ಓದುಗರ ಹಾಗೂ ಸ್ನೇಹಿತರ ದೂರವಾಣಿ ಕರೆಗಳಲ್ಲಿ ಕೇಳುವ ಪ್ರಶ್ನೇ ಒಂದೇ...! “ನೀವ್ ಯಾಕೆ ಪ್ರೀತಿ ಬಗ್ಗೆನೇ ಬರೀತೀರಾ ? ಬೇರೆನೂ ಗೊತ್ತಿಲ್ವ...” ಎಂದು. ಅದಕ್ಕೆ ನನ್ನಿಂದ ಬಂದ ಉತ್ತರ “ಪ್ರೀತಿ ನಿರಂತರ - Love is eternal”. ಪ್ರತಿ ದಿನ, ಪ್ರತಿ ಕ್ಷಣ ಪ್ರೀತಿನ ಬಿಟ್ಟು ಈ ಬದುಕಿಲ್ಲಾ. ಈ ಪ್ರಪಂಚದ ಸೃಷ್ಟಿಯ ಉಸಿರಾಟನೇ ಪ್ರೀತಿ. ಮೊಗ್ಗು ಹೂವಾಗೋದು - ಹೂ ಕಂಪನ್ನು ಸೂಸುವುದು - ಹೂ ದುಂಬಿಯ ಸೆಳೆಯುವುದು - ಹಸು ಕರುವಿಗೆ ಹಾಲುಣಿಸುವುದು - ಚಿಗುರು - ಇಬ್ಬನಿ - ಹಸಿರು - ಗಾಳಿ ಎಲ್ಲವೂ ಪ್ರೀತಿನಾ ಅವಲಂಬಿಸಿ ಬದುಕುತ್ತಿರುವುದು. ಇವೆಲ್ಲದರ ಉಸಿರಾಟನೇ ಪ್ರೀತಿ... So, Love is one of the part of our life.

| ಯುಗ ಯುಗಗಳು ಕಳೆದರೂ |
| ಹಲವು ಜನುಮ ಕಳೆದರೂ
| ಓದಿ ಮುಗಿಸದ ಗ್ರಂಥ ಪ್ರೇಮ |
| ಹಾಡಿ ಮುಗಿಸದ ಗೀತೆ ಪ್ರೇಮ |
| ಎಂದೂ ಮುಗಿಯದ ಪಯಣ ಒಂದು ಗೂಡುವ ತಾಣ ಪ್ರೀತಿ ||

ಹದಿನಾರು ವರ್ಷ ಕಾದುನಿಂತು, ಹದಿನೇಳಕ್ಕೆ ಹೇಳಿ ಬಿಡಬೇಕು ಎಂದುಕೊಳ್ಳುವ ಈ ಪ್ರೀತಿ - ಅದನ್ನು ಎಂದಿಗೂ ಹೇಳಲು ಆಗದೇ, ಅದು ಎಲ್ಲಿ ಹುಟ್ಟಿತೋ- ಅಲ್ಲೇ ಆ ಪ್ರೀತಿ ಕೊರಗಿ ಸಾಯುವ ಸ್ಥಿತಿಯನ್ನು, ನಾನು ಕೆಲವರಲ್ಲಿ ನೋಡಿದ್ದೇನೆ. ಆಗ ಒಳಗೊಳಗೆ ಅಳುವುದು ಆ ಪಾಪಿ ಹೃದಯ..! ಇನ್ನೂ ಕೆಲವು ವ್ಯಕ್ತಿಗಳು ಏನಾದರೂ ಸಾಹಸ ಮಾಡಿ ಇಷ್ಟ ಪಟ್ಟ ಪ್ರೀತಿಯನ್ನು ಪಡೆದುಕೊಳ್ಳಲು ಹೋಗಿ ಯಾವುದಾದರು ಎಡವಟ್ಟುಮಾಡಿಕೊಂಡು ಎಲ್ಲರ ಕಣ್ಣಲ್ಲು ನೀರು ಹಾಕಿಸಿ ಬಿಡುತ್ತಾರೆ. ಪ್ರೀತಿ ಎನ್ನುವ ಈ ಎರಡು ಅಕ್ಷರ ಕೇಳೋಕೆ ಮುದ್ದಾಗಿದ್ದರೂ, ಮುಗ್ಧ ಮನಸ್ಸುಗಳನ್ನು ತನ್ನಿಷ್ಟದಂತೆ ಆಳಿ, ಅಳುವವರೆಗೂ ಬಿಡುವುದಿಲ್ಲ. ನಂತರ ಇದಕ್ಕೆಲ್ಲಾ ಕಾರಣಕೊಟ್ಟು ದೂರುವುದು ವಿಧಿ ಹಣೆಬರಹವನ್ನಾ...

ಹ್ಞೂಂ ॒ಜಗತ್ತೇ ಬೆರಗಾಗುವ ಹಾಗೆ.., ಈ ಕಾಲನೇ ತಿರುಗಿ ನೋಡುವ ಹಾಗೆ, ಇತಿಹಾಸ ಆಗಿ ಹೋಗಿರೊ ಪ್ರೇಮಿಗಳ ಕಥೆ, ಕಣ್ಣಲ್ಲಿ ನೀರೂರಿಸಿದ್ದರು - ಅದೆವು ಸತ್ಯ, ಇಂದಿಗೂ ಜೀವಂತವೇ ॒ಈ ಪ್ರೀತಿನೇ ಹಾಗೆ, ಬೇಡ ಬೇಡ ಅಂತಾನೆ ಪ್ರೀತಿಯ ಅಮೃತ ಸವಿಯುತ್ತೀವಿ, ಆಮೇಲೆ ಬೇಕು ಅಂದರೂ ಬಾರದ ಸಾವನ್ನು ಬೈದುಕೊಂಡು ಸುಮ್ಮನಾಗುವ ಪರಿಯೇ ಹೀಗೆ ॒
ಒಂಥರಾ ಹಿತಕರ ಮಿಡಿತ... ಯಾರು ತಡೆಯದ ತುಡಿತ... ಏನೇನೋ ಹುಡುಕುವ ತವಕ... ಮೈಮನಗಳ ಈ ಪುಳಕ, ಅನುಭವಕ್ಕೆ ಮಾತ್ರ ನಿಲುಕುವ ಕೋಮಲ ಕಲ್ಪನೆ. ಈ ಪ್ರೀತಿಲೀ ಮಾಡಿದ್ದೆಲ್ಲವೂ ಸರಿಯೇ ಅನಿಸುವಷ್ಟು ಭ್ರಮೆಯ ಲೋಕಕ್ಕೆ ನಮ್ಮನ್ನು ಕರೆದೊಯ್ದು, ಆ ಭ್ರಮೆಯ ದಾರಿಯಲ್ಲೇ ಕೊಂಚ ಸಾಗುತ್ತಿರುವಾಗ ಆ ದಾರಿಯು ಬಂದು ಸೇರುವ ತಾಣವೇ ವಾಸ್ತವದ ಪ್ರಪಂಚ.

ಮನಸ್ಸುಗಳ ಮಂಥನ ಮಿಲನದ ಚಿಂತನ ಹೃದಯದ ಸ್ಪಂದನ॒ ಬಿಡಿಸದ ಬಂಧನ ಈ ಪ್ರೇಮ. ಈ ಪ್ರೀತಿಯ ಬಗ್ಗೆ ಬರೆಯುವುದಕ್ಕೂ ಚಂದ... ಓದುವುದಕ್ಕೂ ಚಂದ... ಹಾಡುವುದಕ್ಕೂ ಚಂದ... ಒಬ್ಬರ ಹೆಸರನ್ನು ಮತ್ತೊಬ್ಬರ ಹೆಸರಿಗೆ ಸೇರಿಸಿ ಅಂಗೈಯಲ್ಲಿ ಬರೆಯೋದು ಚಂದ. ಇಲ್ಲಿ ಒಬ್ಬರನ್ನೊಬ್ಬರು ಕದ್ದು ನೋಡುವ ಪರಿಯಂತು ಅಂದವೋ ಆನಂದ. ಒಂದಿಷ್ಟು ಹುಸಿಮುನಿಸುಗಳು ಮತ್ತಷ್ಟು ಹೊಂಗನಸುಗಳು ಇವೆಲ್ಲವು ಪ್ರೀತಿಯ ಭಾವನೆಗಳ ಬಲೆಯ ಒಂದು ಸುಂದರ ಪ್ರಪಂಚ. ಆದರೆ ಆ ಭಾವನೆಯೆಂಬ ಬಲೆಯಿಂದ ಈಚೆಗೆ ಮತ್ತೆ ಬರುವುದು ಕಷ್ಟ ಸಾಧ್ಯ.

ವಯಸ್ಸು ಇದು ಹಾಗೇನೆ, ಇದರ ವರಸೆಗೆ ಪ್ರತಿಯೊಬ್ಬರೂ ಸೋಲುತ್ತಾರೆ. ಒಮ್ಮೆ ಪ್ರೇಮಿ ಪ್ರೀತಿಯಲ್ಲಿ ಬಿದ್ದರೆ ‘ಸಪ್ತಸಾಗರ ದಾಟು’ ಎಂದರೂ ದಾಟುತ್ತಾನೆ ಅಂತ ಕವಿಗಳೇ ನುಡಿದಿದ್ದಾರೆ. ಏನೇ ಆದರೂ ಮನಸ್ಸಲ್ಲಿ ಮೂಡಿದ ಭಾವನೆ ಮಾತಾಗಿ ತುಟಿ ಮೇಲೆ ಬಂದು ನಿಂತಾಗ, ನಾಲಿಗೆಯ ಸಪೋರ್ಟ್ ತಗೊಂಡು “ನೀನಂದ್ರೇ ನನಗೆ ಇಷ್ಟ” ಅಂತ ಹೇಳೋದು ಪ್ರೀತಿಯ ಒಂದು ರೀತಿ...

ಮೊದಲನೇ ಬಾರಿಗೆ ಒಂದು ಹುಡುಗಿ ಫೋನ್ ಮಾಡಿ ‘I Love You’ ಎಂದಾಗ ಆಗುವ ಭಯ..! ಆ ನಡುಕ..! ಒಂದು ವಾರವಾದರೂ ಸುಧಾರಿಸಿಕೊಳ್ಳುವುದು ಕಷ್ಟವೇ ಬಿಡಿ. ನಂತರ ಅವರ ‘I Love You’ ಎಂದಿದಕ್ಕೆ ನಾವು ಉತ್ತರಿಸುವುದೋ... ಅಥವಾ ಬುದ್ಧಿ ಹೇಳುವುದೋ... ಅಥವಾ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವುದೋ... ಅಪ್ಪಿಕೊಳ್ಳುವುದೋ ತಿಳಿಯದೇ ಫೋನ್ ಕಟ್ ಮಾಡುವ ಪರಿಯಂತೊ ಒಂಥರಾ ಬಲವಂತದ ಆತ್ಯಾಚಾರವೇ.

ಚೊಚ್ಚಲ ಪ್ರೇಮದ ಬೆಚ್ಚನೆಯ ಭಾವವು ಎದೆಗೆ ಇಡುವ ಕಚಗುಳಿಯೇ ಹೀಗೆ. ಒಂದ್ಸರಿ ನೋಡ್ಬೇಕು ಮತ್ತೆ ನೋಡ್ಬೇಕು ಮತ್ತೆ ಮತ್ತೆ ಪ್ರೇಯಸಿನ ಮಾತಾಡಿಸಬೇಕು ಅನ್ಸೋದೇ ಚೊಚ್ಚಲ ಪ್ರೇಮಿಯ ಬಯಕೆ. ಈ ಪ್ರೀತಿಯಲ್ಲಿ Jealousy , ನನ್ಗೆ ಬೇಕು ಅನ್ನೋ Possessiveness - ಎಲ್ಲಾನೂ ಇದೆ. ಎಲ್ಲವನ್ನೂ ಸೆಳೆಯುವುದು - ಎಲ್ಲರನ್ನೂ ಗೆಲ್ಲುವುದು ಈ ಪ್ರೀತಿಯ ಹಣೆಬರಹ. ಆದರೆ ಇಲ್ಲಿ ಪ್ರೀತಿಸೋ ಹೊರಟ ಪ್ರೇಮಿಗಳಲ್ಲಿ ಕೆಲವರು ಗೆಲ್ಲುತ್ತಾರೆ ಇನ್ನೂ ಕೆಲವರು ಯಾಮಾರುತ್ತಾರೆ.

ಇಲ್ಲಿ ಪ್ರೀತಿಸುವ ಪ್ರೇಮಿಗಳು ಅದೆಷ್ಟೋ ಜನ, ಕೆಲವರು ಪ್ರಮಾಣಿಕವಾಗಿ, ಕೆಲವರು ಕಾಟಾಚಾರಕ್ಕೆ, ಕೆಲವರು ಕಷ್ಟವಾದರೂ ಪ್ರೀತಿನಾ ಇಷ್ಟ ಪಟ್ಟು ಪಡೆದುಕೊಳ್ಳುತ್ತಾರೆ. ಆದರೆ ಇಲ್ಲಿ ಶೇ.೧೦೦ಕ್ಕೆ ೧೦ ಜನ ಯಶಸ್ಸು ಕಾಣುತ್ತಾರೆ, ಉಳಿದವರ ಪ್ರೇಮಕಥೆಗಳಿಗೆ ಯಾರ್‍ಯಾರೋ ಅಂತ್ಯ ಬರೆಯುತ್ತಾರೆ. ಈ ಜಗತ್ತಿನಲ್ಲಿ ಒಳ್ಳೆಯ ಶಕ್ತಿ ಇದ್ದಷ್ಟೇ ಕೆಟ್ಟ ಶಕ್ತಿಗಳೂ ಇವೆ. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸುವುದನ್ನು ಕಲಿತರೆ “ಒಲವೇ ಜೀವನ ಸಾಕ್ಷಾತ್ಕಾರ ” .
“If you miss one issue of my Bhavayaana
You will lose lots of feelings in your life Bhavayaana”
                                                                       - Kavish Sringeri

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

-ಶಿಶುನಾಳ ಶರೀಫ್

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ                        ||ಪ||

ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು
ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ               ||ಅ.ಪ.||

ಅಡಗಿಮಾಡುವ ಲಕ್ಷ್ಯ ಆಗಿತ್ತು
ಅದರೊಳಗೆ ಇವರು ನೀರಿಗಂದರೆ ನಿಲ್ಲದೆ ಹೋಗುವರು
ಕಲ್ಲಭಾವಿ ಮೆಲ್ಲನೇರಿ ಬಂದು ಹತ್ತಿ ನಿಂತು
ನಾಲ್ವರಿದ್ದ ಠಾವಿನಲ್ಲಿ ನಲಿದು ನಲಿದು ನುಡಿಯುತಿದ್ದರು                        ||೧||

ವಿಟಕರಿದ್ದಲಿ ಚಟದಿ ನೋಡುವಳು ಸಲಿಹಲ್ಲು ಇವಳು
ಹುಬ್ಬು ಕಾಮನಬಿಲ್ಲು ತುಟಿಯವಳು
ರಬ್ಬಿಲೊಂದು ಸೀರೆನುಟ್ಟು ಹುಬ್ಬು ಹಾರಿಸಿ ಮಬ್ಬುಗವಿಸಿ
ಆರಿಯದವರಿಗೆ ಆಳತೆ ಕಲಿಸುವ ಹಿರಿಯ ಹಾದರ ಮರಿಯ ಹೌದಿದು      ||೨||

ಕುಟಿಲಕುಂತಳೆ ನಿಟಿಲನೇತ್ರದಲಿ
ಇವಳಾಟ ನೋಡಿ ದಾಟಲಾರರು ವಿಪಿನದೊಳಗಿನ ತಪದ ಋಷಿಗಳು
ಮುಖವ ನೋಡಿ ತಪವ ಬಿಟ್ಟು ಕಪವ ಇಲ್ಲದೆ ಕ್ಯಾರಿ ಉಗುಳಿ
ನೊಸಲೊಳುಪ್ಪುವ ಕುಚವ ನೋಡಿ ಕಾಸಿ ಕೈಪವ ಸಡಲತಿದ್ದವು            ||೩||

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು
ಜಾರಿಬಿದ್ದು ಊರಿ ಎದ್ದು ಧೀರ ಶರೀಫರು ಸಾರುಸಾರುತ
ಊರ ಆಗಡಿಯ ಗ್ರಾಮದೊಳು ಚಾರುಚರಿತ್ತವ ಸಾರುಸಾರುತ            ||೪||
                 *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಸಖಿ ಬೆಣ್ಣೆಮಾರುವ ನೀನಾರೆ

-ಶಿಶುನಾಳ ಶರೀಫ್

ಸಖಿ ಬೆಣ್ಣೆಮಾರುವ ನೀನಾರೆ
ನಾನು ನಿಂತೇನಿ ಒದರಿ                           ||ಪ||

ಬೆಣ್ಣೆಮಾರುವ ಆರ್ಭಾಟದೊಳಗೆ
ನನ್ನ ಬಿಟ್ಟು ನೀ ವ್ಯಾಪಾರ ಮಾಡತಿ
ನಿಮ್ಮ ವ್ಯವಹಾರವು ಎನಗೆ ಸಾಕೆ
ನಾನು ನಿಂತೇನಿ ಓದರಿ                            ||೧||

ಎಳಗಂದಿನ ಎಮ್ಮೆ ಬೆಣ್ಣೀನ
ಏನ ತುಟ್ಟಿ ಮಾರತಿ ನೀನ
ಆಡಕಿಬೆಟ್ಟದಷ್ಟು ಬೆಣ್ಣೀನ ಹಚ್ಚಿ
ಸೇರು ಪಾವಿನಷ್ಟು ಕಾಣೀ ಕಟ್ಟಿ
ಎಡಗೈ ಮ್ಯಾಲ್ಮಾಡಿ ತೂಗುವ ನಾರಿ
ನಾನು ನಿಂತೇನಿ ಒದರಿ                           ||೨||

ನರಿಯಂತಾಳು ಬಂದಿತು ಬಿರಿ
ನಿಮ್ಮ ರೊಕ್ಕವ ನಾವು ತುಗೋಬಾರದಿತ್ತರಿ
ಶಿಶುನಾಳ ಸದರಿಗೆ ಕೈಮುಗಿದೇವರಿ
ಬಿಟ್ಟುಬಿಡರಿ ಕೈಸೆರಿ                                ||೩||
                  *****

ಕೀಲಿಕರಣ: ಎಮ್.ಎನ್.ಎಸ್.ರಾವ್

ತೂಗುತಿದೆ ನಿಜ ಬೈಲಲಿ ಜೋಕಾಲಿ

-ಶಿಶುನಾಳ ಶರೀಫ್

ತೂಗುತಿದೆ ನಿಜ ಬೈಲಲಿ
ಜೋಕಾಲಿ -ಜೋಲಿ- ಲಾಲಿ                                 ||ಪ||

ಸಾಂಬಲೋಕದ ಮಧ್ಯದಿ ಸವಿಗೊಂಡು
ಕಂಬ ಸೂತ್ರದ ಸಾಧ್ಯದಿ
ಆಂಬರದೊಳವತಾರ ತುಂಬಿ ತುಳುಕುವಂತೆ
ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ           ||೧||

ಪೊಡವಿಗಡಗಿರ್ದ ಜ್ಯೋತಿ
ಮೃಡನಿರ್ದು ತಾನಾಗಿ ಬಿಳಿಯ ಬತ್ತಿ
ಪೊಡವಿ ಆಕಾಶ ತಾನೇಕವಾಗಿ
ಒಡೆಯ ಕರ್ತುಕನ ಜೋಕಾಲಿ -ಜೋಲಿ- ಲಾಲಿ       ||೨||

ಹೊಳೆವ ಮಹಾಬೆಳಕಿನಲ್ಲಿ
ಕಳೆಯುಳ್ಳ ತಿಳಿನೀರ ತೊಟ್ಟಿಲಲ್ಲಿ
ಇಳೆಯೊಳು ಶಿಶುನಾಳಧೀಶನ ಮನದೊಳು
ಹೊಳೆವ ಕೈವಲ್ಯ ಜೋಕಾಲಿ -ಜೋಲಿ- ಲಾಲಿ       ||೩||
                     *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಕೋಲು ಕೋಲಿನ ಕೋಲು

- ಶಿಶುನಾಳ ಶರೀಫ್

ಕೋಲು ಕೋಲಿನ ಕೋಲು
ಮೇಲು ಮುತ್ತಿನ ಕೋಲು                    || ಪ ||

ಕಾಲಕರ್ಮವನು ತಿಳಿದು ವಿಲಾಸದಿ
ಬಾಲಕರಾಡುವ ಬಯಲು ಬ್ರಹ್ಮದ        || ಅ. ಪ. ||

ಗೌರಿಹುಣ್ಣಿವೆಯ ದಿನ ಶೌರಿ ಗೋಪಿಯರು
ಮೂರು ಹೆಜ್ಜೆಯ ಮೆಟ್ಟಿ ಸಾರುತ
ಹಾರುತ ಹರುಷದಿ ಸುವರ್ಣದ ಕೋಲು || ೧ ||

ನಾರಿಯರೆಲ್ಲ ಬಂದು
ಭಾರಿ ಪ್ರಣಮವ ನುಡಿದು ಭದ್ರ
ಕರಗಳ ಪಿಡಿದು ಶಿಶುನಾಳಧೀಶನ ಮುದ್ರಿಸುತ್ತಿನ ಕೋಲು || ೨ ||
                         *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಶ್ರೀಮಂತ ಬಡವರು

-ಅಬ್ಬಾಸ್ ಮೇಲಿನಮನಿ

ಆಗರ್ಭ ಶ್ರೀಮಂತರ ಮಗಳಾಕೆ.  ದಿನಾಲು ಶಾಲೆಗೆ ಕಾರಿನಲ್ಲಿ ಬಂದು ಹೋಗುವಳು.  ಅವಳ ಚೆಂದದ ಪಾದಗಳಿಗೆ ಒಮ್ಮೆಯೂ ಮಣ್ಣು ತಗುಲಿರಲಿಲ್ಲ.  ಮೈ ನೆಲದ ಸ್ಪರ್ಶ ಅನುಭವಿಸಿರಲಿಲ್ಲ.  ಅವಳಿಗೆ ಬೇಕೆನೆಸಿದ್ದೆಲ್ಲ ಕ್ಷಣ ಮಾತ್ರದಲ್ಲಿ ದಕ್ಕುತ್ತಿತ್ತು.  ಮಕಮಲ್ಲಿನ ಬಟ್ಟೆಯಂತಿತ್ತು ಅವಳ ಬದುಕು.

ಶಾಲೆಯಲ್ಲೂ ಅಷ್ಟೆ.  ಅವಳಿಗೆ ಸ್ಪೆಷಲ್ಲಾಗಿ ಅಸನದ ವ್ಯವಸ್ಥೆ.  ಎಲ್ಲರ ನಡವಳಿಕೆಗಳು ಅವಳಿಗೆ ಹಿತವೆನಿಸಿದ್ದವು.  ಗೊಂಬೆಯಂತೆ ಕಾಣುತ್ತಿದ್ದ ಅವಳನ್ನು ಸಹಪಾಟಿಗಳು ಅದ್ಭುತವೆನ್ನುವಂತೆ ನೋಡುತ್ತಿದ್ದರು, ಮಾತನಾಡಲು ತವಕಿಸುತ್ತಿದ್ದರು.

ಒಂದಿನ ಒಬ್ಬ ಅಧ್ಯಾಪಕರು "ನಮ್ಮ ದೇಶದ ಬಡವರು" ಎಂಬ ವಿಷಯ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು.  ಮರುದಿನ ಎಲ್ಲರ ಪ್ರಬಂಧಗಳು ಅಧ್ಯಾಪಕರ ಕೈ ಸೇರಿದ್ದವು.  ಎಲ್ಲ ವಿದ್ಯಾರ್ಥಿಗಳಿಗಿಂತ ಶ್ರೀಮಂತ ಹುಡುಗಿಯ ಪ್ರಬಂಧ ವಿಶೇಷವಾಗಿತ್ತು.

ಆಕೆ ಸುಂದರ ಅಕ್ಷರಗಳಲ್ಲಿ ನೀಟಾಗಿ ಬರೆದಿದ್ದಳು.

"ನಮ್ಮ ದೇಶದ ಬಡವರು ದೊಡ್ಡ ಬಂಗಲೆಗಳಲ್ಲಿ ವಾಸಿಸುವರು.  ಅವರು ಕಾರಿನಲ್ಲಿ ಓಡಾಡುವರು.  ಟಬ್‌ನಲ್ಲಿ ಸ್ನಾನ ಮಾಡುವರು.  ಡೈನಿಂಗ್ ಟೇಬಲ್ ಮೇಲೆ ಕುಳಿತು ಟಿಫಿನ್, ಊಟ ಮಾಡುವರು.  ಬ್ರೆಡ್ ಟೋಸ್ಟ್, ಬೆಣ್ಣೆ ದೋಸೆ, ಸಮೋಸಾ, ಪೇಡೆ, ಬರ್ಫಿ, ಗುಲಾಬ್ ಜಾಮೂನು ತಿನ್ನುವರು.  ಹೋಳಿಗೆ, ತುಪ್ಪ, ಚಪಾತಿ, ಚಿತ್ರಾನ್ನ ಕೆನೆ ಮೊಸರು ಊಟ ಮಾಡುವರು.  ಮುಂಜಾನೆ ಮತ್ತು ಸಂಜೆ ಗಟ್ಟಿಯಾದ ಹಾಲಿನ ಚಹ ಕುಡಿಯುವರು.  ಸೇಬು, ಬಾಳೆಹಣ್ಣು, ದಾಳಂಬರಿ, ಕಿತ್ತಳೆ, ಮೋಸಂಬಿ, ಮಾವಿನ ಹಣ್ಣು, ದ್ರಾಕ್ಷಿ ಹಣ್ಣು ತಿನ್ನುವರು.  ಬಿಸಲೇರಿ ನೀರು ಕುಡಿಯುವರು.  ಟಿ.ವಿ. ನೋಡುವರು, ಮೆತ್ತನೆಯ ಮಂಚದ ಮೇಲೆ ಸೊಳ್ಳೆಪರದೆ ಕಟ್ಟಿಕೊಂಡು ಮಲಗುವರು.  ನಸುಕಿನಲ್ಲೆದ್ದು ವಾಕಿಂಗ್ ಹೋಗುವರು, ಜಾಗಿಂಗ್ ಮಾಡುವರು..... ಇತ್ಯಾದಿ ಇತ್ಯಾದಿಯಾಗಿ ಪ್ರಬಂಧ ಮುಂದುವರಿದಿತ್ತು.

ಅಧ್ಯಾಪಕರಿಗೆ ಸುಸ್ತೋ ಸುಸ್ತು.

            *****

ಕೀಲಿಕರಣ: ಕಿಶೋರ್‍ ಚಂದ್ರ

ಜೋಕಾಲಿ ಆಡೋಣ ಬರ್ರೆ

- ಶಿಶುನಾಳ ಶರೀಫ್

ಜೋಕಾಲಿ ಆಡೋಣ ಬರ್ರೆ
ಬೇಕಾದ ನಾರಿಯರೆಲ್ಲ
ಸಾಕಾಗುವತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||ಪ||

ಖೊಬ್ಬರಿ ತಂಬಿಟ್ಟು
ಇಬ್ಬರು ಉಡಿಯೊಳು ಕಟ್ಟಿ
ಹಬ್ಬಕೊಮ್ಮೆ ಹಾಲ ಹೊಯ್ಯೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                   ||೧||

ಏಕ ನಿಷ್ಠೆಯಿಂದ
ಎಡಬಲ ಹಗ್ಗವ ಪಿಡಿದು
ನೆಟ್ಟಗ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||೨||

ತುತ್ತನ್ನ ತುದಿಯಮ್ಯಾಲೆ
ಕಟ್ಟೇತ್ರಿ ಜೋಕಾಲಿ
ನಟ್ಟನಡುವೆ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||೩||

ಹೊಸಧಿಯೊಳಗ ನಮ್ಮ
ಶಿಶುನಾಳಧೀಶನ
ಆಂತಃಕರಣವಿದ್ದ ಗುರುವಿನ ಕೂಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||೪||
                     *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಧ್ವಜ


-ಅಬ್ಬಾಸ್ ಮೇಲಿನಮನಿ

ಆ ಊರಿನಲ್ಲಿ ಅನೇಕ ಧರ್ಮಗಳಿಗೆ ಸೇರಿದ ಜನರಿದ್ದರು.  ಅವರೆಲ್ಲರೂ ಮನುಷ್ಯರಾಗಿದ್ದರು.  ಧರ್ಮದ ಆಚರಣೆಗಳನ್ನು ಶ್ರದ್ಧೆಯಿಂದಲೇ ಪಾಲಿಸುತ್ತಿದ್ದರು.  ಅವೆಲ್ಲ ಅವರ ಮನೆಯ ಪರಿಧಿಗೆ ಸೀಮಿತಗೊಂಡಿದ್ದವು.  ಹೊರಗೆ ಅವರೆಲ್ಲರೂ ಪರಸ್ಪರ ಪ್ರೀತಿಯಿಂದ ವ್ಯವಹರಿಸುತ್ತಿದ್ದರು.  ಅವರ ಸಂಬಂಧ ತೀರ ಮಾನವೀಯವಾಗಿತ್ತು.  ಒಂದೇ ಊರಿನವರು ಎಂಬ ಅಭಿಮಾನವಿತ್ತು.  ಊರಿನ ಯಾವುದೇ ಕೆಲಸಗಳಲ್ಲಿ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಪಾಲ್ಗೊಳ್ಳುವರು.  ಒಬ್ಬರಿಗೊಬ್ಬರು ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು.

ಶಾಂತಿ, ನೆಮ್ಮದಿಯ ಆ ಊರಿನ ದುರಾದೃಷ್ಟವೊ ಎಂಬಂತೆ ಒಂದಿನ ಅಲ್ಲಿ ಯಾರೋ ಬಂದು ಕೇಸರಿ ಧ್ವಜ ನೆಟ್ಟರು.  ಸ್ವಲ್ಪ ದಿನಕ್ಕೆ ಹಸಿರು ಧ್ವಜ ಹಾರಾಡಿತು.  ಮತ್ತೆ ಎಂಟು ದಿನಕ್ಕೆ ಬಿಳಿ ಧ್ವಜ ಕಂಡಿತು.  ಜನರು ಧ್ವಜಗಳನ್ನು ಅಚ್ಚರಿಯಿಂದ ನೋಡಿದರೆ ಹೊರತು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.  ಆದರೆ ಧ್ವಜ ನೆಟ್ಟವರು ಸುಮ್ಮನೆ ಕೂಡಲಿಲ್ಲ.  ಹಗಲೆಂಬೊ ಹಗಲು, ರಾತ್ರಿಯೊಂಬೊ ರಾತ್ರಿ ಊರಿನ ಮನೆ, ಮಠ, ಮಂದಿರ, ಮಸೀದಿ, ಚರ್ಚು, ಬಸದಿ, ವಿಹಾರ, ಮರ, ಗೋಪುರ, ಅಂಗಡಿ, ಗಲ್ಲಿಗಲ್ಲಿ ರಸ್ತೆಗಳ ಚೌಕುಗಳಲ್ಲಿ ಹಸಿರು, ಕೇಸರಿ, ಬಿಳಿ ಧ್ವಜಗಳು ಪೈಪೋಟಿಯಲ್ಲಿ ಹಾರತೊಡಗಿದವು.

ಸಾವಕಾಶವಾಗಿ ಅವುಗಳ ಹೆಸರಲ್ಲಿ ವಾದ-ವಿವಾದ ಶುರುಗೊಂಡವು.  ಅಂಥದ್ದನ್ನೇ ತಮ್ಮ ಜೀವನಕ್ಕೆ ಆಧಾರ ಮಾಡಿಕೊಂಡ ದರಿದ್ರ ಜನ ಸಮಸ್ಯೆಗಳನ್ನು ಹುಟ್ಟುಹಾಕಿ ಕೋಮುಕೋಮುಗಳ ನಡುವೆ ಬಿರುಕು ಮೂಡಿಸಿದರು.  ಕಾಲು ಕೆದರಿ ಜಗಳ ತೆಗೆಯುವಂತೆ ಉತ್ಸವ, ಮೆರವಣಿಗೆ, ಜುಲೂಸು ಹೊರಡಿಸಿ ಪರಸ್ಪರ ಜಿಂದಾಬಾದ್, ಮುರ್ದಾಬಾದ್ ಎಂದು ಗಂಟಲು ಹರಿದುಕೊಳ್ಳುತ್ತ ಕಿಡಿಗೇಡಿಗಳು ಕಲ್ಲು ಎಸೆದಾಡಿದರು.  ಮಂದಿರದಲ್ಲಿ ಆಕಳ ಮಾಂಸ, ಮಸೀದಿಯಲ್ಲಿ ಹಂದಿಯ ಮಾಂಸ ಬಿದ್ದಿರುವುದೆಂದು ಗುಲ್ಲು ಎಬ್ಬಿಸಿದರು.  ಗೋಡೆಗಳ ಮೇಲೆ ರಕ್ತ ಕುದಿಸುವ, ಕಿಚ್ಚು ಹಬ್ಬಿಸುವ ಬರಹಗಳನ್ನು ಬರೆಸಿದರು.  ಮಾರಕಾಸ್ತ್ರಗಳು ಜನರ ಕೈಗಳಿಗೆ ಬಂದವು.  ಊರೆಂಬೊ ಊರು ರಣರಂಗವಾಗುತ್ತಿದ್ದಂತೆ ಹಿಂಡುಗಟ್ಟಲೇ ಪೋಲಿಸರು ವ್ಯಾನ್ ಇಳಿದರು.  ಕರ್ಫ್ಯೂ ಸಾರಿದರು.  ಓಡಾಡುವ ಜನರಿಗೆ ಲಾಠಿಯ ರುಚಿ ತೋರಿಸಿದರು.  ಗಾಳಿಯಲ್ಲಿ ಗುಂಡು ಹಾರಿಸಿದರು.

ಜನಜೀವನ ಅಸ್ತವ್ಯಸ್ತಗೊಮಡಿತು, ತಮ್ಮ ಊರು ಹೀಗೇಕೆ ರಾಕ್ಷಸವಾಯಿತು?  ಮನೆಯೊಳಗೆ ಕುಳಿತು ತಹತಹಿಸಿದರು ಪ್ರಜ್ಞಾವಂತ ಜನ.  ಅವರಿಗೆ ಕೇಸರಿ, ಹಸಿರು, ಬಿಳಿಯ ಧ್ವಜಗಳು ನೆನಪಾದವು.

ನಾಲ್ಕಾರು ದಿನಗಳ ಬಳಿಕ ಕರ್ಫ್ಯೂ ಸಡಿಲುಗೊಂಡಿತು.

ಒಬ್ಬೊಬ್ಬರಾಗಿ ಜನ ಹೊರಗೆ ಬಂದರು.

ಸ್ಮಶಾನದಂತೆ ಗೋಚರಿಸುತ್ತಿದ್ದ ಊರನ್ನು ನೋಡಲಾಗಲಿಲ್ಲ ಅವರಿಗೆ.

ಎತ್ತರೆತ್ತರವಾಗಿ ಹಾರಾಡುತ್ತಿರುವ ಧ್ವಜಗಳು ಅನಾಥಪ್ರಜ್ಞೆಯ ಸಂಕೇತದಂತೆ, ಜನರ ಬದುಕನ್ನು ನಾಶ ಮಾಡುವ ಪ್ರತೀಕದಂತೆ ಕಂಡವು.

ಮೊದಲಿನಂತೆ ಸುಮ್ಮನೆ ಕೂಡಲಿಲ್ಲ ಜನ.  ಗುಂಪುಗುಂಪಾಗಿ ನೆರೆದು ಹಾರುತ್ತಿರುವ ಧ್ವಜಗಳನ್ನು ನಿರ್ಭಾವುಕರಾಗಿ ಇಳಿಸಿದರು.  "ನಮಗೆ ಬೇಕಾಗಿದ್ದು ಬರಿ ಕೇಸರಿ ಧ್ವಜವಲ್ಲ, ಹಸಿರು, ಬಿಳಿ ಧ್ವಜಗಳಲ್ಲ.  ಈ ಮೂರು ಬಣ್ಣಗಳ ಸಂಗಮದ ನಡುವೆ ಅಶೋಕ ಚಕ್ರದ ರಾಷ್ಟ್ರಧ್ವಜ ಬೇಕು.  ಅದು ಯಾವಾಗಲೂ ಅರಳಿ ಕೊಂಡಿರಬೆಕು.  ಮುಗಿಲೆತ್ತರಕ್ಕೆ ಹಾರಬೇಕು.  ನಮ್ಮ ಅಭಿಮಾನದ, ಪ್ರೀತಿ, ಸಂತೋಷದ ಸಂದೇಶ ಸಾರಬೇಕು" ಎಂದು ಒಕ್ಕೊರಲಲ್ಲಿ ಉಲಿದರು.

"ಭಾರತ ಮಾತಾಕಿ ಜೈ"  "ಮೇರಾ ಭಾರತ್ ಮಹಾನ್" ಅವರ ಜಯಘೋಷ ಆಕಾಶದಲ್ಲಿ ಮೊಳಗಿತ್ತು.  ಧ್ವಜ ನೆಟ್ಟವರು ಅಲ್ಲಿಂದ ಕಿಮಿಕ್ ಎನ್ನದೆ ಕಾಲ್ದೆಗೆದಿದ್ದರು.

                                     *****
ಕೀಲಿಕರಣ: ಕಿಶೋರ್‍ ಚಂದ್ರ