-ರವಿ ಕೋಟಾರಗಸ್ತಿ
ಮುತ್ತಿಡುತ ನೀಲಾಗಸಕೆ
ಜಗವ ಬೆರಗುಗೊಳಿಸಿ
ನದಿ-ತೊರೆಗಳ-ಧಾಮ
ಹಸಿರ ಸಿರಿಯ ವೈಯ್ಯಾರದ
ನಿತ್ಯೋತ್ಸವದ ಪಶ್ಚಿಮಘಟ್ಟ
ತುಂಬಿದ ಮಾಲೆಗಳಲ್ಲಿ
ಬೆಟ್ಟಗಳ ಸಾಲು ಬೆಸೆದು
ಹೊದ್ದ ನಿತ್ಯ ಹರಿದ್ವರ್ಣ
ವಾತ್ಸಲ್ಯದ ಮಡಿಲು ಮಾದಾಯಿ
ಮಾತೃ ಒಡಲ ಅಪ್ಪುಗೆಯಲಿ
ಜಲಧಾರೆ ಹರಿಸುತಲಿ
ಜೀವಸೆಲೆಯ ಪರಿಸರಬೀಡು
ಕಂಗೆಟ್ಟ ಕಾನನ ರೋಧಿಸುತಿಹದು
ಬಾಳು-ಬದುಕಿನ ಪ್ರಶ್ನೆಗೆ
ಉತ್ತರ ಕಾಣದ ಒಡಲ-ಮಡಿಲು
ಉಳಿವಿಗಾಗಿ ವನಸಿರಿಯು ಬಳಲುತಿಹದು
ಮಾದಾಯಿ ಯೋಜನೆಗಾಳದಿ...
ಶತ-ಶತಮಾನಗಳ ಸಾಕ್ಷಿಯ
ನೆರಳಾಗಿರುವ ಹಸಿರು ಜೀವನೆಲೆ
ಬರಡಾಗಿಸುತಿಹ ವಿಜ್ಞಾನ ಸವಾರಿಯ
ಬಾಹುಗಳ ಹಿಡಿತದ ಬ್ರಹ್ಮರಾಕ್ಷಸ
ಆಧುನಿಕತೆಯ ಆಕ್ಟೋಪಸ್
ಜಾಗತೀಕರಣದ ಬಂದಿಯಾಗಿ
ಅಣೆಕಟ್ಟು, ರಸ್ತೆ, ಪೋಕ್ರಾನಗಳ
ವಿಷದಾಳದ ಆಳದಿ ಕುಬ್ಜರಾಗಿಹರು
ಮನುಕುಲದ ಕಣ್ಣಾಗಿ
ಒಡಲ ತೃಷೆ ತಣಿಸುವ
ಭೂದೇವಿಯ ಸಿರಿಗೆ ಬೆಂಕಿಯಿಡಲು
ಮಾದಾಯಿ ಯೋಜನೆ ಕೊಳ್ಳಿ ಹಿಡಿದಿಹರು
ಮೆದುಳಿರದ ಮಾನವ
ಮಂಕುತನದ ಹೃದಯ ಹೀನತೆಗೆ
ಮೌನ ಧಿಕ್ಕಾರದಿ-ಕಾಡೆಲ್ಲಾ ಕೂಗುತ
ಮನುಕುಲದಳಿವು ಕನಸಲಿ ಕಾಣುತ
ಮೌನದಿ ಕೊರಗುತ ಮಲುಗಿಹಳು
*****
ಕೀಲಿಕರಣ: ಕಿಶೋರ್ ಚಂದ್ರ
ಮುತ್ತಿಡುತ ನೀಲಾಗಸಕೆ
ಜಗವ ಬೆರಗುಗೊಳಿಸಿ
ನದಿ-ತೊರೆಗಳ-ಧಾಮ
ಹಸಿರ ಸಿರಿಯ ವೈಯ್ಯಾರದ
ನಿತ್ಯೋತ್ಸವದ ಪಶ್ಚಿಮಘಟ್ಟ
ತುಂಬಿದ ಮಾಲೆಗಳಲ್ಲಿ
ಬೆಟ್ಟಗಳ ಸಾಲು ಬೆಸೆದು
ಹೊದ್ದ ನಿತ್ಯ ಹರಿದ್ವರ್ಣ
ವಾತ್ಸಲ್ಯದ ಮಡಿಲು ಮಾದಾಯಿ
ಮಾತೃ ಒಡಲ ಅಪ್ಪುಗೆಯಲಿ
ಜಲಧಾರೆ ಹರಿಸುತಲಿ
ಜೀವಸೆಲೆಯ ಪರಿಸರಬೀಡು
ಕಂಗೆಟ್ಟ ಕಾನನ ರೋಧಿಸುತಿಹದು
ಬಾಳು-ಬದುಕಿನ ಪ್ರಶ್ನೆಗೆ
ಉತ್ತರ ಕಾಣದ ಒಡಲ-ಮಡಿಲು
ಉಳಿವಿಗಾಗಿ ವನಸಿರಿಯು ಬಳಲುತಿಹದು
ಮಾದಾಯಿ ಯೋಜನೆಗಾಳದಿ...
ಶತ-ಶತಮಾನಗಳ ಸಾಕ್ಷಿಯ
ನೆರಳಾಗಿರುವ ಹಸಿರು ಜೀವನೆಲೆ
ಬರಡಾಗಿಸುತಿಹ ವಿಜ್ಞಾನ ಸವಾರಿಯ
ಬಾಹುಗಳ ಹಿಡಿತದ ಬ್ರಹ್ಮರಾಕ್ಷಸ
ಆಧುನಿಕತೆಯ ಆಕ್ಟೋಪಸ್
ಜಾಗತೀಕರಣದ ಬಂದಿಯಾಗಿ
ಅಣೆಕಟ್ಟು, ರಸ್ತೆ, ಪೋಕ್ರಾನಗಳ
ವಿಷದಾಳದ ಆಳದಿ ಕುಬ್ಜರಾಗಿಹರು
ಮನುಕುಲದ ಕಣ್ಣಾಗಿ
ಒಡಲ ತೃಷೆ ತಣಿಸುವ
ಭೂದೇವಿಯ ಸಿರಿಗೆ ಬೆಂಕಿಯಿಡಲು
ಮಾದಾಯಿ ಯೋಜನೆ ಕೊಳ್ಳಿ ಹಿಡಿದಿಹರು
ಮೆದುಳಿರದ ಮಾನವ
ಮಂಕುತನದ ಹೃದಯ ಹೀನತೆಗೆ
ಮೌನ ಧಿಕ್ಕಾರದಿ-ಕಾಡೆಲ್ಲಾ ಕೂಗುತ
ಮನುಕುಲದಳಿವು ಕನಸಲಿ ಕಾಣುತ
ಮೌನದಿ ಕೊರಗುತ ಮಲುಗಿಹಳು
*****
ಕೀಲಿಕರಣ: ಕಿಶೋರ್ ಚಂದ್ರ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ