- ಶಿಶುನಾಳ ಶರೀಫ್
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ
ನೀರೊಳಗೆ ಕರಗಿ ಸುಟ್ಟು ಹೋಯ್ತು ಸುಣ್ಣಾ ||ಪ||
ಸತ್ಯವಿದು ಮಿಥ್ಯವಲ್ಲ ತಿಳಿಯೋ ಕಾಮಣ್ಣಾ ||ಅ.ಪ||
ಹೊನ್ನು ಹೆಣ್ಣು ಮಣ್ಣು ಈ ಮೂರು ಸುಳ್ಳಣ್ಣಾ
ತಿಳಿದುನೋಡು ಗುರುವು ಕೊಟ್ಟ ಅವು ಮೂರು ಕಣ್ಣಾ ||೧||
ಕಳವ ಕಳಕೊಂಡೆಲ್ಲೊ ಕಾಮಣ್ಣಾ
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ ||೨||
ನೀರೊಳಗಿ ಕರಗಿ ಸುಟ್ಟಂಗಾತೋ ಸುಣ್ಣಾ
ಶಿಶುನಾಳ ಶರೀಫಗೆ ಹಾಲು ಅನ್ನ ತಪ್ಪದೆ ಅರ್ಪಿಸುವೆ ಮುಕ್ಕಣ್ಣಾ ||೩||
*****
ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ