-ಶಿಶುನಾಳ ಶರೀಫ್
ಇದು ಏನು ಸೋಜಿಗವೇ ಮಾನಿನಿಯಾಗಿ
ಇದು ಏನು ಸೋಜಿಗವೇ ||ಪ.||
ಕಲ್ಲಿನೊಳಗೆ ಮುಳ್ಳು
ಮುಳ್ಳಿನೊಳಗೆ ಜೊಳ್ಳು
ಎಳ್ಳು ಕೋಲಿಯ ಕದ್ದು
ಕಳ್ಳ ಕಾಡಿನೊಳೋದ್ದ್ದೇನು ಸೋಜಿಗವೇ ||೧||
ಹಕ್ಕರಕಿಯ ಗಿಡವನೇರಿ ಹಾವಿನ ಹುತ್ತಾ
ಹೊಕ್ಕಾ ಮುಂದಕ್ಕೆ ಸಾರಿ
ಮುಕ್ಕರಿಸುತಾ ಬಿದ್ದು
ಅಕ್ಕನ ಸೋಬತೊ ಮಾಡಿ ಮೂರು
ಮಕ್ಕಳ್ಹಡದು ಮೈನೆರದ್ದೇನು ಸೋಜಿಗವೇ ||೨||
ಹೇಸಿ ಮನಿಗೆ ಹೋಗಿ ನಿನಗೆ ಬಹು-
ಲೇಸಾಗೆಂದು ಕೂಡಿ
ಕಾಸಿನ ತೂಕದ ಕಡಲಿ ತಂದು
ಭಾಸುರ ಶಿಶುನಾಳಧೀಶನೊಲಿಸಿ
ನಾಗವಿಲ್ಲದ ಮುಕ್ತಿ ಪಡದದ್ದೇನು ಸೋಜಿಗವೇ ||೩||
****
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ