ಬಾರದಿರುವೆರೇನೇ ಭಾಮಿನಿ

-ಶಿಶುನಾಳ ಶರೀಫ್

ಬಾರದಿರುವರೇನೇ ಭಾಮಿನಿ
ಬಾರದಿರುವರೇನೇ                                 ||ಪ||

ಬಾರದಿರುವ ಕಾರಣವೇನಲೆ ಸಖಿ
ದೂರದಿಂದ ಮುಖ ತೋರಿ ಸಮಯದಿ       ||ಅ.ಪ. ||

ನಂಬದವನ ಕೂಡ ಭಾಮಿನಿ
ಸಂಭ್ರಮಿಸುವದು ಬ್ಯಾಡ ನೋಡ
ಆಂಬುಜಾಕ್ಷಿಯೇ ಕಂಬುಕಂದರಿಯೇ
ಹಂಬಲಿಸುತ ನಿನ್ನ ಬೆಂಬತ್ತಿ ನಾ                ||೧||

ಕುಸುಮಲೋಚನೆ ಕೇಳೇ ವಿಷಯದ
ಕಸವನು ಕಳದವಳೆ ಭಾಮಿನಿ
ವಸುಧಿಯೊಳಂ ಶಿಶುನಾಳಧೀಶನ
ಆಸಮಸದ್ಗುರು ಗೋವಿಂದನಾಲಯ          ||೨||

                ****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ