- ಮಂಜುನಾಥ ವಿ ಎಂ
ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ,
ಅವನು ಬೆಚ್ಚಗೆ ಅವಳನ್ನೊದ್ದುಕೊಂಡು.
ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ
ಹೊರಗಿನ ಗಾಳಿ ಅಲೆಅಲೆಯಾಗಿ ಅಪ್ಪಳಿಸಿದೆ.
ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ಪ್ರೇಮಪಾಠ
ಅವನ ತೋಳ್ಬಂಧನದ ವಶವಾಗಿದೆ.
ಲಾಟೀನಿನ ಬೆಳಕು ಕೋಣೆಗೆ ಕವಿದ ಮಬ್ಬನ್ನು ಸೀಳಿಹಾಕುತ್ತಿದ್ದಂತೆ,
ತನ್ನ ಜಾನಪದ ವಾದ್ಯದ ಕೀಲಿಗಳನ್ನು ಸರಿಹೊಂದಿಸುವ ದುಶ್ಚಟದಲಿ
ಅವಳು ಬೀಳುತ್ತಾಳೆ.
ಹೊಲದಿನ್ನೆಗಳಿಗೆ ಗೇಯಲೋಗಿದ್ದವರೆಲ್ಲರೂ ತಮ್ಮತಮ್ಮ ಮನೆಗಳಿಗೆ
ಹಿಂದಿರುಗುತ್ತಿದ್ದಂತೆ-ಕೀಲಿ ತಿರುಗಿದ ಹೀನಸ್ವರ ಅವರೆಲ್ಲರನ್ನೂ
ತಡೆದು ನಿಲ್ಲಿಸುವುದು. ಅದು ಸತ್ತ ನಂತರ ಏರ್ಪಾಡಾಗುವ ಶ್ರದ್ಧಾಂಜಲಿಯ
ಸಂಗೀತ ಸ್ವರದಂತೆಯೂ, ಸಾಯುವ ಮೊದಲಿನ ನೆನಪುಗಳಂತೆಯೂ
ಕೇಳಿಸಿದೆ. ಘೋರಗಾಳಿ ಅವನು ಉರಿಸಿದ ಸಣ್ಣ ಪ್ರಮಣದ ಬೆಂಕಿಯನ್ನು,
ಈಗಾಗಲೇ ಉರಿಯಗೊಟ್ಟ ಅವಳ ಮನಸ್ಸಿನ ಜ್ವಾಲೆಗಳಲ್ಲಿ
ವಿಶ್ರಾಂತಿ ಬಯಸಹೋಗಿದೆ.
ಕೀಲಿ ಬಿಗಿಯಾಗಿ ಸುಶ್ರಾವ್ಯ ಸ್ವರ ಎಬ್ಬಿಸಿ,
ಅಲ್ಲಿನ ಎಲ್ಲವನ್ನೂ ದಾಟಿಕೊಂಡು ಹೂಗಳಿರುವ ಕಪ್ಪುಗೋಡೆಗಳಲಿ
ಅಪರಾಧವನ್ನು ಬಿಟ್ಟು, ನಿಷ್ಟಾವಂತ ಪ್ರೇಮವನ್ನು ಕದ್ದೊಯ್ದಿದೆ.
*****

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ