- ಶಿಶುನಾಳ ಶರೀಫ್
ವಾರಿಜಾಕ್ಷಿ ವನಪಿನೊಯ್ಯಾರೆ
ಬಾರೆ ನೀರೆ ನಿನ್ನನಗಲಿರಲಾರೆ || ಪ ||
ದೀರೆ ಮರೆಯದಿರಲಾರೆ ಬ್ರಹ್ಮದ
ನೀರು ತುಂಬಿದ ಕೆರಿಯ ಮೇಲಿನ
ಏರಿಯೊಳು ನೀ ಬಾರದಿಹೆ ನಾ
ದಾರಿಯೊಳು ತರುಬಿದರೆ ಸುಮ್ಮನೆ ||ಅ.ಪ.||
ಹರನಾ ಹಿಡಿದೆ ವಿಧಿ ತಲಿಗಡಿದೆ
ಹರಿಯ ಚರಣಾಂಬುಜವನ್ನು ಪಡಿದೆ
ಪರಮನಾರದಋಷಿಯ ಕಲಹದಿ
ಪರಿಯಗೆಡಸಿದಿ ಪಾವನಾತ್ಮಳೆ
ಧರಿಗೆ ಶಂಕರಿಯಾದೇ ಶಿವನಾ
ಶಿರದಿ ಮೆರದೇ ಗಂಗೆಯಾಗಿ ||೧||
ಹಸಿತ ವದನದ ಕುಸುಮಗಂಧಿಯಳೆ
ವಸುಧಿ ದೆಸೆಗೆಡಿಸುತ್ತ ನಿಂತಿಹಳೆ
ಎಸೆವ ಶಿಶುನಾಳೇಶನ ಹಸುಳೆಗೆ
ಆಸಮ ಹಾದರ ಕಲಿಸಿದ್ಯಾ ಬಿಡು
ರಸಿಕರಾಟ ಗೋವಿಂದ ಸದ್ಗುರು
ಉಸುರಿದಾತ್ಮ ವಿಚಾರ ತಿಳಕೋ ||೨||
***
ಕೀಲಿಕರಣ: ಎಮ್.ಎನ್.ಎಸ್.ರಾವ್
ವಾರಿಜಾಕ್ಷಿ ವನಪಿನೊಯ್ಯಾರೆ
ಬಾರೆ ನೀರೆ ನಿನ್ನನಗಲಿರಲಾರೆ || ಪ ||
ದೀರೆ ಮರೆಯದಿರಲಾರೆ ಬ್ರಹ್ಮದ
ನೀರು ತುಂಬಿದ ಕೆರಿಯ ಮೇಲಿನ
ಏರಿಯೊಳು ನೀ ಬಾರದಿಹೆ ನಾ
ದಾರಿಯೊಳು ತರುಬಿದರೆ ಸುಮ್ಮನೆ ||ಅ.ಪ.||
ಹರನಾ ಹಿಡಿದೆ ವಿಧಿ ತಲಿಗಡಿದೆ
ಹರಿಯ ಚರಣಾಂಬುಜವನ್ನು ಪಡಿದೆ
ಪರಮನಾರದಋಷಿಯ ಕಲಹದಿ
ಪರಿಯಗೆಡಸಿದಿ ಪಾವನಾತ್ಮಳೆ
ಧರಿಗೆ ಶಂಕರಿಯಾದೇ ಶಿವನಾ
ಶಿರದಿ ಮೆರದೇ ಗಂಗೆಯಾಗಿ ||೧||
ಹಸಿತ ವದನದ ಕುಸುಮಗಂಧಿಯಳೆ
ವಸುಧಿ ದೆಸೆಗೆಡಿಸುತ್ತ ನಿಂತಿಹಳೆ
ಎಸೆವ ಶಿಶುನಾಳೇಶನ ಹಸುಳೆಗೆ
ಆಸಮ ಹಾದರ ಕಲಿಸಿದ್ಯಾ ಬಿಡು
ರಸಿಕರಾಟ ಗೋವಿಂದ ಸದ್ಗುರು
ಉಸುರಿದಾತ್ಮ ವಿಚಾರ ತಿಳಕೋ ||೨||
***
ಕೀಲಿಕರಣ: ಎಮ್.ಎನ್.ಎಸ್.ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ