ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ
ಮಾನವ ಜನ್ಮಕೆ ಬಂದು ಏನೇನು ತಿಳಿಯಲಿಲ್ಲೋ ಶಂಭೋಲಿಂಗಾ ||ಪ||
ಹಾವು ಹರಿದಾಡಿತು ಚೇಳು ಕುಣಿದಾಡಿತು ಶಂಭೋಲಿಂಗಾ
ಹಾವು ಚೇಳಿನ ನುಂಗಿ ಕೋಳಿ ಕೂಗುವದು ಶಂಭೋಲಿಂಗಾ ||೧||
ಪಕ್ಕವಿಲ್ಲದ ಪಕ್ಷಿಗಗನದೊಳಾಡಿತು ಶಂಭೋಲಿಂಗಾ
ಅಕ್ಕರದಲಿ ಶಿವಾ ನೋಡಿತಾ ನಗುತಿಹನು ಶಂಭೋಲಿಂಗಾ ||೨||
ಮಾಯವೆಂಬುದು ಮನಿಮಾಡಿತು ದೇಹದೊಳು ಶಂಭೋಲಿಂಗಾ
ಆವ ಕಾಲಕೆ ಇದು ಪರಿಹಾರವಾಗುವದು ಶಂಭೋಲಿಂಗಾ ||೩||
ಹರಸಿ ದೇವತೆಗಳಿಗೆ ಬ್ರಹ್ಮನ ಕಾವಲ ಶಂಭೋಲಿಂಗಾ
ಗುರುಮಂತ್ರ ಬಲದಿಂದ ಈ ಭವ ನೀಗುವದು ಶಂಭೋಲಿಂಗಾ ||೪||
ಕಲ್ಲುದೇವರು ಕಣ್ಣು ಮುಚ್ಚಿ ಕಾಪಾಡಿದವು ಶಂಭೋಲಿಂಗಾ
ಬಲ್ಲಿದ ಶಿಶುನಾಶಧೀಶನ ದಯದಿಂದ ಶಂಭೋಲಿಂಗಾ ||೫||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ