ಅಣ್ಣ ನೋಡೋಣು ಬಾರೋ
ಬೇಗನೆ ಸಾರೋ ||ಪ||
ಅಣ್ಣ ನೋಡೋಣು ಬಾರೋ
ನುಣ್ಣಗೆ ತೋರುವ
ಸಣ್ಣ ಮಂದಿರದೊಳು
ಕಣ್ಣಿಟ್ಟು ಜ್ಯೋತಿಯ ||೧||
ಶಾಲು ಮೇಲೆ ಮುಡಿಹೊತ್ತು ಮಸ್ತಕದಿ
ರುಮಾಲು ಚಿಮ್ಮರಿಯ ಸುತ್ತು
ಬಾಳೊಂದು ಚೆಲುವಾದ ಕಾಲು ಹಾವಿಗೆ ಮೆಟ್ಟಿ
ಮೇಲು ಮಾರ್ಗದಿ ನಿಂತು ನಾಳಿನೊಳಿಬ್ಬರು ||೨||
ವಾಯು ಬಲಿದೇಕಾಗಿ ನೀವೀರ್ವರು
ನ್ಯಾಯ ನೀಗದವರಾಗಿ
ಸಾವಿನಂಕುರ ಗೆದ್ದು ಜೀವಾತ್ಮರ ಮುದ್ದು
ಭಾವಿಸಿ ಶಿಶುನಾಳಧೀಶನೆ ಗತಿಯೆಂದು ||೩||
* * *
-ಶಿಶುನಾಳ ಶರೀಫ
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ