ಖಾದರಿ ಸದಾವರಿ
ನಿತ್ಯ ನಿರಂಜನಾವರಿ ||ಪ||
ಪಂಚ ಪ್ರಣಮ ಘೋಷನಾದ
ಮುಂಚೆ ಮೌನ ಖಾದರಿ
ಸಂಚಿತಾರ್ಥ ವಿಷಯ ಕರ್ಮವಿದು
ಪ್ರಪಂಚದೂರ ಖಾದರಿ
ಪದವಿದಾನು ಸದವಿದಾನು
ಪದವಿದೂರ ಖಾದರಿ ||೧||
ಆದಿನಾದ ಮೋದನಾದ
ಹಮ್ಮನಳಿದ ಖಾದರಿ
ಮೇದಿನಿ ಸ್ಥಳದಿ ಶಿಶುನಾಶ
ಶಹಾದತ್ ಹಜರೇಶಾ ಖಾದರಿ ||೨||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ