ದಶಾವತಾರಕಾ ಕೃಷ್ಣ
ದಶಾವತಾರಕಾ.... ||ಪ||
ಕೃಷ್ಣಮೂರ್ತಿ ಸೃಷ್ಟಿಪೂರ್ತಿ
ಇಷ್ಟದಾಯಕಾ ಸರ್ವೇಷ್ಟದಾಯಕಾ ||೧||
ಬಲಿಯ ತುಳಿದು ನೆಲಿಯ ತಿಳಿದು
ಕಲಿವಿಚಾರಕಾ ಮಹಾಬಲದಿ ಪೂರಕಾ ||೨||
ಬೌದ್ಧ ವಾಮ ಪರಶುರಾಮ ಕ್ಷತ್ರಿನಾಶಕಾ
ಮತ್ಸ್ಯ ಕೂರ್ಮರೂಪಕಾ ||೩||
ಭುವನೋದ್ಧಾರ ನಾರಸಿಂಹ ಶೂರರೂಪಕಾ
ಶಿಶುನಾಳೇಶ ವ್ಯಾಪಕಾ ||೪||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ