ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ
ಚನ್ನಾಗಿ ಕೇಳಿರಣ್ಣಾ ||ಪ||
ನೆನ್ನೆ ಮೊನ್ನೆಯೆಂದು
ತನ್ನೊಳಗೆ ತಾ ತಿಳಿದು
ತನ್ನೇಸ್ಹುಣ್ಣಿವಿ ದಿನಾ
ಕನ್ನೆ ಮಾಸಿ ಕೂಡಿ ಬಂದು ||ಅ.ಪ.||
ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ
ಜೀವ ಹೋದಿತು ಸತ್ತಾ
ಮೋಹ ಮದಗಳು ತಾನು
ತಾಯಿಗಂಡನ ಕೂಡಿಕೊಂಡು
ದೇವರ ಮನಿಯಾಗ ಹಾಸಿಗೆ ಮಾಡಿ
ಕ್ಯಾವಿ ಹಚ್ಚಡ ಹೊಚ್ಚಿದ ಮೇಲೆ ||೧||
ಆಕಾಶ ನೆಲೆಯಾಗಿ ನಿಂತಲ್ಲೆ ನಿಂತು
ಭೂಕಾಂತೆ ತಲೆದೂಗಿ
ಮೂಕನೊಬ್ಬನ ಕೂಡ
ಹಾಕ್ಯಾಡಿ ತಕ೯ಮಾಡಿ
ಪಾಕದ ಗಡಿಗೆ ವಡಿದು ಜಡಿದು
ಕಾಕೀಗಿಡವ ಕಡಿದ ಮೇಲೆ ||೨||
ಮುತ್ತಲಮರವನೇರಿದೆ ಆದರೊತ್ತಲಿರುವ
ಗೊತ್ತಿನ ಭೂತವ ತಡದೆ
ಅತ್ತ ಇತ್ತ ನೋಡಲಾಗಿ
ಸುತ್ತಲೂ ಭಯವಾಗಿ
ನೆತ್ತಿ ಬಿರಿದು ಬತ್ತಲಾಗಿ
ಸತ್ಯ ಶಿಶುನಾಳಧೀಶನ ಕಂಡೆ ||೩||
* * *
-ಶಿಶುನಾಳ ಶರೀಫ
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ