ಗುಜಗುಜಮಾಪೂರ ಆಡೋಣ
ಸಜ್ಜನರೆಲ್ಲರು ಕೂಡೋಣ || ಪ||
ಗಜಿಬಿಜಿ ಸಂಸಾರ ದೂಡೋಣ ಸಾ-
ಯುಜ್ಯ ಮುಕ್ತಿಯ ಹೊಂದೋಣ ||ಅ.ಪ.||
ಹಸ್ತಿನಿ ಛಿತ್ತಿನಿ ಶಂಖಿನಿ, ಪದ್ಮಿನಿ
ಉತ್ತಮರೆಲ್ಲರು ಆಡೋಣ
ಕುರುಡ ಕುಂಟರೆಲ್ಲ ಹೋಗೋಣ
ರಂಟಿ ಕುಂಟಿ ಹೊಡೆಯೋಣ ||೧||
ಕೆಂಫು ಹಸಿರು ಹಳದಿ ಕಾಳ್ಗಳನು
ಸೊಂಪಿನಿಂದ ಬಿತ್ತೋಣ
ಯೋಗಿ ಜಂಗಮರಿಗೆ ನೀಡೋಣ
ಶಿಶುನಾಳಧೀಶನಿಗೆ ನಮಿಸೋಣ ||೨||
* * *
-ಶಿಶುನಾಳ ಶರೀಫ
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ