ರಾಮ ರಾವೇಣ ಹರಿ
ರಾಜಿತ ಪರಾತ್ಪರವಾದ ನಾಮದೊರಿ
ರಾಮ ರಾವೇಣ ಹರಿ ||ಪ||
ವಾಮ ಭಾಗದಿ ಶಿತಭವಾನಿ
ಪ್ರೇಮ ಸದ್ಗುರು ಮಲ್ಲಿಕಾರ್ಜುನ
ಕಾಮಿತಾರ್ಥ ಫಲದಾಯಕ
ರಾಮ ರಾವೇಣ ಹರಿ ||ಅ.ಪ.||
ಕಮಲದಿ ಕಾತ್ಯಾಯಿನಿ
ಕಾಮಿತಫಲ ಕರುಣ ಕೃಪಾಳು ನೀ
ಸಮರಮುಖದಲಿ ಗೆಲಿದು ಶುಂಭ
ನಿಶುಂಭ ಈರ್ವರನು ಸವರಿ ಶಾಶ್ವತ
ಕಾಂಬುಕಂದರಿ ಎನಿಸಿ ಲೋಕದಿ
ತುಂಬಿಕೊಂಡಿದೆ ತರುಣಿಮಣಿಯಳೆ
ರಾಮ ರಾವೇಣ ಹರಿ ||೧||
ಅಸಮ ಸುಗಂಧಿಯಳೆ
ಶಿಶುವಿನಾಳ ವಸುಧಿಗೆ ಬಂದಿಹಳೆ
ಹಸನವಾಹಿಹ ಪಾದಕಮಲಕೆ
ಬೆಸನ ಬೇಡುವೆ ಭವದುರಾತ್ಮಳೆ
ನಿಶಿಕಿರಣ ನಿಜಾನಂದ ಮೂರುತಿ
ಉಸುರುವೆನು ಆನಂದದಲಿ ಸದಾ
ರಾಮ ರಾವೇಣ ಹರಿ ||೨||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ