ಆದಿಬಸವ ಅನಾದಿಯಿಂದಲು
ಮೇದಿನಿಗಿಳಿದು ಬಂದ ಚೋದ್ಯ ||ಪ||
ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ-
ದದಿ ಸಲುಹಿದ ಶಿವನಾರಾಧ್ಯ ||೧||
ಸರಳು ಜಪಾಂಗುಲಿ ಕಿರಿಬೆರಳು ನೋಸಲಲಿ
ಧರಿಸಿ ಮರಣ ಗೆಲಿವುದು ಚೋದ್ಯ ||೨||
ಕರಚಿತ್ಕಳ ಪಂಚಾಕ್ಷರ ಸ್ತುತಿಸಿದಿ ನೀ
ನೆರಳು ರುದ್ರಾಕ್ಷಿ ವೃಕ್ಷದ ಮಧ್ಯ ||೩||
ಪೊಡವಿಯೊಳಧಿಕ ಭಕ್ತರ ಮನಸನ
ಒಲಿಸಿ ನುಡಿದಿಹಮ ಚೋದ್ಯ ||೪||
ಒಡೆಯ ಶಿಶುನಾಳಧೀಶನಲ್ಲೆ
ಅಡಗಿರ್ಪ ಗ್ರಾಮ ಸುಖದಿ ||೫||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ