ಕರುಣ ಬಾರದೇನೋ ಸದಾಶಿವ
ಕರುಣ ಬಾರದೇನೋ ||ಪ||
ಧರಣಿ ಜನರು ಈ ಪರಿ ಮರಗುದ ಕಂಡು ||ಅ||
ಹುಟ್ಟಿಸಿದೆಲ್ಲೋ ಭೂಮಿ ಈ ಲೋಕವ
ಕಟ್ಟಿ ಆಳುವ ಸ್ವಾಮಿ
ಕೆಟ್ಟ ಕರ್ಮದ ಕೊಲಿ
ಸುಟ್ಟು ಕೈಲಾಸದಿ
ಪಟ್ಟನಾಳು ಪರಮಾತ್ಮ ಪ್ರಭುವರ ||೧||
ಕಿಡಿಗಣ್ಣಿಲೆ ನೋಡಿದ್ಯಾ ಈ ದಕ್ಷಿಣ
ಕಡೆ ಬಾಗಿಲ ಕಾಯ್ದ್ಯಾ
ಬಿಡದೆ ಪೊಡವಿ ಸ್ಥಳಕೆ ಈ ಬರ ಹುಟ್ಟಿಸಿ
ಕಡು ಹರುಷದಿ
ಸುಡುಗಾಡ ಸೇರಿದ್ಯಾ ಸಾಂಬಾ ||೨||
ತುಸು ದಯವಿರಬೇಕೋ ಈ ಮನುಜರ
ಹಸನಾಗಿ ಸಲಹುದಕೋ
ವಸುಧಿಯೊಳು ಶಿಶುನಾಳ
ಪಶುಪತಿ ಸೇವಕ
ಉಸುರಿದ ನುಡಿಗೆ ನಸುನಗೆಯಿಂದಲಿ ||೩||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ