ನೀಲಕಂಠನ ದಿವ್ಯ ಆಲಯದೊಳು ಬಂದು
ಸಾಲಿಟ್ಟು ಸಾಧು ಸಮ್ಮುಖ ನೋಡಿದ್ಯಾ ||ಪ||
ಕಾಲಾನುಕಾಲನ ಕಾಲವಂದನೆ ಗೆದ್ದು
ಮೇಲಾದ ಮಹಿಮೆ ನೋಡಿದ್ಯಾ ||೧||
ಮೂರು ತನುವಿನೊಳು ಏರುವ ಸಮಯಕ್ಕೆ
ಸಾರೋಪ್ಯ ವೃಕ್ಷದ ಸರಮಾಡಿದ್ಯಾ
ಹಾರೈಸಿಕೊಂಡ ವಸ್ತುವಿನಿಲಿ ವೀರಪ್ಪ
ಬ್ಯಾರೆ ಈ ಹಾದಿಯೋಳ್ ಕೂಡಿದ್ಯಾ ||೨||
ಹಸಿದು ಬಂದವರಿಗೆ ಅಶನದೋರಲು ಸುಖ
ರಸ ಉಂಡು ರಾಜಯೋಗದಿ ಹಾಡಿದ್ಯಾ
ಶಿಶುನಾಳಧೀಶನ ದಯದಿ ಶಿಗ್ಗಲಿಯೊಳು
ಹಸನಾಗಿ ದುರಿತ ದುರ್ಗುಣ ದೂಡಿದ್ಯಾ ||೩||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ