ಮೈಲಾರ ಮಹದೇವ ಕೈಲಾಸಪತಿಯೆ ||ಪ||
ನಯ ಭಯದಲಿ ಮೈಯಿಕ್ಕುವೆ ಚರಣಕೆ
ಕೈಮುಗಿದೆರುಗುವೆ ಸೈ ಸದ್ಗುರು ರಾಯ ||ಅ.ಪ.||
ಸುಂದರ ಮೂರುತಿ ಬಂಧುರ ಕೀರತಿ
ಚಂದಾಸುರನ ವಧಮಾಡಿ ಜಗಕೆ
ಆನಂದ ಬೀರಿದೆ ಮೈಲಾರಲಿಂಗ ||೧||
ಘನಕರುಣ ವೀರನೆ ಚಿನುಮಯ ಶೂರನೆ
ಮಣಿಮಲ್ಲಾಸುರನ ಹಣಿದು ದಾನವರ
ಮಣಿಸಿದ ದೇವನೇ ಚಿದ್ಘನ ಲಿಂಗನೆ ||೨||
ಅಂಗಜರೂಪನೆ ಶಿಂಗಾರರೂಪನೆ
ಗಂಗಿಮಾಳಿ ಹೃದಯಾಂಗಣದಿ ನೆಲಸಿರ್ಪ
ಮಂಗಳಾತ್ಮ ಶಿಶುನಾಳಧೀಶನೆ ||೩||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ