-ಶಿಶುನಾಳ ಶರೀಫ್
ಕುಂಬಾರಕಿ ಈಕಿ ಕುಂಬಾರಕಿ ಈ
ಬ್ರಹಾಂಡವೆಲ್ಲ ತುಂಬಿಕೊಂಡಿರುವ ||ಪ||
ಚಿನ್ನ ಎಂಬುವ ಮುಣ್ಣನು ತರಸಿ
ತನ ಎಂಬುವ ನೀರನು ಹಣಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ ||೧||
ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯ್ನ ಎಂಬುವ ಬಡಗಿಯ ಊರಿ
ಮುನ್ನೂರರವತ್ತ ಸುತ್ತನು ತಿರಗಿ
ಗಡಗಿ ತಯಾರು ಮಾಡುವಾಕಿ ||೨||
ಆಚಾರ ಎಂಬುವ ಆವಿಗೆ ಮುಚ್ಚಿ
ಆರುವ ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗೆ ಓದು ಮಾರುವಾಕಿ ||೩||
ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ಹೊಸಧಿಯೊಳು ಶಿಶುನಾಳಧೀಶನ ಮುಂದೆ
ಧ್ಯಾನದ ಮುಗಿಯೊಂದು ಇಡುವಾಕಿ ||೪||
****
ಕೀಲಿಕರಣ: ಎಂ.ಎನ್.ಎಸ್. ರಾವ್
ಕುಂಬಾರಕಿ ಈಕಿ ಕುಂಬಾರಕಿ ಈ
ಬ್ರಹಾಂಡವೆಲ್ಲ ತುಂಬಿಕೊಂಡಿರುವ ||ಪ||
ಚಿನ್ನ ಎಂಬುವ ಮುಣ್ಣನು ತರಸಿ
ತನ ಎಂಬುವ ನೀರನು ಹಣಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ ||೧||
ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯ್ನ ಎಂಬುವ ಬಡಗಿಯ ಊರಿ
ಮುನ್ನೂರರವತ್ತ ಸುತ್ತನು ತಿರಗಿ
ಗಡಗಿ ತಯಾರು ಮಾಡುವಾಕಿ ||೨||
ಆಚಾರ ಎಂಬುವ ಆವಿಗೆ ಮುಚ್ಚಿ
ಆರುವ ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗೆ ಓದು ಮಾರುವಾಕಿ ||೩||
ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ಹೊಸಧಿಯೊಳು ಶಿಶುನಾಳಧೀಶನ ಮುಂದೆ
ಧ್ಯಾನದ ಮುಗಿಯೊಂದು ಇಡುವಾಕಿ ||೪||
****
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ