- ಶಿಶುನಾಳ ಶರೀಫ್
ಪಂಚಮಿ ಹಬ್ಬಾ ಬಂದೀತು ಗೆಳತಿ
ಇನ್ನಾರಿಗ್ಹೇಳಲಿ || ಪ||
ಆವಕ್ಕ ನಾರಿ ಜೋಕಾಲಿ ಏರಿ
ಕೈಬೀಸಿ ಕರಿಯಾಲೀ || ೧ ||
ಆರಳಿಟ್ಟು ತಂಬಿಟ್ಟು ನಾಗಪ್ಪಗ್ಹಾಲ ಹೊಯ್ಯಲಿ
ಆಣ್ಣನಪಾಲು ತಮ್ಮನಪಾಲು ಆಕ್ಕನಪಾಲು ಮುತ್ತಾಗಲಿ || ೨ ||
ಮಾವನಪಾಲು ಮೈದುನಪಾಲು ಗಂಡನಪಾಲು ಮನದಲ್ಲೆ
ಊರಪಾಲು ದೇವರಪಾಲು ಗುರುವಿನಪಾಲು ಆತ್ಮದಲ್ಲೆ || ೩ ||
ವಸುಧಿಯೊಳು ಶಿಶುನಾಳಧೀಶನಪಾಲು
ಬಸವಗೆ ಮುಟ್ಟಲಿ ||೪ ||
*****
ಕೀಲಿಕರಣ: ಎಮ್.ಎನ್.ಎಸ್.ರಾವ್
ಪಂಚಮಿ ಹಬ್ಬಾ ಬಂದೀತು ಗೆಳತಿ
ಇನ್ನಾರಿಗ್ಹೇಳಲಿ || ಪ||
ಆವಕ್ಕ ನಾರಿ ಜೋಕಾಲಿ ಏರಿ
ಕೈಬೀಸಿ ಕರಿಯಾಲೀ || ೧ ||
ಆರಳಿಟ್ಟು ತಂಬಿಟ್ಟು ನಾಗಪ್ಪಗ್ಹಾಲ ಹೊಯ್ಯಲಿ
ಆಣ್ಣನಪಾಲು ತಮ್ಮನಪಾಲು ಆಕ್ಕನಪಾಲು ಮುತ್ತಾಗಲಿ || ೨ ||
ಮಾವನಪಾಲು ಮೈದುನಪಾಲು ಗಂಡನಪಾಲು ಮನದಲ್ಲೆ
ಊರಪಾಲು ದೇವರಪಾಲು ಗುರುವಿನಪಾಲು ಆತ್ಮದಲ್ಲೆ || ೩ ||
ವಸುಧಿಯೊಳು ಶಿಶುನಾಳಧೀಶನಪಾಲು
ಬಸವಗೆ ಮುಟ್ಟಲಿ ||೪ ||
*****
ಕೀಲಿಕರಣ: ಎಮ್.ಎನ್.ಎಸ್.ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ