- ಶಿಶುನಾಳ ಶರೀಫ್
ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ
ಆಲಸ್ಯಮಾಡದೆ ಹೋಗುಣ ಬಾರೆ || ಪ ||
ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ
ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು
ಗಾಳಿ ಮಳೆಗೆ ಉದುರುತಿಹವು
ಪೇಳುವೆ ಸುತ್ತಲು ಸಣ್ಣ
ಮಳಲಿನೊಳು ಸೀಮಿಕಲ್ಲು ನಟ್ಟಿರ್ಪುದು
ನಿಳಯದ ಕರಕಿ ಹುಲ್ಲು ಕಪಟ ಭೂಮಿ
ತಿಳಿಯ ಮಣ್ಣು ಕರ್ಲಿನಲಿ ಕೆಲವರೆಲ್ಲರು ಮಮ್ಮಾಯಿ
ಕಾಳು ಬಿತ್ತಿ ಹೊನ್ಗಳ ಫಳಿಸಿ ಗರ್ವದಿ || ೧ ||
ಊರ ಜನರೊಳೆವರಲ್ಲ
ಒಬ್ಬರೊಬ್ಬರ ಹೊಲಕೆ ಹೋಗದಿರೆ ಎಲ್ಲೆಲ್ಲಿ
ನೋಡಿದರು ಹೆಚ್ಚಿನ ಧಡೆಗಲ್ಲು
ಮೂವತ್ತು ಸೇರಿನ ದಂಡಿಗಿ ಇವರು ತೂಗುವರೋ ಬ್ಯಾರೆ
ಭಾರಿ ಭಾರಿ ಜಡಿ ಜಡಿಯ ತೂಕದ
ಮೂರುವರಿ ದುಡ್ಡುಗಳು ಕೋಡುತಿಹರು
ಆರಗೊಡವಿನ್ನೇನು ನಮಗೆ
ನಾರಿಮಣಿ ನಮ್ಮ ಹೊಲಕೆ ನಡಿಯೇ || ೨ ||
ಸೃಷ್ರ್‍ಇಯೊಳು ನಾವೀರ್ವರು ಹುಟ್ಟಿ ಬೆಳೆಯುವರು
ಕಟ್ಟಳತೆ ಇಲ್ಲದ ಭವದ ಕೂಳಿನೊಳು
ಮುಟ್ಟು ಮೈಲಿಗೆಯ ಜಲಹತ್ತಿ
ಬಿಟ್ಟಿದ್ದರೆ ಫಲ ಬೆಳಸಬಾರದ ರೀತಿ
ಎಷ್ಟು ಹೇಳಬೇಕರಿ ಪಾಪದ
ಮಟ್ಟಿನಲ್ಲಿ ಹಣ ಕಟ್ಟಿಕೊಂಬರು
ಬಿಟ್ಟು ಬಾ ಶಿಶುನಾಳಧೀಶನ
ಬಟ್ಟಬೈಲಿಯ ಹೊಲಕ ನಡಿಯೇ || ೩ ||
*****
ಕೀಲಿಕರಣ: ಎಮ್.ಎನ್.ಎಸ್.ರಾವ್
ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ
ಆಲಸ್ಯಮಾಡದೆ ಹೋಗುಣ ಬಾರೆ || ಪ ||
ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ
ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು
ಗಾಳಿ ಮಳೆಗೆ ಉದುರುತಿಹವು
ಪೇಳುವೆ ಸುತ್ತಲು ಸಣ್ಣ
ಮಳಲಿನೊಳು ಸೀಮಿಕಲ್ಲು ನಟ್ಟಿರ್ಪುದು
ನಿಳಯದ ಕರಕಿ ಹುಲ್ಲು ಕಪಟ ಭೂಮಿ
ತಿಳಿಯ ಮಣ್ಣು ಕರ್ಲಿನಲಿ ಕೆಲವರೆಲ್ಲರು ಮಮ್ಮಾಯಿ
ಕಾಳು ಬಿತ್ತಿ ಹೊನ್ಗಳ ಫಳಿಸಿ ಗರ್ವದಿ || ೧ ||
ಊರ ಜನರೊಳೆವರಲ್ಲ
ಒಬ್ಬರೊಬ್ಬರ ಹೊಲಕೆ ಹೋಗದಿರೆ ಎಲ್ಲೆಲ್ಲಿ
ನೋಡಿದರು ಹೆಚ್ಚಿನ ಧಡೆಗಲ್ಲು
ಮೂವತ್ತು ಸೇರಿನ ದಂಡಿಗಿ ಇವರು ತೂಗುವರೋ ಬ್ಯಾರೆ
ಭಾರಿ ಭಾರಿ ಜಡಿ ಜಡಿಯ ತೂಕದ
ಮೂರುವರಿ ದುಡ್ಡುಗಳು ಕೋಡುತಿಹರು
ಆರಗೊಡವಿನ್ನೇನು ನಮಗೆ
ನಾರಿಮಣಿ ನಮ್ಮ ಹೊಲಕೆ ನಡಿಯೇ || ೨ ||
ಸೃಷ್ರ್‍ಇಯೊಳು ನಾವೀರ್ವರು ಹುಟ್ಟಿ ಬೆಳೆಯುವರು
ಕಟ್ಟಳತೆ ಇಲ್ಲದ ಭವದ ಕೂಳಿನೊಳು
ಮುಟ್ಟು ಮೈಲಿಗೆಯ ಜಲಹತ್ತಿ
ಬಿಟ್ಟಿದ್ದರೆ ಫಲ ಬೆಳಸಬಾರದ ರೀತಿ
ಎಷ್ಟು ಹೇಳಬೇಕರಿ ಪಾಪದ
ಮಟ್ಟಿನಲ್ಲಿ ಹಣ ಕಟ್ಟಿಕೊಂಬರು
ಬಿಟ್ಟು ಬಾ ಶಿಶುನಾಳಧೀಶನ
ಬಟ್ಟಬೈಲಿಯ ಹೊಲಕ ನಡಿಯೇ || ೩ ||
*****
ಕೀಲಿಕರಣ: ಎಮ್.ಎನ್.ಎಸ್.ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ