-ಶಿಶುನಾಳ ಶರೀಫ್
ಹೋಗಿ ನೋಡುವ ಬಾರೆ
ಸಾಗಿ ಸೊಗಸ ದೊರಿ
ಡಾಕ್ಟರ ಸಾಹೇಬನೀತಾ || ಪ ||
ಬೇಗ ವನಸ್ಪತಿ ಔಷದ ಮೂಲಕ
ತೂಗಿ ಕೊಡುವ ಘನ ಆಗಮ ವಂದಿತ
ರಾಗದಿಂದ ನಾ ಬಂದು ಉಸುರಿ ಮನ
ಯೋಗದಿ ನೋಡಿದೆ ಹೋಗಿ ಈ ಕ್ಷಣ || ೧ ||
ವೇದವೇದ್ಯನಾದರಶದಿ ಬಂದು
ಶೋಧನೆ ಸುಜನರ ಕಾಯ್ದುಕೊಂಡು ಕಮಲಾನ್ವಿತ
ಮೇದಿನಿವಾಸನೆ ಗಾದಿಯ ಮೇಲೆ ಗಮಕದಲಿ ಕುಳಿತು
ಬ್ರಹ್ಮಾಂಡಕನಂದದ ರೋಗದ ಮೇದಕ || ೨ ||
ಮನಸಿಜನಂದದಿ ಮಾತನಾಡುವ ಘನರೂಪನೆ
ಶಾಶ್ವತ ಅನುಸರಿಸೀತನ ಸನ್ಮುಖಕೆ ವಂದಿಸಲಾರೆನೆ ?
ಎನಿತು ವಿಸ್ತರಸಿ ಪೇಳುವೆ ತಕ್ಷಣ
ಚಿನುಮಯ ಶಿಶುನಾಳಧೀಶನ ದಯದಿಂ
ಮನಒಲಿದುಸುರಿದೆ ನಿನಗರಿಕಿರಲಿ
ಗುಣದಿ ನಿನ್ನೊಳು ತಿಳಿದು ನೋಡಿಕೋ || ೩ ||
****
ಕೀಲಿಕರಣ: ಎಂ.ಎನ್.ಎಸ್. ರಾವ್
ಹೋಗಿ ನೋಡುವ ಬಾರೆ
ಸಾಗಿ ಸೊಗಸ ದೊರಿ
ಡಾಕ್ಟರ ಸಾಹೇಬನೀತಾ || ಪ ||
ಬೇಗ ವನಸ್ಪತಿ ಔಷದ ಮೂಲಕ
ತೂಗಿ ಕೊಡುವ ಘನ ಆಗಮ ವಂದಿತ
ರಾಗದಿಂದ ನಾ ಬಂದು ಉಸುರಿ ಮನ
ಯೋಗದಿ ನೋಡಿದೆ ಹೋಗಿ ಈ ಕ್ಷಣ || ೧ ||
ವೇದವೇದ್ಯನಾದರಶದಿ ಬಂದು
ಶೋಧನೆ ಸುಜನರ ಕಾಯ್ದುಕೊಂಡು ಕಮಲಾನ್ವಿತ
ಮೇದಿನಿವಾಸನೆ ಗಾದಿಯ ಮೇಲೆ ಗಮಕದಲಿ ಕುಳಿತು
ಬ್ರಹ್ಮಾಂಡಕನಂದದ ರೋಗದ ಮೇದಕ || ೨ ||
ಮನಸಿಜನಂದದಿ ಮಾತನಾಡುವ ಘನರೂಪನೆ
ಶಾಶ್ವತ ಅನುಸರಿಸೀತನ ಸನ್ಮುಖಕೆ ವಂದಿಸಲಾರೆನೆ ?
ಎನಿತು ವಿಸ್ತರಸಿ ಪೇಳುವೆ ತಕ್ಷಣ
ಚಿನುಮಯ ಶಿಶುನಾಳಧೀಶನ ದಯದಿಂ
ಮನಒಲಿದುಸುರಿದೆ ನಿನಗರಿಕಿರಲಿ
ಗುಣದಿ ನಿನ್ನೊಳು ತಿಳಿದು ನೋಡಿಕೋ || ೩ ||
****
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ