-ಶಿಶುನಾಳ ಶರೀಫ್
ಕುಂಬಾರಗ ಪದ ಬರಕೊಟ್ಟೆನು ಸದ್ಗುರು
ಸಾಂಬಾ ವಿದುಧೃತ ಬಿಂಬಾ ||ಪ||
ಅಂಬರ ತಿರುಗಿಯಮೇಲೆ ಅರಲು ನೀರು
ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.||
ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ
ತನ್ನ ಹಸ್ತ ಮಧ್ಯದೊಳಿರುತಿರುವಾ
ಸಣ್ಣ ಹಸಿಯ ತಿಳಿಯಿಂದಲಿ ತೀಡಿ
ನುಣ್ಣಗೆ ಮುಚ್ಚಳ ಮಡಕಿಯ ಮಾಡುವ ||೧||
ಕಾಲ ಕರ್ಮವೆಂಬ ಅರಲನು ತುಳಿದು
ಮಳಲಿನ ಮಧ್ಯದೊಳದು ತಾನಿಳಿದು
ಮೂಲ ಬ್ರಹ್ಮದಾಕಾರದ್ಹೊಳವಿಕೆಯ
ಜೋಲಿವೊಳಗ ಪ್ರಭು ಕೋಲನ್ಹಿಡಿವಾ ||೨||
ಪೇಳ್ವೆ ಮೊದಲು ಮುನಿಪುರವೆಂಬ ನಗರಾ
ಚಲ್ವಾಯ್ತು ಮುಂದೆ ಮೈಸೂರೆಂಬ ಪೆಸರಾ
ಶಾಲಿವಾಹನ ಶಕ ಕರ್ತನೆನಸಿ ಮಹಂ-
ಕಾಳಿಗಧಿಪ ಭೂಪಾಲನೆಸಿಕೊಂಡ ||೩||
ಶೂಲಕ್ಕೆ ಹಾಕಿದ ಶಿವತಾನು ಸುತ್ತು
ಕ್ಷಣದೊಳಗದು ಶೂಲವು ಮರಳಿ ಜಿಗಿತು
ಪೊಳ್ಳ ಗಡಗಿ ಬದಿಗಿಟ್ಟು ಶಿಶುವಿನಾಳ
ಆಳುವ ದೊರೆ ಆವಿಗಿ ಹಾಕಿದ ||೪||
****
ಕೀಲಿಕರಣ: ಎಂ.ಎನ್.ಎಸ್. ರಾವ್
ಕುಂಬಾರಗ ಪದ ಬರಕೊಟ್ಟೆನು ಸದ್ಗುರು
ಸಾಂಬಾ ವಿದುಧೃತ ಬಿಂಬಾ ||ಪ||
ಅಂಬರ ತಿರುಗಿಯಮೇಲೆ ಅರಲು ನೀರು
ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.||
ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ
ತನ್ನ ಹಸ್ತ ಮಧ್ಯದೊಳಿರುತಿರುವಾ
ಸಣ್ಣ ಹಸಿಯ ತಿಳಿಯಿಂದಲಿ ತೀಡಿ
ನುಣ್ಣಗೆ ಮುಚ್ಚಳ ಮಡಕಿಯ ಮಾಡುವ ||೧||
ಕಾಲ ಕರ್ಮವೆಂಬ ಅರಲನು ತುಳಿದು
ಮಳಲಿನ ಮಧ್ಯದೊಳದು ತಾನಿಳಿದು
ಮೂಲ ಬ್ರಹ್ಮದಾಕಾರದ್ಹೊಳವಿಕೆಯ
ಜೋಲಿವೊಳಗ ಪ್ರಭು ಕೋಲನ್ಹಿಡಿವಾ ||೨||
ಪೇಳ್ವೆ ಮೊದಲು ಮುನಿಪುರವೆಂಬ ನಗರಾ
ಚಲ್ವಾಯ್ತು ಮುಂದೆ ಮೈಸೂರೆಂಬ ಪೆಸರಾ
ಶಾಲಿವಾಹನ ಶಕ ಕರ್ತನೆನಸಿ ಮಹಂ-
ಕಾಳಿಗಧಿಪ ಭೂಪಾಲನೆಸಿಕೊಂಡ ||೩||
ಶೂಲಕ್ಕೆ ಹಾಕಿದ ಶಿವತಾನು ಸುತ್ತು
ಕ್ಷಣದೊಳಗದು ಶೂಲವು ಮರಳಿ ಜಿಗಿತು
ಪೊಳ್ಳ ಗಡಗಿ ಬದಿಗಿಟ್ಟು ಶಿಶುವಿನಾಳ
ಆಳುವ ದೊರೆ ಆವಿಗಿ ಹಾಕಿದ ||೪||
****
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ