ಹಳ್ಳೀಯೆ ನಮ ದೇಶ

- ಡಾ || ರಾಜಪ್ಪ ದಳವಾಯಿ

ಹಳ್ಳೀಯೆ ನಮ ದೇಶ
ಪಂಚಾಯ್ತಿ ನಮ ಕೋಶ ||

ನಮ್ಮ ಉದ್ಧಾರವ
ಮತ್ಯಾರು ಮಾಡ್ಯಾರು
ಸವಲತ್ತು ತಾಕತ್ತು
ಇನ್ಯಾರು ಕೊಟ್ಟಾರು ||

ಗ್ರಾಮಾದ ಸಹಕಾರ
ಅದೆ ನಮ್ಮ ಸರಕಾರ
ಪಂಚಾಯ್ತಿ ಕಾನೂನು
ತಿಳಿಬೇಕು ಇನ್ನೂನು ||

ಅಬಲರಿಗೆ ಸವಲತ್ತು
ಕೊಡಿಸೋಣ ಯಾವತ್ತು
ಉಳ್ಳವರ ಕೊಳ್ಳೆಯ
ತಡೆಯೋಣ ಗೆಳೆಯ ||

ಬಾರಕ್ಕ ಬಾರಣ್ಣ
ಪಂಚಾಯ್ತಿ ನಂಬೋಣ
ಆಮೂಲ್ಕ ನಾವೆಲ್ಲ
ಡೆಮಕ್ರಸಿ ಉಳಿಸೋಣ ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ