ಜಲರೂಪಿನಗು

- ಡಾ || ರಾಜಪ್ಪ ದಳವಾಯಿ

ಜಗದಲೆಲ್ಲ ಹುಡುಕಿದೆ ನಿರಂತರ
ಕಳೆದವೆಷ್ಟೊ ಗೆಳತಿ ಮನ್ವಂತರ
ಎಲ್ಲೂ ಸಿಗಲಿಲ್ಲ ನಿನ್ನ ನಗುತರ
ನಾ ಮಡಿಲ ಮಾತೆ ಮಗು ತರ ||

ಅದೆಷ್ಟು ಶಕ್ತಿ ನವ ರೋಮಾಂಚನ
ಜಡ ಬದಕಿಗೆಲ್ಲ ಗರಿಗೆದರಿ ಸಿಂಚನ
ಎಣಿಸಲಾರದ ಬಣ್ಣ ಬಗೆಯರಂಜನ
ಮನದೊಳು ಸುಳಿಯೊಡೆದ ತನನನ |||

ನಿನ್ನ ನಗುವಿನಣುವದೇ ಪ್ರಮಾಣು
ನನ್ನ ಚೈತನ್ಯ ಜಲರೂಪಿ ಪರಮಾಣು
ಕ್ಷಣಕೆಲ್ಲ ನವನವೋನ್ಮಾದ ಪಯಣ
ಜತೆಗಿದೆಯಲ್ಲೆ ನಿನ್ನ ನಗುವದೇ ಪ್ರಾಣ ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ