ಹಣ್ಣು ಮಾವು

- ಹಾರಾಸನಾ

ಹಿರಣ್ಯಗರ್ಭನ ಕೋಶಬಾಹ್ಯವ ಸೀಳಿ
ಸುಖಸುಮ್ಮಾನವೋ ದುಃಖದುಮ್ಮಾನವೋ ತಿಳಿ
ಕರಟವೋ ಕಾರಣವಾಗಿ ಮುಂಸೃಷ್ಟಿಗಿರಲಿ
ರಸಾನಂದಸುಧೆಯ ಸಂವೃಷ್ಟಿಯಿರಲಿ

ಕೋಶಾಂತರ್ಯದಲ್ಲಿರ್ಪ ಕೋಶಾತೀತನ ತಿಳಿ
ಕರಟದಾಂತರ್ಯದ ಕಾರಣಬೀಜವು ನಿರ್ತಳಿ
ರುಚಿಯಿಂದಾಚೆಗಿರುವನೇ ಎಲ್ಲದರ ತಿರುಳಾಗಿ
ಆವ ದ್ವಂದ್ವಾತೀತ, ಜಗ ಮಾತ್ರ ಮರುಳಾಗಿ

ಅಂತರಾದಿತ್ಯನಿಂ ಬೀಜ ಕರಟಾದಿಯಾಗಿ
ತಿರುಳು ಸೇರಿ ಹಳದಿ ಸಿಪ್ಪೆಯು ಮಾಗಿ
ಬಾಹ್ಯತೇಜವ ಮೆರೆದು ಸರ್ವಾಕರ್ಷಿಯಾಗಿ
ಮಾವಿನಲೂ ಕಾಣ್ಬನು ವೇದಾಂತ ಪರಿಭಾಷಿಯಾಗಿ

             *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ