- ಗಿರಿಜಾಪತಿ ಎಂ. ಎನ್
ಕುಸುಮವೊಂದು ಉಲ್ಲಾಸದಿಂದ
ಅರಳಿನಿಂತು ನಕ್ಕಿತು |
ನಭದ ನೀಲಿ ಬಣ್ಣ ಕಂಡು
ನಾನೇ ಚೆಲುವೆ ಎಂದಿತು |
ಇಳೆಯ ಮೇಲಣ ಕೊಳೆಯ ಕಂಡು
ಹಮ್ಮಿನಿಂದ ಅಣಕಿತು |
ಸುಳಿದು ಸೂಸೋ ತಂಗಾಳಿಗೆ
ಒನಪಿನಿಂದ ಬಳುಕಿತು |
ಹಾರಿ ಬಂದ ದುಂಬಿಯುಸಿರು
ಮಧುರ ಸುಧೆಯೆ ಎಂದಿತು |
ಮುಂಬೆಳಗು ಜಾರೆ
ಧಗೆ ಬಗೆಯು ಏರಿ ಏರೆ
ತಾಪಕದುವೆ ಬಳಲಿತು |
ಮುಖದಿ ಮೂಡಿದ ನೆರಿಗೆ ಕಂಡು
ದುಃಖದಿಂದ ನೊಂದಿತು |
ಮುಗಿಲ ಸ್ವಚ್ಛವಾದ ಬಣ್ಣ
ಇಳೆಯ ಪುಷ್ಟವಾದ ಮಣ್ಣ |
ವಂದಿಸುತಲೇ ಉದುರಿತು
ಉದುರಿ ಮಣ್ಣ ಸೇರಿತು ||
*****
ಕೀಲಿಕರಣ: ಕಿಶೋರ್ ಚಂದ್ರ
ಕುಸುಮವೊಂದು ಉಲ್ಲಾಸದಿಂದ
ಅರಳಿನಿಂತು ನಕ್ಕಿತು |
ನಭದ ನೀಲಿ ಬಣ್ಣ ಕಂಡು
ನಾನೇ ಚೆಲುವೆ ಎಂದಿತು |
ಇಳೆಯ ಮೇಲಣ ಕೊಳೆಯ ಕಂಡು
ಹಮ್ಮಿನಿಂದ ಅಣಕಿತು |
ಸುಳಿದು ಸೂಸೋ ತಂಗಾಳಿಗೆ
ಒನಪಿನಿಂದ ಬಳುಕಿತು |
ಹಾರಿ ಬಂದ ದುಂಬಿಯುಸಿರು
ಮಧುರ ಸುಧೆಯೆ ಎಂದಿತು |
ಮುಂಬೆಳಗು ಜಾರೆ
ಧಗೆ ಬಗೆಯು ಏರಿ ಏರೆ
ತಾಪಕದುವೆ ಬಳಲಿತು |
ಮುಖದಿ ಮೂಡಿದ ನೆರಿಗೆ ಕಂಡು
ದುಃಖದಿಂದ ನೊಂದಿತು |
ಮುಗಿಲ ಸ್ವಚ್ಛವಾದ ಬಣ್ಣ
ಇಳೆಯ ಪುಷ್ಟವಾದ ಮಣ್ಣ |
ವಂದಿಸುತಲೇ ಉದುರಿತು
ಉದುರಿ ಮಣ್ಣ ಸೇರಿತು ||
*****
ಕೀಲಿಕರಣ: ಕಿಶೋರ್ ಚಂದ್ರ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ