ಸಣ್ಣ ಹುಡುಗನ ಶಡುವಿಗೆ

-ಶಿಶುನಾಳ ಶರೀಫ್

ಸಣ್ಣ ಹುಡುಗನ ಶಡುವಿಗೆ
ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡದು       ||ಪ||

ಆಣಕವಾಡು ಶಿವನಂದಿ ಪಿಟೀಲಿಗೆ
ತಣಕ ಚರಂತಿಯ ತಾಳ ಕುಟೀಲಗೆ
ಹೆಣಕ್ಕಾಡುವ ಸೊಟ್ಟದ ಕೌಚಾಪಿಗೆ
ಕಣಕಹಚ್ಚಿ ಬಾರಿಸುವ ಮೃದಂಗದ
ಘನಶಾಸ್ರ ಅರಿಯದ ಗುಣಗೇಡಿಗಳಿಗೆ        ||೧||

ಹೊಸಹಳ್ಳಿ ಗ್ರಾಮದ ಗಾಣಿಗ ಕುಲ
ರಸಿಕನಾದನೋ ಆಗ ಸಾಲಿಗೆ ಬಂದು
ಅಸಮ ಪ್ರಸಂಗಕ ಸರಿ ಇಟ್ಟನು ಇದು
ಕಿಸಿ ಕಿಸಿ ಹಲ್ಲುಗಳ ತೆರೆದು ನಕ್ಕನವ
ಹೆಸರಿಗೆ ಕಾಲನ ಹೊಸತರ ಚೇಷ್ಟಿಗೆ          ||೨||

ಪುಂಡ ಶಿಶುನಾಳಧೀಶನ ಸೇವಕ
ತೊಂಡ ಶೂರನ ಗ್ರಾಮ ಸಂಹಾರಕ
ಪಂಡಿತರಿಗೆ ಹಿತವಾದ ವಿಚಾರಕ್ಕೆ
ಮಂಡಲದೊಳು ಗುರುಲಿಂಗ ಕೃಪಾಂಗಗೆ
ಇಂಗಿತವರಿಯದ ಮಂಗಮನುಜರಿಗೆ        ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ