ಒಂದು ಹೆಣಕೆ ಎರಡು ಹೆಣ !

-ಶಿಶುನಾಳ ಶರೀಫ್

ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ     ||ಪ||

ದುರಿತಭವದ ಯೋಗದಿಂದ ವಾದವ್ಯಾತಕೆ
ವಾದದಿಂದ ಸಿದ್ದಯೋಗ ಮಾಡುವುದ್ಯಾತಕೆ      ||೧||

ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ
ಬಗಳಾಮುಖಿಯ ಮಗನಕೂಡ ರಗಳಿಯಾತಕೆ   ||೨||

ಹಸಿವು ತೃಷಿಯಗಳನು ಬಯಸುದ್ಯಾತಕೆ
ಶಿಶುನಾಳಧೀಶನ ಮರಿತು ಕುಸಿಯುದ್ಯಾತಕೆ   ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ