ಅಕ್ಕ ನೀ ಕೇಳವ್ವ

- ಡಾ || ರಾಜಪ್ಪ ದಳವಾಯಿ

ಅಕ್ಕ ನೀ ಕೇಳವ್ವ
ತಂಗೀ ನೀ ಬಾರವ್ವ
ಸಂವಿದಾನ ತಿಳಿಯವ್ವ ||

ಹೆಣ್ಣಾಗಿ ಹುಟ್ಟಿದ್ದಿ
ಹಣ್ಣಾಗಿ ಬಾಳಿದ್ದಿ
ಕೂಸು ಗಂಡನ್ನ ಸಾಕಿ
ಸಂಸಾರ ಮಾಡಿದಾಕಿ ||

ಜಗವೆಲ್ಲ ತಿಳಿದೈತೆ
ತಲಿಯಾಗೆ ಗ್ಯಾನೆಐತೆ
ಘನ ಬಾಳ ಬಾಳಿದಾಕಿ
ಮುಜುಗರ ಬಿಡುಬಾಕಿ ||

ಗಂಡಂಗೆ ಹೆದ್ರಬ್ಯಾಡ
ಮಂದೀನ ಮರಿಬ್ಯಾಡ
ಜನ್ರ ಕೆಲ್ಸ ಮಾಡವ್ವ
ಊರಿಗೆ ಉಸಿರಾಗವ್ವ ||

ಸಂಸತ್ತು ಈ ದೇಶಕ್ಕ
ವಿಧಾನಸೌಧ ರಾಜ್ಯಕ್ಕ
ಹಳ್ಳಿ ಹಳ್ಳೀಗೆ ಪಂಚಾಯ್ತಿ
ದೊಡ್ಡದವ್ವ ಮಾರಾಯ್ತಿ ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ