ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕ

- ಶಿಶುನಾಳ ಶರೀಫ್

ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕದೀ
ಬ್ರಹ್ಮನೆಲಗಾಂಬುದ್ಯಾಂಗಲೋ ಮನವೇ
ಬಲುದಿನದ ಸಲಗಿಯಲಿ
ಸಾಲಿ ಬರಸಿದ ಸ್ನೇಹ ತಿಳಿದು ಇಲ್ಲಿಗೆ ಬಂದಲ್ಲೇ ಮನಸೇ           ||೧||

ಪೊಡವಿಯೊಳು ಗುಡಗೇರಿ ಹಿರಿಯ ಪೋಲೀಸ-
ಗೌಡ ಕರದರೆ ಇಲ್ಲಿಗೆ ಬಂದೆಲ್ಲೇ ಮುನಸೇ
ಕಡು ಹರುಷ ಇವನ ಐಶ್ವಯ೯ ಹಂಗಿನಲಿ
ಜಡಮತಿಗೆ ಯೋಗ್ಯವಾದೀತೆ ಮನಸೇ                                ||೨||

ಸ್ಠೂಲತನುಕಾರ ಕಚೇರಿ ಮಾಮಲೆದಾರ-
ನಾಲಯಕೆ ಹೋಗಸಿದೆಲ್ಲಲ್ಲೋ ಮನಸೇ
ವಸುಧಿಯೊಳ್ ಶಿಶುನಾಳಧೀಶನೂರವನ ಕವಿತಾ
ಹೆಸರು ಗುರುಗೋವಿಂದನೇ ಮನವೇ
ತುಸುಕೊಟ್ಟನೆಂದು ಜರಿಯಬ್ಯಾಡಾ
ಆಸೆಯನು ಮುರಿದು ಮುಂದಕ್ಕೆ ನಡೆಯಲೋ ಮನಸೇ           ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ