- ಡಾ || ರಾಜಪ್ಪ ದಳವಾಯಿ
ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ
ನೋಡಿರಣ್ಣ ನೋಡಿರಿ ಹೀನರ ಕಥೆಯ ||
ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು
ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು
ತಲೆ ಕತ್ತರಿಸಿ ಪಾದಕೆ ನೀರೆರದರೇನು
ಹೈಯರೆಜುಕೇಷನ್ನಿನ ಜೀವ ಉಳಿದೀತೇನು ||
ಡಾಟುಕಾಮಿನಿಂದ ಬದುಕೆಲ್ಲ ಡಾಟು ಡಾಟು
ಸಾಪ್ಟುವೇರೆ ಸುತ್ತ ಉಳಿದದ್ದೆಲ್ಲ ವಾಟು ವಾಟು
ಆಗುತೈತೆ ದೇಶವೆಲ್ಲ ಪುಡಿ ಪುಡಿ ಅಮೇರಿಕ
ಯಾರಲ್ಲಿ ಕೇಳಲಿ ನಮ್ಮ ಸುಸ್ಥಿತಿಗೆ ಬೇಡಿಕೆ ||
ಬಡವರ್‍ಯಾರೂ ಓದುವಂತಿಲ್ಲ ಪೀಜು ಪಾಜು
ಪ್ರೊಪೆಷನಲ್ ಕೋರ್ಸೆ ಫಸ್ಟು ಆಜು ಬಾಜು
ಆಯಿತಲ್ಲಪ್ಪೊ ಶಿಕ್ಷಣವೂ ಲೊಟ್ಟೊ ಜೂಜು
ಖಾಸಗಿಯವರ ಮೆಣಸರೆತ ಮೋಜುಗೋಜು ||
*****
ಕೀಲಿಕರಣ: ಕಿಶೋರ್ ಚಂದ್ರ
ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ
ನೋಡಿರಣ್ಣ ನೋಡಿರಿ ಹೀನರ ಕಥೆಯ ||
ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು
ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು
ತಲೆ ಕತ್ತರಿಸಿ ಪಾದಕೆ ನೀರೆರದರೇನು
ಹೈಯರೆಜುಕೇಷನ್ನಿನ ಜೀವ ಉಳಿದೀತೇನು ||
ಡಾಟುಕಾಮಿನಿಂದ ಬದುಕೆಲ್ಲ ಡಾಟು ಡಾಟು
ಸಾಪ್ಟುವೇರೆ ಸುತ್ತ ಉಳಿದದ್ದೆಲ್ಲ ವಾಟು ವಾಟು
ಆಗುತೈತೆ ದೇಶವೆಲ್ಲ ಪುಡಿ ಪುಡಿ ಅಮೇರಿಕ
ಯಾರಲ್ಲಿ ಕೇಳಲಿ ನಮ್ಮ ಸುಸ್ಥಿತಿಗೆ ಬೇಡಿಕೆ ||
ಬಡವರ್‍ಯಾರೂ ಓದುವಂತಿಲ್ಲ ಪೀಜು ಪಾಜು
ಪ್ರೊಪೆಷನಲ್ ಕೋರ್ಸೆ ಫಸ್ಟು ಆಜು ಬಾಜು
ಆಯಿತಲ್ಲಪ್ಪೊ ಶಿಕ್ಷಣವೂ ಲೊಟ್ಟೊ ಜೂಜು
ಖಾಸಗಿಯವರ ಮೆಣಸರೆತ ಮೋಜುಗೋಜು ||
*****
ಕೀಲಿಕರಣ: ಕಿಶೋರ್ ಚಂದ್ರ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ