- ಡಾ || ರಾಜಪ್ಪ ದಳವಾಯಿ
ನಿನ್ನ ನೆನಪನ್ನು ನೆನಪೆನ್ನಲೆ ?
ಇಲ್ಲ, ನೆನಪೂ ನಾಚಿತಲ್ಲ !
ನಿನ್ನ ನೆನಪನ್ನು ನೀನೇ ಎನ್ನಲೆ ?
ಇಲ್ಲ, ಅದೂ ಎಂದಿತು ಒಲ್ಲೆ ! ||
ಜಗದ ಯಾವುದಕೆ ಹೋಲಿಸಲಿ
ನೀನವಕೆ ಸಮವಲ್ಲ ಮೊಲ್ಲೆ
ಬರಿ ಹೋಲಿಕೆ ಸಾಂತ್ವನವಲ್ಲೆ
ತತ್ವ ಸೇರಿದ ಮಾತಿದಲ್ಲ ನಲ್ಲೆ ||
ಮಾತು ಮೀರಿ ಮೌನ ಬೆಳೆದಿದೆ
ನಿನ್ನ ನೆನಪು ಮನದಲ್ಲಿ ನಲಿದಿದೆ
ನೆನಪ ಮಂಜು ಜೀವ ತುಂಬಿದೆ
ಕಂಗಳಲ್ಲಿ ಮೂಕ ರಾಗ ಹಾಡಿದೆ ||
*****
ಕೀಲಿಕರಣ: ಕಿಶೋರ್ ಚಂದ್ರ
ನಿನ್ನ ನೆನಪನ್ನು ನೆನಪೆನ್ನಲೆ ?
ಇಲ್ಲ, ನೆನಪೂ ನಾಚಿತಲ್ಲ !
ನಿನ್ನ ನೆನಪನ್ನು ನೀನೇ ಎನ್ನಲೆ ?
ಇಲ್ಲ, ಅದೂ ಎಂದಿತು ಒಲ್ಲೆ ! ||
ಜಗದ ಯಾವುದಕೆ ಹೋಲಿಸಲಿ
ನೀನವಕೆ ಸಮವಲ್ಲ ಮೊಲ್ಲೆ
ಬರಿ ಹೋಲಿಕೆ ಸಾಂತ್ವನವಲ್ಲೆ
ತತ್ವ ಸೇರಿದ ಮಾತಿದಲ್ಲ ನಲ್ಲೆ ||
ಮಾತು ಮೀರಿ ಮೌನ ಬೆಳೆದಿದೆ
ನಿನ್ನ ನೆನಪು ಮನದಲ್ಲಿ ನಲಿದಿದೆ
ನೆನಪ ಮಂಜು ಜೀವ ತುಂಬಿದೆ
ಕಂಗಳಲ್ಲಿ ಮೂಕ ರಾಗ ಹಾಡಿದೆ ||
*****
ಕೀಲಿಕರಣ: ಕಿಶೋರ್ ಚಂದ್ರ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ