ಕರುಣೆಯೇ ಇಲ್ಲ

- ಡಾ || ರಾಜಪ್ಪ ದಳವಾಯಿ

ಕರುಣೆಯೇ ಇಲ್ಲವೆಂದುಕೊಂಡಿದ್ದೆ ಜಗದಲ್ಲಿ
ನೀನು ಸಾಂತ್ವನಗೊಳಿಸಿದ ಮೇಲೆ ಅದು ನಿಜವಲ್ಲ

ನಶ್ವರ, ಜೀವ ಸಾಕಿನ್ನು, ಬದುಕಬಾರದೆಂದಿದ್ದೆ
ಆ ಭಾವ ತಪ್ಪೆನಿಸಿ ನೀನು ನನ್ನ ಬದುಕಿಸಿದೆ

ಸಂಗಾತಕೆ ಜೀವವೇ ಇಲ್ಲವೆಂಬೆನ್ನ ಹಂಬಲ
ನೀನು ಜೊಗೆಯಾದ ಪರಿಯ ನಾನೇಗೆ ನಂಬಲ

ಜೀವನವ ಸಾವು ಗೆದ್ದಿತೆಂದು ಸದಾ ಚಿಂತಿಸಿದೆ
ಅಲ್ಲ ಅಲ್ಲ ಸಾಧ್ಯವಿಲ್ಲೆಂದು ನೀನದ ಹುಸಿ ಮಾಡಿದೆ

ಅಯ್ಯೋ, ಅನಾಥನೆಂದುಕೊಂಡೆ ಜೀವನದಲ್ಲಿ
ನೀ ನನ್ನ ಎದೆಗಪ್ಪಿದ ಮೇಲೆ ಅದೂ ನಿಜವಲ್ಲ

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ