ದತ್ತೂರಿ ಕೊಟ್ಟಿವನು ಸತ್ತುಹೋಗಲಿ ಸಾಂಬಾ

-ಶಿಶುನಾಳ ಶರೀಫ್

ದತ್ತೂರಿ ಕೊಟ್ಟಿವನು ಸತ್ತುಹೋಗಲಿ ಸಾಂಬಾ
ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ
ಚಿತ್ತದೊಳು ಮಹೇಶಮಂತ್ರ ಜಪದೊಳಿರಲು
ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ   ||೧||

ಮೂರು ದೇಹದೋಳಿದ್ದು ತೋರುತಿಹ ಭವಗೆದ್ದು
ಮೀರಿ ದೇಹದೊಳಗಿದು ಬರಲರಿಯದು
ತಾರಕದ ಕೃತಿಯೊಳು ಸೇರಿಕೊಂಡವಗೆ
ಆರೇನು ಮಾಡುವರು ಆದನಳಿದ ಬಳಿಕ              ||೨||

ವಸುಧಿಯೊಳು ಶಿಶುನಾಳಶೀಶ ಹುಬ್ಬಳ್ಳಿಯೊಳು
ಹಸನಾಗಿ ಮಹಾಂತೇಶನ್ವಾಲಯದೊಳು
ಕಳಿತಿರಲು ಇಂತಿಷ್ಟು ಐತಿದು
ಆರಕಿ ಇರಲಿ ಸಾಂಬಾ                                    ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ