-ಶಿಶುನಾಳ ಶರೀಫ್
ಕಲ್ಯಾಣಿಯು ಕರುಣವಾಯಿತು ನಮಗ ||ಪ||
ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು
ಸೊಲ್ಲು ಸಾರಿತು ಗುಲ್ಲುಎನಿಸುತಲಿ ||ಅ.ಪ.||
ಕಲ್ಯಾಣದಿಂ ಹೊರುತು ದಾರಿ ಹಿಡಿದಿರುತಲಿ
ಶಿಗ್ಗಲಿಯೊಳು
ಬಾಯಲಿ ನುಡಿದ ಪರಿಪರಿಯ
ಮೋಹಕ್ಕೆ ಬೆರೆತು ಕಾಲಿಡುತಲಿರೆ
ಸರಸದಿ ಭೀಮಗ ಅರಕಿರಲಿವು ಕಲ್ಯಾಣಿ ||೧||
ಶಿಶುನಾಳಂಧೀಶ ಬಂದು ಬ್ಯಾಗದಿಂದ-
ಲೊಸೆದಪ್ಪಿ ಕೊಂಡೆನೆಂದು ಆ
ಮಹಾಸದ್ಗುರು ಗೋವಿಂದ ಕರುಣದಿ
ಹಸನಾಗಿ ಉಸುರುವೆ
ರಸಿಕರಲಿ ಅಪ್ಪುದು ಕಲ್ಯಾಣಿಯು ||೨||
****
ಕೀಲಿಕರಣ: ಎಂ.ಎನ್.ಎಸ್. ರಾವ್
ಕಲ್ಯಾಣಿಯು ಕರುಣವಾಯಿತು ನಮಗ ||ಪ||
ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು
ಸೊಲ್ಲು ಸಾರಿತು ಗುಲ್ಲುಎನಿಸುತಲಿ ||ಅ.ಪ.||
ಕಲ್ಯಾಣದಿಂ ಹೊರುತು ದಾರಿ ಹಿಡಿದಿರುತಲಿ
ಶಿಗ್ಗಲಿಯೊಳು
ಬಾಯಲಿ ನುಡಿದ ಪರಿಪರಿಯ
ಮೋಹಕ್ಕೆ ಬೆರೆತು ಕಾಲಿಡುತಲಿರೆ
ಸರಸದಿ ಭೀಮಗ ಅರಕಿರಲಿವು ಕಲ್ಯಾಣಿ ||೧||
ಶಿಶುನಾಳಂಧೀಶ ಬಂದು ಬ್ಯಾಗದಿಂದ-
ಲೊಸೆದಪ್ಪಿ ಕೊಂಡೆನೆಂದು ಆ
ಮಹಾಸದ್ಗುರು ಗೋವಿಂದ ಕರುಣದಿ
ಹಸನಾಗಿ ಉಸುರುವೆ
ರಸಿಕರಲಿ ಅಪ್ಪುದು ಕಲ್ಯಾಣಿಯು ||೨||
****
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ