-ಶಿಶುನಾಳ ಶರೀಫ್
ಬುದ್ಧಿ ಇಲ್ಲವೇ ನಿನಗೆ
ನಿದ್ರೆಯೆಂಬೋ ನಿಜ ಹಾದರಗಿತ್ತಿ ? ||ಪ||
ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ
ಕದ್ದಡಗಿದೀಕಾಯದ ಮನೆಯೊಳು
ಎದ್ದು ನೋಡಿದರೆ ಎಲ್ಲಿ ಪೋದಿಯೋ ? ||೧||
ಸೋಗ ಮಾಡಿ ನೀ ಹ್ಯಾಗಾರ ಬರತಿ
ತೂಕಡಿಕಿಯೆಂಬಾಕಿ ನೀ ಬಲು ಗರತಿ
ಬಾಗಿ ಬಾಯೊಳಗೆ ಆಕಳಿಕಿ ತರತಿ
ಸಾಕು ಹೋಗು ಎನ್ನೊಳು ಸರತಿ ||೨||
ಹೀನಲೌಡಿ ಹಿಂದಕ್ಕೆ ಸರಿ ಜೋಕೆ
ಜ್ಞಾನಯೆಂಬೋ ಕಣ್ಣಿಗೆ ಮುಸುಕ್ಹಾಕಿ
ಮೌನದಿಂದ ಶಿಶುನಾಳಧೀಶನ
ಧ್ಯಾನ ಕೆಡಿಸುವದು ಇದ್ಯಾವ ರೀತಿ ? ||೩||
****
ಕೀಲಿಕರಣ: ಎಂ.ಎನ್.ಎಸ್. ರಾವ್
ಬುದ್ಧಿ ಇಲ್ಲವೇ ನಿನಗೆ
ನಿದ್ರೆಯೆಂಬೋ ನಿಜ ಹಾದರಗಿತ್ತಿ ? ||ಪ||
ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ
ಕದ್ದಡಗಿದೀಕಾಯದ ಮನೆಯೊಳು
ಎದ್ದು ನೋಡಿದರೆ ಎಲ್ಲಿ ಪೋದಿಯೋ ? ||೧||
ಸೋಗ ಮಾಡಿ ನೀ ಹ್ಯಾಗಾರ ಬರತಿ
ತೂಕಡಿಕಿಯೆಂಬಾಕಿ ನೀ ಬಲು ಗರತಿ
ಬಾಗಿ ಬಾಯೊಳಗೆ ಆಕಳಿಕಿ ತರತಿ
ಸಾಕು ಹೋಗು ಎನ್ನೊಳು ಸರತಿ ||೨||
ಹೀನಲೌಡಿ ಹಿಂದಕ್ಕೆ ಸರಿ ಜೋಕೆ
ಜ್ಞಾನಯೆಂಬೋ ಕಣ್ಣಿಗೆ ಮುಸುಕ್ಹಾಕಿ
ಮೌನದಿಂದ ಶಿಶುನಾಳಧೀಶನ
ಧ್ಯಾನ ಕೆಡಿಸುವದು ಇದ್ಯಾವ ರೀತಿ ? ||೩||
****
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ