ನೀ ಬರುವೆಯೆಂದು

- ಡಾ || ರಾಜಪ್ಪ ದಳವಾಯಿ

ನೀ ಬರುವೆಯೆಂದು ತಲ್ಲಣವೆ ಕ್ಷಣ ಕ್ಷಣ
ಬರುವ ದಾರಿಯ ನೆನಪು ನವಪುಲಕದೂರಣ

ನಿರೀಕ್ಷೆಯ ಮಹಾಪೂರ ನನ್ನ ಮೇಲೆ ಸುರಿದಂತೆ
ಮನಸು ನಿರ್ವ್ಯಾಪಾರ ಮಾಡುವ ಸಂತೆಯಂತೆ

ಇಲ್ಲೇ ನಿಜರೂಪದ ನೆನಪ ಬಿಸಿಲಗುದುರೆ
ಕಾಣ್ವ ಕಾತರತೆಯಲ್ಲೆ ಕಾಣದಿಹ ನಶ್ವರತೆ

ಕಾಯುವ ಹಿಂಸೆಯೊಳು ಪ್ರತೀಕ್ಷೆ ಮೈಪುಲಕ
ಸ್ವರ್ಗ ನರಕಗಳೆ ಅವಿರ್ಭವಿಸಿದ ಕೈಚಳಕ

ನೀ ಬಹೆಯೆಂಬ ನೆನಪು ನವದೊಂದಧ್ಬುತ
ಜಗದ ಸುಖಿ ನಾನೇ ಅದನನುಭವಿಸುತ

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ